ಆನ್‌ಲೈನ್ ಫಾರ್ಮಸಿ ಉದ್ಯಮದ ಸವಾಲುಗಳು ಮತ್ತು ಉಪಯೋಗಗಳು

ಟೀಮ್​​ ವೈ.ಎಸ್​​. ಕನ್ನಡ

ಆನ್‌ಲೈನ್ ಫಾರ್ಮಸಿ ಉದ್ಯಮದ ಸವಾಲುಗಳು ಮತ್ತು ಉಪಯೋಗಗಳು

Tuesday December 15, 2015,

4 min Read

ಸತ್ಯಮೇವ ಜಯತೇ ಕಾರ್ಯಕ್ರಮದ ಮೊದಲ ಸೀಸನ್‌ನ 4ನೇ ಎಪಿಸೋಡ್‌ನಲ್ಲಿ ನಟ ಅಮೀರ್ ಖಾನ್ ಜನರಿಕ್ ಔಷಧಿಗಳ ಬಗ್ಗೆ ಮಾತನಾಡಿದ್ದರು. ಜನರಿಕ್‌ ಮೆಡಿಸಿನ್‌ಗಳು ಕಡಿಮೆ ದರದಲ್ಲಿ ದೊರಕುತ್ತವೆ ಮತ್ತು ಬ್ರಾಂಡೆಡ್ ಮೆಡಿಸಿನ್‌ಗಳಿಗೆ ಇವು ಆಲ್ಟರ್‌ನೇಟಿವ್‌ಗಳಾಗಿವೆ. ಬಹಳಷ್ಟು ಬಾರಿ ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಜನ ಮೆಡಿಕಲ್‌ ಶಾಪ್‌ಗಳಿಗೆ ಹೋಗಿ ಕೊಂಡುಕೊಂಡುಬರುತ್ತಾರೆ. ಆದರೆ ಈ ಕುರಿತು ಯಾವುದೇ ರೀತಿಯ ಸಂಶೋಧನೆಗಳನ್ನೂ ಮಾಡುವುದಿಲ್ಲ. ಇಂತಹ ಪರಿಸ್ಥಿತಿಗಳಲ್ಲಿ ಜನ ಆಗಾಗ್ಗೆ ಮೆಡಿಕಲ್ ಶಾಪ್‌ನವರು ಯಾವ ಬ್ರಾಂಡ್‌ ನ ಔಷಧಿಯನ್ನು ಮಾರಬೇಕೆಂದು ನಿರ್ಧರಿಸುತ್ತಾರೋ ಅದರಂತೆ ಕೊಂಡುಕೊಳ್ಳುತ್ತಾರೆ. ಬ್ರಾಂಡ್‌ಗಳನ್ನನುಸರಿಸಿ ಇವುಗಳ ದರದಲ್ಲೂ ಸಾಮಾನ್ಯವಾಗಿ ವ್ಯತ್ಯಾಸವಿರುತ್ತದೆ. ಶೇ.40 ರಷ್ಟು ದರ ವ್ಯತ್ಯಾಸವನ್ನು ನಾವು ಕಾಣಬಹುದಾಗಿದೆ.

ಇಂತಹ ದರ ವ್ಯತ್ಯಾಸಗಳಿಗೆ ಮುಖ್ಯ ಕಾರಣ ಮಾಹಿತಿಯ ಕೊರತೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತು ಪರಿಸ್ಥಿತಿಗಳು ಎದುರಾದಾಗ ಯಾರಿಗೂ ಔಷಧಿಗಳ ಬಗ್ಗೆ ಸರಿಯಾದ ಮಾಹಿತಿ ಕಲೆ ಹಾಕಲು ಸಮಯವೇ ಇರುವುದಿಲ್ಲ. ಔಷಧಿಗಳ ಬದಲಿ ವ್ಯವಸ್ಥೆಯ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಈ ಕುರಿತು ಅಜ್ಞಾನ ಎಂದರೆ ಅದರರ್ಥ ಹೆಚ್ಚು ಹಣ ಪಾವತಿಸಬೇಕು ಎಂಬುದಷ್ಟೇ. ಜನರು ಯಾವಾಗ ದೀರ್ಘಕಾಲಿಕವಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಾರೋ ಆಗಷ್ಟೇ ಅವರಿಗೆ ಔಷಧಿಯ ಕುರಿತು ಮಾಹಿತಿ ಸಂಗ್ರಹಿಸಲು ಸಮಯ ದೊರಕುತ್ತದೆ.

