ಟ್ರಾಫಿಕ್​ ಸಮಸ್ಯೆಗೆ ಪರಿಹಾರದ ಕನಸು..!

ಟೀಮ್​ ವೈ.ಎಸ್​. ಕನ್ನಡ

0

ಭಾರತದ ಮಹಾನಗರಗಳ ಮೊದಲ ಶತ್ರು ಎಂದರೆ  ಕೆಟ್ಟ ಟ್ರಾಫಿಕ್. ಒಂದ್ಸಾರಿ ಮನೆ ಬಿಟ್ರೆ ಮತ್ತೆ ಮನೆ ಸೇರುವ ಹೊತ್ತಿಗೆ ಎಷ್ಟು ಹೊತ್ತಾಗುತ್ತದೆ ಅನ್ನೋ ಬಗ್ಗೆ ಗ್ಯಾರೆಂಟಿ ಇಲ್ಲ.  ಇತ್ತೀಚಿನ ದಿನಗಳಲ್ಲಂತೂ ಅದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮಹಾನಗರಗಳಲ್ಲಿ ವಾಸ ಮಾಡುವವರ ಬಹುತೇಕ ಆಯಸ್ಸು ಟ್ರಾಫಿಕ್​ನಲ್ಲೇ ಕಳೆದು ಹೋಗುತ್ತದೆ. ಆ ಮಹಾ ನಗರಗಳ ಸಾಲಿಗೆ ಮುಂಬೈ, ದೆಹಲಿ, ಕೊಲ್ಕತ್ತಾ, ಬೆಂಗಳೂರು ಸೇರುತ್ತದೆ.

ಬೆಂಗಳೂರಿಗರು ಸಾಮಾನ್ಯವಾಗಿ ಎರಡು ಗಂಟೆಗಳನ್ನು ಟ್ರಾಫಿಕ್ಗಾಗಿ ಮೀಸಲಿಟ್ಟರೆ, ಮುಂಬೈನಂತಹ ನಗರಗಳಲ್ಲಿ ಇದು ದುಪ್ಪಟ್ಟಾಗುತ್ತದೆ. ಅದರಲ್ಲೂ ಅಲ್ಲಿನ ಸಿಟಿ ಬಸ್ಸು ಮತ್ತು ಸ್ಥಳೀಯ ರೈಲುಗಳಲ್ಲಿ ಪ್ರಯಾಣ ಮಾಡುವುದಂತೂ ನರಕ ಸದೃಶವೇ ಸರಿ.

ಇಂತಹ ಸಮಸ್ಯೆಯಿಂದ ಬಳಲಿದ ಐಐಟಿ ಪಧವೀದರನೊಬ್ಬ ಅದಕ್ಕೆ ಪರಿಹಾರ ಕಂಡುಹಿಡಿದಿದ್ದಾನೆ. ಮುಂಬೈನ ಜೆರಿನ್ ವೆನಾದ್ ಎಂಬ ಯುವಕನೇ ಟ್ರಾಫಿಕ್​ನಲ್ಲಿ ಕಷ್ಟ ಪಟ್ಟು ಸಂಚರಿಸುವುದರಿಂದ ತಪ್ಪಿಸಿಕೊಂಡು ಸಣ್ಣದೊಂದು ಟ್ರಾವಲಿಂಗ್ ಕಂಪನಿಯನ್ನು ಆರಂಭಿಸಿದ್ದಾನೆ. ಜೆರಿನ್ ವಿದ್ಯಾಬ್ಯಾಸ ಮುಗಿಸಿದ ನಂತರ ಮುಂಬೈನ ಪ್ರತಿಷ್ಠಿತ ಇ ಆ್ಯಂಡ್ ವೈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಕಚೇರಿ ಮನೆಯಿಂದ 35 ಕಿಲೋಮೀಟರ್ ದೂರ ಪ್ರಯಾಣ ಮಾಡಬೇಕಿತ್ತು. ಅದಕ್ಕಾಗಿ ಐದಾರು ಬಸ್ಸುಗಳನ್ನು ಬದಲಿಸುವುದಲ್ಲದೇ ಸ್ಥಳೀಯ ರೈಲುಗಳಲ್ಲೂ ಪ್ರಯಾಣ ಮಾಡಬೇಕಿತ್ತು.

ಇದರಿಂದ ತಮ್ಮ ಸಮಯದ ಜೊತೆಗೆ ಶ್ರಮವೂ ವ್ಯರ್ಥವಾಗುತ್ತಿತ್ತು. ಅದಕ್ಕಾಗಿ ಒಂದು ಐಡಿಯಾ ಮಾಡಿದರು. ತಾವು ವಾಸವಿದ್ದ ಸ್ಥಳದಿಂದ ಅದೇ ಕಂಪೆನಿಗೆ 20 ಜನ ನೌಕರರು ಕೆಲಸಕ್ಕೆ ಬರುತ್ತಿದ್ದರು. ಅವರೂ ಸಹ ಜೆರಿನ್​ರಂತೆ ಸಂಕಷ್ಟದ ಪ್ರಯಾಣ ಮಾಡಬೇಕಿತ್ತು. ತಮ್ಮ ಮಾರ್ಗದಲ್ಲಿ ಬರುವ ಇತರೆ ನೌಕರರ ಅವರೆಲ್ಲರ ಸಂಪರ್ಕ ಸಾಧಿಸಿ ಮಾತನಾಡಿ ಎಲ್ಲರೂ ಮಿನಿ ಕ್ಯಾಬ್ನಲ್ಲಿ ಪ್ರಯಾಣಿಸುವ ವ್ಯವಸ್ಥೆ ಮಾಡಿದರು. ಇದರಿಂದ ಸಮಯ ಉಳಿಯುವುದರೊಂದಿಗೆ ಹೈರಾಣಾಗುವುದು ತಪ್ಪಿತು.

