ಗೂಗಲ್ ಸಂಸ್ಥೆ ತೊರೆದ ಅಕ್ಷಯ್ ಹಾಗೂ ಇಂಡಿಯನ್ ಓಷಿಯನ್ ಸಂಸ್ಥಾಪಕ ಸುಷ್ಮಿತ್ ಜುಗಲ್​​ಬಂಧಿ-ಐಸ್​ಬರ್ಗ್​ ಪ್ರಾಜೆಕ್ಟ್

ಟೀಮ್​ ವೈ.ಎಸ್​. ಕನ್ನಡ

0

ಕಣ್ತುಂಬಾ ಕನಸುಗಳನ್ನು ಹೊತ್ತ ಅಕ್ಷಯ್ ಅಹುಜಾ ಅಂತಿಮವಾಗಿ ತಾವು ಗೂಗಲ್ ಬಿಡುವುದಾಗಿ ಹೇಳಿದಾಗ ಲೇಖನ ಬರೆದ ಲೇಖಕರಿಗೆ ಕುಣಿದು ಕುಪ್ಪಳಿಸುವಷ್ಟು ಸಂತೋಷವಾಗಿತ್ತಂತೆ. ಏಕೆಂದರೆ ಅಕ್ಷಯ್​ರ ಮಹತ್ವಾಕಾಂಕ್ಷೆಯ ಬಗ್ಗೆ ಲೇಖಕರಿಗೆ ಅರಿವಿತ್ತು.

ಅಕ್ಷಯ್​ರಿಗೆ ಇದು ಸುಲಭವಾದ ನಿರ್ಧಾರವಾಗಿರಲಿಲ್ಲ. ನಾನೆಂದೂ ತುಂಬಾ ಹೆದರಿದ್ದೇನೆಂದು ಅನ್ನಿಸಿರಲಿಲ್ಲ. ಇಲ್ಲಿಯವರೆಗೂ ಇದು ಅನಿಶ್ಚಿತವೇ, ಅಷ್ಟೇನೂ ಆರಾಮದಾಯಕವಲ್ಲದ ವಿಚಾರ, ನಂಗೆ ಅಳುಬರುವ ಹಾಗಾಗುತ್ತಿದೆ ಎಂದು ಅಕ್ಷಯ್ ಅಂದು ಲೇಖಕರ ಬಳಿ ಹೇಳಿದ್ದರು.

ಅದಕ್ಕೆ ಲೇಖಕರು, ಇದನ್ನು ನೀವು 1 ತಿಂಗಳ ಹಿಂದೆಯೇ ಮಾಡಬೇಕಾಗಿತ್ತು. ಆದರೆ ನಾನಂದುಕೊಳ್ಳುವ ಪ್ರಕಾರ ಏನೇ ನಡೆದರೂ ಅದಕ್ಕೊಂದು ಕಾರಣವಿರುತ್ತದೆ ಮತ್ತು ನೀವು ಮಾನಸಿಕವಾಗಿ ಸಿದ್ಧವಾಗುವುದಕ್ಕೂ ಮೊದಲು ನಿಮ್ಮ ವಿಚಾರಗಳು ಪ್ರಬಲವಾಗಿ ಮೂಡಿದ್ದವು. ಗೂಗಲ್ ಸಂಸ್ಥೆಯನ್ನು ಬಿಡುವುದು ನೀವು ಮಾಡಿದ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು ಅಂದಿದ್ದರು.

ಏಕೆ ಎಂದು ಅವರು ಕೇಳಿದ್ದರು.

ಅದಕ್ಕೆ ಲೇಖಕರು, ಏಕೆಂದರೆ ನಿಮಗೊಂದು ಕನಸಿದೆ ಎಂದಿದ್ದರು.

ಅದ್ಭುತವಾದ ಕನಸು. ಅದನ್ನು ಅನುಸರಿಸುವುದೇ ಅತೀ ಮೌಲ್ಯಯುತವಾದದ್ದು. ಆ ಕನಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಹೆಚ್ಚು ಮೌಲ್ಯಯುತವಾಗಿರುತ್ತವೆ ಅನ್ನುವುದು ಲೇಖಕರ ಸಮರ್ಥನೆಯಾಗಿತ್ತು.

