ಕಾಫಿ ಕುಡಿದು ಫ್ರೆಶ್​ ಆಗಿ- "ಫ್ಲೈಯಿಂಗ್ ಸ್ಕ್ವಿರಲ್"ನಲ್ಲಿದೆ ಆಧುನಿಕತೆಯ ಮೋಡಿ..!

ಟೀಮ್​ ವೈ.ಎಸ್​. ಕನ್ನಡ

ಕಾಫಿ ಕುಡಿದು ಫ್ರೆಶ್​ ಆಗಿ- "ಫ್ಲೈಯಿಂಗ್ ಸ್ಕ್ವಿರಲ್"ನಲ್ಲಿದೆ ಆಧುನಿಕತೆಯ ಮೋಡಿ..!

Thursday January 12, 2017,

2 min Read

ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್​ ಕಾಫಿ ಕುಡಿಯಬೇಕು. ಮನಸ್ಸಿಗೆ ಹೊಸ ಉಲ್ಲಾಸ ಸಿಗಬೇಕು. ಮನಸ್ಸು ಫ್ರೆಶ್​ ಆಗಿದ್ದರೆ ಯೋಚನೆ ಕೂಡ ಫ್ರೆಶ್​ ಆಗಿರುತ್ತದೆ. ಕಾಫಿಯಿಂದ ವೈಜ್ಞಾನಿಕವಾಗಿಯೂ ಪ್ರಯೋಜನಗಳಿವೆ. ಮನಸ್ಸಿಗೆ ಬೋರ್​ ಆದ್ರೆ ಕಪ್​ ಕಾಫಿ ಕುಡಿತಾರೆ, ತಲೆನೋವಿಗೂ ಕಪ್​ ಕಾಫಿಯಲ್ಲಿ ಪರಿಹಾರವಿದೆ. ಹೀಗಾಗಿ ಕಾಫಿಗೆ ಬೇಡಿಕೆ ಹೆಚ್ಚಾಗಿರುತ್ತದೆ.

image


ಬೆಂಗಳೂರಿನಂತಹ ನಗರಗಳಲ್ಲಿ ಕಾಫಿ ಪ್ರೇಮಿಗಳೂ ಹೆಚ್ಚಾಗಿರುತ್ತಾರೆ. ಕೆಲವರಿಗಂತು ದಿನವೊಂದಕ್ಕೆ ನಾಲ್ಕೈದು ಬಾರಿ ಕಾಫಿ ಕುಡಿಯದೇ ಇದ್ದರೆ ನೆಮ್ಮದಿಯಾಗಿ ನಿದ್ರೆಯೇ ಬರುವುದಿಲ್ಲ. ಅದರಲ್ಲೂ ಚಳಿಗಾಲದಲ್ಲಂತೂ ಕಾಫಿ ಪ್ರೇಮಿಗಳು ದಿನವೊಂದಕ್ಕೆ ನಾಲ್ಕೈದು ಬಾರಿ ಕಾಫಿ ಕುಡಿದರೂ ಅದು ಕಡಿಮೆಯೇ ಎನ್ನುತ್ತಾರೆ. ಅಂತವರಿಗಾಗಿ ಬೆಂಗಳೂರಿನಲ್ಲಿ ಒಂದು ಕಾಫಿ ತಾಣ ಆರಂಭವಾಗಿದೆ ಅದರ ಹೆಸರೇ "ಫ್ಲೈಯಿಂಗ್ ಸ್ಕ್ವಿರಲ್".

ಇದನ್ನು ಓದಿ: ಬದುಕಿಗೆ ಹೊಸ "ದಿಕ್ಕು" ತೋರುವ ಜೀವಸೆಲೆ "ನರ್ಮದಾ"

