ಕನಸುಗಳ ಬೆನ್ನತ್ತಿ ಹೋದ ಯುವಕನ ಸಾಧನೆ

ಎಸ್​.ಡಿ.

0

ಹುಟ್ಟಿದ್ದು ಕೇರಳದಲ್ಲಾದರೂ ಶಿಕ್ಷಣಪಡೆದ್ದದು ಬೆಂಗಳೂರಿನಲ್ಲಿ . ಅದೂ ಐಐಎಂ ನಲ್ಲಿ. ಬಾಲ್ಯದಲ್ಲಿ ವಿದ್ಯೆ ತಲೆಗೆ ಹತ್ತದ ಹುಡುಗನನ್ನು ಪ್ರೀತಿಯಿಂದ ಆದರಿಸಿ, ಶಿಕ್ಷಣದ ಮಹತ್ವ ಹೇಳಿ ಪಾಠ ಕಲಿಸಿಕೊಟ್ಟವರು ಕೇರಳದ ಮಾಥ್ಯೂ. ಆರಂಭದಲ್ಲಿಯೇ ಹುಡುಗನಲ್ಲಿ ವಿಶೇಷ ಸಾಮರ್ಥ್ಯ ಇದೆ ಎಂದು ಅವರು ನಂಬಿದ್ದರು. ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಆ ಚಿಕ್ಕಮಗುವಿಗೆ ಪ್ರೋತ್ಸಾಹ ನೀಡಿದರು. ಶಿಕ್ಷಣದಲ್ಲಿ ಹಿಂದುಳಿಯದಂತೆ ಆಸಕ್ತಿ ವಹಿಸಿಕೊಂಡರು. ಇದು ಯಾರ ಕಥೆ ಅಂತ ನೀವು ಕೇಳ್ತೀರಾ..? ಆತ ಬೇರೆ ಯಾರೂ ಅಲ್ಲ.. ಈಗಾಗಲೇ ಮನೆ ಮಾತಾಗಿರುವ ಐಡಿ ಫ್ರೆಶ್ ಫುಡ್ ಸಿಇಒ ಪಿ. ಸಿ. ಮುಸ್ತಫಾ. ಮನಸ್ಸಿದ್ದರೆ ಮಾರ್ಗ ಇದೆ ಎಂಬುದಕ್ಕೆ ಮುಸ್ತಫಾ ಅತ್ಯುತ್ತಮ ನಿದರ್ಶನ..

ನಮ್ಮ ಬೆಂಗಳೂರಿನ ಹುಡುಗ

ಮೂಲತ ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟದವರಾಗಿರುವ ಮುಸ್ತಫಾ, ಬೆಂಗಳೂರಿನಲ್ಲಿ ಶಿಕ್ಷಣ ಪಡೆದು, ನಗರದ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಚಿಕ್ಕದಾಗಿ ಆರಂಭಿಸಿದ ರೆಡಿ ಟು ಕುಕ್ ಫುಡ್ ಇಂದು ಬೃಹದಾಕಾರವಾಗಿ ಬೆಳೆದಿದೆ. ಇದೀಗ ಐಡಿ ಪ್ರೆಶ್ ಫುಡ್, ಇಡ್ಲಿ , ದೋಸೆ ಜೊತೆ ಜೊತೆಗೆ ಇನ್ನಿತರ ಸಿದ್ಧ ಆಹಾರ ಉತ್ಪನ್ನಗಳತ್ತ ಗಮನ ಹರಿಸಿದೆ. ಈ ಕ್ಷೇತ್ರದಲ್ಲಿ ಎಂ ಟಿ ಆರ್ ಮತ್ತು ಮಯ್ಯಾಸ್ ಆಳವಾಗಿ ಬೇರೂರಿದ್ದರೂ, ಗುಣಮಟ್ಟದ ಉತ್ಪನ್ನಗಳಿಗೆ ಪ್ರೋತ್ಸಾಹ ಸಿಕ್ಕಿಯೇ ಸಿಗುತ್ತದೆ ಎಂಬ ವಿಶ್ವಾಸ ಮುಸ್ತಾಫ ಅವರದ್ದು.

ರವಾ ಇಡ್ಲಿ ಆದ್ಯತೆಯ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಕೆಲವು ದಿನಗಳಲ್ಲಿ ರವಾ ಇಡ್ಲಿಯನ್ನು ಮಾರುಕಟ್ಟೆಗೆ ಪರಿಚಯಿಸುವ ಸಂಕಲ್ಪ ದೀಕ್ಷೆಯನ್ನು ಅವರು ಹೊಂದಿದ್ದಾರೆ. ಪ್ಯಾಕೇಜ್ ಗಳಲ್ಲಿ ಗುಣಮಟ್ಟದ ರವಾ ಇಡ್ಲಿ ಪೂರೈಕೆಗೆ ಮುಂದಾಗಿದ್ದಾರೆ. ಇದಕ್ಕಾಗಿ ತಮ್ಮ ಸೋದರ ಸಂಬಂಧಿಗಳ ಜೊತೆ ಸೇರಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದಾರೆ.

ಇದನ್ನು ಓದಿ: ಇ ಕಾಮರ್ಸ್ ನಲ್ಲಿ ಸಾವಯವ ಕ್ರಾಂತಿಗೆ ಮುನ್ನುಡಿ : ಶಾಪಿಯರ್.. ಬಿ ಹ್ಯಾಪಿಯರ್ ..!