ಕಳೆದ ಹಲವು ವರ್ಷಗಳಲ್ಲಿ ಗ್ರಾಹಕರಿಗೆ ಅಗತ್ಯವಿರುವ ಔಷಧಗಳನ್ನು ಗ್ರಾಹಕರು ಇಚ್ಛಿಸಿದ ಬ್ರಾಂಡ್‌ ಜೊತೆ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸುವ ಅನೇಕ ಆನ್‌ಲೈನ್‌ ಪೋರ್ಟಾಲ್‌ಗಳು ಬಂದಿವೆ. ಇಲ್ಲಿ ಆನ್‌ಲೈನ್‌ ಮೂಲಕ ಕಾರ್ಯನಿರ್ವಹಿಸುವ ಕೆಲವು ಸಂಸ್ಥೆಗಳನ್ನು ಸೂಚಿಸಲಾಗಿದೆ.

image


ನೆಟ್ ಮೆಡ್ಸ್- ನೆಟ್ ಮೆಡ್ಸ್ ಸಂಸ್ಥೆಯ ಪೋಷಕ ಸಂಸ್ಥೆ ದಾದಾ&ಕೋ ಆರಂಭವಾಗಿದ್ದು 1914ರಲ್ಲಿ. ಇವರು 100ಕ್ಕೂ ಹೆಚ್ಚು ವರ್ಷಗಳಿಂದ ಇದೇ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ನೆಟ್ ಮೆಡ್ಸ್ ಸಂಸ್ಥೆ ಇವರದ್ದೇ ಆನ್‌ಲೈನ್‌ ಉದ್ಯಮ. ಇದು ಪ್ರಿಸ್ಕ್ರಿಪ್ಶನ್ ಮತ್ತು ಪ್ರಿಸ್ಕ್ರಿಪ್ಶನ್ ಇಲ್ಲದಿರುವ ಔಷಧಗಳನ್ನು ಒದಗಿಸುತ್ತಾರೆ. ಇವರು ಭಾರತದಾದ್ಯಂತ 5000ಕ್ಕೂ ಹೆಚ್ಚು ಸ್ಟಾಕ್ ಕೀಪಿಂಗ್ ಘಟಕಗಳನ್ನು ಹೊಂದಿದ್ದಾರೆ. ಪ್ರಿಸ್ಕ್ರಿಪ್ಶನ್ ಇರುವ ಔಷಧಗಳನ್ನು ಪಡೆಯಲು ಮೊಬೈಲ್ ಆ್ಯಪ್ ಮೂಲಕ ವೈದ್ಯರ ಪ್ರಿಸ್ಕ್ರಿಪ್ಶನ್‌ ಅನ್ನು ಅಪ್‌ಲೋಡ್ ಮಾಡಬೇಕು. ರೋಗಿಗಳಿಂದ ಪಡೆದ ಬೇಡಿಕೆಗಳಿಗನುಸಾರವಾಗಿ ಸಂಸ್ಥೆ ದಾಖಲೆಗಳನ್ನೂ ಸಹ ನಿರ್ವಹಿಸುತ್ತಿದೆ. ಅಲ್ಲದೇ ರೋಗಿಗಳಿಗೆ ಔಷಧಗಳನ್ನು ಮತ್ತೆ ತೆಗೆದುಕೊಳ್ಳಬೇಕಾದ ಸಮಯವನ್ನೂ ಜ್ಞಾಪಿಸುತ್ತದೆ. ನೆಟ್ ಮೆಡ್ಸ್ ಸಂಸ್ಥೆ ಇತ್ತೀಚೆಗಷ್ಟೇ ಹೆಲ್ತ್‌ ಕೇರ್ ಇನ್ವೆಸ್ಟ್‌ ಮೆಂಟ್ ಸಂಸ್ಥೆ ಆರ್ಬಿಮೆಡ್‌, ಬಾಟಿಕ್ ಇನ್ವೆಸ್ಟ್ ಮೆಂಟ್ ಬ್ಯಾಂಕ್, ಎಂಎಪಿಇ ಅಡ್ವೈಸರಿ ಗ್ರೂಪ್, ಮತ್ತು ದಾದಾ ಫ್ಯಾಮಿಲಿ ಇನ್ವೆಸ್ಟ್ ಮೆಂಟ್ ಫಂಡ್‌ನಿಂದ ಒಟ್ಟು 50 ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯನ್ನೂ ಪಡೆದಿದೆ.