ನೀವು ಗೊಂದಲ ತುಂಬಿದ ಹಾದಿಯಲ್ಲಿದ್ದೀರಿ. ಸಂಗೀತ ಬ್ಯಾಂಡ್‌ಗಳ ಮಾರುಕಟ್ಟೆ ಮತ್ತು ಸಂಗೀತದ ಉಪಕರಣಗಳ ಮಾರುಕಟ್ಟೆಗಳು ಭಾರತದಲ್ಲಿ ಹೇಗೆ ಅರ್ಥೈಸಲ್ಪಡುತ್ತಿವೆ ಎಂದು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ನೀವು ಬಾಲಿವುಡ್ ಪ್ರಪಂಚದತ್ತ ನಿಮ್ಮ ತೋಳುಗಳನ್ನು ಚಾಚುತ್ತಿದ್ದೀರಿ. ಇದಕ್ಕಿಂತ ಹೆಚ್ಚಿನ ಉದ್ವೇಗಕಾರಿ ವಿಚಾರ ಇನ್ನೇನಿದೆ. ನಿಮಗೆ ಸಾಮರ್ಥ್ಯವಿದೆ ಎಂದು ಲೇಖಕರು ಅಕ್ಷಯ್​​ಗೆ ಧೈರ್ಯ ಹೇಳಿದ್ದರು.

ಗೂಗಲ್ ಇಂಡಿಯಾ ಸಂಸ್ಥೆಯನ್ನು ಬಿಡುವುದು ಅಷ್ಟೇನೂ ದೊಡ್ಡ ವಿಚಾರವಲ್ಲ. ಕನಸಿನ ಕೆಲಸಗಳಿಗಿಂತ ಮುಖ್ಯವಾದ ಯಾವುದೇ ವಿಚಾರವೇ ಇಲ್ಲ ಪ್ರಪಂಚದಲ್ಲಿ. ನಿಮ್ಮ ಬಳಿ ಕನಸಿರುತ್ತದೆ. ಆ ಕನಸಿಗೊಂದು ಕೆಲಸವೂ ಇರುತ್ತದೆ. ಇದರಿಂದ ನೀವು ಕಳೆದುಕೊಳ್ಳುವುದೇನೂ ಇಲ್ಲ. ನೀವು ಬಹಳಷ್ಟನ್ನು ಪಡೆದುಕೊಳ್ಳಬಹುದು. ನಿಮಗೋಸ್ಕರ ಒಂದು ಅದ್ಭುತವಾದ ಪ್ರಯಾಣ ಕಾದಿದೆ. ಅದು ಸಂಸ್ಥಾಪಕನೊಬ್ಬನ ಪ್ರಯಾಣ. ಇದಕ್ಕಿಂತ ದೊಡ್ಡ ವಿಚಾರ ಎಂದರೆ ನಿಮ್ಮೊಂದಿಗೆ ಇಂಡಿಯನ್ ಓಷನ್ ಸಂಗೀತ ಸಂಸ್ಥೆಯ ಸಂಸ್ಥಾಪಕ ಸುಸ್ಮಿತ್ ಸೇನ್ ಕೈಜೋಡಿಸಿದ್ದಾರೆ. ಅವರೊಂದು ದಂತಕಥೆ. ಇದಕ್ಕಿಂತ ಸಂತೋಷದ ಸಂಗತಿ ಬೇರೆ ಇನ್ನೇನಿದೆ ಎಂದು ಲೇಖಕ ಅಕ್ಷಯ್​​ಗೆ ಸಮಾಧಾನ ಮಾಡಿದ್ದರು.

ಗೂಗಲ್ ಇಂಡಿಯಾ ಬಿಟ್ಟು ಮಹತ್ವಾಕಾಂಕ್ಷೆಯ ಉದ್ಯಮಿಯಾದ ಅಕ್ಷಯ್ ಅಹುಜಾರ ಕಥೆ ಇದು. ಅಕ್ಷಯ್ ಈ ಲೇಖನ ಬರೆದ ಲೇಖಕರ ಅತ್ಯಾಪ್ತ ಸ್ನೇಹಿತ. ಅಕ್ಷಯ್ 4 ತಿಂಗಳ ಹಿಂದಷ್ಟೇ ಗೂಗಲ್ ಸಂಸ್ಥೆಯ ಕೆಲಸಕ್ಕೆ ರಾಜೀನಾಮೆ ನೀಡಿದರು.

