ಅಂತರ್ಜಾಲವನ್ನು ಭಾರತೀಕರಣಗೊಳಿಸಲು ಏನು ಮಾಡಬೇಕು?

ವಿವೇಕಾನಂದ ಪಣಿ 

ಅಂತರ್ಜಾಲವನ್ನು ಭಾರತೀಕರಣಗೊಳಿಸಲು ಏನು ಮಾಡಬೇಕು?

Saturday July 23, 2016,

5 min Read

ಇತ್ತೀಚೆಗಿನ ಚೀನಾ ಪ್ರವಾಸ ನನ್ನ ಉದ್ಯಮಕ್ಕೆ ನೆರವಾಗುವಂತಹ ಉಪಯುಕ್ತ ಒಳನೋಟಗಳನ್ನು ಒದಗಿಸಿದೆ. ಆದ್ರೆ ನನ್ನ ಬದುಕಿಗೂ ಬೇಕಾದ ಒಳನೋಟಗಳೂ ಲಭ್ಯವಾಗಬಹುದು ಅನ್ನೋ ನಿರೀಕ್ಷೆ ನನಗಿರಲಿಲ್ಲ. ನನಗೆ ಪ್ರೇರಣೆಯಾಗಬಲ್ಲಂತಹ ಹಲವರನ್ನು ನಾನು ಪ್ರವಾಸದ ಸಂದರ್ಭದಲ್ಲಿ ಭೇಟಿಯಾಗಿದ್ದೇನೆ. ಅವರಲ್ಲೊಬ್ಬರು ರಾಹುಲ್ ನಾರ್ವೇಕರ್. ಮುಂಬೈ ಸ್ಲಮ್​ನಲ್ಲಿ ಹುಟ್ಟಿ ಬೆಳೆದ ಅವರೀಗ, ಎನ್​ಡಿಟಿವಿ ಎಥ್ನಿಕ್ ರಿಟೇಲ್ ಲಿಮಿಟೆಡ್ ಇಂಡಿಯನ್ ರೂಟ್​ನ ಸಂಸ್ಥಾಪಕ ಹಾಗೂ ಖ್ಯಾತ ಉದ್ಯಮಿಯೊಬ್ಬರ ಸಹವರ್ತಿ ಸಹೋದರ. ಅವರ ಬದುಕಿನ ಕಹಾನಿ ಅನೇಕ ಬಾರಿ ಕೇಳಬಲ್ಲಷ್ಟು ಮೌಲ್ಯಯುತವಾದದ್ದು ಮತ್ತು ಸ್ಪೂರ್ತಿದಾಯಕ.

image


ಬಾಲ್ಯದಲ್ಲೇ ರಾಹುಲ್ ಇಂಗ್ಲಿಷ್ ಕಲಿತಿದ್ರು. ಅದು ಭಾರತದ ಸಾಮಾಜಿಕ ಭಿನ್ನತೆ ಎಂಬುದನ್ನು ಅರ್ಥಮಾಡಿಕೊಂಡಿದ್ರು. ಕಠಿಣ ಪರಿಶ್ರಮ ಹಾಗೂ ಆಸಕ್ತಿಯಿಂದಲೇ ರಾಹುಲ್ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಮೌಲ್ಯಯುತ ಉಳಿದ ಕಥೆಗಳು ಯಾವುವು? ಸಾಮಾಜಿಕ ದೃಷ್ಟಿಕೋನದ ಮೇಲೆ ನಾವು ಅವುಗಳನ್ನು ಗುರುತಿಸುವುದು ಹೇಗೆ? ¨