1ಎಂಜಿ- 1 ಎಂಜಿ ಎಂಬುದು ದೆಹಲಿ ಮೂಲದ ಒಂದು ಫಾರ್ಮಸಿ ಸಂಸ್ಥೆ. ಇದು ಇತ್ತೀಚೆಗಷ್ಟೇ ಆಯುಷ್ ಸಂಸ್ಥೆಯೊಂದಿಗೆ ಆಲ್ಟರ್‌ನೇಟಿವ್ ಮೆಡಿಸಿನ್ ಪ್ರಪಂಚಕ್ಕೆ ಕಾಲಿಟ್ಟಿದೆ. ಹೋಮ್ ಜಾಯ್.ಕಾಮ್ ಈ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ. ಮತ್ತು ಇದನ್ನು 1 ಎಂಜಿ ಆಯುಷ್.ಕಾಮ್ ಎಂಬ ಹೆಸರಿನಲ್ಲಿ ರಿಬ್ರಾಂಡ್ ಆಗಿದೆ. 2013ರಲ್ಲಿ ಹೆಲ್ತ್ ಕಾರ್ಟ್ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾದ ಈ ಸಂಸ್ಥೆಯ ಮೊಬೈಲ್ ಆ್ಯಪ್‌ ಅನ್ನು ಎರಡೂವರೆ ಮಿಲಿಯನ್ ಜನ ಡೌನ್‌ ಲೋಡ್‌ ಮಾಡಿಕೊಂಡಿದ್ದಾರೆ. 3 ಮಿಲಿಯನ್ ಜನ ಇವರ ವೆಬ್‌ಸೈಟ್‌ಗೆ ಪ್ರತಿ ತಿಂಗಳು ಭೇಟಿ ನೀಡುತ್ತಾರೆ. ಆ್ಯಪ್ ಡೌನ್‌ಲೋಡ್ ವಿಚಾರದಲ್ಲಿ ಕಳೆದ 1 ವರ್ಷದಲ್ಲಿ ಶೇ.600 ರಷ್ಟು ಬೆಳವಣಿಗೆ ಸಾಧಿಸಿರುವುದಾಗಿ ಹೇಳಿಕೊಂಡಿದೆ ಸಂಸ್ಥೆ.

