ಸೃಜನಾತ್ಮಕ ಆತ್ಮವಿಶ್ವಾಸ : ನಾವೀನ್ಯತೆಯ ಬದುಕಿನ 8 ಹಂತಗಳು

ಟೀಮ್​​ ವೈ.ಎಸ್​​. ಕನ್ನಡ

ಸೃಜನಾತ್ಮಕ ಆತ್ಮವಿಶ್ವಾಸ : ನಾವೀನ್ಯತೆಯ ಬದುಕಿನ 8 ಹಂತಗಳು

Thursday December 03, 2015,

4 min Read

ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಕ್ಷಯ್ ಕೊಠಾರಿ ಮತ್ತು ಅಂಕಿತ್ ಗುಪ್ತಾ ಐಪಾಡ್‍ಗೆ ಬೇಕಾದ `ಪಲ್ಸ್ ನ್ಯೂಸ್' ರೀಡರ್ ಒಂದನ್ನು ಅಭಿವೃದ್ಧಿಪಡಿಸಿದ್ರು. ಅವರಿಗೆ ಈ ಐಡಿಯಾ ಬಂದಿದ್ದೆಲ್ಲಿ ಗೊತ್ತಾ? ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯದ ಪಕ್ಕದಲ್ಲೇ ಇರುವ ಸ್ಟಾರ್‍ಬಕ್ಸ್ ಕೆಫೆಯಲ್ಲಿ ಕುಳಿತು ಡಿಸೈನ್ ಕೋರ್ಸ್ ಒಂದಕ್ಕೆ ವೀಕ್ಷಣೆ ಹಾಗೂ ಟೆಸ್ಟಿಂಗ್ ಸೆಶನ್ಸ್ ನಡೆಸುತ್ತಿದ್ದ ಸಂದರ್ಭದಲ್ಲಿ. `ಪಲ್ಸ್ ನ್ಯೂಸ್' ಆ್ಯಪ್ ಎಷ್ಟು ಜನಪ್ರಿಯವಾಗಿತ್ತೆಂದ್ರೆ ಅಕ್ಷಯ್ ಹಾಗೂ ಅಂಕಿತ್ ಅದನ್ನು, 90 ಮಿಲಿಯನ್ ಡಾಲರ್‍ಗೆ `ಲಿಂಕ್ಡ್​​​ ಇನ್​​'ಗೆ ಮಾರಾಟ ಮಾಡಿದ್ದಾರೆ.

image


ಇನ್ನು ಎಂಆರ್‍ಐ ಯಂತ್ರವನ್ನು ಒಂದು ಆಟದಂತೆ ಪರಿವರ್ತಿಸಲು, ಮಕ್ಕಳ ಸ್ನೇಹಿಯಾಗಿಸಲು `ಜಿಇ'ನ ಡೌಗ್ ಡೆಜ್ `ಡಿ.ಸ್ಕೂಲ್'ನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅದನ್ನು ಮರುವಿನ್ಯಾಸಗೊಳಿಸಿದ್ರು. ರಾಹುಲ್ ಪನಿಕರ್, ಜೇನ್ ಚೆನ್, ಲಿನಸ್ ಲಯಾಂಗ್, ಹಾಗೂ ನಾಗಾನಂದ ಮೂರ್ತಿ ಮಕ್ಕಳನ್ನು ಬೆಚ್ಚಗಿಡಬಲ್ಲ `ಎಂಬ್ರೇಸ್' ಅನ್ನು ತಾಯಂದಿರಿಗಾಗಿಯೇ ಮರುವಿನ್ಯಾಸ ಮಾಡಿದ್ದರು.

`ಕ್ರಿಯೇಟಿವ್ ಕಾನ್ಫಿಡೆನ್ಸ್ : ಅನ್‍ಲೀಶಿಂಗ್ ದಿ ಕ್ರಿಯೇಟಿವ್ ಪೊಟೆನ್ಷಿಯಲ್ ವಿತಿನ್ ಅಸ್ ಆಲ್' ಪುಸ್ತಕದ ಲೇಖಕರಾದ ಟಾಮ್ ಮತ್ತು ಡೇವಿಡ್ ಕೆಲ್ಲಿ ಸಹೋದರರ ಪ್ರಕಾರ ``ಸೃಜನಶೀಲತೆ ಬಗೆಗಿನ ಆತ್ಮವಿಶ್ವಾಸ, ನಿಮ್ಮ ಸುತ್ತ ಇರುವ ಜಗತ್ತನ್ನೇ ಬದಲಾಯಿಸಬಲ್ಲೆ ಎಂಬ ನಿಮ್ಮ ಸಾಮಥ್ರ್ಯದ ಮೇಲಿನ ನಂಬಿಕೆಯಲ್ಲಿದೆ. ಆತ್ಮವಿಶ್ವಾಸ ನಿಮ್ಮ ನಾವೀನ್ಯತೆಯ ಹೃದಯದಲ್ಲಿರುತ್ತದೆ''.

