ಶೇಫ್ ಆಫ್ ಯೂ; ಪಡ್ಡೆಗಳನ್ನು ಹುಚ್ಚೆಬ್ಬಿಸುತ್ತಿರುವ ಮ್ಯೂಸಿಕ್

ಟೀಮ್​ ವೈ.ಎಸ್​. ಕನ್ನಡ

1

ಡಬ್ ಸ್ಮ್ಯಾಶ್ ನಂತರ ಅಷ್ಟೇ ವಿಪರೀತವಾಗಿ ಸುದ್ದಿ ಮಾಡುತ್ತಿರುವುದು "ಶೇಫ್ ಆಫ್ ಯೂ"...! ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಎಡ್ ಶರೀನ್ ಅವರ ಹಾಡಿನ ಬೀಟ್ ಒಂದು ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ತಾಳ ಒಂದು, ಹಾಡು ಹಲವು!! ಇದು ಸಂಗೀತ ಹಾಗೂ ನೃತ್ಯ ಕ್ಷೇತ್ರದ ಹೊಚ್ಚ ಹೊಸ ಅವತಾರ. ಹೌದು, ಕನ್ನಡ ಮ್ಯಾಷಪ್ ಲೋಕದಲ್ಲಿ ಇದೀಗ ಅಮೆರಿಕದ ಗಾಯಕ ಎಡ್ ಶರೀನ್ ಅವರ "ಶೇಫ್ ಆಫ್ ಯೂ" ಅಲ್ಬಂ ಸಾಂಗ್ ಹೊಸದೊಂದು ಟ್ರೆಂಡ್ ಸೃಷ್ಟಿ ಮಾಡಿದ್ದು, ಇಶಾ ಸುಚಿ ಎಂಬ ಗಾಯಕಿ ಅದನ್ನು ಇನ್ನಷ್ಟು ಫೇಮಸ್ ಮಾಡಿ ಪಡ್ಡೆಗಳನ್ನು ಮೈಮರೆಯುವಂತೆ ಮಾಡಿದ್ದಾರೆ. ಇಶಾ ಸುಚಿ ಹಾಡಿರುವ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇಶಾ ಸುಚಿ ಈಗ ಒಂದೇ ಒಂದು ಬಿಟ್ ಸೌಂಡ್ ಮತ್ತು ಸಿಂಗಲ್ ಟ್ರ್ಯಾಕ್​ನೊಂದಿಗೆ ಶುರುವಾಗುವ "ಶೇಫ್ ಆಫ್" ಮಾಯೆಯು ಗೊಂಬೆ ಹೇಳುತೈತೆ, ಒಂದು ಮಳೆ ಬಿಲ್ಲು ಒಂದು ಮಳೆ ಮೋಡ, ಬ್ಯೂಟಿಫುಲ್ ಮನಸುಗಳು... ಹೀಗೆ ಹತ್ತಾರು ಹಾಡುಗಳೊಂದಿಗೆ ಮನಸ್ಸಿನಲ್ಲಿ ರಂಗೇರಿಸುತ್ತಿದ್ದಾರೆ. ಅಂದರೆ ಪಾಪ್ ಟ್ಯೂನ್​ವೊಂದು ಕನ್ನಡ ಹಾಡುಗಳಿಗೆ ಸ್ವರವಾಗಿ ಯೂತ್ಸ್​ಗೆ  ಕಿಕ್ ಕೊಡುತ್ತಿರುವ ಹಂಗಾಮಾ ಹೊಸ ಅನುಭವ ನೀಡುತ್ತದೆ.

ಇದನ್ನು ಓದಿ: ಪ್ರಾಚೀನ ಅಡುಗೆ ಪದ್ಧತಿಗೆ ಮರುಜೀವ ಕೊಟ್ಟಿದ್ದಾಳೆ ಈ ಮಣ್ಣಿನ ಮಗಳು

ಕವರ್ ಸಾಂಗ್ ಮೂಲಕ ಬೆಳಕಿಗೆ

ಸಂಗೀತ ಕ್ಷೇತ್ರಕ್ಕೆ ಇಶಾ ಹೊಸಬರು. ಎರಡು ವರ್ಷದ ಹಿಂದೆ ತುಳು ಸಿನಿಮಾವೊಂದಕ್ಕೆ ಹಾಡುವ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟರು. ಅದಾದ ಮೇಲೆ ಕನ್ನಡದಲ್ಲಿ ಏನಾದರೂ ಮಾಡಬೇಕು ಅಂದೆನಿಸಿ ಹೊಸ ಹಾಗೂ ಹಳೆಯ ಹಾಡುಗಳನ್ನು ಎಂ.ಪಿ.3 ಮೂಲಕ ಜನರನ್ನು ತಲುಪಲಾರಂಭಿಸಿದರು. ಆದರೆ ಅವರು ಯಾರಿಗೂ ತಲುಪಲಿಲ್ಲ, ಆಗ ಅವರಿಗೆ ಹೊಳೆದಿದ್ದೆ ವಿಡಿಯೋ ಸಾಂಗ್. ಆಗ ಕೆಂಡ ಸಂಪಿಗೆ ಸಿನಿಮಾಗೆ ಕವರ್ ಸಾಂಗ್ ಮಾಡಿದರು. ಇದಕ್ಕೆ ಅವರಿಗೆ ಸ್ನೇಹಿತರೊಬ್ಬರ ಸ್ಟೂಡಿಯೋ ನೆರವಿಗೆ ಬಂತು. ಅಲ್ಲಿಂದ ಆರಂಭವಾದ ಇವರ ಕವರ್ ಸಾಂಗ್ ಜರ್ನಿ " ಶೇಪ್ ಆಫ್ ಯೂ"ವರೆಗೂ ಬಂದು ನಿಂತಿದೆ. ಅಲ್ಲದೆ ಇವರು ಹಾಡಿದ ಕವರ್ ಹಾಡನ್ನು ಕೇಳಿದ ಸಾಕಷ್ಟು ಸಂಗೀತ ನಿರ್ದೇಶಕರು ಇವರಿಗೆ ಹಾಡಲು ಅವಕಾಶ ನೀಡುತ್ತಿದ್ದಾರೆ.

