18ರ ಹರೆಯದಲ್ಲೇ ವೋಗ್​​ನಿಂದ ಕೆಲಸ ಪಡೆದ ಶಾಸ

ಟೀಮ್​​​ ವೈ.ಎಸ್​​​

18ರ ಹರೆಯದಲ್ಲೇ ವೋಗ್​​ನಿಂದ ಕೆಲಸ ಪಡೆದ ಶಾಸ

Wednesday June 24, 2015,

2 min Read

ಫೋಟೋಗ್ರಾಫಿ ಅನ್ನೋದು ಹಲವರ ಹವ್ಯಾಸ. ಹವ್ಯಾಸ ಅದೆಷ್ಟೋ ಬಾರಿ ವೃತ್ತಿಯಾಗಿಯೂ ಬದಲಾಗಿದ ಕಥೆ ಕೇಳಿದ್ದೇವೆ. ಆದ್ರೆ 18ರ ಹರೆಯದ ಶಾಸ ಜೈರಾಮ್​ ಕಥೆ ಮಾತ್ರ ವಿಭಿನ್ನ. ಶಾಸ ಶಾಲೆಯಲ್ಲಿ ಓದುವಾಗ ಫೋಟೊಗ್ರಾಫಿ ಒಂದು ಸಬ್ಜೆಕ್ಟ್​. ಆದ್ರೆ ಆ ಸಬ್ಜೆಕ್ಟ್​​ ಶಾಸ ಪಾಲಿಗೆ ದಿನ ಕಳೆದಂತೆ ಫೆವರೀಟ್​​ ಆಗುತ್ತಾ ಹೋಯಿತು. ಕ್ರಮೇಣ ಅದು ಹವ್ಯಾಸವಾಗಿ ಬೆಳೆದುಬಿಟ್ಟಿತ್ತು.

ನಿಜ ಹೇಳ್ಬೇಕಾದ್ರೆ ಶಾಸ ಪ್ರತಿಭೆ ಮತ್ತು ಆಸಕ್ತಿಯ ಅಪರೂಪದ ಸಂಯೋಜನೆ. ಶಾಸ ತನ್ನನ್ನು ತಾನೇ ಪ್ರಭಾವಶಾಲಿ ಫೊಟೋಗ್ರಾಫರ್ ಆಗಿ ನೋಡಲು ಇಷ್ಟಪಡುವ ವ್ಯಕ್ತಿತ್ವ ಹೊಂದಿದವರು. ಶಾಸ ಫೋಟೋಗ್ರಾಫಿ ಸಾಂಪ್ರದಾಯಿಕ ವೈಶಿಷ್ಟ್ಯ ದಿಂದ ಕೂಡಿರುತ್ತವೆ. ಹೀಗಾಗಿ ಶಾಸ ಉಳಿದೆಲ್ಲಾ ಫೋಟೋಗ್ರಾಫರ್​​ಗಳಿಂದ ಭಿನ್ನವಾಗಿ ಕಾಣುತ್ತಾರೆ. ಇಂದು ಶಾಸ ಫೋಟೋಗಳು ಪೇಸ್​​​ಬುಕ್​​​ ಪಿಕ್ಚರ್​ನಿಂದ ಹಿಡಿದು ದಿನ ಪತ್ರಿಕೆ, ಮ್ಯಾಗಝೀನ್​​ಗಳ ಮುಖಪುಟದಲ್ಲಿ ರಾರಾಜಿಸುತ್ತಿವೆ.

image


ಶಾಸಗೆ ಆರಂಭದಲ್ಲಿ ಫೋಟೋಗ್ರಫೀ ಮೇಲೆ ಅಷ್ಟೊಂದು ಅಸಕ್ತಿ ಇರಲಿಲ್ಲ. ಆದ್ರೆ ಶಾಲೆಯಲ್ಲಿ ಅದೊಂದು ಸಬ್ಜೆಕ್ಟ್​ ಆಗಿದ್ದರಿಂದ ಅದನ್ನು ಓದಲೇಬೇಕಿತ್ತು. ಹೀಗಾಗಿ ಪೋಟೋಗ್ರಾಫಿಯ ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳುವಂತಾಯಿತು. ಶಾಸ ತೆಗೆದ ಕೆಲವು ಫೋಟೋಗಳು ಮ್ಯಾಗಝೀನ್​​ ಮತ್ತು ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.ಯುಕೆ ಯ ವೋಗ್ ನಿಂದ ಶಾಶ್ವತ ಕೆಲಸ ಪ್ರಸ್ತಾಪನೆ ಬಂದಿತ್ತು. ಶಾಸಗೆ ದೊಡ್ಡ ಬ್ರೇಕ್ ಕೊಟ್ಟ ಈ ಕೆಲಸದ ಪ್ರಸ್ತಾವನೆ ಯನ್ನು ಮೊದಲು ನಾನು ನನ್ನ ಮೇಲ್‌ಬಾಕ್ಸ್ ನಲ್ಲಿ ನೋಡಿದೆ ಎಂದು ಶಾಸ ವಿವರಿಸುತ್ತಾರೆ. 