ಎಂಕೆಮಿಸ್ಟ್- ಈ ಸಂಸ್ಥೆ ಆರಂಭವಾಗಿದ್ದು ರಾನ್‌ಬಾಕ್ಸಿ ಸಂಸ್ಥೆಯ ಮಾಜಿ ಅಧ್ಯಕ್ಷರಿಂದ. ಈ ಸಂಸ್ಥೆ ಅಪರಿಮಿತ ಜ್ಞಾನ ಮತ್ತು ಹಲವು ವರ್ಷಗಳ ಅನುಭವ ಹೊಂದಿದೆ. ಈ ಸಂಸ್ಥೆ ಆರಂಭವಾಗಿದ್ದು ಒಂದು ವರ್ಷವಷ್ಟೇ ಕಳೆದಿದೆ. ಇವರು ಪ್ರಿಸ್ಕ್ರಿಪ್ಶನ್ ಔಷಧಗಳು ಮತ್ತು ಒಟಿಸಿ ಔಷಧಿಗಳನ್ನು ನೀಡುವ ಜೊತೆಗೆ ಪುನರಾವರ್ತಿತ ಔಷಧಿಗಳನ್ನು ನೆನಪಿಸುವುದು ಮತ್ತು ಡಯೆಟ್ ಕೌನ್ಸೆಲಿಂಗ್ ಸೌಲಭ್ಯವನ್ನೂ ಸಹ ಹೊಂದಿದೆ.

ಮೆಡ್- ಮೆಡ್ ಸಂಸ್ಥೆ ಸಾಂಪ್ರದಾಯಿಕ ಔಷಧ ಸಂಸ್ಥೆಯಲ್ಲ. ಆದರೆ ಇದು ಡಯಾಗ್ನಾಸ್ಟಿಕ್ ಲ್ಯಾಬ್‌ಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತದೆ. ವೈದ್ಯರನ್ನು ಭೇಟಿಯಾದಾಗ ಅವರು ಅನೇಕ ರೀತಿಯ ಪರೀಕ್ಷೆಗಳನ್ನು ಮಾಡಿಸುವಂತೆ ಬರೆದುಕೊಡುತ್ತಾರೆ. ಮೆಡ್ ಸಂಸ್ಥೆ ನಿಮಗೆ ಅಗತ್ಯವಿರುವ ಪರೀಕ್ಷೆಗಳ ಕುರಿತು ಮಾಹಿತಿ ನೀಡುವುದಲ್ಲದೇ, ಆ ಪರೀಕ್ಷೆಯ ಖರ್ಚಿನ ಕುರಿತೂ ತಿಳಿಸಿಕೊಡುತ್ತದೆ. ಮೆಡ್ ಸಂಸ್ಥೆ ಇತ್ತೀಚೆಗಷ್ಟೇ ಏಜೆಂಟ್ ಇನ್ವೆಸ್ಟ್ ಮೆಂಟ್ ನಿಂದ 15,000 ಯುಎಸ್ ಡಾಲರ್ ಹೂಡಿಕೆಯನ್ನೂ ಪಡೆದಿದೆ.

ಡೆಲಿಮೆಡಿ- ಕುಲದೀಪ್ ಪಟೇಲ್ ಎಂಬುವವರಿಂದ ಆರಂಭವಾಗಿದ್ದು ಡೆಲಿಮೆಡಿ ಸಂಸ್ಥೆ. ಈ ಸಂಸ್ಥೆ ಸ್ಥಳೀಯ ಫಾರ್ಮಾಸಿಸ್ಟ್‌ ಗಳ ಜೊತೆ ಸೇರಿ ವಹಿವಾಟು ನಡೆಸುತ್ತಿದೆ. ಈ ಸಂಸ್ಥೆ ಪ್ರಿಸ್ಕ್ರಿಪ್ಶನ್ ಔಷಧಗಳನ್ನು ಬೇಡಿಕೆ ಪಡೆದ 1 ಗಂಟೆಯೊಳಗೆ ತಲುಪಿಸುವ ಭರವಸೆ ನೀಡುತ್ತದೆ. ಈ ವರ್ಷದ ಮೊದಲಿನಲ್ಲಿ ಆರಂಭವಾದ ಈ ಸಂಸ್ಥೆ ಇನ್ನೂ ಮೊದಲ ಹಂತದಲ್ಲಿಯೇ ಇದೆ.

