ಇ-ಕಾಮರ್ಸ್‍ನಲ್ಲಿ ಹೆಚ್‍ಆರ್ ಕ್ರಿಯಾತ್ಮಕ ಪಾತ್ರ...

ಟೀಮ್​​ ವೈ.ಎಸ್​​.

0

ಇ-ಕಾಮರ್ಸ್ ತಂತ್ರಜ್ಞಾನ ಕಾರ್ಯವೈಖರಿಯ ವಿಧಾನವನ್ನೇ ಬದಲಾಯಿಸಿದೆ. ಸಂಸ್ಥೆಗಳ ಮಾನವ ಸಂಪನ್ಮೂಲ ಕಾರ್ಯಗಳನ್ನು ನಿರ್ವಹಣೆಯ ವಿಧಾನದಲ್ಲಿ ಗಮನಾರ್ಹ ಬದಲಾವಣೆ ತಂದಿದೆ. ಕೆಲಸ ಹಾಗೂ ಉದ್ಯೋಗದ ಮೇಲೆ ಮಾಹಿತಿ ತಂತ್ರಜ್ಞಾನದ ಪರಿಣಾಮ ಸಂಶೋಧನೆಯ ಒಂದು ವಿಷಯವಾಗಿದೆ. ಇ-ಕಾಮರ್ಸ್, ಕೆಲಸದ ಮೇಲೆ ಅದರ ಪರಿಣಾಮ, ಸಂಸ್ಥೆ ಹಾಗೂ ಮಾನವ ಸಂಪನ್ಮೂಲ ಆಡಳಿತದ ಬಗ್ಗೆ ಹೆಚ್ಚಿನ ಗಮನಹರಿಸುತ್ತಿಲ್ಲ. ವಾಸ್ತವವಾಗಿ ಇ-ಕಾಮರ್ಸ್ ಅನ್ನು ಕಾರ್ಯರೂಪಕ್ಕೆ ತಂದಾಗ ಅದು ನಿಯಮಿತವಾಗಿ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತದೆ. ವಹಿವಾಟಿನ ಪ್ರಮಾಣ ಹೆಚ್ಚಳಕ್ಕೆ ಬಳಸುವ ತಂತ್ರ ಇದು. ಸಂಸ್ಥೆಯ ಪರಿಣಾಮಕಾರಿ ಉತ್ಪಾದನೆ ಮತ್ತು ಗರಿಷ್ಠ ಫಲಿತಾಂಶಗಳನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಆಗ ಸಂಸ್ಥೆಯ ಪಾಲಿಗೆ ಮಾನವ ಸಂಪನ್ಮೂಲ, ಸಾಧನೆಗೆ ವಿಮರ್ಶಾತ್ಮಕ ಹಾಗೂ ಕಡ್ಡಾಯವಾಗಿ ಮಾರ್ಪಡಲಿದೆ. ನಿರೀಕ್ಷಿತ ಫಲಿತಾಂಶ ಪಡೆಯಲು ಅಗತ್ಯವಿರುವ ತಜ್ಞರ ಸಹಕಾರದ ಅಗತ್ಯವೂ ಇಂಥ ಸಂದರ್ಭದಲ್ಲಿ ಗೋಚರವಾಗುತ್ತದೆ.

ಸಂಸ್ಥೆಯ ಒಳಗಿರುವ ಯೋಗ್ಯರನ್ನು ಆಯ್ಕೆ ಮಾಡುವ ಮೂಲಕ ತಜ್ಞರ ಅಗತ್ಯತೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಪ್ರಮುಖ ಸಂಸ್ಥೆಗಳನ್ನು ಸ್ಥಾಪಿಸಬಹುದು. ಅಥವಾ ಅಧಿಕಾರಿಗಳಿಗೆ ಹೊರಗುತ್ತಿಗೆ ನೀಡಬಹುದು. ದೊಡ್ಡ ದೊಡ್ಡ ಸಂಸ್ಥೆಗಳು ಕೌಶಲ್ಯ ತರಬೇತಿಗಾಗಿ ಕಂಪನಿಯಲ್ಲೇ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಇಲ್ಲವಾದಲ್ಲಿ ಹೊರಗಿನಿಂದ ಯಾರನ್ನಾದ್ರೂ ನೇಮಕ ಮಾಡಿಕೊಳ್ಳುತ್ತವೆ. ಆರಂಭಿಕ ಹಂತದಲ್ಲಿ ಖರ್ಚನ್ನು ಕಡಿಮಾಡಲು ಮತ್ತು ಪಾಲುದಾರಿಕೆ ಹಾಗೂ ಹೊರಗುತ್ತಿಗೆಯ ಮೊರೆ ಹೋಗುವ ಕಂಪನಿಗಳ ಸಂಖ್ಯೆಯೂ ಹೆಚ್ಚಿದೆ.

ವಿನ್ಯಾಸ ಹಾಗೂ ಬದಲಾವಣೆಯಲ್ಲಿ ಎಚ್‍ಆರ್ ಪಾತ್ರ...