ಭಾರತದಲ್ಲಿ ಇಂಗ್ಲಿಷ್ ಮಾತನಾಡದವರನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದುರ್ಬಲಗೊಳಿಸಲಾಗುತ್ತದೆ ಎಂಬುದು ಸಾಮಾನ್ಯ ಜ್ಞಾನ. ಯಾಕಂದ್ರೆ ಇಂಗ್ಲಿಷ್ ಭಾಷೆ ನೇರವಾಗಿ ಜ್ಞಾನದ ಜೊತೆ ಬೆರೆತಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಇಂಗ್ಲಿಷ್ಗೆ ಸೀಮಿತವಾಗಿದೆ. ಇದರಿಂದಾಗಿ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಪಡೆದ ಲಕ್ಷಾಂತರ ಪ್ರತಿಭೆಗಳು ಉಪಯುಕ್ತ ಜ್ಞಾನ ಪಡೆದುಕೊಳ್ಳುವ ಅವಕಾಶವನ್ನು, ಯಶಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ.

ಸ್ಥಳೀಯ ಭಾಷಾ ವಿಷಯದ ಕೊರತೆಯಿಂದ ಸಾಮಾಜಿಕ, ಸಾಂಸ್ಕೃತಿಕತೆಯಿಂದಾಚೆಗೆ ಸಮಸ್ಯೆಗಳು ಉದ್ಭವಿಸುತ್ತವೆ. ಇದು ನಮ್ಮ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ.

ಭಾರತದಲ್ಲಿ ಸಾಕ್ಷರತೆ ಪ್ರಮಾಣ ಶೇ.74ರಷ್ಟಿದೆ. ಆದ್ರೆ ಶೇ.10ರಷ್ಟು ಮಂದಿ ಮಾತ್ರ ಇಂಗ್ಲಿಷ್ನಲ್ಲಿ ಪರಿಣಿತರು. ಉಳಿದ ಶೇ.10ರಲ್ಲಿ ಶೇ.4ರಷ್ಟು ಮಂದಿ ಮಾತ್ರ ನಿರಾಯಾಸವಾಗಿ ಇಂಗ್ಲಿಷ್ನಲ್ಲಿ ಮಾತನಾಡಬಲ್ಲರು. ಈ ಅಂತರವನ್ನು ಅರ್ಥಮಾಡಿಕೊಂಡಿರುವ ಬಹುತೇಕ ಮುದ್ರಣ ಹಾಗೂ ಟಿವಿ ಮಾಧ್ಯಮಗಳು ಸ್ಥಳೀಯ ಭಾಷೆಗಳಲ್ಲಿ ಸೇವೆ, ಉತ್ಪನ್ನ, ಆಫರ್ಗಳ ಬಗ್ಗೆ ಮಾಹಿತಿ ನೀಡುತ್ತಿವೆ. ಇಂಟರ್ನೆಟ್ ಕೂಡ ಇದೇ ಪ್ರಯತ್ನದಲ್ಲಿದ್ದು, ಇನ್ನೂ ಸಫಲತೆ ಪಡೆದಿಲ್ಲ. ಇಂಟರ್ನೆಟ್ ಸೌಲಭ್ಯ ಬಂದು 20 ವರ್ಷಗಳಾಗಿದ್ದರೂ ಸದ್ಯ ಶೇ.4ರಷ್ಟು ಭಾರತೀಯರು ಮಾತ್ರ ಆನ್​ಲೈನ್​ನಲ್ಲಿ ಲಭ್ಯವಿದ್ದಾರೆ.

ಭಾರತ ಇಂಗ್ಲಿಷ್ ಮಾತನಾಡುವ ರಾಷ್ಟ್ರ ಎಂದುಕೊಂಡಿದೆ ಇಂಟರ್ನೆಟ್.

