ಆನ್​ಲೈನ್​ನಲ್ಲಿ ಬುಕ್​​ ಮಾಡಿ- ಕುಳಿತಲ್ಲಿಗೆ ಬರುತ್ತೆ ಸೀ ಫುಡ್​..!

ಆರಾಧ್ಯ

ಆನ್​ಲೈನ್​ನಲ್ಲಿ ಬುಕ್​​ ಮಾಡಿ- ಕುಳಿತಲ್ಲಿಗೆ ಬರುತ್ತೆ ಸೀ ಫುಡ್​..!

Tuesday March 22, 2016,

2 min Read

ಸಿಲಿಕಾನ್ ಸಿಟಿಯಲ್ಲಿ ಸಂಡೇ ಬಂತು ಅಂದ್ರೆ ಸಾಕು ಬಹುತೇಕ ಎಲ್ಲರ ಮನೆಯಲ್ಲಿ ಬಾಡೂಟದ ವಾಸನೇ ಗಂ ಎನ್ನುತ್ತೆ. ಬಗೆ ಬಗೆಯ ಬಾಡೂಟ ತಯಾರು ಮಾಡೋದ್ರಲ್ಲಿ ಮಹಿಳೆಯರು ಫುಲ್ ಬ್ಯುಸಿಯಾದ್ರೆ, ಪುರುಷರಿಗೆ ಸೀಫುಡ್​ ಹಾಗೂ ಮಾಂಸದ ಅಂಗಡಿಗಳ ಮುಂದೆ ಕ್ಯೂ ನಿಂತು ಅದನ್ನ ಕೊಂಡುಕೊಂಡು ಮನೆಗೆ ತರೋದ್ರಲ್ಲಿ ಸಾಕಾಗಿ ಹೋಗಿರುತ್ತೆ. ಆದ್ರೆ ಇನ್ನು ಮುಂದೆ ಆ ಯೋಚನೆ ಬೇಡ.. ಫ್ರೆಶ್ ಟು ಹೋಮ್ ಸಂಸ್ಥೆಗೆ ಜಸ್ಟ್ ಒಂದು ಮೆಸೇಜ್ ಮಾಡಿದ್ರೆ ಸಾಕು ನಿಮಗೆ ಬೇಕಾದ ಎಲ್ಲ ಬಗೆಯ ಸಮುದ್ರ ಆಹಾರ ಹಾಗೂ ಮಾಂಸ ನಿಮ್ಮ ಮನೆಗೆ ಕೆಲವೇ ಕೆಲವು ಗಂಟೆಯಲ್ಲಿ ಬಂದು ಬಿಡುತ್ತೆ.

image


ಹೌದು ಭಾರತದಲ್ಲಿ ತಾಜಾ ಹಾಗೂ ರಾಸಾಯನಿಕ ಮುಕ್ತವಾದ ಸಮುದ್ರ ಆಹಾರ ಮತ್ತು ಮಾಂಸಗಳಿಗಾಗಿ ಮೊಟ್ಟ ಮೊದಲ ವಿದ್ಯುನ್ಮಾನ ವಾಣಿಜ್ಯ ಯೋಜನೆಯಾದ ಫ್ರೆಶ್ ಟು ಹೋಮ್ ಸಂಸ್ಥೆ, ಭಾರತದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಆರಂಭವಾಗಿದೆ. ಈ ಸಂಸ್ಥೆಯಲ್ಲಿ ಫ್ರೆಶ್ ಟು ಹೋಮ್ ಮಾರ್ಕೆಟ್ ಪ್ಲೇಸ್ ಎಂಬ ಇಂಟರ್ ನೆಟ್ ಆಧಾರಿತ ಮಾರುಕಟ್ಟೆ ಸ್ಥಳವನ್ನು ಅನಾವರಣಗೊಳಿಸಿದೆ. ಈ ವೆಬ್​ಸೈಟ್​​ ಮೀನು ಮತ್ತು ಮಾಂಸಗಳ ಉತ್ಪಾದಕರಾದ ರೈತರಿಗೆ ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕ ಮೊಡಿಕೊಡಲಿದೆ. ಬೆಂಗಳೂರಿನಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಸ್ಥಳಗಳಿಂದ ಆರ್ಡರ್ ಗಳನ್ನ ಗ್ರಾಹಕರಿಗೆ ಪೂರೈಕೆ ಮಾಡಲಿದ್ದಾರೆ.