ಅವರ ಯೋಜನೆ ಸ್ಥಗಿತವಾಗುವುದಿಲ್ಲ. ಅದು ಬೆಳೆಯುತ್ತದೆ. ಅದು ಜೀವಂತವಾಗಿರುತ್ತದೆ. ಆ ಯೋಜನೆ ತನ್ನ ಕಡೆ ಅತೀ ಹೆಚ್ಚಿನ ಗಮನ ನೀಡಬೇಕೆಂದು ಬಯಸುತ್ತದೆ. ಆ ಯೋಜನೆ ಅಕ್ಷಯ್ ಅವರ ಉಸಿರಾಗುತ್ತದೆ. ಅಕ್ಷಯ್ ಅದನ್ನು ಬಿಗ್ ಬ್ಯಾಂಡ್ ಥಿಯರಿ ಎಂದು ಹೆಸರಿಸಿದ್ದಾರೆ.

ಸಂಗೀತಗಾರರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಇರುವ ವೇದಿಕೆ. ಸಂಗೀತವನ್ನಾಧರಿಸಿದ, ಸಂಗೀತ ವಾದ್ಯಗಳನ್ನಾಧರಿಸಿದ ಆದರೆ ಸಂಗೀತದ ಉಪಭಾಷೆಯ ಮಿಶ್ರಣವಾಗಿದೆ ಅಕ್ಷಯ್​​ರ ಈ ಯೋಜನೆ.

ಒಬ್ಬನ ಸೈನ್ಯ ಇಟ್ಟುಕೊಂಡು ನೀವೇನು ಮಾಡಲು ಸಾಧ್ಯ ಮತ್ತು ಸಾಕಷ್ಟು ಉತ್ಸಾಹವಿರುವ ವಿವಿಧ ಜನರನ್ನು, ಅನನುಭವಿಗಳನ್ನು ಇಟ್ಟುಕೊಂಡು ನೀವೇನು ಮಾಡಲು ಸಾಧ್ಯ ಮತ್ತು ಹುಡುಗಿಯರನ್ನು ಸೆಳೆಯಲು ಗಿಟಾರ್ ನುಡಿಸುವ ಹುಡುಗರಿಂದ ನೀವೇನು ನಿರೀಕ್ಷಿಸಲು ಸಾಧ್ಯ?

ಹೆಚ್ಚಿನದೇನೂ ಸಾಧ್ಯವಿಲ್ಲ. ದಂತಕಥೆಯಾಗಿರುವ ಓರ್ವ ವ್ಯಕ್ತಿ ಅದನ್ನು ಗುರುತಿಸುವವರೆಗೂ ಏನೂ ಮಾಡಲು ಸಾಧ್ಯವಿಲ್ಲ. ಸಂಗೀತದ ಫಾರ್ಮುಲಾ ಟೆಂಪ್ಲೇಟ್‌ಗಳು ಮತ್ತು ವಿನ್ಯಾಸಗಳನ್ನು ನಂಬದ ಓರ್ವ ಕಲಾವಿದ. ಹೊಸದೊಂದನ್ನು ಕಲಿಯಲು, ಕಲಿತದ್ದನ್ನು ಮರೆತುಬಿಡು ಎಂದು ಸಲಹೆ ನೀಡುವವ ಓರ್ವ ಸಂಗೀತಗಾರ.

ತಮ್ಮ ಜೀವನದಲ್ಲಿ ಎಂದಿಗೂ ಚಿರಸ್ಥಾಯಿ ಸಂಗೀತ ಪರಂಪರೆ ಮತ್ತು ಕ್ರಿಯಾಶೀಲ ಮನಸ್ಥಿತಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಅನನ್ಯ ಮೇಲ್ನೋಟ ಹೊಂದಿರುವ ಓರ್ವ ಸಂಗೀತಗಾರನಿಂದ ಮಾತ್ರ ಇಂತದ್ದೊಂದು ಯೋಜನೆ ಹಣೆಯಲು ಸಾಧ್ಯ. (ಇದು ಓಷನ್ ಟು ಓಷನ್ ಎ ಮೆಮೋರ್ ವಿವಿಗಳಲ್ಲಿ ಪಠ್ಯವಾಗಬೇಕಾಗಿದೆ) ಅಕ್ಷಯ್ ಅವರು, ಕೇವಲ ಸಂಗೀತಗಾರರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಸಮಸ್ಯೆ ಪರಿಹರಿಸಲು ಕೆಲಸ ಮಾಡಲೇಬೇಕೆಂಬ ವಿಚಾರ ಹೊಂದಿರುವ ವ್ಯಕ್ತಿ. ಸಂಗೀತ ಕ್ಷೇತ್ರಕ್ಕಾಗಿ ಏನಾದರೂ ಮಾಡಲೇಬೇಕೆಂಬ ಚಿಂತನೆ ಇರುವ ವ್ಯಕ್ತಿ ಸುಷ್ಮಿತ್. ಇವರಿಬ್ಬರೂ ಸೇರಿ ಆರಂಭಿಸಿರುವ ಯೋಜನೆಯ ಹೆಸರು ಐಸ್ ಬರ್ಗ್ ಪ್ರಾಜೆಕ್ಟ್.

