ಮಹಾನಗರ ಪ್ರದೇಶಗಳಲ್ಲಿ ಕಂಡುಬರುತ್ತಿದೆ ಪ್ರತ್ಯೇಕ ವಲಯ ಅನ್ ಮೆಟ್ರೋ ಗೈ ಸಂಸ್ಕೃತಿ- ವಲಸೆ ಬಂದವರಿಗೆ ಬ್ರಾಂಡೆಡ್ ನೆರವು

ಟೀಮ್​​ ವೈ.ಎಸ್​​. ಕನ್ನಡ

ಮಹಾನಗರ ಪ್ರದೇಶಗಳಲ್ಲಿ ಕಂಡುಬರುತ್ತಿದೆ ಪ್ರತ್ಯೇಕ ವಲಯ ಅನ್ ಮೆಟ್ರೋ ಗೈ ಸಂಸ್ಕೃತಿ- ವಲಸೆ ಬಂದವರಿಗೆ ಬ್ರಾಂಡೆಡ್ ನೆರವು

Tuesday December 15, 2015,

4 min Read

ದೇಶದ ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವಲ್ಲಿ ಕ್ಷಿಪ್ರ ನಗರೀಕರಣವು ಅತೀ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ದಿ ಮೆಕ್ ಕಿನ್ಸೇ ಗ್ಲೋಬಲ್ ಅಂದಾಜಿಸಿರುವ ಪ್ರಕಾರ 2030ರ ಸುಮಾರಿಗೆ ಶೇ.70ರಷ್ಟು ಭಾರತದ ಜಿಡಿಪಿಯಲ್ಲಿ ಶೇ.40ರಷ್ಟು ಮನೆಗಳ ನಿರ್ಮಾಣಕ್ಕೆ ವಿನಿಯೋಗವಾಗುವ ಸಾಧ್ಯತೆ ಇದೆ.

ಮಾರ್ಕೆಟಿಂಗ್ ದೃಷ್ಟಿಯಿಂದ ಹೇಳುವುದಾದರೆ ಕ್ಷಿಪ್ರ ನಗರೀಕರಣ ಬ್ರಾಂಡೆಡ್ ಮನಸ್ಥಿತಿಯ ಆಧಾರದಲ್ಲಿ ಬೆಳವಣಿಗೆ ಹೊಂದತೊಡಗಿದೆ. ಗ್ರಾಹಕರು ಬ್ರಾಂಡೆಡ್ ಅಭಿವೃದ್ಧಿಗಾಗಿ ಇರುವ ಅವಕಾಶಗಳನ್ನು ಉಯೋಗಿಸಿಕೊಳ್ಳುತ್ತಿದ್ದಾರೆ. ಕಳೆದೊಂದು ದಶಕದಿಂದ ಹಲವು ಗ್ರಾಹಕ ಸ್ನೇಹಿ ಉದ್ದಿಮೆಗಳು ಕಂಡುಬಂದಿವೆ. ಇದು ಅಂಥದ್ದೇ ಒಂದು ಅನ್ ಮೆಟ್ರೋ ಸಾಧಕನ ಕುರಿತಾದ ಲೇಖನ.