image


ಜಗತ್ತಿನಲ್ಲಿ ಹಾಳಾಗುವಂತಹ ಆಹಾರೋತ್ಪನ್ನಗಳ ಕ್ಷೇತ್ರದಲ್ಲಿ ಭಾರತ ಅತ್ಯಂತ ದೊಡ್ಡದಾದ ಮಾರುಕಟ್ಟೆಯಾಗಿದೆ. 2014ರಲ್ಲಿ 200 ಶತಕೋಟಿ ಡಾಲರ್ ಮೌಲ್ಯದ ತಾಜಾ ಉತ್ಪನ್ನಗಳನ್ನು ಬಳಸಲಾಗಿದೆ. ಮಾಂಸಹಾರಿ ವಿಭಾಗ ಗಮನಾರ್ಹವಾಗಿ ಬೃಹತ್ ಬೆಳವಣಿಗೆಯನ್ನು ಕಂಡಿದ್ದು ಶೇಕಡಾ 60%ಕ್ಕೂ ಹೆಚ್ಚಿನ ಭಾರತೀಯರು ಮಾಂಸಾಹಾರ ಉತ್ಪನ್ನಗಳನ್ನು ಬಳಸುತ್ತಿದ್ದಾರೆ.. ಉದಾಹರಣೆಗಾಗಿ ಭಾರತದಲ್ಲಿ ಕೋಳಿ ಮಾರುಕಟ್ಟೆ ವಾರ್ಷಿಕ ಶೇ.20ರಷ್ಟು ಬೆಳವಣೆಗೆಯನ್ನು ವರ್ಷದಿಂದ ವರ್ಷಕ್ಕೆ ಕಾಣುತ್ತಿದೆ. ಜಗತ್ತಿನಲ್ಲಿ ಮೀನು ಉತ್ಪಾದನೆಯಲ್ಲಿ 2ನೇ ಸ್ಥಾನ ಹೊಂದಿರುವ ಭಾರತ ಸುಮಾರು 50 ಶತಕೋಟಿ ಡಾಲರ್ ಮೌಲ್ಯದ ಮೀನುಗಳನ್ನು ಉತ್ಪಾದಿಸುತ್ತದೆ, ಅಲ್ಲದೆ ಇದರಲ್ಲಿ ಶೇ90ರಷ್ಟು ಸ್ವದೇಶದಲ್ಲಿಯೇ ಬಳಕೆಯಾಗುತ್ತಿದೆ.. ಆದ್ರೆ ಇಷ್ಟು ದೊಡ್ಡ ಮಾರುಕಟ್ಟೆ ಸ್ಥಳ ಇದ್ದರೂ ಶೇ.1ಕ್ಕೂ ಕಡಿಮೆ ಪೂರೈಕೆ ಸರಣಿ ಮಾತ್ರ ಸಂಘಟಿತ ವಿಭಾಗಗಳಲ್ಲಿದೆ.. ಉಳಿದದ್ದು ಹಲವಾರು ಮಧ್ಯವರ್ತಿಗಳ ಮೂಲಕ ಹಾದು ಹೋಗುತ್ತದೆ.. ರೈತರಿಂದ ಗ್ರಾಹಕರವರೆಗೆ ಹಲವಾರು ಮಧ್ಯವರ್ತಿಗಳಿಂದಾಗಿ ಆಹಾರ ಸುರಕ್ಷತೆ ಸಮಸ್ಯೆಗಳು ಉಂಟಾಗುತ್ತವೆ.. ಅಲ್ಲದೆ, ರಾಸಾಯನಿಕಗಳನ್ನು ಸಂರಕ್ಷಕಗಳನ್ನಾಗಿ ಬಳಸುವುದು ಬಹಳಷ್ಟು ಆಹಾರ ಪದಾರ್ಥ ತ್ಯಾಜ್ಯವಾಗುವುದು, ಜೊತೆಗೆ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನ ಲಭಿಸದೇ ಇರುವಂಥಹ ಸಮಸ್ಯೆಗಳು ಹೆಚ್ಚಾಗಿವೆ..