ಟಾಮ್ ಕೆಲ್ಲಿ `ಐಡಿಯೊ'ದ ಪಾಲುದಾರರು ಜೊತೆಗೆ ಅತ್ಯಂತ ಜನಪ್ರಿಯ ಪುಸ್ತಕ `ದಿ ಆರ್ಟ್ ಆಫ್ ಇನ್ನೋವೇಶನ್ & ದಿ ಟೆನ್ ಫೇಸಸ್ ಆಫ್ ಇನ್ನೋವೇಶನ್' ಪುಸ್ತಕದ ಲೇಖಕರೂ ಹೌದು. ಡೇವಿಡ್ ಕೆಲ್ಲಿ ವಿನ್ಯಾಸ ಸಂಸ್ಥೆ `ಐಡಿಯೊ'ದ ಸಂಸ್ಥಾಪಕರು. ಅಷ್ಟೇ ಅಲ್ಲ, ಸ್ಟ್ಯಾನ್‍ಫೋರ್ಡ್ ಯುನಿವರ್ಸಿಟಿಯ ಡಿ.ಸ್ಕೂಲ್‍ನ ಸೃಷ್ಟಿಕರ್ತರು.

ಪುರಾಣ ಮತ್ತು ಅಬಧ್ರತೆಯನ್ನು ಗೆದ್ದರೆ, ತಮ್ಮ ಸೃಜನಶೀಲ ಸ್ನಾಯುಗಳ ಮೂಲಕ ವ್ಯವಸ್ಥಿತವಾಗಿ ವ್ಯಾಯಾಮ ಮಾಡುವಂತಾದ್ರೆ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಮ್ಮ ಸೃಜನಾತ್ಮಕತೆಯ ಪೂರ್ಣ ಬಂಧನವನ್ನು ಕಳಚಬಹುದು ಅನ್ನೋದು ಟಾಮ್ ಹಾಗೂ ಡೇವಿಡ್ ಅವರ ಅಭಿಪ್ರಾಯ. ಈ ಬಗ್ಗೆ ಅವರು ಬರೆದ 288 ಪುಟಗಳ ಪುಸ್ತಕದಲ್ಲಿ 8 ಅಧ್ಯಾಯಗಳಿವೆ.

image


ಸೃಜನಶೀಲತೆ ಕೆಲವೇ ಕೆಲವು ಅದೃಷ್ಟವಂತರು ಎಂಜಾಯ್ ಮಾಡಬಲ್ಲ ಅಪರೂಪದ ಉಡುಗೊರೆಯಲ್ಲ. ಇದು ಮಾನವರ ಚಿಂತನೆ ಹಾಗೂ ವರ್ತನೆಯ ನೈಸರ್ಗಿಕ ಭಾಗ. ಕೊಂಚ ಅಭ್ಯಾಸ ಮತ್ತು ಪ್ರೋತ್ಸಾಹವಿದ್ರೆ ಮನುಷ್ಯನ ಊಹೆ, ಕುತೂಹಲ ಹಾಗೂ ಧೈರ್ಯ ಹೇಗೆ ಬದಲಾಗುತ್ತದೆ ಎಂಬುದು ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು ಎನ್ನುತ್ತಾರೆ ಈ ಸಹೋದರರು. ಅವರ ಪುಸ್ತಕದಿಂದ ಆಯ್ದ ಕೆಲ ವಿಚಾರಗಳು ಇಲ್ಲಿವೆ.