ಸಂಗೀತಗಾರರ ಪಯಣವನ್ನು ಅನೇಕ ಎಪಿಸೋಡ್‌ಗಳಾಗಿಯೇ ಹೇಳಬಹುದು. ಅವರು ಹೇಗೆ ಸಂಗೀತ ಸಂಯೋಜನೆ ಮಾಡುತ್ತಾರೆ, ಸಂಗೀತ ಅವರ ರಕ್ತದಲ್ಲೇ ಹೇಗೆ ಅಡಕವಾಗಿದೆ, ಒಂದು ಹಾಡು ಹಾಡಾಗಿಯೇ ಹೊರಹೊಮ್ಮುವಲ್ಲಿ ಇರುವ ಶ್ರಮ ಎಂಥದ್ದು ಎಂಬುದರ ಬಗ್ಗೆಯೇ ಬಹಳಷ್ಟು ವಿಚಾರಗಳಿವೆ. ಆದರೆ ಕೇಳುವವರಿಗೆ ಮಾತ್ರ ಒಂದು ಹಾಡಿನ ಮಾಧುರ್ಯ ಮಾತ್ರ ಸಿಗುತ್ತದೆ. ಇಂಥವುಗಳಲೆಲ್ಲಾ ಅಕ್ಷಯ್ ಅವರಿಗೆ ಅಮಿತ ಆಸಕ್ತಿ ಮತ್ತು ಹೊಸ ಹೊಸ ವಿಷಯಗಳನ್ನು ಸೃಷ್ಟಿಸುವಲ್ಲಿ ಅದಕ್ಕೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿಯೂ ಅಕ್ಷಯ್‌ರ ಆಸಕ್ತಿ ಮೆಚ್ಚಬೇಕಾದ್ದೇ.

ಶಬ್ದಗಳನ್ನು ತರ್ಕಬದ್ಧವಾಗಿ ಹೊಂದಿಸುವಲ್ಲಿ ಸುಷ್ಮಿತ್ ಅವರ ಸಾಮರ್ಥ್ಯ ಅಪರಿಮಿತ. ಹೀಗೆ ಅಕ್ಷಯ್ ಅವರ ಆಸಕ್ತಿ, ಸುಷ್ಮಿತ್ ಅವರ ಸಂಗೀತ ಸಾಮರ್ಥ್ಯ ಇವೆರಡೂ ಸೇರಿ ಐಸ್ ಬರ್ಗ್ ಪ್ರಾಜೆಕ್ಟ್ ರೂಪುಗೊಂಡಿದೆ. ಇದೇ ನವೆಂಬರ್ 8ರಂದು ಒಂದು ಸಂಗೀತ ಸಂಯೋಜನೆ ಬಿಡುಗಡೆಯಾಗಿದೆ. ಇದರಿಂದ ಸುಷ್ಮಿತ್ ತಮ್ಮ ಕ್ಷೇತ್ರಕ್ಕೆ ಮರಳಿದ್ದಾರೆ ಎಂಬುದು ಸಾಬೀತಾಗಿದೆ. ಭಾರತದ ಸಂಗೀತ ಕ್ಷೇತ್ರ ಕೇಳರಿಯದ ಸಂಗೀತದ ಒಂದು ಭಾಗ ಇದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಇಂಡಿಯನ್ ಓಷನ್ ಸಂಗೀತ ಸಂಸ್ಥೆಯ ಸಂಸ್ಥಾಪಕರಾದ ಸುಷ್ಮಿತ್.

ಇದು ಅವರ ಜೀವನದ ಎರಡನೇ ಅನುಭವ ಎಂದಿದ್ದಾರೆ ಸುಷ್ಮಿತ್. ಮೊದಲ ಬಾರಿಗೆ ಇಂಡಿಯನ್ ಓಷನ್ ಹುಟ್ಟುಹಾಕಿದ್ದಾಗ ಇಂಥದ್ದೇ ಸಂತೋಷವಾಗಿತ್ತು. ಉಳಿದಿದ್ದೆಲ್ಲಾ ಈಗ ಇತಿಹಾಸ. ಬಿಗ್ ಬ್ಯಾಂಡ್ ಥಿಯರಿಯನ್ನು ಪರಿಶೀಲಿಸಿ ನಂತರ ಐಸ್ ಬರ್ಗ್ ಪ್ರಾಜೆಕ್ಟ್‌ನ ಹೊಸ ಸಂಗೀತ ಸಂಯೋಜನೆಗಾಗಿ ಕಾಯುತ್ತಿರಿ.