ಒಂದು ವೇಳೆ ಈ ಕಾಫಿ ಪ್ರೇಮಿಗಳಿಗೆ ಕಾಫಿ ಸಿಗಲಿಲ್ಲ ಅಂತಿಟ್ಟುಕೊಳ್ಳಿ. ಆಗ ಚಡಪಡಿಕೆ ಶುರುವಾಗುತ್ತದೆ. ಒಂದು ಕಾಫಿ ಸಿಕ್ಕಿದ್ರೆ ಸಾಕು ಅನ್ನೋ ಆಸೆ. ಒಮ್ಮೊಮ್ಮೆ ಒತ್ತಡ ಇದ್ದಾಗಲೂ ಕಾಫಿ ಬೇಕು ಅನ್ನಿಸುವುದುಂಟು. ಕಾಫಿ ಕುಡಿದ ಮೇಲೆ ಉತ್ಸಾಹ ಹೆಚ್ಚಾಗುತ್ತದೆ. ಹೀಗೆಲ್ಲಾ ಇರುವ ಕಾಫಿ ಕಾಫಿ ಪ್ರೇಮಿಗಳಿಗೆ ಒಳಿತುಂಟು ಮಾಡುವ ತಾಣವಾಗಿ ಈ "ಫೈಯಿಂಗ್ ಸ್ಕ್ವಿರಲ್" ಆರಂಭವಾಗಿದೆ. ಆದರೆ ನಿಮಗೆ ಇಲ್ಲಿ ಕಾಫಿ ಸಿಗುವುದಿಲ್ಲ ಬದಲಿಗೆ ಕಾಫಿಗೆ ಬೇಕಾಗುವ ಸಲಕರಣೆಗಳು, ಅತ್ಯುತ್ತಮ ರೀತಿಯ ಕಾಫಿ ಪೌಡರ್​ಗಳು ಸಿಗುತ್ತವೆ.

image


ಈ "ಫ್ಲೈಯಿಂಗ್ ಸ್ಕ್ವಿರಲ್" ಒಂದು ಆನ್​ಲೈನ್ ಕಾಫಿಶಾಪ್ ಆಗಿದೆ. ನೀವು ನಿಮ್ಮ ಸ್ಮಾರ್ಟ್​ಫೋನ್ ಅಥವಾ ಕಂಪ್ಯೂಟರ್​ಗಳಲ್ಲಿ ಗೂಗಲ್ ಮಾಡಿದಾಗ ನಿಮಗೆ ಈ "ಫ್ಲೈಯಿಂಗ್ ಸ್ಕ್ವಿರಲ್" ವೆಬ್ ಸೈಟ್ ತೆರೆದುಕೊಳ್ಳುತ್ತದೆ.

ವೆಬ್​ಸೈಟ್​ನಲ್ಲಿ ಏನೇನು ಇದೆ..?

ಈ "ಫ್ಲೈಯಿಂಗ್ ಸ್ಕ್ವಿರಲ್"​ನಲ್ಲಿ ಬಗೆ ಬಗೆಯ ಕಾಫಿಗಳು ಸಿಗುತ್ತವೆ. ನೀವೆನಾದರೂ ಕಾಫಿ ಪ್ರಿಯರಾಗಿದ್ದರೆ ನಿಮಗೆ ಸಖತ್ ಖುಷಿಯಾಗುತ್ತದೆ. ಕ್ಲೌಡ್ಸ್ ಇನ್ ಮೈ ಕಾಫಿ, ಪರಮ, ಸನ್ಕಿಸ್ಸಡ್ ಸೇರಿದಂತೆ ಹತ್ತಾರು ಬಗೆಯ ವಿಶಿಷ್ಟ ಕಾಫಿ ಪೌಡರ್ ಇಲ್ಲಿ ದೊರೆಯುತ್ತದೆ. ನಿಮಗೇನಾದರೂ ಆಸಕ್ತಿ ಇದ್ದು ಎಲ್ಲ ತರಹದ ಕಾಫಿಯನ್ನು ಟೇಸ್ಟ್ ಮಾಡಬೇಕೆಂದರೆ ಇಲ್ಲಿ ನೀವು ಖರೀದಿಸಬಹುದು.