1. ಬೆಳವಣಿಗೆಯ ಮನಸ್ಥಿತಿ

ಸೃಜನಶೀಲತೆಯ ಮೂಲಕ ಅನೀರಿಕ್ಷಿತ ನಾವೀನ್ಯತೆ ಸಾಧಿಸಲು ಚಿಂತನೆಯನ್ನು ವಿನ್ಯಾಸಗೊಳಿಸುವುದು ಅತ್ಯವಶ್ಯ. ಪರಿಣಾಮ ಹಾಗೂ ಫಲಿತಾಂಶದಲ್ಲಿ ಅನಿಶ್ಚಿತತೆಯಿದ್ದರೂ ಇದು ಬೆಳವಣಿಗೆಯ ಮನಸ್ಥಿತಿಯನ್ನು ಆಧರಿಸಿರುತ್ತದೆ. ಬೆಳವಣಿಗೆಯ ಮನಸ್ಥಿತಿ ಹೊಸ ಸಾಹಸಕ್ಕೆ ಪಾಸ್‍ಪೋರ್ಟ್ ಇದ್ದಂತೆ. ಸೃಜನಾತ್ಮಕ ಉದ್ದೇಶದ ಮೊದಲ ಹೆಜ್ಜೆ ನಿಮ್ಮಲ್ಲಿರುವ ಭಯ, ಕಿರಿಕಿರಿ ಮತ್ತು ವೈಫಲ್ಯವನ್ನು ಮೆಟ್ಟಿ ನಿಲ್ಲುತ್ತದೆ.

ನಾವೀನ್ಯತೆಯ ವಿಧಾನ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರತಿನಿಧಿಸುತ್ತದೆ. ಚಿಂತನೆಯ ವಿನ್ಯಾಸ, ಸರಿಯಾದುದನ್ನೇ ಆಯ್ಕೆ ಮಾಡಲು ಜನರನ್ನು ಪ್ರೇರೇಪಿಸುತ್ತದೆ. ಚಿಂತನೆಯ ವಿನ್ಯಾಸ ಜನರ ಭಾವನೆ, ಪ್ರೇರಣೆ, ಅಗತ್ಯ, ಬಯಕೆ, ನಂಬಿಕೆಯಲ್ಲಿನ ಅನುಭೂತಿಯ ಮೇಲೆ ಗಮನಹರಿಸುತ್ತದೆ.

2. ಧೈರ್ಯ ಮತ್ತು ಕಲಿಕೆ

ಬದಲಾವಣೆ ತರುವಲ್ಲಿ ನಿಮ್ಮ ಸಾಮಥ್ರ್ಯದ ಮೇಲೆ ನಿಮಗಿರುವ ನಂಬಿಕೆ ಭವಿಷ್ಯದಲ್ಲಿ ಕಠಿಣ ಸವಾಲುಗಳನ್ನು ಎದುರಿಸಲು, ವೈಫಲ್ಯಗಳನ್ನು ಮೆಟ್ಟಿನಿಲ್ಲಲು ನೆರವಾಗುತ್ತದೆ. ಇದಕ್ಕೆ ಥಾಮಸ್ ಎಡಿಸನ್ ಹಾಗೂ ರೈಟ್ ಸಹೋದರರೇ ಉತ್ತಮ ಉದಾಹರಣೆ. ಸಾರ್ವಜನಿಕ ಭಾಷಣದಂತಹ ಸಂದರ್ಭಗಳಲ್ಲಿ ಕಳಪೆ ಪ್ರದರ್ಶನದ ಭಯ ಕಾಡುವುದು ಸಹಜ. ಹಾಗಾಗಿ ಚರ್ಚೆಗೂ ಮುನ್ನ ಪೂರ್ವ ತಯಾರಿ ಇರಬೇಕು. ವೈಫಲ್ಯ ಮತ್ತು ನಾವೀನ್ಯತೆ ನಡುವಣ ಅನಿವಾರ್ಯ ಸಂಬಂಧದ ಪಾಠವನ್ನು ನೀವು ಕಾರ್ಯಾಚರಣೆ ಮೂಲಕವೇ ಕಲಿಯಬೇಕು. ಸೋಲಿನ ಭಯವನ್ನು ಮೆಟ್ಟಿನಿಲ್ಲುವುದು ಮೊದಲ ಹೆಜ್ಜೆ, ಆ ನಿಟ್ಟಿನಲ್ಲಿ ನೀವು ನಿಮ್ಮನ್ನು ವಿಸ್ತರಿಸಿಕೊಳ್ಳುತ್ತ ಹೋಗಬೇಕು. ಅಭ್ಯಾಸ, ಅನುಭವ ಮತ್ತು ಜಿಗುಟುತನದ ಮಾನಸಿಕ ವರ್ತನೆಯನ್ನು ಸೃಷ್ಟಿಸುತ್ತದೆ.

