`ದಿ ಮಾರ್ಟಿಯನ್' ಸಿನಿಮಾದಿಂದ ಉದ್ಯಮಗಳು ಕಲಿಯಬೇಕಾದ ಪಾಠ...

ಟೀಮ್​ ವೈ.ಎಸ್​. ಕನ್ನಡ

0

ಇದು ಸೌರವ್ ದೇ ಅವರ ಅನುಭವದ ಮೂಟೆ. ಇತ್ತೀಚೆಗಷ್ಟೆ ಸೈಲೋಫಿ ಡಾಟ್ ಕಾಮ್ ಎಂಬ ಸಂಸ್ಥೆಯನ್ನು ಆರಂಭಿಸಿರುವ ಅವರು, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಂದು ಸಿನಿಮಾದಿಂದ ಕಲಿಯಬೇಕಾದ ಪಾಠ ಯಾವುದು ಅನ್ನೋದನ್ನು ವಿವರಿಸಿದ್ದಾರೆ.

ಅದೊಂದು ಭಾನುವಾರದ ಸುಂದರ ಸಂಜೆ, ಬಾಹ್ಯಾಕಾಶವೆಂಬ ಅದ್ಭುತ ಲೋಕವನ್ನು ನಾನು ಕಣ್ತುಂಬಿಕೊಂಡಿದ್ದೆ. ಎಲ್ಲಿ ಗೊತ್ತಾ? `ದಿ ಮಾರ್ಟಿಯನ್' ಸಿನಿಮಾದಲ್ಲಿ. ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಗಗನಯಾತ್ರಿ ಮ್ಯಾಟ್ ಡ್ಯಾಮೊನ್ ಅವರ ಪಾತ್ರವನ್ನು ಮಾರ್ಕ್ ವ್ಯಾಟ್ನಿ ಯಥಾವತ್ತಾಗಿ ಚಿತ್ರಿಸಿದ್ದಾರೆ. `ದಿ ಮಾರ್ಟಿಯನ್'ನ ನಿರ್ದೇಶಕ ರಿಡ್ಲೆ ಸ್ಕಾಟ್, ಮಾನವರ ಬದುಕುಳಿಯುವ ಪ್ರಕ್ರಿಯೆಯನ್ನು ಬಲು ಆಕರ್ಷಕವಾಗಿ ಹೆಣೆದಿರುವುದು ವಿಶೇಷ. ಬಾಹ್ಯಾಕಾಶದ ಬಗ್ಗೆ ಹಾಲಿವುಡ್ ಅದ್ಹೇಗೆ ಇಂತಹ ಮಹಾಕಾವ್ಯಗಳನ್ನೇ ರಚಿಸುತ್ತೆ ಅನ್ನೋದೇ ಒಂದು ಅದ್ಭುತ ಹಾಗೂ ಅಚ್ಚರಿ. `ಗ್ರಾವಿಟಿ', `ಇಂಟರೆಸ್ಟೆಲ್ಲರ್' ಈಗ `ದಿ ಮಾರ್ಟಿಯನ್'. ಕೆಂಪಾದ ಮಂಗಳದ ಅದ್ಭುತ ಭೂದೃಶ್ಯದ ಸುತ್ತ ಕಥೆ ಸುತ್ತುತ್ತಿದ್ದಂತೆ, ಈ ಚಿತ್ರದಲ್ಲಿ ಉದ್ಯಮಿಗಳು ಕಲಿಯಬೇಕಾದ ಪಾಠ ಸಾಕಷ್ಟಿದೆ ಅನ್ನೋದು ನನಗೆ ಅರ್ಥವಾಗಿತ್ತು. `ದಿ ಮಾರ್ಟಿಯನ್' ಚಿತ್ರದಿಂದ ಆಯ್ದ ಕೆಲ ಅಂಶಗಳು ಇಲ್ಲಿವೆ.