image


ಕಾಫಿ ಕಿಟ್​ಗಳು ಲಭ್ಯ

 ಈ ವೆಬ್​ಸೈಟ್​ನ ವಿಶೇಷತೆ ಎಂದರೆ ಇಲ್ಲಿ ಕಾಫಿ ಪುಡಿ ಮಾತ್ರವಲ್ಲ, ನಿಮಗೆ ಕಾಫಿ ಮಾಡುವ ಸಲಕರಣೆಗಳು, ಕಾಫಿ ಕಿಟ್​ಗಳು ಸಿಗುತ್ತವೆ. ಈ ಕಾಫಿಯ ವಿಶೇಷ ಏನೆಂದರೆ ಕಾಫಿಯನ್ನು ಕಾಫಿಯಂತೆಯೇ ಸಿದ್ಧಗೊಳಿಸಬೇಕು. ಇಲ್ಲದಿದ್ದರೆ ಕಾಫಿ ರುಚಿ ಇರುವುದಿಲ್ಲ. ಹಾಗಾಗಿ ಕಾಫಿ ತಯಾರಿಸಲು ಅದಕ್ಕೆ ಬೇಕಾದ ಸಲಕರಣೆಗಳು ಬೇಕು. ಆ ಕಾಫಿ ಕಿಟ್​ಗಳೂ ಇಲ್ಲಿ ಸಿಗುತ್ತವೆ.

ಆರ್ಡರ್ ಮಾಡುವುದು ಹೇಗೆ..?

ನೀವು ವೆಬ್​ಸೈಟ್​ಗೆ ಹೋಗಿ ನಿಮಗೆ ಬೇಕಾದದುನ್ನು ಆಯ್ಕೆ ಮಾಡಿಕೊಂಡು, ಅಲ್ಲೇ ಆನ್​ಲೈನ್ ಪೇಮೆಂಟ್ ಮಾಡಿ ಆರ್ಡರ್ ಮಾಡಬಹುದು. ನೀವು ಆರ್ಡರ್ ಮಾಡಿದ 48 ಗಂಟೆಯೊಳಗೆ ನಿಮ್ಮ ಮನೆಗೆ ಕಾಫಿ ಅಥವಾ ಕಾಫಿ ಕಿಟ್​ನ್ನು ತಲುಪಿಸುತ್ತಾರೆ. ಈಗಾಗಲೇ ಸಾಕಷ್ಟು ಮಂದಿ ಗ್ರಾಹಕರನ್ನು ತಲುಪಿರುವ ಈ ಕಾಫಿ ವೆಬ್​ಸೈಟ್​​ ನಿಮಗೂ ಇಷ್ಟ ಆಗುತ್ತದೆ. ನೀವು ಕಾಫಿ ಪ್ರಿಯರಾಗಿದ್ದರೆ ತಕ್ಷಣವೇ ಈ ವೆಬ್​ಸೈಟ್​ಗೆ ಲಾಗ್ ಇನ್ ಆಗಿ. ನಿಮ್ಮ ಸ್ನೇಹಿತರಿಗೂ ಇದರ ಬಗ್ಗೆ ತಿಳಿಸಿ ಅವರಿಗೂ ದಿ ಬೆಸ್ಟ್ ಕಾಫಿಯನ್ನು ಕುಡಿಯುವಂತೆ ಮಾಡಿ. ಒಟ್ಟಿನಲ್ಲಿ ಕಾಫಿ ಪುಡಿಗೂ ಒಂದು ವೆಬ್​ಸೈಟ್ ಬಂದಿರುವುದು ಡಿಜಿಟಲ್ ಯುಗದ ಸಂತೋಷದ ವಿಚಾರಗಳಲ್ಲಿ ಒಂದು. ಒಟ್ಟಿನಲ್ಲಿ ಕಾಫಿ ಪ್ರಿಯರ ಕೂತಲ್ಲೇ ಕಾಫಿ ಕುಡಿಯುವ ಆಸೆಗೆ ಹೊಸ ಟಚ್​ ಸಿಕ್ಕಿದೆ.

ಇದನ್ನು ಓದಿ:

1. "ಸಾಂಸ್ಕೃತಿಕ ನಗರಿಯಿಂದ ಸಾಗರದ ಸಂಗಮದವೆರೆಗೆ" 

2. ಉದ್ಯಮಮ ಆರಂಭಕ್ಕೆ ಅಡ್ಡಿಯಾಗದ ವಯಸ್ಸು..!

3. ಎಲ್ಲಾ ಬಸ್‍ನಿಲ್ದಾಣಗಳಲ್ಲೂ ಎ2ಬಿಯದ್ದೇ ಸವಿ