ಪೇಪರ್ ಮಾರುವ ಹುಡುಗಿಯ ಯಶೋಗಾಥೆ

ಟೀಮ್​ ವೈ.ಎಸ್​. ಕನ್ನಡ

ಪೇಪರ್ ಮಾರುವ ಹುಡುಗಿಯ ಯಶೋಗಾಥೆ

Thursday November 17, 2016,

2 min Read

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಹುಡುಗಿ ಶಿವಾಂಗಿ. ತಮ್ಮ ಪೋಸ್ಟ್​ಗಳಿಂದಲೇ ಹಲವು ವಿದ್ಯಾರ್ಥಿಗಳಿಗೆ ಮಾದರಿಯಾಗಿರುವ ಶಿವಾಂಗಿ ಎಂಬ ಪ್ರತಿಭಾನ್ವಿತ ಯುವತಿಯ ಯಶೋಗಾಥೆ. ಅಂದು ಪತ್ರಿಕೆ ಮಾರುತ್ತಿದ್ದ ಈ ಹುಡುಗಿ ಐಐಟಿ ರೂರ್ಕಿಯಲ್ಲಿ ಪದವಿ ಪಡೆದು ಈಗ ಉತ್ತಮ ಉದ್ಯೋಗ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ. ಛಲವೊಂದಿದ್ದಾರೆ ಏನು ಬೇಕಾದ್ರು ಸಾಧಿಸಬಹುದು ಎಂಬುದನ್ನು ಈಕೆ ತೋರಿಸಿಕೊಟ್ಟಿದ್ದಾಳೆ.

image


ಸದ್ಯ ತಮ್ಮ ಯಶೋಗಾಥೆಯಿಂದ ಎಲ್ಲರ ಗಮನ ಸೆಳೆದಿರುವ ಶಿವಾಂಗಿ ಹುಟ್ಟಿದ್ದು ಕಾನ್ಪುರದಿಂದ 60 ಕಿಲೋಮೀಟರ್​ ದೂರದ ದೇಹಾ ಎಂಬ ಗ್ರಾಮದಲ್ಲಿ. ಆಕೆ ತನ್ನ ತಂದೆಯ ಜೊತೆಗೂಡಿ ಪತ್ರಿಕೆಗಳನ್ನು ಹಾಗೂ ಮ್ಯಾಗಝೀನ್​ಗಳನ್ನು ಮಾರಾಟ ಮಾಡುತ್ತಿದ್ದಳು. ಸ್ಥಳೀಯ ಸರಕಾರಿ ಶಾಲೆಗೆ ಹೋಗುತ್ತಿದ್ದ ಆಕೆ ಸಮಯ ಸಿಕ್ಕಾಗೆಲ್ಲಾ ತನ್ನ ತಂದೆಯ ಅಂಗಡಿಯಲ್ಲಿ ಕುಳಿತು ಕಲಿಯುತ್ತಿದ್ದಳು. ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಐಐಟಿ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಕೂಲಕರವಾಗಲು ಆನಂದ್ ಕುಮಾರ್ ಎಂಬವರು ಆರಂಭಿಸಿದ ಸೂಪರ್ 30 ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡಳು. ಶಿವಾಂಗಿ ಆನಂದ್ ಕುಮಾರ್ ಅವರನ್ನು ಭೇಟಿಯಾದಳು ಹಾಗೂ ಈ ಕಾರ್ಯಕ್ರಮಕ್ಕೆ ಆಯ್ಕೆ ಕೂಡ ಆದಳು. ಮುಂದೆ ಐಐಟಿ ಪ್ರವೇಶ ಪರೀಕ್ಷೆಗೆ ಹಾಜರಾದ್ರು. ಐಐಟಿಯಲ್ಲಿ ಉತ್ತಮ ಸಾಧನೆ ತೋರಿದ ಶಿವಾಂಗಿ, ತಮ್ಮ ವಿದ್ಯಾಭ್ಯಾಸದಿಂದಲೇ ಎಲ್ಲರ ಗಮನಸೆಳೆದ್ರು. ಐಐಟಿ ರೂರ್ಕಿಯಲ್ಲಿ ಪದವಿ ಪಡೆದು ಈಗ ಉದ್ಯೋಗವನ್ನೂ ಪಡೆದಿದ್ದಾಳೆ ಈ ಶಿವಾಂಗಿ.

