ಓದಿನ ಪ್ರತಿಫಲ ದಂತವೈದ್ಯೆ- ಮನಸ್ಸು ಮಾಡಿರುವುದು ಸಾಮಾಜಿಕ ಕೆಲಸಕ್ಕೆ..!

ಟೀಮ್​ ವೈ.ಎಸ್​. ಕನ್ನಡ

ಓದಿನ ಪ್ರತಿಫಲ ದಂತವೈದ್ಯೆ- ಮನಸ್ಸು ಮಾಡಿರುವುದು ಸಾಮಾಜಿಕ ಕೆಲಸಕ್ಕೆ..!

Sunday January 01, 2017,

2 min Read

ಬೆಂಡಿ ಬಜಾರ್ ದಕ್ಷಿಣ ಮುಂಬೈಯಲ್ಲಿರುವ ಹೆಸರಾಂತ ಮಾರುಕಟ್ಟೆ. ಈ ಬೆಂಡಿ ಬಜಾರ್​ ಈಗ ಎಲ್ಲೆಡೆ ದೊಡ್ಡ ಸುದ್ದಿ ಮಾಡಿದೆ. ಬೆಂಡಿ ಬಜಾರ್​ನ ಸಾಮಾಜಿಕ ಹೋರಾಟಗಾರ ಡಾ. ಶಾಹಿದ್ ಅಹಮದ್ ಪುತ್ರಿ ನೆಡಾ ಫಾತಿಮಾ ವಿಶೇಷ ಸಾಧನೆ ಮಾಡಿದ್ದಾರೆ. 24 ವರ್ಷ ವಯಸ್ಸಿನ ಫಾತಿಮಾ ಬೆಂಡಿ ಬಜಾರ್ ವಲಯದಲ್ಲೇ ಯಾರೂ ಮಾಡದೇ ಇರುವ ಸಾಧನೆ ಮಾಡಿದ್ದಾರೆ. ಮಹಾರಾಷ್ಟ್ರ ವಿಶ್ವವಿದ್ಯಾಲಯದ ಹೆಲ್ತ್ ಸೈನ್ಸ್ ವಿಭಾಗದಲ್ಲಿ ಫಾತಿಮಾ ದಂತ ವೈದ್ಯಕೀಯ ಕೋರ್ಸ್ ಕಲಿಯುತ್ತಿದ್ದರು. ಫಾತಿಮಾ ಬಿಡಿಎಸ್ ಪರೀಕ್ಷೆಯಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಫಾತಿಮಾ ಸಾಧನೆಗೆ ಎಲ್ಲೆಡೆಯಿಂದ ಶುಭಾಷಯಗಳು ಹರಿದು ಬರುತ್ತಿವೆ. ಮಹಾರಾಷ್ಟ್ರದ ರಾಜ್ಯಪಾಲರಾದ ಸಿ. ವಿದ್ಯಾಶಂಕರರ್ ರಾವ್ ನಾಸಿಕ್​ನಲ್ಲಿ ನಡೆದ ಘಟಿಕೋತ್ಸವದಲ್ಲಿ ಫಾತಿಮಾಗೆ ಚಿನ್ನದ ಪದಕ ನೀಡಿ ಗೌರವ ಕೂಡ ನೀಡಿದ್ದಾರೆ.

image


ಅಂದಹಾಗೇ ಫಾತಿಮಾ ತಂದೆ ಶಾಹಿದ್ ಕೂಡ ವೈದ್ಯರೇ ಆಗಿದ್ದರು. ಶಾಹಿದ್ ಇಮಾಮದ್ ಬಾದ್ ರಸ್ತೆಯಲ್ಲಿರುವ ಕಸದ ರಾಶಿಗಳ ಪಕ್ಕವೇ ಚಿಕ್ಕ ಕ್ಲಿನಿಕ್ ಇಟ್ಟುಕೊಂಡಿದ್ದರು. ಶಾಹಿದ್ ತನ್ನ ಬೆಳವಣಿಗೆಯ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಸಾಮಾಜಿಕ ಹೋರಾಟಗಾರನಾಗಿದ್ದ ಶಾಹಿದ್ ಮನಸ್ಸು ಮಾಡಿದಿದ್ದರೆ ಇಷ್ಟು ಹೊತ್ತಿಗೆ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿ, ಕೋಟ್ಯಾಧೀಶರಾಗಿರುತ್ತಿದ್ದರು. ಆದ್ರೆ ಶಾಹಿದ್​ಗೆ ತನ್ನ ಅಭಿವೃದ್ಧಿಯ ಜೊತೆ ಸಮಾಜ ಮತ್ತು ತನ್ನ ಸುತ್ತ ಮುತ್ತ ಇರುವವರು ಕೂಡ ಅಭಿವೃದ್ಧಿ ಆಗಬೇಕು ಎಂದು ಬಯಸಿದವರು. ಫಾತಿಮಾ ಸುಮಾರು 26 ದಂತ ವೈದ್ಯಕೀಯ ಕಾಲೇಜುಗಳ ಸುಮಾರು 3000 ವಿದ್ಯಾರ್ಥಿಗಳ ಪೈಕಿ ಮೊದಲ ಸ್ಥಾನ ಪಡೆದಿರುವುದು ಅವರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ.