ಆರ್ಥಿಕ ಚಟುವಟಿಕೆ

ಒಂದು ಸಣ್ಣ ಶೆಡ್ ನಲ್ಲಿ ಆರಂಭಗೊಂಡ ಐಡಿ ಫ್ರೆಶ್ ಫುಡ್ ವಿಸ್ತಾರವಾಗಿ , ಉದ್ಯಮದ ಸ್ವರೂಪ ಪಡೆದುಕೊಂಡಿದೆ. ಆರಂಭದಲ್ಲಿ ನೂರು ಕೆ. ಜಿ ಯಷ್ಟು ಇಡ್ಲಿ ಮತ್ತು ದೋಸೆ ಸಿದ್ಧಪಡಿಸುತ್ತಿದ್ದ ಐಡಿ ಪ್ರೆಶ್, ಇದೀಗ ಪ್ರತಿ ದಿನ ಐವತ್ತು ಸಾವಿರ ಕೆ. ಜಿ. ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದೆ. ಎಲ್ಲಿಂದ ಎಲ್ಲಿಯ ತನಕದ ಬೆಳವಣಿಗೆ ನೋಡಿ. ನಾಲ್ಕು ಸ್ಥಾವರಗಳಲ್ಲಿ ಸಿದ್ಧ ಆಹಾರ ರೆಡಿಯಾಗುತ್ತಿದೆ. ದುಬೈ ಮತ್ತು ಅಬುಧಾಬಿ ಸೇರಿದಂತೆ ಒಂಬತ್ತು ನಗರಗಳಲ್ಲಿ ಇದು ಮಾರಾಟವಾಗುತ್ತಿದೆ. ಸಾವಿರಾರು ಮಂದಿಯ ಹಸಿವನ್ನು ನೀಗಿಸುತ್ತಿದೆ.

ಹೂಡಿಕೆ ಮತ್ತು ಆದಾಯ ನಿರೀಕ್ಷೆ

ಮಾರುಕಟ್ಟೆ ವಿಸ್ತರಣೆ ಮೂಲಕ ಆದಾಯ ಹೆಚ್ಚಳದ ನಿರೀಕ್ಷೆಯಲ್ಲಿರುವ ಐಡಿ ಪ್ರೆಶ್ ಫುಡ್, ಸಂಪನ್ಮೂಲ ಸಂಗ್ರಹದತ್ತ ಮನಸ್ಸು ಮಾಡಿದೆ. ಕಾರ್ಯತಂತ್ರ ಹೆಣೆದಿದೆ. 200 ಕೋಟಿ ರೂಪಾಯಿ ಹೂಡಿಕೆ ನಿರೀಕ್ಷೆಯಲ್ಲಿರುವ ಐಡಿ ಫ್ರೆಶ್ ಫುಡ್, ಎಪ್ರಿಲ್ ಅಂತ್ಯದೊಳಗೆ 200 ಕೋಟಿ ರೂಪಾಯಿ ಆದಾಯ ತಲುಪುವ ಆತ್ಮವಿಶ್ವಾಸವನ್ನು ಹೊಂದಿದೆ. ಮಾರುಕಟ್ಟೆಯಲ್ಲಿನ ವಾತಾವರಣ ಇದಕ್ಕೆ ಪೂರಕವಾಗಿದೆ ಎನ್ನುತ್ತಾರೆ ಮುಸ್ತಫಾ.

ಇನ್ನಿತರ ಉದ್ಯಮಗಳು ನೌಕರಿ ಕಡಿತಗೊಳಿಸುವತ್ತ ಚಿಂತನೆ ಮಾಡುತ್ತಿದ್ದರೆ, ಫ್ರೆಶ್ ಫುಡ್, ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತಿದೆ. ಈ ಮೂಲಕ ನಿರುದ್ಯೋಗ ನಿವಾರಣೆಯತ್ತ ಹೆಜ್ಜೆ ಇಟ್ಟಿದೆ.

ಗ್ರಾಹಕರ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ಸಿದ್ದ ಆಹಾರ ಉತ್ಪನ್ನ ಕೊಡುವುದು ಅತ್ಯಂತ ಸವಾಲಿನ ಕೆಲಸ. ಆದರೂ ಇದರಲ್ಲಿ ಯಶಸ್ಸಿಯಾಗುತ್ತೇವೆ. ರವಾ ಇಡ್ಲಿ ಮತ್ತು ವಡಾ ಪಾವ್ ರುಚಿ ಕೆಡದಿರಲು ಯಾವುದೇ ಪ್ರಿಸರ್ವೇಟಿವ್ ಬಳಸಲ್ಲ. ಹೆಚ್ಚು ದಿನ ಬಾಳಿಕೆ ಬರುವ ವಸ್ತುಗಳ ಬದಲಿಗೆ ಕನಿಷ್ಠ ದಿನಗಳ ಅವಧಿಯಲ್ಲಿ ಗುಣಮಟ್ಟದ ಉತ್ಪನ್ನ ನೀಡುವುದೇ ನಮ್ಮ ಧ್ಯೇಯ ವಾಕ್ಯ ಎನ್ನುತ್ತಾರೆ ಮುಸ್ತಪಾ. ಒಟ್ಟಿನಲ್ಲಿ ಆಹಾರ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಸಿದ್ಧ ಆಹಾರ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ.

ಇದನ್ನು ಓದಿ

1. ಕಿರಾಣಿ ಅಂಗಡಿಯಿಂದ ರಿಂಗಿಂಗ್ ಬೆಲ್ಸ್ ಕಟ್ಟಿದ ಮೋಹಿತ್ ಗೋಯೆಲ್

2. ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!

3. ಹಳೆಯ ಅಮೂಲ್ಯ ವಸ್ತುಗಳಿಗೆ ಸಖತ್​ ರೇಟ್​..!

Related Stories