ಸಾಮಾನ್ಯ ದೃಷ್ಟಿಕೋನದಿಂದ ನೋಡಿದರೆ ದೊಡ್ಡ ಸಂಸ್ಥೆಗಳು ಎಲ್ಲಾ ಆಯ್ಕೆಗಳನ್ನು ದುರ್ಬಲಗೊಳಿಸಬಲ್ಲ, ಅಧಿಕ ವೆಚ್ಚವಾಗುವಂತಹ ಯೋಜನೆಗಳನ್ನು ರೂಪಿಸುವುದಿಲ್ಲ. ಸಿಬ್ಬಂದಿಯ ಇ-ವ್ಯಾಪಾರ ಕಲಿಕೆ ಮತ್ತು ಅನುಭವ ಸಂಸ್ಥೆಯ ಜನಪ್ರಿಯತೆಗೆ ಮೂಲ. ಸಂಸ್ಥೆಗಳು ನುರಿತ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಇದೊಂದು ಪರೀಕ್ಷೆ. ತಜ್ಞರು ಸಾಮಾನ್ಯವಾಗಿ ಭಾರೀ ಸಂಬಳದ ಬೇಡಿಕೆ ಇಡೋದ್ರಿಂದ ಇದು ದುಬಾರಿಯಾಗಿಯೂ ಪರಿಣಮಿಸಬಹುದು. ಸಮಯ, ಹಣ ಮತ್ತು ಸಂಪನ್ಮೂಲ ಕ್ರೋಢೀಕರಿಸಬೇಕಾದ ಅನಿವಾರ್ಯತೆ ಇರುವಾಗ ಘನ ಪ್ರದರ್ಶಕರನ್ನು ಉಳಿಸಿಕೊಳ್ಳುವುದು ಕಠಿಣವಾಗುವ ಸಾಧ್ಯತೆಯೂ ಇದೆ. ಇಂತಹ ಸಿಬ್ಬಂದಿಯ ನೇಮಕ ಮತ್ತವರನ್ನು ಉಳಿಸಿಕೊಳ್ಳುವುದು ಸಂಸ್ಥೆಗೆ ಅಗ್ನಿಪರೀಕ್ಷೆ. ಹಾಗಾಗಿ ಹೊರಗುತ್ತಿಗೆ ನೀಡುವ ಸಂಪ್ರದಾಯವೇ ಹೆಚ್ಚಾಗಿ ಬೆಳೆದುಬಂದಿದೆ. ಸಾಮಾನ್ಯವಾಗಿ ಇದು ಎರಡು ಹಂತಗಳಲ್ಲಿ ನಡೆಯುತ್ತದೆ. ಹೊರಗಿನಿಂದ ಒಳಕ್ಕೆ ಹಾಗೂ ಹಿಂದಿನಿಂದ ಮುಂದಕ್ಕೆ ಈ ಪ್ರಕ್ರಿಯೆ ನಡೆಯುತ್ತೆ.

ಇವೆರಡರ ಸಂಪರ್ಕ ಇಟ್ಟುಕೊಂಡು ಅದನ್ನೆಲ್ಲ ಅವಲೋಕಿಸಿ ಸಂಸ್ಥೆಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತುತಪಡಿಸುವುದು ಹೆಚ್‍ಆರ್‍ಗೆ ನಿಜಕ್ಕೂ ಕಠಿಣವಾದ ಕೆಲಸ. ಆಯ್ಕೆ ಮಾಡಿಕೊಂಡಿರುವ ವ್ಯವಸ್ಥೆಯ ಸಹಯೋಗ ಮತ್ತು ಜನಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದು ಮಾನವ ಸಂಪನ್ಮೂಲ ವಿಭಾಗದೆದುರು ಇರುವ ಬಹುದೊಡ್ಡ ಸವಾಲು. ಕೌಶಲ್ಯವನ್ನು ಹಂಚಿಕೊಳ್ಳುವುದು, ಉದ್ಯೋಗಿಗಳಿಗೆ ತರಬೇತಿ ಕೊಡುವುದು, ಜೊತೆಗೆ ಅವರವರ ಪಾತ್ರಗಳಿಗಿರುವ ಸವಾಲುಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಉತ್ತೇಜಿಸುವ ಕಾರ್ಯ ಮಾಡಿದರೆ ಹೆಚ್‍ಆರ್ ಕರ್ತವ್ಯ ಸುಲಭವಾಗಲಿದೆ.