“ ನನಗೆ ನನ್ನ ತಂದೆಯೇ ಸ್ಫೂರ್ತಿ ಮತ್ತು ಧೈರ್ಯ. ನನ್ನ ಕುಟುಂಬದಲ್ಲಿ ನಾನೇ ಚಿಕ್ಕವಳು. ನನ್ನ ಅಣ್ಣ ಕೂಡ ಡಾಕ್ಟರ್. ಹೀಗಾಗಿ ನನಗೆ ಒಳ್ಳೆಯ ಪ್ರೋತ್ಸಾಹ ಸಿಕ್ತು. ನಾನು ಸಾಧನೆ ಮಾಡಿ ಅವರ ಶ್ರಮಕ್ಕೆ ಬೆಲೆ ಕೊಟ್ಟ ಸಂತಸ ನನಗೆ ಇದೆ ”
- ಫಾತಿಮಾ, ದಂತವೈದ್ಯೆ

ಅಂದಹಾಗೇ ದಂತವೈದ್ಯಕೀಯ ಕೋರ್ಸ್​ನ್ನು ಕಲಿತಿದ್ದು ಸರ್ಕಾರಿ ದಂತ ವೈದ್ಯಕೀಯ ಕಾಲೇಜ್​ನಲ್ಲಿ. ಫಾತಿಮಾ 2ನೇ ವರ್ಷದ ಬಿಡಿಎಸ್ ಪರೀಕ್ಷೆಯಲ್ಲೇ ಮೊದಲ ಸ್ಥಾನ ಪಡೆದುಕೊಂಡಿದ್ದರು. ಹೀಗಾಗಿ ಅಪ್ಪ ಶಾಹಿದ್ ಮಗಳಿಗೆ ಹೆಚ್ಚು ಸ್ಫೂರ್ತಿ ನೀಡಿದ್ದರು. ಆದ್ರೆ ಕಳೆದ ನವೆಂಬರ್ 22ರಂದು ಫಾತಿಮಾ ತಂದೆ ಶಾಹಿದ್ ಕ್ಯಾನ್ಸರ್​ನಿಂದಾಗಿ ಇಹಲೋಕ ತ್ಯಜಸಿದ್ದರು. ಇದು ಕುಟುಂಬಕ್ಕೆ ಮತ್ತು ಫಾತಿಮಾಗೆ ತುಂಬಲಾರದ ನಷ್ಟವಾಗಿತ್ತು. ಆದ್ರೆ ಈಗ ಚಿನ್ನದ ಪದಕ ಪಡೆಯುವ ಮೂಲಕ ಫಾತಿಮಾ ತನ್ನ ತಂದೆಯ ಆಸೆಯನ್ನು ನೆರವೇರಿಸಿದ್ದಾರೆ.

ಫಾತಿಮಾ ತಂದೆ ಮಗಳು ರಾಜಕಾರಣಿ ಆಗಿ ಸಮಾಜಿಕ ಕೆಲಸ ಮಾಡಬೇಕು ಅನ್ನುವ ಆಶಯ ಇಟ್ಟುಕೊಂಡಿದ್ದರು. ಈಗ ಫಾತಿಮಾ ಮುಂದಿನ ಬೃಹತ್ ಮುಂಬೈ ಕಾರ್ಪೋರೇಶನ್ ಚುನಾವಣೆಯ ವೇಳೆ ವಾರ್ಡ್ ನಂಬರ್ 223ರಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಜನ ನಾಯಕಿಗೆ ಆಗಿ ಸಮಾಜಕ್ಕೆ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ನಿರ್ಧರಿಸಿರುವ ಡಾ. ಪಾತಿಮಾಗೆ ನಮ್ಮದೊಂದು ಶುಭಾಷಯಗಳು.

ಇದನ್ನು ಓದಿ:

1. ಬದುಕಿಗೆ ಹೊಸ "ದಿಕ್ಕು" ತೋರುವ ಜೀವಸೆಲೆ "ನರ್ಮದಾ"

2. ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!

3. ಕಾಡು ರಕ್ಷಿಸಲು ಮರಗಳ ಮೇಲೆ ಕಲಾಕೃತಿ : ನಾರಿಯರ ಕೈಚಳಕದಲ್ಲಿ ಸ್ವರ್ಗವಾಗಿದೆ ಮಧುಬನಿ

    Share on
    close