ಸಿಟಿ ಪ್ರೋ ಟ್ರಾವೆಲಿಂಗ್

ಜೆರಿನ್ ಮತ್ತವರ ಸಹುದ್ಯೋಗಿಗಳು ಈ ಮಿನಿಕ್ಯಾಬ್​ನಲ್ಲಿ ಸ್ವಲ್ಪ ದಿನಗಳ ಕಾಲ ಪ್ರಯಾಣ ಮಾಡಿದರು. ತದ ನಂತರ ಇದರಿಂದ ಜೆರಿನ್ ಅವರಿಗೆ ಒಂದು ಸಣ್ಣ ಆಲೋಚನೆ ಹೊಳೆಯಿತು. ಅದೇ ಸ್ವಂತದ್ದೊಂದು ಟ್ರಾವೆಲಿಂಗ್ ಕಂಪನಿ ಮಾಡುವುದು. ತಕ್ಷಣವೇ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ ಅವರು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರನ್ನು ಸಂಪರ್ಕಿಸಿ ಅವರೆಲ್ಲರಿಗೂ ಅವರ ಮನೆಗಳಿಂದ ಕಚೇರಿಗೆ ನೇರವಾಗಿ ಸಾರಿಗೆ ಸೌಕರ್ಯ ಕಲ್ಪಿಸಿದರು. ಜೆರಿನ್ ಸ್ಥಾಪಿಸಿದ ಕಂಪನಿಗೆ ಸಿಟಿಪ್ರೋ ಟ್ರಾವೆಲಿಂಗ್ ಎಂದು ಹೆಸರಿಟ್ಟರು. ಇದರ ಮೂಲಕ ಮುಂಬೈ ಮಹಾನಗರದ ನಾಲ್ಕು ದಿಕ್ಕುಗಳಲ್ಲಿ ಬೇರೆ ಬೇರೆ ಕಚೇರಿಗಳಿಗೆ ಕ್ಯಾಬ್ ಸೌಲಭ್ಯವನ್ನು ಇಂದು ಜೆರಿನ್ ಕಲ್ಪಿಸಿದ್ದಾರೆ. ಮುಂಬೈನ ನಾಲ್ಕು ದಿಕ್ಕಿನಲ್ಲೂ ಹತ್ತಾರು ಮಾರ್ಗಗಳಲ್ಲಿ ಸಿಟಿಫ್ರೋ ಕ್ಯಾಬ್ಗಳು ಇಂದು ಸಂಚರಿಸುತ್ತಿವೆ. ಇವರ ಕಂಪೆನಿ ಕ್ಯಾಬ್​ಗಳು ಮಾತ್ರವಲ್ಲದೇ ಜೆರಿನ್ ಅವರು ತಮ್ಮ ಬುದ್ಧಿ ಉಪಯೋಗಿಸಿ ಖಾಸಗಿ ಬಸ್ಸುಗಳೊಂದಿಗೂ ಒಪ್ಪಂದ ಮಾಡಿಕೊಂಡು ಅದರ ಮೂಲಕವೂ ಅವರು ಕಂಪನಿಗಳಿಗೆ ಕ್ಯಾಬ್ ವ್ಯವಸ್ಥೆ ಮಾಡಿದರು. ಜೆರಿನ್ ಈಗ ಉತ್ತಮ ವಹಿವಾಟು ನಡೆಸುತ್ತಿದ್ದಾರೆ. ಈ ಸಿಟಿಫ್ರೋ ಟ್ರಾವೆಲಿಂಗ್ ಕಂಪೆನಿಯನ್ನು ದೇಶದ ಎಲ್ಲ ಮೆಟ್ರೊ ಮಹಾನಗರಗಳಿಗೂ ವಿಸ್ತರಿಸುವ ಕನಸು ಜೆರಿನ್ ಅವರಿಗಿದೆ. 

ಇದನ್ನು ಓದಿ:

1. ರಕ್ತದಾನ ಮಹಾದಾನ- ಆ್ಯಪ್​ ಮೂಲಕ ಜೀವ ಉಳಿಸಿ..!

2. ಬಿಸಿಯೂಟದ ಖದೀಮ ಕಳ್ಳರಿಗೆ ರಾಜಸ್ತಾನ ಸರ್ಕಾರದ ಶಾಕ್​..!

3. ಹೆಸರಲ್ಲೇನಿದೆ ಅಂತಹ ಗುಟ್ಟು..? ವೆಸ್ಟ್​ಬೆಂಗಾಲ್ ಈಗ ಜಸ್ಟ್ “ಬಂಗಾಳ” ಮಾತ್ರ..!