ಈ ಹಿನ್ನಲೆ ಫ್ರೆಶ್ ಹೋಮ್ ಡಾಟ್ ಕಾಮ್ ಪೂರೈಕೆ ಸರಣಿಯಲ್ಲಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವತ್ತ ರಾಜಾ ನೋಟ ಹೊಂದಿದೆ.. ಇದಕ್ಕಾಗಿ ಮೀನುಗಾರರು ಮತ್ತು ರೈತರನ್ನು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕಿಸುವಂತೆ ಮಾಡಲು ವಿಶೇಷ ತಂತ್ರಜ್ಞಾನವನ್ನು ಬಳಸಿದೆ.. ಸಂಸ್ಥೆ ನವೀನ ಪೂರೈಕೆ ಸರಣೆ ಮತ್ತು ಸಂಪನ್ಮೂಲ ಸಂಗ್ರಹಿಸುವ ಕ್ರಮಗಳನ್ನು ಫ್ರೆಶ್ ಟು ಹೋಮ್ ಸಂಸ್ಥೆ ಸ್ಥಳದ ತಂತ್ರಜ್ಞಾನದ ಮೂಲಕ ಕೈಗೊಳ್ಳುತ್ತಿದೆ.. ಈ ಮೂಲಕ ಉತ್ಪಾದಕರಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಮತ್ತು ರಾಸಾಯನಿಕ ಮುಕ್ತವಾದ ಉತ್ಪಾದಕರಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಮತ್ತು ರಾಸಾಯನಿಕೆ ಮುಕ್ತವಾದ ಆಹಾರೋತ್ಪನ್ನಗಳನ್ನು ಪೂರೈಸುತ್ತದೆ.

ಫ್ರೆಶ್ ಟು ಹೋಮ್ ನಲ್ಲಿ ಎಲ್ಲ ಬಗೆಯ ಮಾಂಸಗಳು, ತರಹೇವಾರು ಮೀನುಗಳು, ಚಿಕನ್ ಹೀಗೆ ನಿಮಗೆ ಬೇಕಾದ ಎಲ್ಲ ಸಮುದ್ರಾಹಾರಗಳು ಸಿಗುತ್ತೆ.. ಈ ವೆಬ್ ಸೈಟ್ ಗೆ ಹೋದ್ರೆ ಸಾಕು, ಅಲ್ಲಿ ನಿಮಗೆ ಬೇಕಾದ ಆಯ್ಕೆಯನ್ನ ಕೊಟ್ಟು ಎಷ್ಟು ಕೆಜಿ ಬೇಕು ಅಂತ ಮಾಹಿತಿ ನೀಡಬೇಕು.. ಇನ್ನು ಇವುಗಳ ಬೆಲೆಯು ಕೂಡ ಅಲ್ಲೇ ಲಭ್ಯವಿದೆ.. ಅಂಗಡಿಗಳಲ್ಲಿ ರಾಸಾಯನಿಕ ಮಾಂಸ ಆಹಾರಗಳನ್ನ ಕೊಂಡುಕೊಳ್ಳುವ ಬದಲ ರಾಸಾಯನಿಕ ಮುಕ್ತ ಸಮುದ್ರಾಹಾರಗಳನ್ನ ಕೊಂಡುಕೊಳ್ಳೋದಕ್ಕೆ ಫ್ರೆಶ್ ಟು ಹೋಮ್ ಉತ್ತಮ ವೇದಿಕೆ ಅಂತ ಹೇಳಬಹದು.