ಕೆಲವು ಗಮನಾರ್ಹ ಅಂಶಗಳು ಮತ್ತು ಸವಾಲುಗಳು

ಈ ಕ್ಷೇತ್ರಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಬಹುತೇಕ ಎಲ್ಲಾ ಸಂಸ್ಥೆಗಳೂ ದೆಹಲಿ ಮೂಲದವು. ಫಾರ್ಮಾಸಿಸ್ ವಿಭಾಗದಲ್ಲಿ ಉದ್ಯಮ ಆರಂಭಿಸಲು ಸುಲಭವಾದ ಒಂದು ಉದ್ಯಮವಲ್ಲ. ಇದಕ್ಕೆ ಆಳವಾದ, ಅಪರಿಮಿತ ಜ್ಞಾನದ ಅವಶ್ಯಕತೆ ಇದೆ ಮತ್ತು ಹಲವು ಸವಾಲುಗಳಿವೆ.

1) ಈ ಉದ್ಯಮದ ಒಂದು ದೊಡ್ಡ ಸವಾಲೆಂದರೆ ಔಷಧಗಳ ಪ್ರಿಸ್ಕ್ರಿಪ್ಶನ್ ಮತ್ತು ಪ್ರಿಸ್ಕ್ರಿಪ್ಶನ್‌ನ ನಿಖರತೆ. ಸುಳ್ಳು ಪ್ರಿಸ್ಕ್ರಿಪ್ಶನ್‌ಗಳನ್ನು ಪಡೆಯುವುದು ನಿಜಕ್ಕೂ ತುಂಬಾ ಸುಲಭ. ಇದಕ್ಕಾಗಿ ಹೆಚ್ಚಿನ ಶ್ರಮವನ್ನೂ ವಹಿಸಬೇಕಿಲ್ಲ.

2) ಆಫ್‌ಲೈನ್‌ ಫಾರ್ಮಸಿಯಲ್ಲಿ ಯಾರಿಗೂ ಹೆಚ್ಚಿನ ಆಯ್ಕೆ ಇರುವುದಿಲ್ಲ ಮತ್ತು ಫಾರ್ಮಾಸಿಸ್ಟ್ ಯಾವ ಬ್ರಾಂಡ್‌ನ ಔಷಧಿಯನ್ನು ನೀಡುತ್ತಾನೋ ಅದನ್ನು ಒಪ್ಪಿಕೊಳ್ಳಲೇಬೇಕು. ಕಡಿಮೆ ದರ ಜನರಿಕ್ ಔಷಧಗಳನ್ನು ಬಹುತೇಕ ಫಾರ್ಮಾಸಿಸ್ಟ್‌ ಗಳು ಹೊಂದಿರುವುದಿಲ್ಲ. ಆದರೆ ಬಹುತೇಕ ಆನ್‌ಲೈನ್ ಫಾರ್ಮಸಿಗಳು ಜನರಿಕ್ ಔಷಧಗಳನ್ನು ಒದಗಿಸುತ್ತವೆ. ಇದರಿಂದ ಶೇ. 40ರಷ್ಟು ಹಣ ಉಳಿಯುತ್ತದೆ.

3) ಆನ್‌ಲೈನ್ ಫಾರ್ಮಸಿಗಳು ಎದುರಿಸುವ ಅತ್ಯಂತ ದೊಡ್ಡ ಸವಾಲೆಂದರೆ ಲಾಜಿಸ್ಟಿಕ್ಸ್. ಔಷಧಿಗಳನ್ನು ನಿಗದಿತ ಸಮಯದೊಳಗೆ ತಲುಪಿಸಬೇಕಿರುವ ಅಗತ್ಯವಿರುತ್ತದೆ. ಏಕೆಂದರೆ ಮನುಷ್ಯನ ಜೀವನ ಈ ಔಷಧಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಗ್ರಾಹಕರಿಗೆ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿ ಫಾರ್ಮಾಸಿಸ್ ಕಂಪನಿಗಳ ಮೇಲಿರುತ್ತದೆ.

