ಮಾರುಕಟ್ಟೆಯಲ್ಲಿದೆ 3 ಹಂತದ ಸ್ಪರ್ಧೆ : ಹಾಗಾದ್ರೆ ಪ್ರತಿಸ್ಪರ್ಧಿಗಳ ಗುಟ್ಟು ತಿಳಿದುಕೊಳ್ಳುವುದು ಹೇಗೆ..?

ಟೀಮ್​​ ವೈ.ಎಸ್​​. ಕನ್ನಡ

0

ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ಒಂದು ವಿಚಿತ್ರ ಕಲ್ಪನೆ ಇದೆ. ನನಗೆ ಹೊಳೆದ ಆಲೋಚನೆ ಇತರ ಯಾರ ತಲೆಯಲ್ಲೂ ಮೂಡಲ್ಲ. ಇತರರು ಆ ಬಗ್ಗೆ ಚಿಂತಿಸಲು ಕೂಡ ಅಸಾಧ್ಯ.. ಇದು ನಾವು ನೀವು ಎಲ್ಲರೂ ಹೇಳುವ ಮಾತು.. ನಂಬಿಕೆ. ಆದರೆ ವಿಷಯ ಹಾಗಲ್ಲ.. ವಿಶ್ವ ದೊಡ್ಡದಾಗಿದೆ. ನಮ್ಮ ತಲೆಯಲ್ಲಿ ಹೊಸ ಐಡಿಯಾ ಹೊಳೆದ ಹಾಗೆ ಅದೇ ಸಮಯದಲ್ಲಿ ಅದೇ ಆಲೋಚನೆ ಇತರರಲ್ಲಿಯೂ ಮೂಡುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.. ಹಾಗಿದ್ದರೆ ಇದರಿಂದ ನಮ್ಮನ್ನು ನಾವು ರಕ್ಷಿಸಲು ಏನು ಮಾಡಬೇಕು..? ನಮ್ಮ ಆಲೋಚನೆ- ಚಿಂತನೆ ಭಿನ್ನ ರೂಪದಲ್ಲಿ ಮೂಡಿ ಬರಲು ನಾವೇನು ಮಾಡಬೇಕು..? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ನಮ್ಮ ಪ್ರತಿಸ್ಪರ್ಧಿಯನ್ನು ನಾವು ಯಾವಾಗ ಗಂಭೀರವಾಗಿ ಪರಿಗಣಿಸಬೇಕು.. ಎದುರಾಳಿಗಳ ಅಂದರೆ ಪ್ರತಿಸ್ಪರ್ಧಿಗಳ ಗುಟ್ಟು ತಿಳಿದುಕೊಳ್ಳಲು ಏನೇನು ಮಾಡಬೇಕು. ಇದು ಸಂಕೀರ್ಣ ಪ್ರಶ್ನೆ...

ಸ್ಪರ್ಧೆ - ಸುತ್ತ ಮುತ್ತ

ಹೊಸ ಆಲೋಚನೆ ಅಂದರೆ ವಿನೂತನ ಯೋಜನೆ ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಆರಂಭದಲ್ಲಿ ಹಲವು ತಪ್ಪು ಮಾಡಿದೆವು. ಬಳಿಕ ಅವುಗಳನ್ನು ನಿವಾರಿಸಿದೆವು. ಅಧ್ಯಯನದ ಬಳಿಕ ಮೂರು ಅಂಶಗಳನ್ನು ಪತ್ತೆ ಹಚ್ಚಿದೆವು. ಮುಖ್ಯವಾಗಿ ಮಾರುಕಟ್ಟೆಯಲ್ಲಿ ಮೂರು ಹಂತದ ಸ್ಪರ್ಧೆ ಇರುವುದು ಗಮನಕ್ಕೆ ಬಂತು.

ಮೊಳಕೆಯೊಡೆಯುವ ಹಂತ. ಇದು ಶೈಶವಾಸ್ಥೆಯಲ್ಲಿರುವ ಸಂಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಸಂಸ್ಥೆಗಳು ಇನ್ನೂ ಚಟುವಟಿಕೆ ಆರಂಭಿಸಿರುವುದಿಲ್ಲ. ಎಲ್ಲವೂ ಅತ್ಯಂತ ಪ್ರಾಥಮಿಕ ಹಂತದಲ್ಲಿರುತ್ತವೆ. ಇಂತಹ ಸಂಸ್ಥೆಗಳಿಂದ ಯಾವುದೇ ಪೈಪೋಟಿಯ ಅಪಾಯ ಇಲ್ಲ.