1. `ದಿ ಮಾರ್ಟಿಯನ್' ಸಿನಿಮಾದ ಕ್ಲೈಮಾಕ್ಸ್​​ನಲ್ಲಿ ನೆನಪಿಡುವಂತಹ ಡೈಲಾಗ್ ಇದೆ. ಮಂಗಳ ಗ್ರಹದಿಂದ ಹಿಂದಿರುಗಿದ ಮಾರ್ಕ್ ವ್ಯಾಟ್ನಿ, ತಮಗಾದ ಅನುಭವಗಳನ್ನು ವಿವರಿಸ್ತಾರೆ - ``ಬಾಹ್ಯಾಕಾಶ ನಮಗೆ ವಿರುದ್ಧವಾಗಿದೆ, ಹಾಗಾಗಿ ಸಾವಿನ ಭಯ ಸಹಜ. ಬದುಕಿ ಉಳಿಯುವವರೆಗೂ ನೀವು ಒಂದಾದ ಮೇಲೊಂದು ಸಮಸ್ಯೆಯನ್ನು ಬಗೆಹರಿಸುತ್ತಲೇ ಇರಬೇಕು''. ಉದ್ಯಮ ಜಗತ್ತಿನ ಲೆಕ್ಕಾಚಾರವೂ ಇದೇ ರೀತಿ ಇದೆ, ಯಾಕಂದ್ರೆ ಅದೆಷ್ಟೋ ಉದ್ಯಮಗಳು ಆರಂಭದಲ್ಲೇ ಸತ್ತು ಹೋದ್ರೆ, ಇನ್ನು ಕೆಲವು ಮೊದಲ ಚಂಡಮಾರುತ ಬೀಸುತ್ತಿದ್ದಂತೆ ಭರವಸೆಯನ್ನೇ ಕಳೆದುಕೊಳ್ಳುತ್ತವೆ, ಇನ್ನು ಕೆಲವು ಮಾತ್ರ ಕೊನೆವರೆಗೂ ಉಳಿದುಕೊಳ್ಳುತ್ತವೆ.

2. ``ಹಿಂತಿರುಗಿ ನೋಡಿದಾಗ ಚುಕ್ಕೆಗಳನ್ನು ಮತ್ತೆ ಸಂಪರ್ಕಿಸಬಹುದು'' ಒಮ್ಮೆ ಸ್ಟೀವ್ ಜಾಬ್ಸ್ ಹೇಳಿದ್ರು. ಕಾಲೇಜು ದಿನಗಳಲ್ಲಿ ಯಾವ ತರಗತಿಗಳಿಗೆ ಅವರು ಹೆಚ್ಚು ಒತ್ತು ಕೊಡ್ತಾ ಇದ್ರೋ ಅದು ಭವಿಷ್ಯದಲ್ಲಿ ಅವರಿಗೆ ನೆರವಾಗಿದೆ. ಅದೇ ರೀತಿ ಮಾರ್ಕ್ ವ್ಯಾಟ್ನಿ ಕೂಡ ಒಬ್ಬ ಸಸ್ಯಶಾಸ್ತ್ರಜ್ಞ. ಮಂಗಳ ಗ್ರಹದಲ್ಲಿ ಕೃಷಿಯನ್ನು ಆರಂಭಿಸಲು ತನ್ನೆಲ್ಲಾ ಜ್ಞಾನವನ್ನು ಉಪಯೋಗಿಸುತ್ತಾನೆ. ಚಿಕ್ಕ ವಯಸ್ಸಿನಲ್ಲೇ ಉದ್ಯಮ ಲೋಕ ಪ್ರವೇಶಿಸಲು ಬಯಸಿ ಕಾಲೇಜು ಬಿಡುವವರು, ಈ ನಿರ್ಧಾರಕ್ಕೆ ಬರುವ ಮುನ್ನ ಭವಿಷ್ಯಕ್ಕೆ ಬೇಕಾದ ಅತ್ಯವಶ್ಯ ಜ್ಞಾನವನ್ನು ಸಂಪಾದಿಸಿಕೊಳ್ಳಿ. ಸ್ಟೀವ್ ಜಾಬ್ಸ್​​​ರಂತೆ ಅದು ನಿಮಗೆ ಪ್ರೇರಣೆಯಾಗಬಹುದು, ಮಾರ್ಕ್‍ರಂತೆ ನಿಮ್ಮನ್ನು ಗೈಡ್ ಮಾಡಬಹುದು.