" ಶೇಪ್ ಆಫ್ ಯೂ ಒಂದು ರೀತಿಯಲ್ಲಿ ಹೊಸ ಪ್ರಯೋಗ. ಸಂಗೀತಕ್ಕೆ ಅದರದ್ದೇ ಆದ ಶಿಸ್ತಿರುತ್ತದೆ ಅದನ್ನು ಮೀರದೆ, ಈ ಶೇಪ್ ಆಫ್ ಯೂವನ್ನು ಮಾಡಿದ್ದೇವೆ. ಇಂತಹ ಪ್ರಯೋಗಗಳಿಗೆ ಯುವ ಸಂಗೀತಗಾರರು ಒಗ್ಗಿಕೊಳ್ಳಬೇಕು."
- ಇಶಾ ಸುಚಿ, ಗಾಯಕಿ

ಭಾರತದ ನಾನಾ ಭಾಷೆಗಳ ಹಾಡುಗಳು ಟ್ಯೂನ್​ನ ಮೂಲ ಬೀಟ್ ಬಳಸಿಕೊಂಡು ದಿನೇದಿನೇ ಹೊಸತನ ತುಂಬಿಕೊಳ್ಳುತ್ತಿದ್ದು, ಕನ್ನಡದಲ್ಲಿ ಕೂಡ ಇದು ವೈರಲ್ ಆಗಿದ್ದು, ನಾನಾ ಗಾಯಕರು ಈ ಬೀಟ್ ಬಳಸಿಕೊಂಡು ಹಲವು ಸಿನಿಮಾಗಳ ಹಾಡುಗಳನ್ನು ಹಾಡುತ್ತಿದ್ದಾರೆ. ಹತ್ತು, ಇಪ್ಪತ್ತು, ಐವತ್ತು ಅಂತೆಲ್ಲ ಒಂದಿಷ್ಟು ಹಾಡುಗಳನ್ನು ಮೂಲ ತಾಳಕ್ಕೆ ಪೋಣಿಸಿದ ಹಾಡನ್ನು ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

ಏನಿದು? ಹೇಗಿರುತ್ತದೆ?

ಒಂದು ಹಾಡನ್ನು ಕೇಳಿದರೆ ಇನ್ನೊಂದು ಇಂಥದ್ದೇ ಹಾಡು ಇದೆ ಎಂದೆನಿಸುತ್ತದೆಯಲ್ಲ, ಅದಕ್ಕೆ ಅದರ ಹಿಂದಿನ ಬೀಟ್ ಕಾರಣವಿರಬಹುದು. ಇಲ್ಲೂ ಆಗಿದ್ದು ಅದೇ. ಮೂಲ ಹಾಡನ್ನು ಕೇಳಿದವರು ಸ್ಥಳೀಯವಾಗಿ ಅದೇ ಬೀಟ್ ಇಟ್ಟುಕೊಂಡು ಹೊಸ ಪ್ರಯೋಗ ಮಾಡಲು ಹೋಗಿದ್ದಾರೆ. ಅದು ಸಾಮಾಜಿಕ ತಾಣಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹೋಗಿ ಅಂತಹ ಪ್ರಯೋಗಗಳಲ್ಲಿ ಹಾಡು, ನೃತ್ಯಕ್ಕೆ ಅಳವಡಿಸಿದ್ದಾರೆ. ಒಬ್ಬರಿಂದ ಇನ್ನೊಬ್ಬರು ಉತ್ತೇಜನಗೊಂಡು ಈಗಾಗಲೇ ಖ್ಯಾತವಾಗಿರುವ ಹಾಡುಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತಿರುವವರು ಹಲವರಾದರೆ ಮೂಲ ಹಾಡಿನ ಶೈಲಿಯಲ್ಲಿ ಹೊಸ ಹಾಡುಗಳನ್ನು ಕೂಡ ಹಾಡಿದ್ದಾರೆ. ಒಟ್ಟಿನಲ್ಲಿ ಹೊಸ ರೀತಿಯ ಹಾಡು ಟ್ರೆಂಡ್​ ಆಗುತ್ತಿರುವುದು ಸತ್ಯ.

ಇದನ್ನು ಓದಿ:

1. ಅನಾಥ ಮಕ್ಕಳಿಗೆ ಆಸರೆಯಾದ್ರು ಪ್ರಧಾನಿ : ಪತ್ರಕ್ಕೆ ಸ್ಪಂದಿಸಿ 50 ಸಾವಿರ ರೂ. ನೆರವು ನೀಡಿದ ಮೋದಿ 

2. ಬಂಗಾರದಿಂದ್ಲೇ ಬಂಗಾರದಂಥ ಬದುಕು ಕಟ್ಟಿದ 'ಪ್ರಜ್ಞಾ'ವಂತೆ... 

3. ಅಂತರಾಷ್ಟ್ರೀಯ ಯೋಗ ದಿನ : ಆಸನಗಳನ್ನು ಮಾಡುವ ಮುನ್ನ ಸಾಧಕರಿಗಿದು ತಿಳಿದಿರಲಿ…Related Stories