ಹೊಸ ಆಲೋಚನೆ..

ವಿನೂತನ ಯೋಜನೆ ಅಂದರೆ ಹೊಸ ಆಲೋಚನಾ ಸಂಸ್ಥೆಗಳ ಬಗ್ಗೆ ಸ್ವಲ್ಪ ಮಾತು. ಇದು ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಂಸ್ಥೆಗಳು. ಬೇಟಾ ಆವೃತ್ತಿ ಬಿಡುಗಡೆ ಮಾಡಿರುವ ಸಾಧ್ಯತೆ ಕೂಡ ಹೆಚ್ಚಿವೆ. ಬಳಕೆದಾರರ ಬಗ್ಗೆ ಮಾಹಿತಿ ಕಲೆ ಹಾಕಿರುವ ಹಾಗೂ ಪ್ರಶಸ್ತಿ ಪಡೆದಿರುವ ಸಾಧ್ಯತೆ ಕೂಡ ಇದೆ. ಈ ಎಲ್ಲ ಸಂಸ್ಥೆಗಳು ಖಂಡಿತವಾಗಿಯೂ ಪೈಪೋಟಿ ನೀಡಲಿವೆ. ವಿನೂತನ ಯೋಜನಾ ಸಂಸ್ಥೆಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲು ಕೂಡ ಶಕ್ತವಾಗಿವೆ. ಈ ಕಾಮರ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಳವಣಿಗೆ ಅವಲೋಕಿಸಬೇಕಿದೆ.

ದೊಡ್ಡ ಸಂಸ್ಥೆಗಳು..

ದೊಡ್ಡ ಸಂಸ್ಥೆಗಳು , ನಿಮ್ಮದೇ ಆದ ಉತ್ಪನ್ನವನ್ನು ಅಭಿವೃದ್ಧಿಪಡಿಸುತ್ತಿದ್ದರೆ ಅದು ಖಂಡಿತವಾಗಿಯೂ ಅಪಾಯಕಾರಿ ಮತ್ತು ಎಚ್ಚರಿಕೆಯ ಕರೆ ಗಂಟೆ. ಯಾಕೆಂದರೆ ಬೃಹತ್ ಸಂಸ್ಥೆಗಳ ಬಳಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಂಪನ್ಮೂಲ ಇರುತ್ತದೆ. ಅಲ್ಲದೆ ಪೂರಕ ಬೆಂಬಲ ಕೂಡ ಇರುತ್ತದೆ. ಈ ಸಂಸ್ಥೆಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ಪನ್ನ ಅಭಿವೃದ್ಧಿಪಡಿಸಲು ಸಾಧ್ಯ ಇದೆ. ಇಂತಹ ಸಂದರ್ಭದಲ್ಲಿ ಅಂತಿಮವಾಗಿ ಬಳಕೆದಾರನಿಗೆ ಯಾವುದು ಅಗತ್ಯ ಮತ್ತು ಲಾಭದಾಯಕ ಎಂಬ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಅಳವಡಿಸಿಕೊಳ್ಳುವ ಒಂದು ತಂತ್ರ, ದೊಡ್ಡ ಕಂಪೆನಿಗಳ ಸ್ಪರ್ಧೆಯನ್ನು ಕೂಡ ಎದುರಿಸಲು ನೆರವಾಗುತ್ತದೆ. ಉದಾಹರಣೆಗೆ ಮ್ಯಾಜಿಕ್ ಬ್ರಿಕ್ಸ್ ಸಂಸ್ಥೆ ನಿರ್ಲಕ್ಷಿಸಿದ್ದ ಒಂದು ಅಂಶವನ್ನು ಹೌಸ್. ಕಾಮ್ ಪರಿಣಾಮಕಾರಿಯಾಗಿ ಬಳಸಿ, ವ್ಯಾಪಾರ ಅಭಿವೃದ್ಧಿಪಡಿಸಿತು. ಅದೇ ರೀತಿ ಮೇರು ಕ್ಯಾಬ್ ನ ದೌರ್ಬಲ್ಯ, ಒಲಾ ಕ್ಯಾಬ್ಸ್ ಗೆ ಪ್ಲಸ್ ಪಾಯಿಂಟ್ ಆಗಿ ಬದಲಾಯಿತು.

