ದೇವರ ಕೋಣೆಯಲ್ಲೇ ಮುಗಿದು ಹೋಯಿತು ಮಗಳ ಮದುವೆ..!

ಟೀಮ್​ ವೈ.ಎಸ್​. ಕನ್ನಡ

1

ಸೂರ್ಯ ಕೃಷ್ಣಮೂರ್ತಿ, ಕೇರಳದ ಪ್ರಸಿದ್ಧ ಕಲಾವಿದ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ವಿಷಯದಲ್ಲಿ ಸೂರ್ಯ ಕೃಷ್ಣಮೂರ್ತಿ ಸಾಕಷ್ಟು ಹೆಸರು ಮಾಡಿದ್ದಾರೆ. ಕಲಾವಿದನಾಗಿ ಸೂರ್ಯ ಕೃಷ್ಣಮೂರ್ತಿಗೆ ಯಾರು ಸಾಟಿಯಿಲ್ಲ. ಆದ್ರೆ ಈಗ ಈ ಕಲಾವಿದ ಬೇರೊಂದು ವಿಚಾರದಲ್ಲಿ ಸುದ್ದಿ ಮಾಡಿದ್ದಾರೆ. ಇತ್ತೀಚಿಗೆ ಸೂರ್ಯ ಕೃಷ್ಣಮೂರ್ತಿ ತನ್ನ ಮಗಳು ಸೀತಾಗೆ ಮದುವೆ ಮಾಡಿದ್ದರು. ಕೇರಳದ ದೊಡ್ಡ ಕಲಾವಿದನ ಮಗಳ ಮದುವೆ ಬಗ್ಗೆ ಮತ್ತು ಅದರ ಅದ್ದೂರಿತನದ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಆದ್ರೆ ಸೂರ್ಯ ಕೃಷ್ಣಮೂರ್ತಿ ಮಾತ್ರ ಎಲ್ಲರ ನಿರೀಕ್ಷೆಗಳನ್ನು ಉಲ್ಟಾ ಮಾಡಿದ್ರು. ಅದ್ದೂರಿಯ ವೈಭವೋಪೇತ ಮದುವೆ ಬದಲಿಗೆ ಸಿಂಪಲ್ ಆಗಿ ಮಗಳ ಮದುವೆ ಮಾಡಿಮುಗಿಸಿದ್ರು.

ಸೀತಾ ಸಿವಿಲ್ ಸರ್ವೀಸ್ ಅಕಾಡಮಿಯಲ್ಲಿ ಟ್ರೈನಿಂಗ್ ಪಡೆದುಕೊಂಡಿದ್ದರು. ತನ್ನ ಬ್ಯಾಚ್ ಮೇಟ್ ಆಗಿದ್ದ ಬಿಹಾರದ ಚಂದನ್ ಕುಮಾರ್ ಎಂಬುವವರನ್ನು ಸೀತಾ ಕೈ ಹಿಡಿದಿದ್ದಾರೆ. ತಿರುವನಂತಪುರದಲ್ಲಿ ನಡೆದ ಈ ಮದುವೆ ತುಂಬಾ ಸಿಂಪಲ್ ಆಗಿತ್ತು. ಸೂರ್ಯ ಕೃಷ್ಣಮೂರ್ತಿಯವರ ದೇವರ ಕೋಣೆಯಲ್ಲೇ ತನ್ನ ಮಗಳ ಮದುವೆ ಮುಗಿಸಿದ ಕೀರ್ತಿ ಈ ಕಲಾವಿದನದ್ದಾಗಿದೆ.

ಇನ್ನು ಮದುವೆ ಮಾಡಿಕೊಂಡ ಸೀತಾ ಕೂಡ ಸಿಂಪಲ್ ಆಗಿ ಡ್ರೆಸ್ ಮಾಡಿಕೊಂಡಿದ್ದರು. ಚಿನ್ನದ ಬಣ್ಣದ ಬಾರ್ಡರ್ ಹೊಂದಿದ್ದ ಕೆಂಪು ಸೀರೆಯನ್ನು ಕೇರಳ ಪದ್ಧತಿಯಂತೆ ಸೀತಾ ಧರಿಸಿದ್ದರು. ವಜ್ರದ ನೆಕ್ಲೆಸ್ ಒಂದೇ ಈ ಮದುವೆಯಲ್ಲಿ ಅದ್ದೂರಿಯಾಗಿ ಕಾಣುತ್ತಿತ್ತು.