image


3. ಸೃಜನಾತ್ಮಕ ಕಿಡಿ ಮತ್ತು ಒಳನೋಟ

ನಾವೀನ್ಯತೆಗೆ ಕುತೂಹಲ, ಪರಿಶ್ರಮ, ಆಶಾವಾದ, ಕ್ರಿಯೆ ಮತ್ತು ಪ್ರಯೋಗದೆಡೆಗಿನ ಪೂರ್ವಾಗ್ರಹವೇ ಇಂಧನ. ಸೃಜನಾತ್ಮಕ ಕಿರಣ ಇದಕ್ಕೆ ಬಲ ತುಂಬುತ್ತದೆ. ಆರಾಮದಾಯಕ ಗಮನ, ವ್ಯವಸ್ಥಿತ ಹಗಲುಗನಸು, ಕ್ಷೇತ್ರ ಪರಿಶೀಲನೆ, ಸಂದರ್ಭಗಳ ಮರುಜೋಡಣೆ, ಮತ್ತು ಮೇಲ್ಮೈನಿಂದ ಕೆಳಕ್ಕೆ ಅಗೆಯುವಿಕೆಯಿಂದ ಪ್ರತಿಭೆ ಹರಿತವಾಗುತ್ತದೆ. ಉದಾಹರಣೆಗೆ ಟಿವಿಯಲ್ಲಿ ಫಾರ್ಮುಲಾ ವನ್‍ನಿಂದ ಪ್ರೇರೇಪಣೆ ಪಡೆದು `ಒರ್ಮೊಂಡ್ ಆಸ್ಪತ್ರೆ' ಐಸಿಯುವನ್ನು ಮರುವಿನ್ಯಾಸಗೊಳಿಸಿತ್ತು. ಯುವಜನತೆ ಜವಾಬ್ಧಾರಿಯುತ ಹಣಕಾಸು ಚಟುವಟಿಕೆಗಳ ಲ್ಲಿ ತೊಡಗಿಕೊಳ್ಳುವಂತೆ ಮಾಡಲು `ಪಿಎನ್‍ಸಿ ಫೈನಾನ್ಷಿಯಲ್ ಸರ್ವಿಸಸ್' ಡಿಜಿಟಲ್ ರೂಢಿ ಹಿಡಿಸುವ ವರ್ತನೆಯನ್ನು ನಿಯಂತ್ರಿಸಿತ್ತು. ಹೊಸತನವನ್ನು ಸೃಷ್ಟಿಸುವವರು ಸೃಜನಶೀಲತೆಯನ್ನೂ ಬೆಳಸಬೇಕು. ಪೆನ್ಸಿಲಿನ್, ಸ್ಯಾಕರಿನ್, ಸುರಕ್ಷಿತ ಗಾಜು, ಪೇಸ್ ಮೇಕರ್ ಇವೆಲ್ಲವೂ ಆಕಸ್ಮಿಕ ಶೋಧನಾ ಕೃತಿಗೆ ಉತ್ತಮ ಉದಾಹರಣೆಗಳು.