ನಮ್ಮದು ಭಾಷಾವೈವಿಧ್ಯತೆಯುಳ್ಳ ರಾಷ್ಟ್ರ. ಆರ್ಥಿಕವಾಗಿ ಮುನ್ನಡೆಯಲು ಇಂಗ್ಲಿಷ್ ಜ್ಞಾನದ ಕೊರತೆಯೇ ಅಡ್ಡಿಯಾಗಿದೆ. ಭಾರತೀಯ ಆನ್ಲೈನ್ ಮಾರುಕಟ್ಟೆ ಸುತ್ತ ಅನೇಕ ತಪ್ಪುಗ್ರಹಿಕೆಗಳಿವೆ. ಮೂಲಭೂತ ಅವಶ್ಯಕತೆಗಳ ಪೂರೈಕೆಯಾಗದ ಸಂದರ್ಭದಲ್ಲಿ ಸ್ಥಳೀಯ ಭಾಷೆ ಬಳಕೆದಾರರು ಇಂಟರ್ನೆಟ್ನಿಂದ ಪ್ರಯೋಜನ ಪಡೆಯುತ್ತಿಲ್ಲ ಎಂಬ ತಪ್ಪು ಗ್ರಹಿಕೆ ಹಲವು ಉದ್ಯಮಗಳು ಮತ್ತು ನಮ್ಮ ಸರ್ಕಾರಕ್ಕಿದೆ.

ಸ್ಥಳೀಯ ಭಾಷಾ ಬಳಕೆದಾರರು ಕೂಡ ಆನ್​ಲೈನ್​ನಲ್ಲಿರಲು ಬಯಸುತ್ತಾರೆ. ಆದ್ರೆ ಕಂಟೆಂಟ್ ಸೃಷ್ಟಿ ಸಾಮರ್ಥ್ಯದ ಕೊರತೆ ಮತ್ತು ಆನ್​ಲೈನ್ ಮೂಲಸೌಕರ್ಯಗಳ ಮೂಲ ಬಹಳಷ್ಟು ದೂರ ಸಾಗಬೇಕಿದೆ. ಈ ಬಗ್ಗೆ ನಮ್ಮ ಬಳಿ ಪುರಾವೆಗಳಿವೆ. ಕೇವಲ 3 ತಿಂಗಳುಗಳಲ್ಲಿ 2000ಕ್ಕೂ ಹೆಚ್ಚು ಕ್ಲಿನಿಕ್​ಗಳು ತಮ್ಮ ಎಸ್ಎಂಎಸ್ ಅಲರ್ಟ್ ಸೇವೆಗಳನ್ನು ಸ್ಥಳೀಯ ಭಾಷೆಗಳಿಗೆ ಬದಲಾಯಿಸಿಕೊಂಡಿವೆ. ಶೇ.30ರಷ್ಟು ಆಟೋ ರಿಕ್ಷಾಗಳು ಸ್ಥಳೀಯ ಸಾರಿಗೆ ಆ್ಯಪ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ರಾಜಸ್ತಾನ ಮತ್ತು ಕರ್ನಾಟಕ ಸರ್ಕಾರಗಳು ಈಗಾಗಲೇ ತಮ್ಮ ವ್ಯಾಪ್ತಿಯನ್ನು ಲೋಕಲೈಸ್ ಮಾಡುತ್ತಿವೆ.

ಭಾರತ ಜಿಡಿಪಿಯಲ್ಲಿ 17 ಬಿಲಿಯನ್ ಡಾಲರ್ ಸೇರಿಸಲು ಸಾಧ್ಯವಿದೆ. ಹಾಗಾದಲ್ಲಿ ಅಂತರ್ಜಾಲದಲ್ಲೂ ಶೇ.10ರಷ್ಟು ಹೆಚ್ಚಳವಾಗಿದೆ. ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಮತ್ತು ಇಂಟರ್​ನ್ಯಾಶನಲ್​ ಎಕನಾಮಿಕ್ಸ್ ರಿಲೇಶನ್ಸ್ ವರದಿಯ ಪ್ರಕಾರ ಇಂಟರ್ನೆಟ್ ಚಂದಾದಾರರಲ್ಲಿ ಶೇ.10ರಷ್ಟು ಹೆಚ್ಚಳವಾದ್ರೆ ಅದರ ಫಲಿತಾಂಶವಾಗಿ ಔಟ್​ಪುಟ್​ ಕೂಡ ಶೇ.1.8ರಷ್ಟು ಅಧಿಕವಾಗಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಅಂತರ್ಜಾಲ ಬಳಕೆದಾರರಿರುವ ಮೂರನೇ ರಾಷ್ಟ್ರ ಭಾರತ. ಇದು ನೇರ ಮತ್ತು ಪರೋಕ್ಷವಾಗಿ 6 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಅಂತಾ 2011ರಲ್ಲಿ ಮ್ಯಾಕ್ಕಿನ್ಸಿ ವರದಿ ಮಾಡಿತ್ತು. 2013ರ ವೇಳೆಗೆ ಭಾರತ ಅತಿ ಹೆಚ್ಚು ಅಂತರ್ಜಾಲ ಬಳಕೆದಾರರಿರುವ ಎರಡನೇ ದೇಶ ಎನಿಸಿಕೊಂಡಿತ್ತು. ಕೇವಲ 2 ವರ್ಷಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಮೂರು ಪಟ್ಟು ಹೆಚ್ಚಾಗಿವೆ.

