ಮಾರುಕಟ್ಟೆಯಲ್ಲಿ ಕಾರ್‍ದೇಖೋ ಮೇನಿಯಾ: ಉತ್ತುಂಗದಲ್ಲಿ ಗಿರ್ನಾರ್ ಸಾಫ್ಟ್​​ವೇರ್

ಟೀಮ್​​ ವೈ.ಎಸ್​​.

ಮಾರುಕಟ್ಟೆಯಲ್ಲಿ ಕಾರ್‍ದೇಖೋ ಮೇನಿಯಾ: ಉತ್ತುಂಗದಲ್ಲಿ ಗಿರ್ನಾರ್ ಸಾಫ್ಟ್​​ವೇರ್

Friday November 06, 2015,

3 min Read

ಆಟೋ ಪೋರ್ಟಲ್‍ಗಳಾದ ಕಾರ್‍ದೇಖೋ ಡಾಟ್ ಕಾಮ್, ಗಾಡಿ ಡಾಟ್ ಕಾಮ್ ಮತ್ತು ಟೈಮ್ಸ್ ಇಂಟರ್ನೆಟ್ ಲಿಮಿಟೆಡ್‍ನ ಮಾಲೀಕ ಸಂಸ್ಥೆ ಗಿರ್ನಾರ್ ಸಾಫ್ಟ್​​ವೇರ್ ಇದೀಗ ಝಿಗ್‍ವೀಲ್ಸ್ ಡಾಟ್ ಕಾಮ್ ಅನ್ನೂ ಸ್ವಾಧೀನಪಡಿಸಿಕೊಂಡಿದೆ. ಆದ್ರೆ ಎಷ್ಟು ಮೊತ್ತಕ್ಕೆ ಅನ್ನೋದನ್ನು ಮಾತ್ರ ಬಹಿರಂಗಪಡಿಸಿಲ್ಲ. ಪರಿಣಾಮ ಗಿರ್ನಾರ್ ಸಾಫ್ಟ್​​ವೇರ್, ಸಿಕ್ವೊಯ ಕ್ಯಾಪಿಟಲ್, ಹಿಲ್‍ಹೌಸ್, ಟೈಬೋರ್ನ್, ರತನ್ ಟಾಟಾ, ಎಚ್‍ಡಿಎಫ್‍ಸಿ ಬ್ಯಾಂಕ್‍ಗಳಲ್ಲಿ ಟೈಮ್ಸ್ ಇಂಟರ್ನೆಟ್ ಹೂಡಿಕೆ ಮಾಡ್ತಾ ಇದೆ. 2007ರಲ್ಲಿ ಝಿಗ್‍ವೀಲ್ಸ್ ಆರಂಭವಾಗಿತ್ತು. ವಿಜೇಶ್ ಶರ್ಮಾ ಅದರ ಜವಾಬ್ಧಾರಿ ಹೊತ್ತಿದ್ರು. ಈಗ ಕಂಪನಿ ಅಖಿಲ್ ಗುಪ್ತಾರ ಸುಪರ್ದಿಯಲ್ಲಿದೆ.

image


ಸಹೋದರರಾದ ಅಮಿತ್ ಹಾಗೂ ಅನುರಾಗ್ ಜೈನ್ ಜೊತೆಯಾಗಿ 2008ರ ಮಾರ್ಚ್‍ನಲ್ಲಿ ಕಾರ್‍ದೇಖೋ ಸಂಸ್ಥೆಯನ್ನು ಆರಂಭಿಸಿದ್ರು. ಈ ಕಂಪನಿ ಸದ್ಯ 17 ಮಿಲಿಯನ್ ಮೊತ್ತದ ವಹಿವಾಟು ಮಾಡ್ತಾ ಇದೆ. 10 ಮಿಲಿಯನ್‍ಗೂ ಅಧಿಕ ವಿಸಿಟರ್‍ಗಳನ್ನು ಹೊಂದಿದೆ. 2014ರ ಸಪ್ಟೆಂಬರ್‍ನಲ್ಲಿ ಗಾಡಿ ಡಾಟ್ ಕಾಮ್ ಒಡೆತನದ ನಾಸ್ಪೆರ್ ಗ್ರೂಪ್ ಅನ್ನು ಕಾರ್‍ದೇಖೋ ಸ್ವಾಧೀನಪಡಿಸಿಕೊಂಡಿತ್ತು. ಈ ಮೂಲಕ ತನ್ನ ಆಡಳಿತ ಮಂಡಳಿಯನ್ನು ಬಲಪಡಿಸಿಕೊಂಡಿರುವ ಸಂಸ್ಥೆ, ಕಾರ್ ದುನಿಯಾದಲ್ಲೂ ಗುರುತಿಸಿಕೊಂಡಿದೆ. 2015ರಲ್ಲಿ ತುಲನಾತ್ಮಕ ಶಾಪಿಂಗ್ ಪೋರ್ಟಲ್ ಬೈಯಿಂಗ್ ಐಕ್ಯೂವನ್ನು ಕೂಡ ಕಾರ್ ದೇಖೋ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

