ಟ್ರೆಂಡ್ ಸ್ಪಾಟರ್ಸ್.ಟಿವಿ ಸಂಸ್ಥೆ ನಡೆದುಬಂದ ಹಾದಿ

ಟೀಮ್​​ ವೈ.ಎಸ್​​.

ಟ್ರೆಂಡ್ ಸ್ಪಾಟರ್ಸ್.ಟಿವಿ ಸಂಸ್ಥೆ ನಡೆದುಬಂದ ಹಾದಿ

Tuesday October 13, 2015,

3 min Read

ಕುನಾಲ್ ಕಿಶೋರ್ ಸಿನ್ಹಾ ತಮ್ಮ ಮೊದಲ ಉದ್ಯಮವನ್ನು ಆರಂಭಿಸಿ, ಅದನ್ನು ಗಟ್ಟಿಗೊಳಿಸಿದ ನಂತರ ಈ ವರ್ಷದ ಮೊದಲಿನಲ್ಲಿ ಮತ್ತೆ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಕುನಾಲ್ ರವರು ಸ್ಥಾಪಿಸಿದ ವ್ಯಾಲ್ಯು360 ಎಂಬ ಮಾಹಿತಿ ಸಂಸ್ಥೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಈ ಸಂಸ್ಥೆ ಭಾರತದ 5 ಪ್ರಮುಖ ನಗರಗಳಲ್ಲಿ ತನ್ನ ಶಾಖಾಕಛೇರಿ ತೆರೆದಿದ್ದು, ಸಂಸ್ಥೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. “ನನ್ನ ಉದ್ಯಮ ನನ್ನನ್ನು ಒಬ್ಬ ಉದ್ಯಮಿಯಿಂದ ಮಾರ್ಗದರ್ಶಕನಾಗಿ ಬದಲಾಗುವಂತೆ ಮಾಡಿತು. ಟ್ರೆಂಡ್ ಸ್ಪಾಟರ್ಸ್‌.ಟಿವಿ ಸಂಸ್ಥೆ ಸ್ಥಾಪಿಸುವ ಮೊದಲು ಹಲವು ಸವಾಲುಗಳು ಹಾಗೂ ಹಲವು ಬಿಸಿನೆಸ್ ಐಡಿಯಾಗಳ ಕುರಿತು ಸತತವಾಗಿ ಚರ್ಚಿಸಿದ್ದೆವು” ಎನ್ನುತ್ತಾರೆ ಕುನಾಲ್. ಟ್ರೆಂಡ್‌ಸ್ಪಾಟರ್ಸ್ ಇಂಟರ್‌ನೆಟ್‌ನಲ್ಲಿ ವೀಡಿಯೋ ವೀಕ್ಷಿಸುವವರ ಹಾಗೂ ವೀಡಿಯೋಗಳನ್ನು ಒಂದು ಪೀಳಿಗೆಗಾಗಿ ಸೃಷ್ಟಿಸುವವರಿಗೆ ಒಂದು ಉತ್ತಮ ವೇದಿಕೆಯಾಗಿದೆ.

image


ಇದು ಆರಂಭವಾದದ್ದು ಹೇಗೆ?

ತಮ್ಮ ಸಂವಹನ ಉದ್ಯಮವನ್ನು ವಿಸ್ತರಿಸುವ ಬಗ್ಗೆ ಮಾಹಿತಿ ಪಡೆಯಲು ವೆಬ್‌ಸೈಟ್ ಗಳನ್ನು ಹುಡುಕುತ್ತಿದ್ದಾಗ, ವೀಡಿಯೋ ವಿಷಯವನ್ನು ಹೊಂದಿದ್ದ ಒಂದು ವೆಬ್‌ಸೈಟ್‌ನಿಂದ ಅವರು ತುಂಬಾ ಪ್ರಭಾವಿತರಾದರು. ಈ ಐಡಿಯಾದಿಂದ ಪ್ರೇರಿತರಾದ ಕುನಾಲ್ ಮತ್ತವರ ತಂಡ ವಿಷಯ ಪ್ರಧಾನವಾದ ಕಾರ್ಯಗಳನ್ನು ಹಮ್ಮಿಕೊಳ್ಳಲಾರಂಭಿಸಿದರು. ಶೂನ್ಯದಿಂದ ಮೌಲ್ಯಗಳನ್ನು ಹುಟ್ಟಿಸುವುದೇ ಉದ್ಯಮಿಯ ಉದ್ದೇಶವಾಗಿರಬೇಕು. ಗುರಿಗಿಂತ ಹೆಚ್ಚು ಗುರಿ ಮುಟ್ಟಲು ಹಾಕುವ ಶ್ರಮವನ್ನು ಅನುಭವಿಸಬೇಕು. ಅದೇ ಉದ್ಯಮಿಯ ಲಕ್ಷಣ ಎಂಬುದು ಕುನಾಲ್‌ರ ಅಭಿಮತ.