ನಾವೀಗ 2016ರಲ್ಲಿದ್ದೇವೆ. ಸ್ಥಿರ ಸಂಖ್ಯೆ ಹೊಂದಲು ನಾವು ಗಣನೀಯ ಅಂಕಿ-ಅಂಶಗಳನ್ನು ಹೊಂದಿಲ್ಲ. ಆದ್ರೆ ಆರ್ಥಿಕತೆಯಲ್ಲಿ ಇಂಟರ್ನೆಟ್ ಪಾತ್ರವನ್ನು ನೋಡೋದಾದ್ರೆ 10 ಮಿಲಿಯನ್ಗೂ ಅಧಿಕ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಪರಿಗಣಿಸಲೇಬೇಕು. ಇಂಟರ್ನೆಟ್ ಅನ್ನು ಅವರದ್ದೇ ಭಾಷೆಯಲ್ಲಿ ಜನಸಾಮಾನ್ಯರಿಗೆ ವಿಸ್ತರಿಸಿದರೆ ಪರಿಣಾಮ ಹೇಗಿರಬಹುದು ಎಂಬುದನ್ನು ಊಹಿಸಿ. ಹೆಚ್ಚು ಉದ್ಯೋಗ, ಹೆಚ್ಚು ಜಾಗೃತಿ, ಹೆಚ್ಚು ಜ್ಞಾನ ಹಂಚಿಕೆ, ಹೆಚ್ಚಿನ ಮಾನ್ಯತೆ, ಹೆಚ್ಚು ಜಿಡಿಪಿ, ಹೆಚ್ಚಿನ ಆರ್ಥಿಕ ಪ್ರಗತಿ ಹೀಗೆ ಎಲ್ಲವೂ ಹೆಚ್ಚಾಗಲಿದೆ.