ಇನ್ನು ಅಕ್ಷಯ್ ಅವರಿಂದ ಏನನ್ನು ಕಲಿಯಬಹುದೋ ನೋಡೋಣ..

ಕಷ್ಟಪಡಿ ಮತ್ತು ಪ್ರಾಮಾಣಿಕವಾಗಿ ಕಷ್ಟಪಡಿ, ನೀವೊಬ್ಬ ವ್ಯಕ್ತಿಯ ಮೇಲೆ ಪ್ರಭಾವ ಬೀರುವವರೆಗೂ ಕಷ್ಟಪಡಿ. ನಂತರ ಎಲ್ಲವೂ ಸುಲಭವಾಗುತ್ತದೆ. ಸುಲಭವಾಗಿ ಬದಲಾಗುತ್ತದೆ. ಸ್ಟೇ ಅಂಕಲ್ ಸಂಸ್ಥೆಗೂ ಹೀಗೇ ಆಗಿತ್ತು. ಇದೇ ಬಿಗ್ ಬ್ಯಾಂಡ್ ಥಿಯರಿಯಲ್ಲೂ ಆಗಿದ್ದು. ಇದು ಅಕ್ಷಯ್ ನೀಡುವ ಟಿಪ್ಸ್

ನಿಮ್ಮ ಕಣ್ಣುಗಳು ತೆರೆಯಿರಿ. ನಿಮ್ಮ ಷೇರುದಾರರು ಯಾರು ಎಂದು ತಿಳಿದುಕೊಳ್ಳಿ. ಇದು ನೀವು ಸಾಂಪ್ರದಾಯಿಕವಾಗಿ ಕಲಿತಿರುವ ವಿಚಾರ ಇದಲ್ಲವಾಗಿರಬಹುದು. ಬಿಸಿನೆಸ್ ಕೇವಲ ಬಿಸಿನೆಸ್ ಆಗಿರಬೇಕು, ವಿಜ್ಞಾನ ಕೇವಲ ವಿಜ್ಞಾನವೇ ಆಗಿರಬೇಕು, ಕಲೆ ಕೇವಲ ಕಲೆಯೇ ಆಗಿರಬೇಕು. ಬಿಸಿನೆಸ್ ಮತ್ತು ಕಲೆ ಎಂದಿಗೂ ಜೊತೆಯಾಗಬಾರದೆಂದು ಹೇಳುವವರನ್ನು ನಿರ್ಲಕ್ಷಿಸಿ ಅನ್ನುವುದು ಅಕ್ಷಯ್​ರ ಸಲಹೆ.

ಐಸ್ ಬರ್ಗ್ ಪ್ರಾಜೆಕ್ಟ್ ತನ್ನದೇ ಆದ ರೀತಿಯಲ್ಲಿ ಮುಂದುವರೆಯುತ್ತಿದೆ. ಮೊದಲ ಬಾರಿಗೆ ನನ್ನ ಪ್ರೇಯಸಿಗೆ ಚುಂಬಿಸಿದಾಗ ಆಗುವಷ್ಟೇ ಅವರ್ಣನೀಯ ಅನುಭವ ನನಗೆ ಐಸ್​ಬರ್ಗ್​ ಪ್ರಾಜೆಕ್ಟ್ ಲಾಂಚ್ ಮಾಡಿದಾಗ ನನಗಾಯಿತು ಅಂತ ಅಕ್ಷಯ್ ಹೇಳಿದ್ದಾರೆ. ಐಸ್​ಬರ್ಗ್​ ಪ್ರಾಜೆಕ್ಟ್​ನ ರೂವಾರಿಗಳಾದ ಅಕ್ಷಯ್, ಮನಸಿಮ್ರಾನ್, ವಿಫುಲ್ ಭೇಟಿ ಮಾಡಿದರೆ ನಿಮಗೂ ಇಂತಹದ್ದೇ ಅನುಭವಗಳಾಗುತ್ತವೆ.


ಲೇಖಕರು: ಬ್ಲೇಜ್​ ಅರಿಜೋನೊವ್​​

ಅನುವಾದಕರು: ವಿಶ್ವಾಸ್​​​

Related Stories

Stories by YourStory Kannada