ಟ್ರೆಂಡ್ ಸ್ಪಾಟರ್ಸ್ ಹಿಂದಿರುವ ತಂಡ

2015ರ ಜನವರಿಯಲ್ಲಿ ಕುನಾಲ್, ಗೌರವ್ ಪಾತ್ರಾ ಮತ್ತು ಮನೀಶಾ ಚೌಧರಿ ಅವರೊಂದಿಗೆ ಸೇರಿ ಡಿಜಿಟಲ್ ವೀಡಿಯೋ ಚಾನೆಲ್ ಒಂದನ್ನು ನಿರ್ಮಿಸಲು ನಿರ್ಧರಿಸಿದರು. ಇದು ಈ ಮೂವರ ಎರಡನೇ ಸಾಹಸವಾಗಿತ್ತು. ಇದಕ್ಕೂ ಮೊದಲು ಇವರು ವ್ಯಾಲ್ಯೂ360 ಸಂಸ್ಥೆಯನ್ನು ಸ್ಥಾಪಿಸಿದ್ದರು. ಟ್ರೆಂಡ್ ಸ್ಪಾಟರ್ಸ್.ಟಿವಿಯನ್ನು ಆರಂಭಿಸುವುದು ಕುನಾಲ್‌ರವರ ಯೋಜನೆಯಾಗಿತ್ತು. ಆದರೆ ಗೌರವ್ ಪಾತ್ರ ಮತ್ತು ಮನೀಶಾ ಚೌಧರಿ ಸೇರಿ ಯೋಜನೆಗೆ ಅಗತ್ಯವಿರುವ ಉಪಕರಣಗಳನ್ನು ಹೊಂದಿಸಿದರು. ಅದೃಷ್ಟ ಎಂದರೆ ಕುನಾಲ್‌ಗೆ ತಮ್ಮ ಸಹ ಸಂಸ್ಥಾಪಕರ ಮನವೊಲಿಸುವುದು ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಈ ವಿಚಾರದಲ್ಲಿ ಅವರು ಯಾವುದೇ ಸವಾಲುಗಳನ್ನು ಎದುರಿಸಲಿಲ್ಲ. ತಮ್ಮ ಯೋಜನೆಯನ್ನು ಅವರೊಂದಿಗೆ ಹಂಚಿಕೊಂಡಾಗ ಗೌರವ್ ಪಾತ್ರ ಮತ್ತು ಮನೀಶಾ ಕುನಾಲ್‌ಗಿಂತ ಹೆಚ್ಚಾಗಿ ಆ ಯೋಜನೆಯನ್ನು ನಂಬಿದ್ದರು.