4. ಏನಾದ್ರೂ ಮಾಡಬೇಕು ಅನ್ನೋ ಮನಸ್ಥಿತಿ

ಕ್ಷಿಪ್ರ ಮಾದರಿಯ ಮೂಲಕ ಕ್ರಮ, ಯೋಜನೆಗಳ ಸಮತೋಲನ ಕಾಯ್ದುಕೊಳ್ಳುತ್ತದೆ ಎಂಬ ಪೂರ್ವಾಗ್ರಹವಿದೆ. ಸಮಸ್ಯೆಗಳ ಪಟ್ಟಿ ಮತ್ತು ಟ್ರೆಂಡ್‍ನ್ನು ನಿರ್ವಹಿಸುವುದು ಒಳ್ಳೆಯ ಆರಂಭ. ಆದ್ರೆ ತಿಳಿದುಕೊಳ್ಳುವುದು, ಮತ್ತು ಕಾರ್ಯರೂಪಕ್ಕೆ ತರುವುದರ ನಡುವೆ ಇರುವ ಅಂತರ ಎಷ್ಟೋ ಕಂಪನಿಗಳನ್ನು ದುರ್ಬಲಗೊಳಿಸಿದೆ. ಮೊದಲ ಹಂತದಲ್ಲಿ ಗುಣಮಟ್ಟದ ಗೀಳನ್ನು ಬೆಳೆಸಿಕೊಳ್ಳುವುದಕ್ಕಿಂತ ಎಂವಿಪಿ ಮಾದರಿಯಲ್ಲಿ ಪ್ರಮಾಣ ಮತ್ತು ಬಲವನ್ನು ಗಳಿಸುವುದು ಉತ್ತಮ. ಫುಲ್ ಬಜೆಟ್ ಅಥವಾ ಸೂಕ್ತ ಸಮಯಕ್ಕೆ ಕಾಯುವುದಕ್ಕಿಂತ ಸೃಜನಾತ್ಮಕ ನಿರ್ಬಂಧ ಉತ್ತಮ ಕಲ್ಪನೆ. ಕಡಿಮೆ ಬಜೆಟ್‍ನ ಸಿನಿಮಾ ಆದ್ರೆ ಅವಕಾಶಗಳು ಹೆಚ್ಚಿರುತ್ತವೆ ಅನ್ನೋದು ನಿರ್ದೇಶಕ ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ಅವರ ಅಭಿಪ್ರಾಯ. `ಪಿಕ್ಸರ್' ಉತ್ತಮ ಕಥಾನಕದ ಯಶಸ್ವಿ ಸಿನಿಮಾಗಳಿಂದ ಜನಪ್ರಿಯವಾಗಿದೆ. `ವಾಲ್‍ಗ್ರೀನ್ಸ್' ಅಂಗಡಿಗಳ ವಿನ್ಯಾಸಕ್ಕಾಗಿ ಫೋಮ್ ಮಾದರಿಯನ್ನು ಆವಿಷ್ಕರಿಸಿದೆ. ಉತ್ತಮ ರೀತಿಯ ವಿಫಲತೆಗಳು ತ್ವರಿತ, ಅಗ್ಗ ಮತ್ತು ಬೇಗನೆ ಆವರಿಸಿಬಿಡುತ್ತವೆ ಅನ್ನೋದು ಲೇಖಕರ ಅಭಿಪ್ರಾಯ. ಕಲಿಕೆಗಾಗಿ ಲಾಂಚ್ ಮಾಡಿ ಅನ್ನೋದು ಅವರ ಸಲಹೆ. ಸೃಜನಾತ್ಮಕ ಪ್ರಾಜೆಕ್ಟ್‍ಗಳನ್ನು ಪರೀಕ್ಷಿಸಲು `ಕಿಕ್‍ಸ್ಟಾರ್ಟರ್' ಒಂದೊಳ್ಳೆ ಮಾರ್ಗ. `ಬುಕ್‍ಲೆಂಡಿಂಗ್ ಡಾಟ್ ಕಾಮ್' ಸಾಮಾಜಿಕ ಕ್ರಮವನ್ನು ರಚಿಸಲು ಮತ್ತು ಬಿಡುಗಡೆಗೂ ಮುನ್ನ ಕಲ್ಪನೆಯನ್ನು ಊರ್ಜಿತಗೊಳಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡಿತ್ತು.

