ಹಿಂದೂ ಮಹಾಸಾಗರದಲ್ಲಿರೋ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಾಗಿದೆ 'ಅಡಿಡಾಸ್' ಶೂ..

ಟೀಮ್ ವೈ.ಎಸ್.ಕನ್ನಡ 

0

'ಅಡಿಡಾಸ್' ವಿಶ್ವದಲ್ಲೇ ಜನಪ್ರಿಯವಾಗಿರುವ ಬ್ರಾಂಡ್. ಅಡಿಡಾಸ್ ಬೂಟುಗಳಿಗೆ ಭಾರೀ ಬೇಡಿಕೆಯೂ ಇದೆ. ಅಡಿಡಾಸ್ ಕಂಪನಿ ಈಗ ಅದ್ಭುತ ಪರಿಕಲ್ಪನೆಯೊಂದನ್ನು ಸಾಕಾರಗೊಳಿಸಿದೆ. ಹಿಂದೂ ಮಹಾಸಾಗರದಿಂದ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯಗಳಿಂದಲೇ ಸುಂದರ ಶೂಗಳನ್ನು ತಯಾರಿಸಿದೆ. ಈ ಯೋಜನೆಗೆ ಅಮೆರಿಕ ಮೂಲದ ಲಾಭರಹಿತ ಸಂಸ್ಥೆ 'ಪಾರ್ಲೆ ಫಾರ್ ದಿ ಓಶನ್ಸ್' ಸಾಥ್ ಕೊಟ್ಟಿದೆ. 'ಪಾರ್ಲೆ ಫಾರ್ ದಿ ಓಶನ್ಸ್' ಕಂಪನಿ ಸಮುದ್ರದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆಗಾಗಿ ಶ್ರಮಿಸುತ್ತಿದೆ. 'ಪಾರ್ಲೆ ಫಾರ್ ದಿ ಓಶನ್ಸ್' ಹಾಗೂ 'ಅಡಿಡಾಸ್' ಜೊತೆಯಾಗಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಶೂ ತಯಾರಿಸಿವೆ.

ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಈ ಬೂಟುಗಳ ಹೆಸರು 'UltraBOOST Uncaged Parley'. ಇಂತಹ 7000 ಸಾವಿರ ಬೂಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಒಂದು ಜೊತೆ ಬೂಟಿನ ಬೆಲೆ 220 ಡಾಲರ್. 2017ರ ವೇಳೆಗೆ ಇಂತಹ 1 ಮಿಲಿಯನ್ ಶೂಗಳನ್ನು ತಯಾರಿಸುವ ಗುರಿ 'ಅಡಿಡಾಸ್' ಕಂಪನಿಯ ಮುಂದಿದೆ. ಈ ಮೂಲಕ 11 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಬಹುದು.

ಈ ಶೂಗಳಿಗೆ ಬಳಕೆ ಮಾಡಿದ ಪ್ಲಾಸ್ಟಿಕ್​ಗಳೆಲ್ಲ ಹಿಂದೂ ಮಹಾಸಾಗರದಿಂದ ಸಂಗ್ರಹಿಸಿದ್ದು. ಅಳಿವಿನಂಚಿನಲ್ಲಿರುವ ಮಾಲ್ಡೀವ್ಸ್​ನ 1,192 ಹವಳ ದ್ವೀಪಗಳನ್ನು ಸುತ್ತುವರಿದಿರುವ ಹಿಂದೂ ಮಹಾಸಾಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ತುಂಬಿದೆ. ಅವುಗಳನ್ನೆಲ್ಲ ಸಂಗ್ರಹಿಸಿ ಶೂಗಳನ್ನು ತಯಾರಿಸಿರೋದು ವಿಶೇಷ. ಬೂಟಿನ ಶೇ.95ರಷ್ಟು ಮೇಲ್ಭಾಗ ಪ್ಲಾಸ್ಟಿಕ್​ನಿಂದ ತಯಾರಿಸಲ್ಪಟ್ಟಿದೆ. ಶೇ.5ರಷ್ಟು ಭಾಗ ಮಾತ್ರ ಮರುಬಳಕೆ ಮಾಡಿದ ಪಾಲಿಸ್ಟರ್​ನಿಂದ ತಯಾರಿಸಿದ್ದು. ಹೀಲ್, ಲಿನಿಂಗ್ಸ್, ಲೇಸ್ ಎಲ್ಲವನ್ನೂ ಬೇಡದ ವಸ್ತುಗಳಿಂದ್ಲೇ ಮಾಡಿರೋದು ವಿಶೇಷ. ಒಂದು ಜೊತೆ ಶೂ ತಯಾರಿಸಲು ಕಂಪನಿಗೆ 11 ಪ್ಲಾಸ್ಟಿಕ್ ಬಾಟಲಿಗಳು ಬೇಕಾಗುತ್ತವೆ.