3. ಮಂಗಳ ಗ್ರಹದ ಕಠಿಣ ಪರಿಸರದಲ್ಲಿ ಬದುಕುಳಿಯುವುದು ನಿಜಕ್ಕೂ ಸವಾಲಿನ ಕೆಲಸ. ಇದರ ಹೊರತಾಗಿ ಯೋಚಿಸುವುದು ಕಷ್ಟ. ಅದರರ್ಥ ನೀವು ನಿಮ್ಮದೇ s**ಣ ನಿಂದ ಆಲೂಗಡ್ಡೆ ಬೆಳೆಯಬೇಕು. ಇದು ಮಾರ್ಕ್‍ನ ಸಂವೇದನೆ ಅಥವಾ ಮೂಗಿಗೆ ಆಹ್ಲಾದಕರವಾಗಿರಲಿಲ್ಲ. ಆದ್ರೆ ಅದೇ ಆಲೂಗಡ್ಡೆಯಿಂದಾಗಿ 561 ದಿನಗಳ ಕಾಲ ಆತ ಬದುಕಿರಲು ಸಾಧ್ಯವಾಯ್ತು. ಅದೇ ರೀತಿ ಉದ್ಯಮಗಳು ಕೂಡ ನಿಮ್ಮ ಸ್ವಂತ s**ಣ ನತ್ತ ನೋಡಬೇಕು. ಅಲ್ಲೇ ನಿಮ್ಮ ಸಮಸ್ಯೆ ಮತ್ತು ಪರಿಹಾರಗಳು ಅಡಗಿರಬಹುದು. `ದಿ ಮಾರ್ಟಿಯನ್' ಸಿನಿಮಾದಲ್ಲಿ ಮಾರ್ಕ್ ಒಂದು ಅದ್ಭುತ ಡೈಲಾಗ್ ಹೇಳ್ತಾನೆ, ``You gotta science the s**t out of this place'' ಇದು ಸತ್ಯ ಮತ್ತು ಅಲಂಕಾರಿಕ.

4. ನಿಮ್ಮ ತಂಡದಲ್ಲಿ `ರಿಚ್ ಪರ್ನೆಲ್' ಯಾರಾಗ್ತಾರೆ ಅನ್ನೋದು ನಿಮಗೆ ಗೊತ್ತಿರುವುದಿಲ್ಲ. `ದಿ ಮಾರ್ಟಿಯನ್' ಚಿತ್ರದಲ್ಲಿ ರಿಚ್ ಒಬ್ಬ ಅಸ್ಟ್ರೋಡೈನಾಮಿಸ್ಟ್ ಆಗಿರ್ತಾನೆ. ಆತ ಪರಿಶ್ರಮಿ ಮತ್ತು ಬದ್ಧತೆಯುಳ್ಳ ವ್ಯಕ್ತಿ. ಆದ್ರೆ ಮೇಲಧಿಕಾರಿಗಳು, ಶ್ರೇಣಿ ವ್ಯವಸ್ಥೆ ಮತ್ತು ಅಧಿಕಾರದ ಬಗ್ಗೆ ಕೂಡ ಕಾಳಜಿ ವಹಿಸುತ್ತಾನೆ. ಮಾರ್ಕ್‍ನನ್ನು ರಕ್ಷಿಸಲು ಈತನೇ ಪರಿಹಾರ ಒದಗಿಸ್ತಾನೆ. ಉದ್ಯಮಗಳು ಅವರ ತಂಡದ ರಿಚ್ ಪರ್ನೆಲ್ ಯಾರು ಅನ್ನೋದನ್ನು ಪತ್ತೆ ಮಾಡಬೇಕು. ಪದವಿ ಬಗ್ಗೆ ಶಪಿಸದ, ಸಮಸ್ಯೆಗಳನ್ನು ಪರಿಹರಿಸುವತ್ತ ಕಾಳಜಿ ವಹಿಸುವ, ಗೌರವಯುತ, ಕೆಲಸದ ಬಗ್ಗೆ ಶ್ರದ್ಧೆಯುಳ್ಳ, ಸೃಜನಶೀಲ ವ್ಯಕ್ತಿ ಯಾರು ಎಂಬುದನ್ನು ಗುರುತಿಸಬೇಕು. ಅವರೇ ಅಂತಿಮವಾಗಿ ನಿಮ್ಮ ಉದ್ಯಮವನ್ನು ಉಳಿಸುತ್ತಾರೆ. ಬುದ್ಧಿಶಕ್ತಿ ಇರುವವರನ್ನು ಗೌರವಿಸಿ.