ಶಾಸಗೆ ಫೋಟೋಗ್ರಫೀ ಕಲಿಕಾ ಅನುಭವಗಳನ್ನು ಕೂಡ ಒದಗಿಸಿದೆ. ಇದು ನನ್ನಲ್ಲಿ ಬಹಳಷ್ಟು ವಿಶ್ವಾಸ ಮತ್ತು ಸ್ವಾಭಿಮಾನವನ್ನು ತುಂಬಿದೆ ಎಂದು ಶಾಸ ಹೇಳುತ್ತಾರೆ. ಕೆಲಸದ ಮೇಲೆ ಇರುವ ಅವಳ ಭಾವನೆಗಳು ಶಾಸಗಳನ್ನು ಸ್ವಾಭಿಯನ್ನಾಗಿ ರೂಪಿಸಿದೆ. ಇಷ್ಟು ಚಿಕ್ಕ ವಯಸಿನಲ್ಲೇ ಸಂಪಾದನೆ ಮಾಡುವ ಅವಕಾಶವನ್ನು ನೀಡಿದೆ. ತನಗೆ ಬೇಕಾದ ಎಲ್ಲ ಉಪಕರಣಗಳನ್ನು ಶಾಸ ತನ್ನ ಸಂಪಾದನೆಯಿಂದಲೇ ಕೊಂಡುಕೊಂಡಿದ್ದಾರೆ. ಮಗಳ ಪ್ರತೀ ಕೆಲಸವೂ ತಂದೆ ತಾಯಿಗೆ ಹೆಮ್ಮೆ ಮತ್ತು ಸಂತೋಷವನ್ನು ತಂದಿದೆ.

image


ಫ್ಯಾಶನ್ ಲೋಕದಲ್ಲಿ ಕಾರ್ಲ್ ಲಾಗರ್ಫೆಲ್ಡ್ ಅತೀ ದೊಡ್ನಡ ಹೆಸರು. ಕೆಲಸವು ಅಷ್ಟೇ ಬ್ಯೂಟಿಫುಲ್​.. ಶಾಸಳ ಕೆಲಸದ ಸ್ಪೂರ್ತಿಯೂ ಇವ್ರೇ. ಶಾಸಳ ಕೆಲಸ ಫ್ಯಾಶನ್ ಮತ್ತು ಲಲಿತಕಲೆ ಫೋಟೋಗ್ರಫೀ ಮೇಲೆ ಕೇಂದ್ರೀಕೃತವಾಗಿದೆ. ಶಾಸಳ ಕೆಲಸ ಅವಳ ಸ್ಪೂರ್ತಿಯ ಪ್ರತಿಬಿಂಬವಾಗಿರುತ್ತದೆ ಮತ್ತು ಅವಳು ಸ್ಪೂರ್ತಿ ಪಡೆದ ವ್ಯಕ್ತಿಯ ಕೆಲಸಕ್ಕೆ ಸಂಪರ್ಕ ಹೊಂದಿರುತ್ತದೆ. ಈ ಯುವ ಫೊಟೋಗ್ರಾಫರ್ ಈಗಾಗಲೇ ಫ್ಯಾಶನ್ ಉದ್ಯಮದಲ್ಲಿ ಮುಳುಗಿದ್ದಾಳೆ. ಮುಂಬರುವ ಫೊಟೋಗ್ರಾಫರ್ ಗಳಿಗೆ ಏನಾದರೂ ಸಲಹೆ ನೀಡುತ್ತೀರಾ ಎಂದು ಕೇಳಿದರೆ ಆಸಕ್ತಿಯುಳ್ಳ ಯಾವುದೇ ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಪ್ರತಿ ಕ್ಷಣವನ್ನು ಉಪಯೋಗ ಮಾಡಿಕೊಳ್ಳಬೇಕು, ಪ್ರತೀ ಛಾಯಾಚಿತ್ರದ ಹಿಂದೆ ಒಂದು ಕಥೆ ಇರುತ್ತದೆ ಎಂದು ಅವರು ಹೇಳುತ್ತಾರೆ. ಅವಳು ಆಯ್ಕೆ ಮಾಡಿಕೊಂಡ ಕ್ಷೇತ್ರ ಅನೇಕ ಅವಕಾಶಗಳನ್ನು ಅವಳಿಗೆ ನೀಡಿದೆ ಎಂದು ಹೇಳುತ್ತಾಳೆ. ನನ್ನ ತಾಯಿ ಕೂಡ ಒಬ್ಬ ಕಲಾವಿದೆ ಆದರೆ ಅವರಿಗೆ ಅಭ್ಯಾಸ ಮಾಡುವ ಅವಕಾಶ ಸಿಗಲಿಲ್ಲ. ನನ್ನ ತಾಯಿಯೇ ನನ್ನ ಸ್ಪೂರ್ತಿಗೆ ಮುಖ್ಯ ಮೂಲ ಎಂದು ಶಾಸ ಜೈರಾಮ್ ಹೇಳುತ್ತಾರೆ.

image


    Share on
    close