ಭಾರತೀಯ ಆನ್​ಲೈನ್ ಮಾರುಕಟ್ಟೆ ಚೀನಾ ಮಾದರಿಯಲ್ಲಿದೆ : ಇಂಗ್ಲಿಷ್ ಮಾತನಾಡದ, ಬಹುಭಾಷೀಯ ಮತ್ತು ಭೌಗೋಳಿಕ ವೈವಿಧ್ಯತೆ. 2010ರಲ್ಲಿ ಶೇ.34ರಷ್ಟು ಬಳಕೆದಾರರನ್ನು ಹೊಂದಿದ್ದ ಚೀನಾ ಈಗ ಶೇ.52ಕ್ಕೆ ಬಂದು ತಲುಪಿದೆ. ಕೇವಲ 6 ವರ್ಷಗಳಲ್ಲಿ 260 ಮಿಲಿಯನ್ ಮಂದಿ ಆನ್​ಲೈನ್​ಗೆ ಬಂದಿದ್ದಾರೆ. ಇದಕ್ಕೆ ಕಾರಣ ಇಂಟರ್ನೆಟ್ ಚೀನೀ ಭಾಷೆಯಲ್ಲಿದೆ. ಹೊರಗಿನಿಂದ ಬರುವ ಪೈಪೋಟಿದಾರರಿಗೆ ದೇಶದ ಬಾಗಿಲನ್ನು ಮುಚ್ಚಿದೆ ಎಂಬ ಕಾರಣಕ್ಕೆ ನಾವೆಲ್ಲ ಚೀನಾವನ್ನು ಟೀಕಿಸಿದ್ದೆವು. ಆದ್ರೀಗ ಚೀನಾ ಪ್ರಜೆಗಳು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಸ್ಥಳೀಯ ಭಾಷೆ ಬಳಕೆದಾರರ ವಿರುದ್ಧದ ಅಲಿಖಿತ ವರ್ಣಬೇಧ ನೀತಿಯನ್ನು ತೊಡೆದುಹಾಕಲು ಪರಿಣಾಮಕಾರಿ ನೀತಿಯನ್ನು ಜಾರಿಗೆ ತರುವ ಅಗತ್ಯವಿದೆ. ಭಾರತದ ಅಂತರ್ಜಾಲ ನಿಯಮಗಳು ಅಗೋಚರವಾಗಿವೆ, ವಿಸ್ತಾರವಾಗಿವೆ ಮತ್ತು ಅಭಿವ್ಯಕ್ತಿಶೀಲವಾಗಿಲ್ಲ. ಭಾರತೀಯ ಇಂಟರ್ನೆಟ್ ನೀತಿಯಲ್ಲಿನ ಸ್ಪಷ್ಟತೆಯ ಕೊರತೆಯಿಂದಾಗಿ ಕುಖ್ಯಾತ 2004 ಬಾಝೀ ಘಟನೆ ಈಗಲೂ ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ನಿಯಂತ್ರಣವಿಲ್ಲದ ಕಾರಣ ಅನೇಕ ಬುದ್ಧಿಜೀವಿಗಳು ದೇಶವನ್ನು ಮುಜುಗರಕ್ಕೀಡಾಗುವಂತಹ ಪರಿಣಾಮಕಾರಿ ಕೆಲಸ ಮಾಡಬಲ್ಲರು. ಅಷ್ಟೇ ಅಲ್ಲ ಇಂಟರ್ನೆಟ್ ಇಂಗ್ಲಿಷ್ನಲ್ಲಿದೆ, ಭಾರತದ ಬಹುತೇಕ ಪ್ರದೇಶದಲ್ಲಿ ಇದರ ಬಳಕೆ ಅಸಾಧ್ಯ. ಈ ಪ್ರಮುಖ ಅಂತರವನ್ನು ಸದ್ಯದ ಇಂಟರ್ನೆಟ್ ನೀತಿ ಕಡಿಮೆ ಮಾಡುತ್ತಿಲ್ಲ.

image


ಭಾರತದಲ್ಲಿ ಬಹುತೇಕ ಬಳಕೆದಾರರನ್ನು ಇಂಟರ್ನೆಟ್ ತಲುಪಬೇಕೆಂದರೆ ಅದನ್ನು ಬಹುಬಾಷೆಯಲ್ಲಿ ಲಭ್ಯವಾಗುವಂತೆ ಮಾಡಬೇಕು.