2013ರಲ್ಲಿ ಸೀಕ್ವೊಯ ಕ್ಯಾಪಿಟಲ್‍ನಿಂದ ಬಂಡವಾಳ ಪಡೆದಿದ್ದ ಕಾರ್‍ದೇಖೋ 250 ಕೋಟಿ ಮೌಲ್ಯ ಹೊಂದಿತ್ತು. ಹಾಂಗ್‍ಕಾಂಗ್ ಮೂಲದ ಹೂಡಿಕೆದಾರರಿಂದ 300 ಕೋಟಿಗೂ ಅಧಿಕ ಹಣ ಪಡೆದ ಕಾರ್‍ದೇಖೋ 2015ರಲ್ಲಿ ಸಿರೀಸ್ ಬಿ ಫಂಡಿಂಗ್ ಅನ್ನು ಮುಕ್ತಾಯಗೊಳಿಸಿದೆ. ಟಾಟಾ ಗ್ರೂಪ್‍ನ ಮುಖ್ಯಸ್ಥರಾದ ರತನ್ ಟಾಟಾ ಕೂಡ ರತನ್ ಟಾಟಾ ಕೂಡ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು ಅಗತ್ಯ ಬಿದ್ದಾಗ ಸಲಹೆ ಕೂಡ ನೀಡುವುದಾಗಿ ಅಭಯವಿತ್ತಿದ್ದಾರೆಂದು ಪ್ರಕಟಿಸಿದೆ. ಸದ್ಯ ಗಿರ್ನಾರ್ ಸಾಫ್ಟ್​​ವೇರ್ 1800 ಕೋಟಿ ರೂಪಾಯಿ ಬೆಲೆಬಾಳುತ್ತದೆ. ದೇಶಾದ್ಯಂತ 5000 ಹೊಸ ಹಾಗೂ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‍ಗಳ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಕಾರ್‍ಬಡ್ಡಿ ಆ್ಯಪ್ ಮೂಲಕ ಗಿರ್ನಾರ್ ಸಾಫ್ಟ್​​ವೇರ್ ಹೊಸ ಹಾಗೂ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡ್ತಿದೆ.

ವಲಯ ಅವಲೋಕನ...

ಅಮೆರಿಕ, ಚೀನಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧೆಡೆ ಸ್ವಯಂ ವರ್ಗೀಕೃತ ಆಟೋ ಪೋರ್ಟಲ್‍ಗಳಂತೆ ಕಾರ್ಯನಿರ್ವಹಿಸುತ್ತಿರುವ ಬಹುಕೋಟಿ ಮೊತ್ತದ ಹತ್ತಾರು ಕಂಪನಿಗಳಿವೆ. ಕೆಪಿಎಂಜಿ ವರದಿಯ ಪ್ರಕಾರ 2020ರ ವೇಳೆಗೆ ಬ್ರಿಕ್ ಮಾರುಕಟ್ಟೆ ಕಾರ್ ಮಾರುಕಟ್ಟೆ ಮೇಲೆ ಪ್ರಾಬಲ್ಯ ಸಾಧಿಸಲಿದೆ. ಕಾರ್‍ವೇಲ್‍ನಂತಹ ದೊಡ್ಡ ಸಂಸ್ಥೆ ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ತಿದೆ. ಕಾರ್‍ವೇಲ್ ಮೊದಲು ಸೈರಾ ವೆಂಚರ್ಸ್‍ನಲ್ಲಿ ಹೂಡಿಕೆ ಮಾಡಿತ್ತು. ಬಳಿಕ ಎಕ್ಸೆಲ್ ಸ್ಪ್ರಿಂಜರ್ ಎಜಿ ಹಾಗೂ ಇಂಡಿಯಾ ಟುಡೇ ಗ್ರೂಪ್ ಸ್ವಾಧೀನಪಡಿಸಿಕೊಂಡಿವೆ. ವಿನಯ್ ಸಂಘಿ ಹಾಗೂ ರಾಜನ್ ಮೆಹ್ರಾ ಸ್ಥಾಪಿಸಿದ ಮೋಟರ್‍ಎಕ್ಸ್‍ಚೇಂಜ್ ಕೂಡ ಕಾರ್‍ಟ್ರೇಡ್ ಡಾಟ್ ಕಾಮ್‍ನ ಒಡೆತನ ಹೊಂದಿದೆ. 2014ರ ಅಕ್ಟೋಬರ್‍ನಲ್ಲಿ ವಾರ್‍ಬರ್ಗ್ ಪಿಂಕಸ್, ಟೈಗರ್ ಗ್ಲೋಬಲ್ ಮತ್ತು ಕೆನಾನ್ ಪಾರ್ಟ್‍ನರ್ಸ್ ನೆರವು ಪಡೆದ ಇದು ತನ್ನ ಮೌಲ್ಯವನ್ನು 30 ಮಿಲಿಯನ್ ಡಾಲರ್‍ಗೆ ಹೆಚ್ಚಿಸಿಕೊಂಡಿತ್ತು.

