ರೈತರ ಪ್ರಾಣ ಉಳಿಸಲು "ಬೀಜೋತ್ಸವ"

ಟೀಮ್​ ವೈ.ಎಸ್​. ಕನ್ನಡ

ರೈತರ ಪ್ರಾಣ ಉಳಿಸಲು "ಬೀಜೋತ್ಸವ"

Thursday March 16, 2017,

2 min Read

ರೈತರ ಆತ್ಮಹತ್ಯೆ ಅನ್ನುವುದು ದುರಾದೃಷ್ಟವಶಾತ್ ಭಾರತದಲ್ಲಿ ಮಾಮೂಲಿ ಆಗಿ ಬಿಟ್ಟಿದೆ. ಇಂತಹ ಸುದ್ದಿಗಳು ಕೇಳಿ ಕೇಳಿ ಬೇಜಾರು ಆಗಿದೆ. ಆದ್ರೆ ಜನಸಾಮಾನ್ಯರು ಏನು ಮಾಡಲು ಸಾಧ್ಯ. ದೇಶಕ್ಕೆ ಬೆನ್ನೆಲುಬಾಗಿರುವ ರೈತರಿಗೆ ಕೇವಲ ದೈರ್ಯವನ್ನಷ್ಟೇ ತುಂಬಬಹುದು. ಆದ್ರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ರೈತರ ಅಭಿವೃದ್ಧಿಗಾಗಿ ಮತ್ತು ಕೃಷಿ ಉತ್ಪನ್ನಗಳ ಹೆಚ್ಚಳಕ್ಕಾಗಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಕಳೆದ ಕೆಲ ವರ್ಷಗಳಿಂದ ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತದೆ. ಇದಕ್ಕೊಂದು ಎಕ್ಸಾಂಪಲ್ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುವ "ಬೀಜೋತ್ಸವ". ಈ ಕಾರ್ಯಕ್ರಮವನ್ನು ರೈತರಿಗಾಗಿಯೇ "ಬೀಜೋತ್ಸವ್ ಗ್ರೂಪ್" ಆಯೋಜನೆ ಮಾಡುತ್ತಿದೆ. ಈ ಬಾರಿ ಏಪ್ರಿಲ್ 7ರಿಂದ ಏಪ್ರಿಲ್ 9ರ ತನಕ "ಬೀಜೋತ್ಸವ" ಹಬ್ಬ ನಡೆಯಲಿದೆ. ಈ ಕಾರ್ಯಕ್ರಮಮದಲ್ಲಿ ರೈತರಿಗೆ ಉಪಯುಕ್ತವಾದಂತಹ ಸಲಹೆಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ಕ್ವಾಲಿಟಿಯ ಬೀಜಗಳನ್ನು, ವಿವಿಧ ತಳಿಗಳನ್ನು ರೈತರಿಗೆ ಪರಿಚಯ ಮಾಡಿಕೊಡಲಾಗುತ್ತದೆ. ಅಷ್ಟೇ ಅಲ್ಲ ವಿಶೇಷ ಅತಿಥಿಗಳಿಂದ ರೈತರಿಗೆ ಅನುಕೂಲವಾಗುವಂತೆ ಹಲವು ಸಲಹೆಗಳನ್ನು ಕೂಡ ನೀಡಲಾಗುತ್ತದೆ.

image


ರೈತರನ್ನು ಭಾರತದ ಬೆನ್ನೆಲುಬು ಅಂತ ಕರೆಯಲಾಗುತ್ತದೆ. ಆದ್ರೆ ವಿದರ್ಭ ವಲಯದಲ್ಲಿ ಕಳೆದ ಕೆಲವರ್ಷಗಳಿಂದ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. 1995ರಿಂದ 2013ರ ತನಕ ಮಹಾರಾಷ್ಟ್ರದಲ್ಲಿ ಸುಮಾರು 60,750 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿವರ್ಷ ಸರಾಸರಿ 3,685 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅನ್ನುವುದು ಆಘಾತಕಾರಿ ಬೆಳವಣಿಗೆ. 1995 ಮತ್ತು 2013ರ ಮಧ್ಯೆ ಪ್ರತಿದಿನ ಸರಾಸರಿ 10ಕ್ಕಿಂತಲೂ ಅಧಿಕ ರೈತರು ಸಾಲದ ಬಾಧೆ, ಬೆಳೆ ನಷ್ಟ, ಬ್ಯಾಂಕ್ಗಳ ದರ್ಪದಿಂದಾಗಿ ಪ್ರಾಣತ್ಯಜಿಸಿದ್ದರು ಅನ್ನುವುದು ಅತ್ಯಂತ ಬೇಸರದ ಸಂಗತಿ.

ಇದನ್ನು ಓದಿ: ಧರೆಗುರುಳುವ 5000 ಮರಗಳನ್ನು ಕಾಪಾಡಿದ ಪರಿಸರ ಪ್ರೇಮಿ..! 