ಹೊಸ ಉದ್ಯಮಕ್ಕೆ ಬೆನ್ನುಲುಬಾಗಿ ನಿಂತಿರುವ ತಂಡ

ಯಾವುದೇ ಉದ್ಯಮಕ್ಕೆ ಈ ತಂಡ ಬೆನ್ನುಲುಬಾಗಿದೆ ಮತ್ತು ತಂಡದ ಪ್ರತೀ ಸದಸ್ಯರೂ ಉತ್ಸಾಹದಿಂದ ಪ್ರೀತಿಯಿಂದ ಕೆಲಸ ಮಾಡುತ್ತಾರೆ. ಈ ವರ್ಷ ಮಾಧ್ಯಮವಲಯದಲ್ಲಿ ದೊಡ್ಡ ಬಂಡವಾಳಹೂಡಿಕೆ ಮಾಡಲಾಗಿದೆ ಮತ್ತು ಈ ಬಿಕ್ಕಟ್ಟಿನ ನಡುವೆಯೂ ಟಿವಿ, ರೇಡಿಯೋ, ಪತ್ರಿಕಾ ಮಾಧ್ಯಮಗಳ ಪ್ರತಿಭಾವಂತರಿಗೆ ಇಲ್ಲಿ ವೇದಿಕೆ ನಿರ್ಮಿಸಲಾಗಿದೆ. ಈ ವರ್ಷದ ಜೂನ್‌ನಲ್ಲಿ ಆರಂಭವಾಗಿರುವ ಸಂಸ್ಥೆ ಶೀಘ್ರದಲ್ಲೇ ಒಂದು ಆ್ಯಂಡ್ರಾಯ್ಡ್ ಆ್ಯಪ್ ಅನ್ನೂ ಸಹ ಈ ತಿಂಗಳಿನಲ್ಲೇ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಟ್ರೆಂಡ್ ಸ್ಪಾಟರ್ಸ್ ತಂಡ.

ಸಾರ್ವತ್ರಿಕ ಮಾರಾಟದ ಮತ್ತು ಆದಾಯದ ಮಾದರಿ

ಮನೋರಂಜನೆ, ಫ್ಯಾಷನ್ ಮತ್ತು ಸಂಗೀತ ಸೇರಿದಂತೆ ವಿಭಿನ್ನ ಪೀಳಿಗೆಯ ಸದ್ಯದ ಟ್ರೆಂಡ್‌ಗಳ ಆಧಾರದ ಮೇಲೆ ಟ್ರೆಂಡ್‌ಸ್ಪಾಟರ್ಸ್ ಮಾಹಿತಿಗಳನ್ನು ನೀಡುತ್ತದೆ. ಈ ವೇದಿಕೆ ಯುಟ್ಯೂಬ್‌ನ ಅನೇಕ ಚಾನೆಲ್‌ಗಳು, ಟಿವಿ ಪ್ರೇಕ್ಷಕರಿಗೆ ಹೆಚ್ಚಾಗಿ ಪ್ರವಹಿಸಲ್ಪಡುವ ವಿಚಾರಗಳಿಗೆ ಆನ್‌ಲೈನ್ ಮುಖಾಂತರ ವೇದಿಕೆ ಒದಗಿಸಿದೆ. ಮುಖ್ಯವಾದ ಮಾಧ್ಯಮಗಳಲ್ಲಿ ದೊರಕದ ವಿಚಾರಗಳನ್ನು ಇಲ್ಲಿ ತಿಳಿಸಲಾಗುತ್ತದೆ.

ಯಾವುದೇ ಆನ್‌ಲೈನ್ ಉದ್ಯಮವನ್ನು ಆರಂಭಿಸುವುದಕ್ಕೂ ಮೊದಲು ಉದ್ಯಮದ ಕುರಿತು ಆಸಕ್ತಿ ಮೂಡಿಸುವುದು ಬಹಳ ಮುಖ್ಯ. ಪ್ರಸ್ತುತ ಟ್ರೆಂಡ್ ಸ್ಪಾಟರ್ಸ್, ಮಾರ್ಕೆಟಿಂಗ್ ಮತ್ತು ಸಾರ್ವತ್ರಿಕ ಜಾಗೃತಿ ಮೂಡಿಸಿ ಶೀಘ್ರದಲ್ಲೇ ಹೆಚ್ಚು ಹಣಗಳಿಕೆಗೆ ಮುಂದಾಗುವ ಉದ್ದೇಶ ಹೊಂದಿದೆ. ಭವಿಷ್ಯದಲ್ಲಿ ಇಂಟರ್‌ನ್ಯಾಷನಲ್ ಚಾನೆಲ್​ಗಳ ಮೂಲಕ ಬ್ರಾಂಡೆಡ್ ಮತ್ತು ಮೂಲಕಾರ್ಯಗಳು ಮತ್ತು ಡಿಜಿಟಲ್ ಜಾಹೀರಾತುಗಳನ್ನು ಗುರಿಯಾಗಿಸಿಕೊಂಡು ಹಣಗಳಿಸುವುದು ಟ್ರೆಂಡ್ ಸ್ಪಾಟರ್ಸ್‌ನ ಉದ್ದೇಶ.