ಈ ಅಂತರವನ್ನು ಆನ್​ಲೈನ್ ಉದ್ಯಮಗಳು ಅರ್ಥಮಾಡಿಕೊಂಡಿವೆ, ಹೆಚ್ಚಿನ ಬಳಕೆದಾರರನ್ನು ತಲುಪಲು ತಮ್ಮ ಬ್ರಾಂಡ್​ನ ಆಫರ್ಗಳನ್ನು ಬಹುಭಾಷೆಯಲ್ಲಿ ನೀಡುತ್ತಿವೆ. ಸ್ಥಳೀಕರಣ ಕ್ರಾಂತಿ ಈಗಷ್ಟೆ ಆರಂಭವಾಗಿದ್ದು, ಇನ್ನೂ ಬಹುದೂರ ಸಾಗಬೇಕಿದೆ. ದುರದೃಷ್ಟಕರ ಘಟನೆಯೊಂದು ನನಗೆ ನೆನಪಾಗುತ್ತಿದೆ. ಹಿಂದಿಯಲ್ಲಿ ಇಂಟರ್ನೆಟ್ ಸರ್ಫ್ ಮಾಡಬಹುದು ಅನ್ನೋದನ್ನು ತಿಳಿದು ನನ್ನ ಪೋಷಕರು ಬಹಳ ಖುಷಿಪಟ್ಟಿದ್ರು. ಆದ್ರೆ ಮುಗ್ಧ ಹುಡುಕಾಟದ ವೇಳೆ ಹೆಚ್ಚು ಸೂಕ್ತವಲ್ಲದ ಫಲಿತಾಂಶಗಳನ್ನು ಕಂಡು ಅವರು ಚಕಿತರಾದ್ರು.

ಸ್ಥಳೀಯ ಭಾಷೆ ಬಳಕೆದಾರರು ಆರಂಭಿಕ ಹಂತದ ಬಳಕೆದಾರರಾಗಿರುತ್ತಾರೆ. ತಂತ್ರಜ್ಞಾನ ಮತ್ತು ಯುಎಕ್ಸ್ ದೃಷ್ಟಿಕೋನಗಳ ಆಧಾರದ ಮೇಲೆ ಅವರ ಪಯಣ ಆರಂಭಕ್ಕೆ ಅನುಕೂಲ ಮಾಡಿಕೊಡಬೇಕು. ಮುಂದಿನ ಒಂದು ದಶಕದೊಳಗೆ ಸ್ಥಳೀಯ ಭಾಷೆಯಲ್ಲಿ ಕಂಟೆಂಟ್ಗಳನ್ನು ಒದಗಿಸಲಾಗುತ್ತದೆ, ಅವುಗಳ ಬಳಕೆ ಕೂಡ ಸ್ಫೋಟಕ ಪ್ರಮಾಣದಲ್ಲಿರಲಿದೆ. ಸ್ಥಳೀಯ ಭಾಷಾ ಕಂಟೆಂಟ್ಗಳಿಗೆ ಸುರಕ್ಷಿತ ಹುಡುಕಾಟವನ್ನೂ ಅಳವಡಿಸಲಾಗುತ್ತದೆ. ಅನ್ವೇಷಣೆ, ಬಹುಭಾಷಾ ಹುಡುಕಾಟ, ಇನ್ಪುಟ್​ನ ಮೂಲ ನಿಯಮಗಳನ್ನು ಭಾರತೀಯ ಭಾಷೆಗಳಲ್ಲಿ ಅಳವಡಿಸಬೇಕು. ಹಲವಾರು ಸ್ಥಳೀಯ ಭಾಷೆಗಳ ಕೀಲಿಮಣೆಗಳು ಭಾರತೀಯ ಭಾಷೆಗಳ ಅಸ್ಪಷ್ಟ ಅಥವಾ ಪುರಾತನ ಸಂಯೋಜನೆಯ ಟೈಪಿಂಗ್​ಗೆ ಅವಕಾಶ ಇರುವುದು ಇಂಟರ್ನೆಟ್ ಪಾಲಿಗೆ ದುರದೃಷ್ಟಕರ.