ಪ್ರತಿವರ್ಷ ವಿಶ್ವದಾದ್ಯಂತ 500 ಬಿಲಿಯನ್​ನಿಂದ 1 ಟ್ರಿಲಿಯನ್ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸಿ ಬಿಸಾಡಲಾಗ್ತಿದೆ. ದುರಂತ ಅಂದ್ರೆ ಇವನ್ನೆಲ್ಲ ತಂದು ಸಮುದ್ರಕ್ಕೆ ಸುರಿಯಲಾಗ್ತಿದೆ. ಪರಿಣಾಮ ಪ್ಲಾಸ್ಟಿಕ್​ಗಳನ್ನು ತಿಂದು ಅಥವಾ ಅದರಲ್ಲಿ ಸಿಕ್ಕಿಹಾಕಿಕೊಂಡು ವರ್ಷಕ್ಕೆ 1,00,000ಕ್ಕೂ ಅಧಿಕ ತಿಮಿಂಗಿಲಗಳು, ಆಮೆಗಳು ಸೇರಿದಂತೆ ಹಲವು ಜಲಚರಗಳು ಸಾಯುತ್ತಿವೆ. ಈಗಾಗ್ಲೇ 100 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರ ಸೇರಿದೆ. ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಅವಶೇಷಗಳ ಪ್ರಮಾಣ ಪ್ರತಿ 3 ವರ್ಷಕ್ಕೆ ದುಪ್ಪಟ್ಟಾಗುತ್ತಿದೆ.

ನಿಸರ್ಗಕ್ಕೆ ಕುತ್ತು ತರುತ್ತಿರುವ ಜಾಗತಿಕ ವಿಪತ್ತುಗಳ ವಿರುದ್ಧ ಹೋರಾಡಲು ಅಡಿಡಾಸ್ ಮುಂದಾಗಿದೆ. ಈ ಪ್ರಯತ್ನದಲ್ಲಿ ಇಡೀ ಜಗತ್ತೇ ಕೈಜೋಡಿಸಬೇಕೆಂದು ಸಂಸ್ಥೆಯ ಆಶಯ. ಅಡಿಡಾಸ್ ಹುಟ್ಟುಹಾಕಿರುವ ಹೊಸ ಟ್ರೆಂಡ್ ಅನ್ನು ಬೇರೆ ಬೇರೆ ಕಂಪನಿಗಳು ಕೂಡ ಅಳವಡಿಸಿಕೊಂಡ್ರೆ ನಮ್ಮ ಪರಿಸರವನ್ನು ಕಾಪಾಡಿಕೊಳ್ಳಬಹುದು.   

ಇದನ್ನೂ ಓದಿ...

ವನ್ಯಜೀವಿಗಳ ಪಾಲಿನ ಸಂರಕ್ಷಕ- ಜೀವ ಸಂಕುಲಗಳನ್ನು ಕಾಪಾಡಲು ಪಾಠ ಮಾಡುವ ಶಿಕ್ಷಕ

ದೇಶದೆಲ್ಲೆಡೆ ನೋಟಿಗಾಗಿ ಪರದಾಟ-ಗುಜರಾತ್​ನ ಈ ಡಿಜಿಟಲ್ ಗ್ರಾಮದಲ್ಲಿ ಇಲ್ವೇ ಇಲ್ಲ ಕ್ಯಾಶ್ ಜಂಜಾಟ..!


Related Stories

Stories by YourStory Kannada