ಅತೀ ಕಡಿಮೆ ಸಮಯದಲ್ಲೇ ಬೆಳೆದ ಟ್ರೆಂಡ್ ಸ್ಪಾಟರ್ಸ್

ಭಾರತ, ಅಮೆರಿಕಾ, ಸೌದಿ ಅರೇಬಿಯಾ, ಯುಕೆ, ಯುಎಇ ಮತ್ತು ಕೆನಡಾದಂತಹ 26 ದೇಶಗಳು ತಮ್ಮ ದೃಷ್ಟಿಕೋನವನ್ನು ಟ್ರೆಂಡ್​​​ ಸ್ಪಾಟರ್ಸ್ ಜೊತೆ ಹಂಚಿಕೊಂಡಿವೆ. ಶೀಘ್ರದಲ್ಲೇ ಟ್ರೆಂಡ್‌ಸ್ಪಾಟರ್ಸ್ 1,75,000 ವೀಕ್ಷಣೆಯ ದಾಖಲೆ ನಿರ್ಮಿಸಲಿದೆ. ಇದರಲ್ಲಿ ಶೇ.62ರಷ್ಟು ವೀಕ್ಷಣೆ ಮೊಬೈಲ್ ಮೂಲಕವೆ ಬರುವ ನಿರೀಕ್ಷೆ ಇದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮಾತ್ರವಲ್ಲದೇ ಟಿವಿ ವೀಕ್ಷಕರು ಮತ್ತು ಹೆಚ್ಚಾಗಿ ಗೇಮ್ಸ್ ಆಡುವುದರಲ್ಲೇ ಮಗ್ನರಾಗಿರುವವರು ಸಹ ಟ್ರೆಂಡ್ ಸ್ಪಾಟರ್ಸ್ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‌ಗಳಂತಹ ಸಾಮಾಜಿಕ ಜಾಲತಾಣಗಳಿಂದ ಸುಮಾರು 45,000 ಮಂದಿ ಫಾಲೋವರ್ಸ್ ಹೊಂದಿದೆ ಟ್ರೆಂಡ್‌ ಸ್ಪಾಟರ್ಸ್.

ಮುಂದಿನ ಯೋಜನೆ

ಹೊಸ ಬಿಸಿನೆಸ್ ಮೂಲಕ ಪ್ರತೀ ದಿನವೂ ಕಲಿಯುವ ಅವಕಾಶ ಇರುತ್ತದೆ. ಹೊಸ ಬಳಕೆದಾರರ ಅಂತರ್ಮುಖಿ ವಿಚಾರಗಳಿಂದ ಹೆಚ್ಚು ಪ್ರೇಕ್ಷಕರನ್ನು ಪಡೆಯುವುದು ಸಂಸ್ಥೆಯ ಮುಂದಿನ ಗುರಿ. ಮಾರ್ಕೆಟಿಂಗ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ ಮಾಡುವುದಕ್ಕೆ ಸಂಸ್ಥೆ ಹೆಚ್ಚಿನ ಹೂಡಿಕೆ ಮಾಡುವ ನಿರ್ಧಾರ ಮಾಡಿದೆ. ನಿಮ್ಮಷ್ಟಕ್ಕೆ ನೀವೇ ಮಾಡಿ(ಡು ಇಟ್ ಯುವರ್ ಸೆಲ್ಫ್) ಎಂಬ ವಿಚಾರವನ್ನು ಆಧರಿಸಿದ ಮತ್ತೊಂದು ಡಿಜಿಟಲ್ ವೀಡಿಯೋ ಗಮ್ಯಸ್ಥಾನವನ್ನು ನಿರ್ಮಿಸುವ ಗುರಿಯನ್ನೂ ಹೊಂದಿದೆ.