ಭಾರತೀಯ ಭಾಷೆಗಳು ಸಂಕೀರ್ಣವಾಗಿವೆ. ಅವು ವ್ಯಂಜನ, ಸ್ವರ, ಸ್ವರ ಚಿಹ್ನೆ, ಪರಿವರ್ತಕಗಳು, ಸಂಯುಕ್ತಾಕ್ಷರಗಳ ಸಂಯೋಜನೆಯಾಗಿವೆ. ಭಾರತೀಯ ಭಾಷೆಗಳನ್ನು ಬರೆಯಲು ಮಕ್ಕಳಿಗೆ ಕಲಿಸಿದಂತೆ ಶಾಲೆಗಳಲ್ಲಿ ಟೈಪಿಂಗ್ ಕೂಡ ಕಲಿಸಬೇಕು. ಭಾರತದಲ್ಲಿ 90ರ ದಶಕದಲ್ಲಿ ಕಂಪ್ಯೂಟರ್ಗಳ ಜಾಗತೀಕರಣ ಮತ್ತು ಪ್ರಸರಣ ನಡೆದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ವಿವಿಧ ಭಾರತೀಯ ಭಾಷೆಗಳಲ್ಲಿ ಓಎಸ್ ಮತ್ತು ಉತ್ಪನ್ನಗಳ ಪೂರೈಸುವಿಕೆ ಆರಂಭವಾಗಿದೆ. 1997ರಲ್ಲಿ ಅಡೋಬ್ ಮತ್ತು ಮೈಕ್ರೋಸಾಫ್ಟ್ ಜೊತೆಯಾಗಿ ಓಪನ್ ಟೈಪ್ ಫಾಂಟ್ ಫಾರ್ಮೆಟ್ ಅನ್ನು ಪರಿಚಯಿಸಿವೆ. ಇದು ನಮ್ಯವಾಗಿತ್ತು, ವಿಶಿಷ್ಟ ಲಕ್ಷಣಗಳನ್ನು ಹೊಂದಿತ್ತು. ಜೊತೆಗೆ ಕ್ರಾಸ್ ವೇದಿಕೆ ಹೊಂದಾಣಿಕೆಯೂ ಇದ್ದಿದ್ರಿಂದ ಅತ್ಯಂತ ಬೇಗ ಜನಪ್ರಿಯತೆ ಗಳಿಸಿದೆ. ಭಾರತದ ಹೊರಗಿನ ಅನೇಕ ಉತ್ಪಾದಕರು ಭಾರತೀಯ ಟೈಪೋಗ್ರಫಿಯ ಹಿನ್ನೆಲೆ ಬಗ್ಗೆ ಸಂಶೋಧನೆ ನಡೆಸದೆ ಓಪನ್ ಟೈಪ್​ನ ಶಕ್ತಿಯನ್ನು ಪ್ರತಿಪಾದಿಸಿದ್ದಾರೆ. ಭಾರತೀಯ ಬರಹಗಳಲ್ಲಿರುವ ಸಂಕೀರ್ಣತೆ ಬಗ್ಗೆ ಅವರ ಜ್ಞಾನ ಸೀಮಿತವಾದದ್ದು. ಹಾಗಾಗಿಯೇ ಭಾರತೀಯ ಭಾಷೆಯ ಫಾಂಟ್ಗಳಲ್ಲಿ ಈ ಹವ್ಯಾಸಿ ಉತ್ಪಾದಕರು ಮತ್ತು ಫಾಂಟ್ ವಿನ್ಯಾಸಕರು ಹಲವಾರು ಅನಗತ್ಯ ಮತ್ತು ಪುರಾತನ ಪಾತ್ರ ಆಕಾರಗಳನ್ನು ಪರಿಚಯಿಸಿದ್ದಾರೆ.

ಭಾರತೀಯ ಇಂಟರ್ನೆಟ್ ನೀತಿಯನ್ನು ನಿಯಂತ್ರಿಸುವ ಅಗತ್ಯವಿದೆ. ಭಾರತೀಯ ಭಾಷೆಯ ಫಾಂಟ್ ಬಳಕೆ ಪ್ರಮಾಣೀಕರಿಸಲು ಸ್ವಚ್ಛ ಅಡಿಪಾಯದ ಅಗತ್ಯವಿದೆ. ಇಂಟರ್ನೆಟ್ ಭಾರತೀಯ ಭಾಷೆಯಲ್ಲಿ ಮಾತನಾಡಬಲ್ಲದು. ಅದಕ್ಕೆ ನಾವು ಚೀನಾ ಸರ್ಕಾರವನ್ನು ಅನುಸರಿಸಬೇಕಷ್ಟೆ. ಅಮೆರಿಕದ ಬೆಳವಣಿಗೆ ನಮಗೆ ಮಾದರಿಯಾಗಬೇಕು. ಯಾಕಂದ್ರೆ ಭೌತಿಕ ಮೂಲ ಸೌಕರ್ಯದ ಬಗ್ಗೆ ಅವರು ಗಮನ ಕೇಂದ್ರೀಕರಿಸಿದ್ದಾರೆ.