5. ನಿಮ್ಮ ಕರೆಯನ್ನು ಗುರುತಿಸುವಿಕೆ

ನೀವು ಕೆಲಸ, ವೃತ್ತಿಯ ಹುಡುಕಾಟದಲ್ಲಿದ್ದೀರಾ? ಅಥವಾ ನಿಜವಾದ ಕರೆಗಾಗಿ ಕಾಯುತ್ತಿದ್ದೀರಾ? ಯಾವುದು ನಿಮಗೆ ಹೆಚ್ಚು ತೃಪ್ತಿ ಕೊಡುತ್ತದೆ? ಯಾವ ಬಹುಮಾನ, ಪ್ರಶಸ್ತಿ ಅಥವಾ ಇನ್ಸೆಂಟಿವ್ ನಿಮ್ಮನ್ನು ಪ್ರಭಾವಿತಗೊಳಿಸುತ್ತದೆ? ನಿಮ್ಮ ಆರಾಮದಾಯಕ ವಲಯವನ್ನು ಬಿಡಲು ಪಶ್ಚಾತ್ತಾಪವಾಗುತ್ತದೆಯೇ? ಉತ್ಸಾಹದ ಅನ್ವೇಷಣೆ ಆತ್ಮ ಶೋಧದ ಒಂದು ಪಯಣ. `ಮನಸ್ಸಿನ ಮ್ಯಾಪಿಂಗ್' ರೀತಿಯ ತಂತ್ರಗಳ ಕರೆ ಮತ್ತು ಸಣ್ಣ ಯೋಜನೆಗಳ ಪ್ರಯೋಗ. ಇದು ಅದೇ ಕಂಪನಿ ಅಥವಾ ಇಂಡಸ್ಟ್ರಿಯಲ್ಲಿ ನಿಮ್ಮ ಹೊಸ ಪಾತ್ರಕ್ಕೆ ದಾರಿ ಮಾಡಿಕೊಡುತ್ತದೆ.

6. ಹೊಸತನದ ಸಂಸ್ಕøತಿ ಮತ್ತು ತಂಡವನ್ನು ಕಟ್ಟುವಿಕೆ

ಪ್ರಮಾಣದಲ್ಲಿ ನಾವೀನ್ಯತೆ ಸಾಧಿಸಲು ನಿಮಗೆ ಟೀಮ್‍ವರ್ಕ್‍ನ ಅವಶ್ಯಕತೆ ಇದೆ. ನಾಯಕತ್ವದ ಸೂಕ್ತ ಸಂಯೋಜನೆ, ಜನಸಾಮಾನ್ಯ ಚಿಂತನೆ ಬೇಕೇಬೇಕು. `3ಎಂ'ನ ಮೌರೋ ಪೊರ್ಸಿನಿ, ತಮ್ಮ ಸಂಸ್ಥೆಯ ಪಯಣದ ಐದು ವಿನ್ಯಾಸ ಹಂತಗಳನ್ನು ನಿರಾಕರಣೆ, ಬಾಯುಪಚಾರ, ನಂಬಿಕೆಯ ನೆಗೆತ, ವಿಶ್ವಾಸದ ಅನ್ವೇಷಣೆ ಮತ್ತು ಸಮಗ್ರ ಏಕೀಕರಣ ಎಂದು ವಿವರಿಸಿದ್ದಾರೆ. `ಇನ್‍ಟ್ಯೂಟ್'ನ ಹೊಸತನದ ಸಂಸ್ಕøತಿಯ ರೂಪಾಂತರಕ್ಕಾಗಿ ಕಾರೆನ್ ಹ್ಯಾನ್ಸನ್, ವಿನ್ಯಾಸ ಚಿಂತನೆಯನ್ನು ಬಳಸಿಕೊಂಡಿದ್ದಾರೆ. ಮೋಜಿನ ಜೊತೆಗೆ ವರ್ತನೆಗಳನ್ನು ಪ್ರಯೋಗ ಮಾಡುವ ಚಾಂಪಿಯನ್‍ಗಳ ಜಾಲವನ್ನು `ಡಿಸೈನ್ ಫಾರ್ ಡಿಲೈಟ್' ಹತೋಟಿಯಲ್ಲಿಟ್ಟಿದೆ. ಉತ್ತಮ ವಿಪತ್ತು ನಿರ್ವಹಣಾ ಯೋಜನೆಯನ್ನು ಅಭಿವೃದ್ಧಿಪಡಿಸಲು `ಜೆಟ್ ಬ್ಲೂ' ಭಾಗವಹಿಸುವಿಕೆಯಲ್ಲಿನ ವೈವಿಧ್ಯತೆಗಳನ್ನು ಬಳಸಿಕೊಂಡಿದೆ. ಕಲ್ಪನೆಗಳು, ಮಾದರಿಗಳ ಬಗ್ಗೆ ಚರ್ಚೆ, ಪ್ರಶಂಸಾಪತ್ರಗಳ ಹಂಚಿಕೆಯನ್ನು ಪ್ರೋತ್ಸಾಹಿಸಲು ಪಿ&ಜಿ ನೂರಾರು ಮಂದಿಯನ್ನು ನೇಮಕ ಮಾಡಿಕೊಂಡಿದೆ. ಸೃಜನಾತ್ಮಕ ಭಾಷೆಯ ಬಳಕೆ ಕೂಡ ಸಂಸ್ಥೆಯೊಂದರಲ್ಲಿ ಹಸಿರುಮನೆ ನಾವೀನ್ಯತೆಯನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಬಲವಾದ ಸೃಜನಾತ್ಮಕ ತಂಡವನ್ನು ಹೊಂದುವುದು ನಿಮ್ಮ ವೃತ್ತಿ ಜೀವನದ ಅತ್ಯಂತ ಲಾಭದಾಯಕ ಅಂಶ.

