ಪ್ರಿಂಟಿಂಗ್ ಮೆಷಿನ್ ಮೂಲಕ ಸಂದೇಶ ರವಾನೆ..!

ಪೂರ್ವಿಕಾ

0

ಖ್ಯಾತ ನಟಿ ಕಲ್ಕಿ ಕೊಚ್ಚಿನ್ ಬಾಲಿವುಡ್ ನಲ್ಲಿ ದೇವ್ ಡಿ ಸಿನಿಮಾದಿಂದ ಸುದ್ದಿ ಮಾಡಿದ್ದರು. ಅಷ್ಟೇ ಅಲ್ಲದೆ ತಾವು ಎಂಥ ಪಾತ್ರಕ್ಕೂ ಸಿದ್ದ, ಎಂತಹ ಪಾತ್ರವನ್ನೂ ಬೇಕಾದ್ರೂ ನಿಭಾಯಿಸ ಬಲ್ಲೆ ಎಂದು ನಿರೂಪಿಸಿಕೊಂಡಿರೋ ನಟಿಮಣಿಯರಲ್ಲಿ ಕಲ್ಕಿ ಕೂಡ ಒಬ್ಬರು. ಕೇವಲ ಸಿನಿಮಾ ಮಾತ್ರವಲ್ಲದೆ ಸಮಾಜದ ಮೇಲೆ ಕಾಳಜಿ ತೋರೋ ಕಲ್ಕಿ ಆಗಾಗ ಸಮಾಜದಲ್ಲಾಗಿರುವ ಅಸಮಾನತೆ ಹಾಗೂ ಹೆಣ್ಣಿನ ಮೇಲಾಗುವ ದೌರ್ಜನ್ಯಗಳನ್ನ ತಮ್ಮದೇ ರೀತಿಯಲ್ಲಿ ಖಂಡಿಸುತ್ತಾ ಬಂದಿರೋ ನಟಿ. ಕಳೆದ ಎರಡು ವರ್ಷದ ಹಿಂದೆ ಅತ್ಯಾಚಾರ ಪ್ರಕರಣಗಳ ಬಗ್ಗೆ ಇಟ್ಸ್ ಯುವರ್ ಫಾಲ್ಟ್ ಅನ್ನೋ ವಿಡಿಯೋದಲ್ಲಿ ಅತ್ಯಾಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನ ಹೇಳಿಕೊಳ್ಳುವ ಮೂಲಕ ವಿಶ್ವದ ಗಮನ ಸೆಳೆದಿದ್ರು. ಅದೇ ರೀತಿ ಮತ್ತೊಂದು ವಿಚಾರದ ಬಗ್ಗೆ ಕಲ್ಕಿ ಕೊಚ್ಚಿನ್ ಧನಿ ಎತ್ತಿದ್ದಾರೆ. ಅದು ಪ್ರಿಂಟಿಂಗ್ ಮೆಷಿನ್ ಮೂಲಕ .

ಏನಿದು ಪ್ರಿಂಟಿಂಗ್ ಮೆಷಿನ್..?

ಪ್ರಿಂಟಿಂಗ್ ಮಿಷಿನ್, ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರೋ ಐದು ನಿಮಿಷಗಳ ವಿಡಿಯೋ. ಸಮಾಜದಲ್ಲಿ ಇಂದಿನ ಹೆಣ್ಣು ಮಕ್ಕಳ ಪರಿಸ್ಥಿತಿ ಯಾವ ರೀತಿ ಇದೆ? ಮೀಡಿಯಾ, ಸೋಶಿಯಲ್ ಮೀಡಿಯಾ, ಜಾಹೀರಾತು ಪ್ರಪಂಚ ಹೆಣ್ಣುಮಕ್ಕಳನ್ನ ಹೇಗೆ ಬಿಂಬಿಸ್ತಿದೆ ಅನ್ನೋದನ್ನ ಕಲ್ಕಿ ಈ ವೀಡಿಯೋದಲ್ಲಿ ಸಾಂಕೇತಿಕವಾಗಿ ಹೇಳಿದ್ದಾರೆ. ಪ್ರಿಂಟಿಂಗ್ ಮೆಷಿನ್ ಅನ್ನೂ 5 ನಿಮಿಷಗಳ ಈ ವೀಡಿಯೋದಲ್ಲಿ ಕಲ್ಕಿ ತನ್ನದೇ ಸ್ಟೈಲ್ ನಲ್ಲಿ ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಹೇಳಿಕೊಂಡಿದ್ದಾರೆ.