image


ನಾವು ಭಾರತೀಯರು ಕೂಗ ವೇಗವಾಗಿ ಮುನ್ನುಗ್ಗುತ್ತಿದ್ದೇವೆ, ಆದ್ರೆ ಸಾಗಬೇಕಾದ ಹಾದಿ ಬಹಳ ದೂರವಿದೆ. ಮೂಲ ಸೌಕರ್ಯಗಳಾದ ವಿದ್ಯುತ್, ರಸ್ತೆಗಳು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಇನ್ನೂ ತಲುಪಿಲ್ಲ, ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಪರ್ಕ ಸಾಧಿಸಿಲ್ಲ. ಭೌತಿಕ ವಿತರಣೆ ಹಾಗೂ ಡಿಜಿಟಲ್ ಪ್ರವೇಶಕ್ಕೆ ಇದು ಬಹುದೊಡ್ಡ ಸವಾಲು. ಚೀನಾದಂತೆ ಭೌತಿಕ ಹಾಗೂ ಆನ್ಲೈನ್ ಮೂಲಸೌಕರ್ಯ ನಿರ್ಮಿಸಿದಲ್ಲಿ ನಾವು ಹಿಂತಿರುಗಿ ನೋಡಬೇಕಾದ ಪ್ರಮೇಯವಿಲ್ಲ. ಇದು ಅತಿರೇಕದ ಪರಿಹಾರವೇನಲ್ಲ. ಇದು ಸಾಧಿಸಬಹುದಾದದ್ದು ಮತ್ತು ಅಳೆಯಬಹುದಾದದ್ದು. ಅವಕಾಶಗಳು ಮತ್ತು ಸಾಧ್ಯತೆಗಳು ಬಹಳಷ್ಟಿವೆ.

ಒಟ್ನಲ್ಲಿ ``ಇಂಡಿಕ್ ಇಂಟರ್ನೆಟ್ ಯೂಸರ್ಸ್:ಓಪನ್ ಇಂಟರ್ನೆಟ್ ಫಾರ್ ದೆಮ್'' ಎಂಬ ವಿಷಯದ ಮೇಲೆ ಬಿಲಿಯಂತ್ ಅವಾರ್ಡ್ 2016ನಲ್ಲಿ ಮಾತನಾಡಲು ನಾನು ಸಜ್ಜಾಗಬೇಕಿದೆ. ಪೆನ್ನು, ಪೇಪರ್, ನೋಟ್ಸ್ ಎಲ್ಲವನ್ನೂ ಒಮ್ಮೆ ಚೆಕ್ ಮಾಡಲೇಬೇಕು.

ಇದನ್ನೂ ಓದಿ...

ಜಪಾನಿನ ಹಿರಿಯಜ್ಜನ ಓದುವ ಆಸೆ- 96ರ ಹರೆಯದಲ್ಲಿ ದಕ್ಕಿತು ಪದವಿ ಗೌರವ

ಬ್ರಿಟಿಷ್ ಕಾಲದ ತಂತ್ರಜ್ಞಾನಕ್ಕೆ ಗುಡ್‍ಬೈ - ಬರ್ತಿದೆ ಹಮಾಮಾನ ಮುನ್ಸೂಚನೆ ನೀಡುವ ಸೂಪರ್ ಕಂಪ್ಯೂಟರ್