4) ಆನ್‌ಲೈನ್ ಫಾರ್ಮಸಿಯ ದೊಡ್ಡ ಟಾರ್ಗೆಟ್ ಗ್ರಾಹಕರೆಂದರೆ 40 ವರ್ಷ ವಯಸ್ಸಿನ ಜನರು. ಸ್ಮಾರ್ಟ್ ಫೋನ್ ಕೊಳ್ಳುಗರ ಸಂಖ್ಯೆ ಹೆಚ್ಚಿರುವುದರಿಂದ ಇಂತಹ ಉದ್ಯಮಗಳಿಗೆ ಅವಕಾಶಗಳು ಸಾಕಷ್ಟಿವೆ.

5) ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಿವೆ. ಹೀಗಾಗಿ ಈ ಉದ್ಯಮಗಳಿಗೆ ಹೂಡಿಕೆ ಮಾಡುವವರ ಸಂಖ್ಯೆಯೂ ಸಾಕಷ್ಟಿದೆ. ಹೀಗೆ ಸರ್ಕಾರಿ ನಿಯಮಾವಳಿಗಳ ಪಾಲನೆಯಾಗುತ್ತಿದೆಯೇ ಇಲ್ಲವೇ ಮತ್ತು ಪ್ರಿಸ್ಕ್ರಿಪ್ಶನ್‌ಗಳು ಸಮರ್ಪಕವಾದುದೇ ಮುಂತಾಗಿ ಈ ಉದ್ಯಮದಲ್ಲಿ ಸಾಕಷ್ಟು ಸವಾಲುಗಳಿವೆ.

ಸಮಸ್ಯೆಗಳು ತಲೆದೋರಿದಾಗ ಅದನ್ನು ಎದುರಿಸುವ ಶಕ್ತಿಯೂ ಉದ್ಯಮಗಳಿಗೆ ಇರಬೇಕಾಗಿರುತ್ತದೆ. ಕಳೆದ ತಿಂಗಳು ದ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ & ಡ್ರಗ್ಗಿಸ್ಟ್ಸ್(ಎಐಒಸಿಡಿ) ಅಕ್ರಮವಾಗಿ ಆನ್‌ಲೈನ್ ನಲ್ಲಿ ಔಷಧಗಳ ಮಾರಾಟ ವಿರೋಧಿಸಿ ರಾಷ್ಟ್ರಮಟ್ಟದಲ್ಲಿ ಮುಷ್ಕರಕ್ಕೆ ಕರೆ ನೀಡಿತ್ತು. ಪ್ರಸ್ತುತ ದೇಶದಲ್ಲಿ 8.5 ಲಕ್ಷಕ್ಕೂ ಹೆಚ್ಚು ಕೆಮಿಸ್ಟ್ಸ್‌ ಗಳಿದ್ದಾರೆ. ಇವರನ್ನೆಲ್ಲಾ ಕೆಲವು ಆನ್‌ಲೈನ್ ಸಂಸ್ಥೆಗಳು ಆವರಿಸಿಬಿಡುತ್ತಾರೆ ಅಥವಾ ಇವರಿಗೆ ಸ್ಪರ್ಧೆ ನೀಡುತ್ತವೆ ಅಥವಾ ಈ ಸಂಸ್ಥೆಗಳ ಇರುವಿಕೆಗೆ ಮುಳುವಾಗುತ್ತಾರೆ ಎಂದು ಹೇಳುವುದು ತಪ್ಪಾಗುತ್ತದೆ.

ಲೇಖಕರು: ಆದಿತ್ಯ ಭೂಷಣ್​​ ದ್ವಿವೇದಿ

ಅನುವಾದಕರು: ವಿಶ್ವಾಸ್​​​