5. ಈಗ ಕೊನೆಯ ಪಾಠ - ನಾನು ವಿಸಿಗಳ ಬಗ್ಗೆ ಉಲ್ಲೇಖಿಸದೆ, ಬರೀ ಉದ್ಯಮಗಳ ಬಗ್ಗೆ ಮಾತ್ರ ಹೇಗೆ ಮಾತನಾಡಲು ಸಾಧ್ಯ? `ದಿ ಮಾರ್ಟಿಯನ್' ಚಿತ್ರದಲ್ಲಿ ನಾಸಾ ವಿಲನ್ ಸ್ಥಾನದಲ್ಲಿದೆ. ಅದರ ಜೊತೆಗೆ ಮಾರ್ಕ್‍ನ ಸಂರಕ್ಷಕ ಕೂಡ ಹೌದು. ನಾಸಾ ನಿಮಗೆ ತರಬೇತಿ ನೀಡುತ್ತದೆ. ನಿಮ್ಮ ಗಗನ ನೌಕೆಯನ್ನು ಮಂಗಳನ ಅಂಗಳಕ್ಕೆ ಕಳುಹಿಸಿಕೊಡುತ್ತದೆ. ಅಲ್ಲೇನಾದ್ರೂ ಹೆಚ್ಚುಕಮ್ಮಿ ಆದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸುತ್ತೆ. ಒಬ್ಬ ಮಾರ್ಕ್‍ನ ಜೀವ ಉಳಿಸಲು ಹೋಗಿ ಹೆಮ್ರ್ಸ್‍ನಲ್ಲಿರುವ ಇನ್ನು ಐದು ಜನರನ್ನು ಪ್ರಾಣಾಪಾಯಕ್ಕೆ ಸಿಲುಕಿಸಲು ನಾಸಾ ಬಿಲ್‍ಕುಲ್ ಒಪ್ಪುವುದಿಲ್ಲ. ಅಂತಿಮವಾಗಿ ನಾಸಾ ಮತ್ತು ಹೆಮ್ರ್ಸ್ ಜೊತೆಯಾಗಿ ಮಾರ್ಕ್‍ನನ್ನು ಉಳಿಸುತ್ತವೆ. ನಿಮಗೆ ಕಠಿಣ ಮನಸ್ಸಿನ ಒಬ್ಬ ವಿಸಿ ಸಿಕ್ಕಿದ್ರೆ ಅವರು ನಿಮ್ಮ ಪಾಲಿನ ನಾಸಾ ಎಂದುಕೊಳ್ಳಿ. ಒಳ್ಳೆಯದಕ್ಕಾಗಿ ಅವರು ತ್ಯಾಗ ಮಾಡಬಹುದು. ಹೆಮ್ರ್ಸ್‍ನಲ್ಲಿದ್ದಂತಹ ತಂಡವನ್ನು ಕಟ್ಟಲು ನೀವು ಸಫಲರಾದಲ್ಲಿ ಅವರು ನಿಮಗಾಗಿ ಮತ್ತು ನಿಮ್ಮ ಉದ್ಯಮಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡುತ್ತಾರೆ, ನಾನು ಬೇಕಾದ್ರೆ ಬೆಟ್ ಕಟ್ಟುತ್ತೇನೆ. ಒಟ್ಟಿನಲ್ಲಿ `ದಿ ಮಾರ್ಟಿಯನ್' ಒಂದು ಅದ್ಭುತವಾದ ಸಿನಿಮಾ, ನಿಜಕ್ಕೂ ಇದು ಉದ್ಯಮಗಳ ಪಾಲಿಗೆ ಸೊಗಸಾದ ಜೀವನ ಪಾಠ.

ಲೇಖಕರು: ಸೌರವ್​​ ಡೇ
ಅನುವಾದಕರು: ಭಾರತಿ ಭಟ್​​

Related Stories

Stories by YourStory Kannada