ಮಹಿಳೆಯರ ಪಾಡು ಪ್ರಿಂಟಿಂಗ್ ಮೆಷಿನ್ ನಂತಾಗಿದೆ. ಬಂದಿದನ್ನೆಲ್ಲಾ ಪ್ರಶ್ನೆ ಮಾಡದೇ ಪ್ರಿಂಟ್ ಮಾಡೋ ರೀತಿ, ಬಂದ ಆರೋಪವನ್ನೆಲ್ಲ ಮಹಿಳೆ ಒಪ್ಪಿಕೊಳ್ಳುತ್ತಾಳೆ ಅನ್ನೋ ಅನೇಕ ಉದಾಹರಣೆಗಳು ಈ ವೀಡಿಯೋದಲ್ಲಿದೆ. ಕಲ್ಕಿ ಈ ವೀಡಿಯೋಗಾಗಿ ತಾನೇ ಸ್ಕ್ರೀಪ್ಟ್ ರೆಡಿ ಮಾಡಿದ್ದು ಸಮಾಜದಲ್ಲಿರೋ ಅನೇಕ ವಿಚಾರಗಳನ್ನ ತೆಗೆದುಕೊಂಡು ಪದ್ಯ ರಚಿಸಿದ್ದಾರೆ. ದಿ ಪ್ರಿಂಟಿಂಗ್ ಮೆಷಿನ್ ಅನ್ನೋ ಟೈಟಲ್ ನಲ್ಲಿ ಈ ವೀಡಿಯೋ ರಿಲೀಸ್ ಆಗಿದೆ. ಕಲ್ಕಿ ಬ್ಲಷ್ ಫ್ಯಾಷನ್ ಯೂಟ್ಯೂಬ್ ಚಾನಲ್ ಹಾಗೂ ಕಲ್ಚರ್ ಮೆಷಿನ್ ಸಹಯೋಗದಲ್ಲಿ ಪ್ರಿಂಟಿಂಗ್ ಮೆಷಿನ್ ವಿಡಿಯೋ ನಿರ್ಮಾಣ ಮಾಡಿದ್ದಾರೆ

ಏನೆಲ್ಲ ಇದೇ ಪ್ರಿಂಟಿಂಗ್ ಮೆಷಿನ್​ನಲ್ಲಿ..?

ಪ್ರಿಂಟಿಂಗ್ ಮಿಷಿನ್ ವಿಡಿಯೋದಲ್ಲಿ ಇಂದಿನ ಸಮಾಜದಲ್ಲಾಗುತ್ತಿರೋ ತೊಡಕುಗಳು ಹಾಗೂ ಹೆಣ್ಣಿನ ಮೇಲಿನ ದೌರ್ಜನ್ಯಗಳ ಬಗ್ಗೆ ತಮ್ಮದೇ ರೀತಿಯಲ್ಲಿ ಕಲ್ಕಿ ತಿಳಿ ಹೇಳಿದ್ದಾರೆ. 2012ರಲ್ಲಿ ನಡೆದ ದೆಹಲಿ ಗ್ಯಾಂಗ್ ರೇಪ್, ಮಕ್ಕಳ ಮೇಲಿನ ಅತ್ಯಾಚಾರ ಸೇರಿದಂತೆ ಇಂದಿನ ದಿನಗಳಲ್ಲಿ ಸಮಾಜಿಕ ಜಾಲತಾಣ ಮತ್ತು ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಹೆಣ್ಣು ಮಕ್ಕಳನ್ನ ಬಿಂಬಿಸೋ ರೀತಿಯ ಬಗ್ಗೆ ವೀಡಿಯೋದಲ್ಲಿ ತಿಳಿಸಿದ್ದಾರೆ. ಇನ್ನು ಪ್ರಿಂಟಿಂಗ್ ಮೆಷಿನ್ ನಲ್ಲಿ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳೊ ಕಲ್ಕಿ, ಸ್ಲೋ ಡ್ಯಾನ್ಸ್ ಮೂಮೆಂಟ್ ಅನ್ನ ಮಾಡಿದ್ದಾರೆ. ಈ ಹಿಂದೆ ಇಟ್ಸ್ ಯವರ್ ಫಾಲ್ಟ್ ಅಂತ ಜನರ ಮುಂದೆ ಬಂದಿದ್ದರು. 

ಸಖತ್ ಹಿಟ್​ ಆಗಿದೆ ಪ್ರಿಂಟಿಂಗ್ ಮೆಷಿನ್..!

2013 ರಲ್ಲಿ ಇದೇ ಕಲ್ಕಿ ಇಟ್ಸ್ ಮೈ ಫಾಲ್ಟ್ ಅನ್ನೋ ವಿಡಿಯೋ ಮೂಲಕ ವಿಶ್ವದಾದ್ಯಂತ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೆ ವಿಡಿಯೋ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇಟ್ಸ್ ಮೈ ಫಾಲ್ಟ್ 4 ಮಿಲಿಯನ್ ಲೈಕ್​ ಗಿಟ್ಟಿಸಿಕೊಂಡಿತ್ತು. ಅದೇ ರೀತಿಯಲ್ಲಿ ಪ್ರಿಂಟಿಂಗ್ ಮೆಷಿನ್ ಕೂಡ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಟ್ವಿಟ್ಟರ್ ಫೇಸ್ ಬುಕ್ ನಲ್ಲಿ ಬಾರಿ ಸದ್ದು ಮಾಡ್ತಿದೆ. ಒಟ್ಟಾರೆ ಕಲ್ಕಿ ಕೊಚ್ಚಿನ್ ಸಿನಿಮಾ ನಟನೆ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಇಂತಹ ವೀಡಿಯೋಗಳ ಮೂಲಕ ತಮ್ಮ ಸಾಮಾಜಿಕ ಕಳಕಳಿಯಿಂದಲೂ ಸುದ್ದಿಯಾಗ್ತಿದ್ದಾರೆ.