ಗೂಗಲ್ ಮಾಹಿತಿ ಕೋಶ..

ಒಂದೇ ತರದ ಉತ್ಪನ್ನಗಳನ್ನು ಸಿದ್ದಪಡಿಸುವ ಸಂಸ್ಥೆಗಳ ಪಟ್ಟಿ ಮಾಡಿ. ಈ ಮೂಲಕ ಗೂಗಲ್ ಸರ್ಚ್ ನಲ್ಲಿ ಮಾಹಿತಿ ಕಲೆ ಹಾಕಿ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಬಹುದು. ಆದರೆ ಗೂಗಲ್​ನ ಮೊದಲ ಪುಟದಲ್ಲಿ ಎಲ್ಲ ಉತ್ಪನ್ನಗಳ ಮಾಹಿತಿ ದೊರೆಯುವುದು ಕಷ್ಟ. ಈ ಸಂದರ್ಭದಲ್ಲಿ ಸ್ಪಲ್ಪ ಪರಿಶ್ರಮ ಅಗತ್ಯ.

ವಿನೂತನ ಯೋಜನೆಗೆ ಮಾಧ್ಯಮ ವೇದಿಕೆ

ಭಾರತದಲ್ಲಿ ಹೊಸ ವಿನೂತನ ಯೋಜನೆಗಳು ಮಾಧ್ಯಮದೊಂದಿಗೆ ಲಿಂಕ್ ಹೊಂದಿವೆ. ಯುವರ್ ಸ್ಟೋರಿ, ನೆಕ್ಟ್ ಬಿಗ್ ವಾಟ್ ಹೀಗೆ ಹಲವು ಮಾಧ್ಯಮಗಳು ನಿರಂತರ ಬೆಳಕು ಚೆಲ್ಲುತ್ತವೆ. ತಂತ್ರಜ್ಞಾನಕ್ಕೆ ಮೀಸಲಾಗಿರುವ ವೆಬ್ ಸೈಟ್ ಗಳಲ್ಲಿ ಸಮಗ್ರ ಮಾಹಿತಿ ಕೂಡ ಇರುತ್ತದೆ. ಇವುಗಳ ಅಧ್ಯಯನದ ಮೂಲಕ ಪೂರ್ಣ ಮಾಹಿತಿ ಕಲೆ ಹಾಕಲು ಸಾಧ್ಯ.

ಪೈಪೋಟಿ ಸಂಸ್ಥೆಯ ವೆಬ್ ಸೈಟ್​ಗೆ ಲಿಂಕ್

ಪೈಪೋಟಿ ಸಂಸ್ಥೆಯ ವೆಬ್ ಸೈಟ್​​ನ್ನು ಪೂರ್ಣವಾಗಿ ಅವಲೋಕಿಸಬೇಕು. ಅತ್ಯಾಧುನಿಕ ಟೂಲ್ಸ್ ಅಂದರೆ ಒಪನ್ ಸೈಟ್ ಶೋಧಕ ಬಳಸಿ ಪೂರ್ಣ ಮಾಹಿತಿ ಪಡೆಯಲು ಸಾಧ್ಯ.

ಎರಡನೇ ಹಂತ - ಒಳಗಿರುವ ವ್ಯಕ್ತಿಗಳಿಂದ ಮಾಹಿತಿ

ಪ್ರತಿಯೊಂದು ಕ್ಷೇತ್ರದಲ್ಲೂ ನಂಬಿಕರ್ಹ ಮೂಲಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ಕ್ಷೇತ್ರ ಕೂಡ ಇದರಿಂದ ಹೊರತಾಗಿಲ್ಲ. ಪ್ರತಿಸ್ಪರ್ಧಿಯ ಕ್ಷೇತ್ರದಲ್ಲಿ ಕೂಡ ನಂಬಿಕಾರ್ಹ ವ್ಯಕ್ತಿಯ ಮೂಲಕ ಮಾಹಿತಿ ಕಲೆ ಹಾಕಬಹುದು. ಪ್ರತಿಸ್ಪರ್ಧಿಯ ಸಂಸ್ಥೆಯ ಸಿಬ್ಬಂದಿಯ ಸಂದರ್ಶನ ನಡೆಸಬಹುದು. ಒಂದೊಮ್ಮೆ ಇದು ಸದಾಚಾರ ವಿರುದ್ಧ ಅಂತ ಅನಿಸಿದ್ದರೆ ಇದನ್ನು ಬಿಟ್ಟು ಬಿಡಬಹುದು.