ಇದನ್ನು ಓದಿ: ಮೂವರು ಟೆಕ್ಕಿಗಳ ಕನ್ನಡ ಟಿ ಶರ್ಟ್ ಉದ್ಯಮ..!

ಶಿವಾಂಗಿಯ ಸಾಹಸಗಾಥೆ ಜಗತ್ತಿಗೆ ತಿಳಿಯಲು ಕಾರಣವಾಗಿದ್ದು ಫೇಸ್​ಬುಕ್. ಕುಮಾರ್ ತಮ್ಮ ಫೇಸ್ ಬುಕ್ ಪುಟದಲ್ಲಿ ಶಿವಾಂಗಿ ಸಾಹಗಾಥೆಯನ್ನು ಶೇರ್ ಮಾಡಿದ್ರು. ತಮ್ಮ ಕಾರ್ಯಕ್ರಮದ ಅಂಗವಾಗಿ ಆಕೆ ತರಬೇತಿ ಹೊಂದುತ್ತಿದ್ದಾಗ ತಮ್ಮ ಮನೆ ಮಗಳಂತೆಯೇ ಇದ್ದಳು. ಹಾಗೂ ತಮ್ಮ ತಾಯಿಗೆ ಹುಷಾರಿಲ್ಲದ ಸಮಯದಲ್ಲಿ ಅವರ ಸೇವೆಗೈಯ್ಯುತ್ತಿದ್ದಳು ಎಂಬುದನ್ನು ಸ್ಮರಿಸುತ್ತಾರೆ. ಆಕೆಗೆ ಉದ್ಯೋಗ ದೊರೆತಿದೆ ಎಂದು ತಿಳಿದಾಗ ತಮ್ಮ ಇಡೀ ಕುಟುಂಬ ಸಂತಸ ಪಟ್ಟಿತ್ತು ಹಾಗೂ ತನ್ನ ತಾಯಿ ಮುಂದಿನ ಜನ್ಮದಲ್ಲಿ ತಮಗೆ ಶಿವಾಂಗಿಯಂತಹ ಹುಡುಗಿ ಮಗಳಾಗಿ ಹುಟ್ಟಿ ಬರಲಿ ಎಂದು ಹಾರೈಸಿದ್ದಾರೆ ಎಂದು ಆನಂದ್ ಕುಮಾರ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ. ಶಿವಾಂಗಿ ಶ್ರಮಜೀವಿ ಯಾವುದೇ ಕೆಲಸವಾಗಲಿ ತುಂಬಾ ಶ್ರದ್ಧೆ ನಿಷ್ಠೆಯಿಂದ ಮಾಡುತ್ತಾಳೆ ಹಾಗಾಗಿಯೇ ಯಶಸ್ಸು ಅವಳದಾಗಿದೆ ಎಂಬುದನ್ನು ಅವರು ಈ ಕಥೆಯಲ್ಲಿ ಹೇಳಿಕೊಂಡಿದ್ದಾರೆ.

ಆನಂದ್ ಕುಮಾರ್ ಅವರು ಮೂಲತಃ ಹಿಂದಿಯಲ್ಲಿ ಶಿವಾಂಗಿ ಕಥೆಯನ್ನ ಬರೆದು ಪೋಸ್ಟ್ ಮಾಡಿರುವುದು ಈಗ ವೈರಲ್ ಆಗಿದೆ. ಸಹಸ್ರ ಸಂಖ್ಯೆಯಲ್ಲಿ ಜನ ಅದನ್ನು ಶೇರ್ ಕೂಡ ಮಾಡಿದ್ದಾರೆ. ಶಿವಾಂಗಿಯ ಸಾಧನೆ ಹಲವರಿಗೆ ಈಗ ಪ್ರೇರಣಯಾಗಿದೆ.

ಇದನ್ನು ಓದಿ:

1. ಐದು ತಲೆಮಾರಿನ ಗಾಯಕರಿಂದ ನಾಡಗೀತೆ- ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಸಾಹಸ

2. 4 ದಶಕಗಳ ಹಿಂದೆಯೇ ಸ್ವಚ್ಛ ಭಾರತದ ಕನಸು- ಇದು"ಸುಲಭ" ಸಾಧಕನ ಕಥೆ..!

3. ಕಾರ್​ ಮೈಲೇಜ್​ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಸಂಶೋಧನೆ ಬಗ್ಗೆ ಓದಿ..!