ಕೇ ಕ್ಯಾಪಿಟಲ್ ಮತ್ತು ಅನುಪಮಾ ಮಿತ್ತಲ್‍ರಿಂದ ಬಂಡವಾಳದ ನೆರವು ಪಡೆದ ಟ್ರೂಬಿಲ್ ತನ್ನ ಮೌಲ್ಯವನ್ನು ಪ್ರಸಕ್ತ ವರ್ಷ 5,00,000 ಡಾಲರ್‍ಗೆ ಹೆಚ್ಚಿಸಿಕೊಂಡಿದೆ. 2015 ಜುಲೈ ವೇಳೆಗೆ ಝೋಮೋದ ಮೌಲ್ಯ ಕೂಡ 5 ಮಿಲಿಯನ್ ಡಾಲರ್‍ಗೆ ತಲುಪಿದೆ. ಇನ್ನು ಕಾರ್‍ಟ್ರೇಡ್, ಸಂದೀಪ್ ಅಗರ್ವಾಲ್ ನೇತೃತ್ವದ ಆಟೊಮೊಬೈಲ್ ಕೇಂದ್ರೀಕೃತ ಜಾಹೀರಾತುಗಳು , ಡ್ರೂಮ್ ಮತ್ತು ಸಮತಲವಾದ ಜಾಹೀರಾತುಗಳು, ಓಎಲ್‍ಎಕ್ಸ್ ಹಾಗೂ ಕ್ವಿಕ್ಕರ್ ಕಾರ್ ದುನಿಯಾದಲ್ಲಿ ಹೆಜ್ಜೆ ಗುರುತು ಮೂಡಿಸಿವೆ.

ಮುಂದೆ ಸಾಗುತ್ತ...

ಕಾರ್‍ದೇಖೋ ಡಾಟ್ ಕಾಮ್, ಗಾಡಿ ಡಾಟ್ ಕಾಮ್, ಝಿಗ್‍ವೀಲ್ಸ್ ಡಾಟ್ ಕಾಮ್, ಬೈಕ್‍ದೇಖೋ ಡಾಟ್ ಕಾಮ್, ಟೈರ್ ದೇಖೋ ಡಾಟ್ ಕಾಮ್ ಮೂಲಕ ಗಿರ್ನಾರ್ ಗ್ರೂಪ್‍ಗೆ ಪ್ರತಿ ತಿಂಗಳು 30 ಮಿಲಿಯನ್ ಜನರು ಭೇಟಿ ಕೊಡ್ತಿದ್ದಾರೆ. ಗಿರ್ನಾರ್ ಸಾಫ್ಟ್​​ವೇರ್ ಮೂಲಕ ಝಿಗ್ ವೀಲ್ಸ್ ಡಾಟ್ ಕಾಮ್, ತಂತ್ರಜ್ಞಾನ ಮತ್ತು ಉತ್ಪನ್ನ ವಿಭಾಗಗಳಲ್ಲಿ 50 ಸಿಬ್ಬಂದಿಯ ತಂಡ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಅಡ್ಡ ಒಡಂಬಡಿಕೆಗಳ ದುರ್ಬಳಕೆ ತಡೆಯುವ ಉದ್ದೇಶ ಇವರದ್ದು. ಆಗ್ನೇಯ ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು, ದಕ್ಷಿಣ ಅಮೆರಿಕದಲ್ಲಿ ಗಿರ್ನಾರ್ ತನ್ನ ವಹಿವಾಟನ್ನು ವಿಸ್ತರಿಸಿದೆ. ಗಿರ್ನಾರ್ ಸಾಫ್ಟ್​​ವೇರ್‍ನ ಸಂಸ್ಥಾಪಕ ಹಾಗೂ ಸಿಇಓ ಅಮಿತ್ ಜೈನ್ ಅವರ ಪ್ರಕಾರ ಝಿಗ್ ವೀಲ್ಸ್ ಡಾಟ್ ಕಾಮ್ ಭಾರತದಲ್ಲಿ ಮುಂಚೂಣಿಯಲ್ಲಿದೆ. ಗ್ರಾಹಕರಿಗೆ ಅನುಕೂಲವಾಗುವಂಥ ಹೊಸ ತಂತ್ರಜ್ಞಾನದ ಮೂಲಕ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಕನಸು ಅವರದ್ದು.