“ ಸೀತಾ ಮದುವೆಯನ್ನು ಸರಳವಾಗಿ ಮಾಡುವುದು ನನ್ನ ಕನಸಾಗಿತ್ತು. ಆಡಿಟೋರಿಯಂ ಮತ್ತು ದುಬಾರಿಯ ಮದುವೆ ಇಷ್ಟವಿರಲಿಲ್ಲ. ನನ್ನ ಹೆಂಡತಿ ರಾಜಿ ನನ್ನ ಯೋಚನೆಗಳಿಗೆ ಬೆಂಬಲ ನೀಡಿದಳು. ನನ್ನ ಮನೆಯ ದೇವರ ಕೋಣೆಯಲ್ಲಿ ನನ್ನ ಮಗಳ ಮದುವೆ ನಡೆದಿದೆ. ”
- ಸೂರ್ಯ ಕೃಷ್ಣಮೂರ್ತಿ, ಪ್ರಸಿದ್ಧ ಕಲಾವಿದ

ಸೂರ್ಯ ಕೃಷ್ಣಮೂರ್ತಿ ತನ್ನ ಮಗಳ ಮದುವೆಗೆಂದು ಹಣವನ್ನು ಸಂಗ್ರಹಿಸಿಟ್ಟದ್ದರು. ಹಲವು ವರ್ಷಗಳಿಂದ ಕೂಡಿಟ್ಟ ಹಣವನ್ನು ಸೂರ್ಯ ಕೃಷ್ಣಮೂರ್ತಿ ತಾನು ಕಲಿತ ಶಾಲೆಗೆ ದಾನ ಮಾಡಿದ್ದಾರೆ. ಮಾಡೆಲ್ ಸ್ಕೂಲ್, ಸರಕಾರಿ ಕಲಾ ಕಾಲೇಜು ಮತ್ತು ಟಿಎಂಕೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಮದುವೆ ಮುನ್ನವೇ ಈ ಹಣವನ್ನು ದಾನ ಮಾಡಲಾಗಿದ್ದು, 4 ವರ್ಷಗಳಲ್ಲಿ ಸುಮಾರು 20 ವಿದ್ಯಾರ್ಥಿಗಳಿಗೆ ಈ ಹಣ ನೆರವಾಗಲಿದೆ.

ಇದನ್ನು ಓದಿ: ಕೋಟಿಗಟ್ಟಲೆ ವ್ಯವಹಾರ ನಡೆಸಲು ಲಕ್ಷಗಟ್ಟಲೆ ಸಂಬಳ ಬರುವ ಕೆಲಸ ಬಿಟ್ಟ ಸಚಿನ್..!

ಸೂರ್ಯ ಕೃಷ್ಣಮೂರ್ತಿಯವರ ನಿರ್ಧಾರಕ್ಕೆ ಇಡೀ ಕುಟುಂಬವೇ ಸಹಮತ ಸೂಚಿಸಿದೆ. ಮದುವೆಗೆಂದು ಎತ್ತಿಟ್ಟಿದ್ದ ಸುಮಾರು 15 ಲಕ್ಷ ರೂಪಾಯಿಗಳನ್ನು ಈಗ ಮೂರು ಕಾಲೇಜುಗಳ ಪ್ರಾಂಶುಪಾಲರ ಕೈಗೆ ನೀಡಲಾಗಿದೆ. ಮದುಮಗಳಿಗೆ ಕೇವಲ ತಾಳಿ ಚೈನ್ ಮಾತ್ರ ನೀಡಲಾಗಿದೆ. ಇನ್ನು ಮದುವೆಗೆ ಬಂದ ಅತಿಥಿಗಳಿಗೆ ಕೇವಲ ಪಾಯಸ ಮತ್ತು ಲೈಟ್ ಫುಡ್ ಅನ್ನು ಮಾತ್ರ ನೀಡಲಾಗಿದೆ.

ಒಟ್ಟಿನಲ್ಲಿ ಅದ್ದೂರಿ ಮದುವೆ ನಡೆಯುವ ಕಾಲದಲ್ಲಿ ಸೂರ್ಯ ಕೃಷ್ಣಮೂರ್ತಿ ವಿಭಿನ್ನ ಯೋಚನೆಗಳಿಂದ ಮಿಂಚಿದ್ದಾರೆ. ಅದ್ದೂರಿತನಕ್ಕೆ ಖರ್ಚು ಮಾಡುವ ಹಣವನ್ನು ಬೇರೆ ಕಡೆ ಕೊಟ್ರೆ ಅದರಿಂದ ಸಿಗುವ ನೆಮ್ಮದಿಯೇ ಬೇರೆ ಇರುತ್ತದೆ.

ಇದನ್ನು ಓದಿ:

1. 'ಗೂಗ್ಲಿ' ಸೂರ್ತಿಯಿಂದ 11 ಚಿನ್ನದ ಪದಕ ಗೆದ್ದ ಯುವಕ 

2. ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​ನಲ್ಲೂ ಅಡಕವಾದ ಚಿಂತನೆ

3. ವೈಜ್ಞಾನಿಕ ಸಂಶೋಧನೆಗೆ ಆಸ್ತಿ ದಾನ ಮಾಡಿದ IAS ಅಧಿಕಾರಿ – ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರ್ವರಿ 

Related Stories

Stories by YourStory Kannada