ರೈತರ ಆತ್ಮಹತ್ಯೆಗೆ ಸಾಕಷ್ಟು ಕಾರಣಗಳಿವೆ. ರಾಷ್ಟ್ರೀಯ ಕೃಷಿ ನೀತಿ, ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಇಲ್ಲದೇ ಇರುವುದು, ಬೀಜ, ಗೊಬ್ಬರ, ಮತ್ತು ಕೀಟನಾಶಕಗಳ ಬೆಲೆ ಏರಿಕೆಗಳು ಮತ್ತು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಷ್ಟದ ದಾರಿ ಹಿಡಿದಿದ್ದು ರೈತರನ್ನು ಜೀವ ಕಳೆದುಕೊಳ್ಳುವಂತೆ ಮಾಡಿದೆ. ಇದರ ಮಧ್ಯೆ ಬರ, ವಾತಾವರಣದಲ್ಲಿನ ಬದಲಾವಣೆ ಮತ್ತು ಮಣ್ಣಿನ ಫಲವತ್ತತೆ ಕಡಿಮೆಯಾಗಿದ್ದು ಕೂಡ ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಆದ್ರೆ ಇತ್ತೀಚಿನ ದಿನಗಳಲ್ಲಿ ಹತ್ತಿನ ಬೆಳೆಯ ತಳಿಗಳನ್ನು ಮಾಪಾಡು ಮಾಡಿರುವುದು (Genetically Modified) ರೈತರ ಹಲವು ಸಮಸ್ಯೆಗಳನ್ನು ಪರಿಹರಿಸುವ ಸಂಜೀವಿನಿಯಾಗಿ ಕಾನುತ್ತಿದೆ. ಹತ್ತಿ ಬೆಳೆಯ ಪ್ರಮುಖ ರಾಜ್ಯಗಳಾಗಿರುವ ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ತಳಿ ಮಾರ್ಪಾಡು ಮಾಡಿರವುದು ಹತ್ತಿ ಬೆಳೆಯ ಇಳುವರಿಯನ್ನ ಹೆಚ್ಚಿಸಿದೆ. ಆದ್ರೆ ಇದು ಶಾಶ್ವತ ಪರಿಹಾರವಲ್ಲ ಅನ್ನುವುದನ್ನು ಎಲ್ಲಾ ರೈತರು ಅರಿತುಕೊಳ್ಳಬೇಕಿದೆ.

ಅಂದಹಾಗೇ ಹತ್ತಿಯ ತಳಿ ಮಾರ್ಪಾಡು ಮಾಡಿದ ಮೇಲ ಹಲವು ಸಮಸ್ಯೆಗಳು ಎದುರಾಗಿವೆ. ಹತ್ತಿ ಬೀಜದ ದರ ಹೆಚ್ಚಾಗಿರುವುದು, ಸಾಮಾನ್ಯ ರೈತರಿಗೆ ಹೆಚ್ಚು ತೊಂದರೆ ಉಂಟು ಮಾಡುತ್ತಿದೆ. ಅಷ್ಟೇ ಅಲ್ಲ ಒಮ್ಮೆ ಬಳಕೆಯಾದ ಬೀಜದಿಂದ ಮತ್ತೊಂದು ಗಿಡ ಹುಟ್ಟುತ್ತಿಲ್ಲ. ಇದು ಕೂಡ ಸಾಕಷ್ಟು ತೊಂದರೆ ಉಂಟುಮಾಡುತ್ತಿದೆ. ನವೀಕೃತ ತಳಿಗಳ ಬೀಜಗಳಿಂದ ಒಮ್ಮೆ ಹತ್ತಿ ಉತ್ಪತ್ತಿಯಾದ ಮೇಲೆ ಮತ್ತೊಮ್ಮೆ ಅದೇ ಬೀಜವನ್ನು ಸಂಸ್ಕರಿಸಿ ಬಿತ್ತಿದರೆ ಪ್ರಯೋಜನವಾಗುತ್ತಿಲ್ಲ. ಬೆಳೆ ಸಾಕಷ್ಟು ಬಂದರೂ, ಬಂಡವಾಳಕ್ಕೆ ತಕ್ಕಂತೆ ಇಳುವರಿ ಇಲ್ಲ ಅನ್ನುವುದು ಕೂಡ ಸತ್ಯ.

ಭಾರತದಲ್ಲಿ ಇವತ್ತಿಗೂ ಕೃಷಿ ಪ್ರಮುಖ ಉದ್ಯೋಗ ಮತ್ತು ಕೋಟ್ಯಂತರ ಜನರ ಜೀವನಾಧರವೂ ಆಗಿದೆ. ಇದನ್ನೇ ಬೀಜೋತ್ಸವದ ಮೂಲಕ ತಿಳಿ ಹೇಳಿ ರೈತರಿಗೆ ಹೆಚ್ಚು ಆತ್ಮ ವಿಶ್ವಾಸ ತುಂಬುವ ಕೆಲಸ ನಡೆಯುತ್ತಿದೆ. ರೈತರ ಆತ್ಮಹತ್ಯೆಗಳನ್ನು ತಡೆಯುವುದು ಬೀಜೋತ್ಸವದ ಧ್ಯೇಯವಾಕ್ಯವೂ ಆಗಿದೆ. 

ಇದನ್ನು ಓದಿ:

1. ಮಹಿಳಾ ಕ್ರಿಕೆಟ್​​ನಲ್ಲಿ ಹೊಸ ಸಂಚಲನ- ಅಂತರಾಷ್ಟ್ರೀಯ ಮಹಿಳಾ ದಿನದಂದು ಹೊಸ ಲೀಗ್ ಆರಂಭ

2. ಸೀರೆಯ ಮೇಲೆ "ಮಾನಸ" ಚಿತ್ತಾರ!

3. ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಮಧ್ಯಾಹ್ನ ಊಟದ ಯೋಜನೆ ಲಾಭ ಸಿಗಲ್ಲ