ಹೂಡಿಕೆದಾರರ ಪ್ರೆಸೆಂಟೇಷನ್ ...

ಪ್ರತಿಯೊಂದು ವಿನೂತನ ಯೋಜನಾ ಸಂಸ್ಥೆಗಳು ಬಂಡವಾಳ ಆಕರ್ಷಿಸುವ ಸಲುವಾಗಿ ಅತ್ಯಂತ ಆಕರ್ಷಣೀಯವಾದ ರೀತಿಯಲ್ಲಿ ಸಾಧನೆಗಳನ್ನು ಪ್ರಚುರ ಪಡಿಸುತ್ತವೆ. ಇದು ಮಾಹಿತಿಯ ಅಗರ. ಈ ಸಂಬಂಧ ಅಗತ್ಯ ಮಾಹಿತಿ ಕಲೆ ಹಾಕಿದರೆ ಪೂರ್ಣ ಚಿತ್ರಣ ದೊರೆಯಲು ಸಾಧ್ಯ. ಸ್ಲೈಡ್ ಶೇರ್ ಸೇರಿದಂತೆ ಹಲವು ತಂತ್ರಾಂಶಗಳು ಈ ಸಂದರ್ಭದಲ್ಲಿ ನೆರವಿಗೆ ಬರಲಿವೆ.

ಉತ್ಪನ್ನ ತರಬೇತಿ

ಪೈಪೋಟಿ ಸಂಸ್ಥೆಯ ಉತ್ಪನ್ನಗಳ ಮಾಹಿತಿ ಮತ್ತು ಅದು ತರಬೇತಿಗೆ ಅಳವಡಿಸಿರುವ ಸೂತ್ರಗಳ ಬಗ್ಗೆ ಕಣ್ಣಿಡಿ. ಇದರಿಂದ ನಿರೀಕ್ಷಿಸಿದ ಲಾಭ ಪಡೆಯಲು ಸಾಧ್ಯ.

ಮಾಹಿತಿ ಅಪ್ ಡೇಟ್

ಈ ಮೇಲೆ ಹೇಳಲಾದ ಎಲ್ಲ ಅಂಶಗಳು ಪ್ರತಿಸ್ಪರ್ಧಿಗಳ ತಂತ್ರ, ಮಾರಾಟ ಕೌಶಲ್ಯದ ಬಗ್ಗೆ ಬೆಳಕು ಚೆಲ್ಲಿವೆ. ಇನ್ನು ಮುಂದಿನ ಹಂತ ಅಪ್ ಡೇಟ್ ಆಗುವುದು. ಅಂದರೆ ಚಟುವಟಿಕೆ ಬಗ್ಗೆ ಮಾಹಿತಿ ಸಂಗ್ರಹಿಸುವುದು.

ಗೂಗಲ್ ಅಲರ್ಟ್ಸ್ ಅಳವಡಿಕೆ

ಗೂಗಲ್ ಅಲರ್ಟ್ಸ್ ತಂತ್ರಜ್ಞಾನ ಅಳವಡಿಸುವುದರ ಮೂಲಕ ಕಾಲ ಕಾಲಕ್ಕೆ ಪರಿಷ್ಕೃತ ಮಾಹಿತಿ ಪಡೆಯಲು ಸಾಧ್ಯ

ಸಾಮಾಜಿಕ ಜಾಲ ತಾಣಗಳ ನಿಗಾ

ಇದು ಸಾಮಾಜಿಕ ಜಾಲ ತಾಣಗಳ ಕಾಲ. ಪ್ರತಿಯೊಂದು ಸಂಸ್ಥೆಯೂ ತಮ್ಮ ಉತ್ಪನ್ನಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಪಡಿಸುತ್ತದೆ. ಇದನ್ನು ಸತತವಾಗಿ ಅವಲೋಕಿಸುವುದರ ಮೂಲಕ, ತಕ್ಷಣ ಮಾಹಿತಿ ಕಲೆ ಹಾಕಬಹುದು. ಅಲ್ಲದೆ ನಮ್ಮ ತಂತ್ರವನ್ನು ಕೂಡ ಬದಲಾಯಿಸಬಹುದು.

ಲೇಖಕರು : ಪ್ರದೀಪ್​ ಗೋಯಲ್​
ಅನುವಾದಕರು : ಎಸ್​.ಡಿ.