image


7. ಸೃಜನಾತ್ಮಕ ಚಿಂತನೆಗಾಗಿ ಪ್ರಯೋಗ

ಸೃಜನಾತ್ಮಕ ಚಿಂತನೆಯನ್ನು ಉತ್ತೇಜಿಸುವ 10 ತಂತ್ರಗಳನ್ನು ಲೇಖಕರು ಅಧ್ಯಾಯವೊಂದರಲ್ಲಿ ವಿವರಿಸಿದ್ದಾರೆ. ಈ ಪ್ರಯೋಗಗಳ ಕಲ್ಪನೆಯ ಹಿಂದೆ ಮೌಲ್ಯವಿರುವುದಿಲ್ಲ, ಅದನ್ನು ಪೂರ್ಣಗೊಳಿಸುವ ಕಾರ್ಯದಲ್ಲಿರುತ್ತದೆ. ಪಾರ್ಟಿ ಪ್ಲಾನಿಂಗ್‍ಗೆ ಮೈಂಡ್ ಮ್ಯಾಪ್‍ಗಳ ಬಳಕೆ, ಕಲ್ಪನೆಗಳ ಬುತ್ತಿಯ ನಿರ್ವಹಣೆಯ ಪ್ರತಿದಿನದ ವೀಕ್ಷಣೆ, ನಿಮ್ಮ ಅಕ್ಕಪಕ್ಕದವರು ಏನು ಹೇಳ್ತಾರೆ? ಏನು ಮಾಡ್ತಾರೆ ಎಂಬುದರ ಅನುಭೂತಿಯ ನಕ್ಷೆ ಚಿತ್ರಿಸುವುದು, ಹೊಸ ಅಡ್ಡ ಹೆಸರುಗಳ ಮೂಲಕ ನಿಮ್ಮ ಸಹೋದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ, ಮತ್ತು 30 ವಲಯಗಳ ಪ್ರಯೋಗ.

8. ಬದುಕಿನ ಸೃಜನಾತ್ಮಕತೆ

ನಿಮ್ಮ ಮೊದಲ ಪ್ರಾಜೆಕ್ಟ್ ಮತ್ತು ಕಾರ್ಯಕ್ಕಾಗಿ ಸೃಜನಾತ್ಮಕತೆಯ ಆತ್ಮವಿಶ್ವಾಸ ಬೆಳೆಸಿಕೊಂಡ್ರೆ, ನೀವು ನಿರಂತರ ಕಲಿಕೆ ಮುಂದುವರಿಸಬಹುದು. ನಿಮ್ಮ ಬದುಕನ್ನೇ ವಿನ್ಯಾಸಗೊಳಿಸಬಹುದು. ನಿಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸಲು ಸೃಜನಾತ್ಮಕ ಚಿಂತನೆಯ ಕೌಶಲ್ಯ ಇರಬೇಕು. ಇತರರಲ್ಲಿನ ಸೃಜನಶೀಲತೆಯನ್ನು ಸಡಿಲಿಸಲು ಕೂಡ ಇದು ಅತ್ಯವಶ್ಯ. ನಿಮ್ಮ ಹೊಸ ಬದುಕನ್ನು ವಿನ್ಯಾಸಗೊಳಿಸಿ ಎನ್ನುತ್ತಾರೆ ಟಾಮ್ ಮತ್ತು ಡೇವಿಡ್ ಕೆಲ್ಲಿ.

ಲೇಖಕರು: ಮದನ್​​ ಮೋಹನ್​​ ರಾವ್​​

ಅನುವಾದಕರು: ಭಾರತಿ ಭಟ್​​​​