ವಿಷಯಗಳ ಬಗ್ಗೆ ವಿಶೇಷ ಅನುಭವವಿರುವ ತಜ್ಞರ ನೆರವು ಪಡೆಯುವುದು ಉತ್ತಮ. ಹೊಸ ಬಗೆಯ ಕಲಿಕಾ ವಿಧಾನದಿಂದ ಸಿಬ್ಬಂದಿಯ ಕಾರ್ಯವೈಖರಿಯನ್ನೂ ಉತ್ತಮಪಡಿಸಬಹುದು. ಪ್ರತಿಭಾವಂತ ಕೆಲಸಗಾರರಿಗೆ ಪ್ರೋತ್ಸಾಹ ನೀಡುವುದು ಕೂಡ ಅತ್ಯವಶ್ಯ. ಇದರಿಂದಾಗಿ ಉತ್ತಮ ಪ್ರತಿನಿಧಿಯನ್ನು ಕಳೆದುಕೊಳ್ಳುವ ಅಪಾಯವೂ ದೂರವಾಗುತ್ತದೆ. ಇ ಕಾಮರ್ಸ್ ವಿಭಾಗದಲ್ಲಿ ತಜ್ಞರ ಯಶಸ್ವಿ ಕಾರ್ಯನಿರ್ವಹಣೆಗೆ ಹೊಂದಾಣಿಕೆ ಬೇಕೇಬೇಕು. ಹೊಂದಾಣಿಕೆಯು ಮೂಲಭೂತವಾದ ಚೌಕಟ್ಟನ್ನು ಅಥವಾ ಸಂಸ್ಥೆಯ ವಿನಂತಿಗಳಲ್ಲಿ ಯಾವುದೇ ಬದಲಾವಣೆ ಕೇಳಿದಾಗ ನಿರ್ವಹಿಸುವ ಸಾಮಥ್ರ್ಯ ಹೊಂದಿರಬೇಕು. ಅಗತ್ಯ ಆಸಕ್ತಿಯ ಮೇರೆಗೆ ಅಭಿವೃದ್ಧಿ ಹೊಂದಬಲ್ಲ ಸಾಮಥ್ರ್ಯ ಇ-ಕಾಮರ್ಸ್ ಚೌಕಟ್ಟಿಗೆ ಇರಬೇಕು. ಬೆಂಬಲಿತ ಇ-ಕಾಮರ್ಸ್ ಫ್ರೇಮ್‍ವರ್ಕ್ ಭಿನ್ನಾಭಿಪ್ರಾಯ ನಿರ್ವಹಿಸಬಲ್ಲ ಸಂದೇಶಗಳನ್ನೂ ನೀಡಬೇಕು.

ಮಾನವ ಸಂಪನ್ಮೂಲ ವಿಭಾಗ ಅನೋದು ಒಂದು ಸಂಸ್ಥೆಯ ಜೀವಾಳ. ಅದಿಲ್ಲದೆ ಕಂಪನಿಯ ಅಭಿವೃದ್ಧಿ ಅಸಾಧ್ಯ. ಸಿಬ್ಬಂದಿಯ ಹಿತಕಾಯುವವರು ಕೂಡ ಮಾನವ ಸಂಪನ್ಮೂಲ ಅಧಿಕಾರಿಗಳೇ. ಸಂಸ್ಥೆಯಲ್ಲಾಗುವ ಆಗುಹೋಗುಗಳಿಂದ ಹಿಡಿದು ಪ್ರತಿಯೊಂದು ಬದಲಾವಣೆಯ ಹಿಂದೆ ಕೂಡ ಹೆಚ್‍ಆರ್‍ಗಳ ಪಾತ್ರ ಇದ್ದೇ ಇದೆ. ಮಾನವ ಸಂಪನ್ಮೂಲ ವಿಭಾಗ ಶಕ್ತಿಯುತವಾಗಿದ್ರೆ ತಜ್ಞರು, ನಿಪುಣ ಕೆಲಸಗಾರರು ಸಂಸ್ಥೆ ಸೇರುತ್ತಾರೆ. ಯಾಕಂದ್ರೆ ಅಂತಿಮವಾಗಿ ಸಿಬ್ಬಂದಿಯ ಆಯ್ಕೆ ಅವರದ್ದೇ ಆಗಿರುತ್ತದೆ. ತೀರ್ಮಾನ ಸಂಸ್ಥೆಯ ಮುಖ್ಯಸ್ಥರದ್ದಾದ್ರೂ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಹೊಣೆಗಾರಿಕೆ ಹೆಚ್‍ಆರ್ ವಿಭಾಗದ್ದು. ಹಾಗಾಗಿ ಎಚ್‍ಆರ್ ವಿಭಾಗ ಪ್ರತಿಯೊಂದು ಸಂಸ್ಥೆಯ ರಕ್ತ ಹಾಗೂ ಮಾಂಸವಿದ್ದಂತೆ.

ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಸಂಸ್ಥೆಯ ಯಶಸ್ಸಿನ ಸೂತ್ರಧಾರ ಎನ್ನಬಹುದು. ಸಂಸ್ಥೆಯ ವೈಫಲ್ಯಕ್ಕೂ ಅವರು ಕಾರಣವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಎಚ್‍ಆರ್‍ಗಳ ಸಾಮಥ್ರ್ಯದ ಮೇಲೆ ಸಂಸ್ಥೆಯ ಯಶಸ್ಸು ಹಾಗೂ ವೈಫಲ್ಯ ಅವಲಂಬಿತವಾಗಿದೆ.

Related Stories

Stories by YourStory Kannada