image


ವಾರಂಗಲ್‌ನಿಂದ ಬೆಂಗಳೂರಿಗೆ ಭವಿಷ್ಯ ಅರಸಿಕೊಂಡು ಬಂದ 23 ವರ್ಷದ ಮಹತ್ವಾಕಾಂಕ್ಷಿ ರಂಜಿತ್. ವಾರಂಗಲ್‌ನ ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿ ಮುಗಿಸಿದ ರಂಜಿತ್ ತನ್ನ ಇತರ ಸ್ನೇಹಿತರಂತೆ ಉದ್ಯೋಗವನ್ನರಸಿ ಬೆಂಗಳೂರಿನಂತಹ ದೊಡ್ಡ ಪಟ್ಟಣಕ್ಕೆ ಬಂದವರು. ಸಣ್ಣ ಐಟಿ ಕಂಪನಿಯೊಂದರಲ್ಲಿ ಉದ್ಯೋಗಪಡೆದ ರಂಜಿತ್ ತನ್ನ ತೆಲುಗು ಭಾಷಿಕ ಸ್ನೇಹಿತರೊಂದಿಗೆ ಆಂಧ್ರ ಬಾಯ್ಸ್ ಎನ್ನುವ ಪುರುಷರ ಪಿಜಿಯಲ್ಲಿ ಬದುಕಲಾರಂಭಿಸಿದ್ದರು. ರಂಜಿತ್ ಕೆಲಸ ಮಾಡುತ್ತಿದ್ದ ಸಂಸ್ಥೆ ಅಮೆರಿಕಾಕ್ಕೆ ಪ್ರಾಜೆಕ್ಟ್ ಮಾಡಿಕೊಡುವ ಕಾರಣ ಅವರ ಕೆಲಸ ರಾತ್ರಿಗಳಲ್ಲಿ. ಹಾಗಾಗಿ ಹಗಲು ರಂಜಿತ್ ವಿಶ್ರಾಂತಿಯಲ್ಲಿರುತ್ತಿದ್ದರು. ತಮ್ಮ ವಿರಾಮದ ಸಮಯವನ್ನು ಫೇಸ್‌ಬುಕ್‌ನಲ್ಲಿ ಸ್ನೇಹಿತರು, ಕುಟುಂಬಸ್ಥರೊಂದಿಗೆ ಚಾಟಿಂಗ್ ಮಾಡುವುದು, ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ತೆಲುಗು ಸಿನಿಮಾಗಳನ್ನು ನೋಡುವುದು ರಂಜಿತ್‌ರ ನೆಚ್ಚಿನ ಹವ್ಯಾಸ. ಮಹಾನಗರ ಯುವಕರಿಗೆ ಸಾಕಷ್ಟು ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ಕೊಡುತ್ತದೆ. ಹೀಗಾಗಿ ಬೆಂಗಳೂರಿನಂತಹ ವಾತಾವರಣ ರಂಜಿತ್‌ಗೆ ಬಹಳ ಇಷ್ಟವಾಗಿತ್ತು. ಆದರೂ ಒಂದು ರೀತಿಯ ಇಕ್ಕಟ್ಟಿನ ಹಾಗೂ ಏಕಾಂಗಿ ಭಾವ ಅವರನ್ನು ಕಾಡುತ್ತಿತ್ತು. ನಗರ ಸಮುದಾಯದ ಭಾಗವಾಗಲು ಇಚ್ಛಿಸುತ್ತಿದ್ದ ರಂಜಿತ್‌ಗೆ ಭಾಷೆಯ ತೊಡಕಿತ್ತು.

ರಂಜಿತ್‌ರಂತೆ ನಮ್ಮಲ್ಲಿ ಬಹುತೇಕರು ಬೇರೆ ಬೇರೆ ಭಾಗಗಳಿಂದ ಉದ್ಯೋಗವನ್ನರಸಿ ಮಹಾನಗರಗಳಿಗೆ ಬಂದವರಾಗಿದ್ದೇವೆ. ನಗರೀಕರಣ ಯುವ ಪದವೀಧರರಿಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿರುವ ಬೆನ್ನಲ್ಲೇ ನಗರ ಸಂಸ್ಕೃತಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಿದೆ. ಎರಡು ದಶಕಗಳ ಹಿಂದೆ ಸ್ಥಿತಿ ಹೀಗಿರಲಿಲ್ಲ. ಬಹುತೇಕ ಮಂದಿ ತಾವು ಹುಟ್ಟಿ ಬೆಳೆದ ಊರಿನಲ್ಲೇ ಸಣ್ಣಪುಟ್ಟ ಉದ್ಯೋಗಗಳನ್ನು ನಿರ್ವಹಿಸುತ್ತಿದ್ದರು. ಆರ್ಥಿಕ ಸ್ವಾತಂತ್ರ್ಯ ಹಾಗೂ ವಿಪುಲ ಅವಕಾಶಗಳು ಆಗ ಇರಲಿಲ್ಲ.

ಅನ್ ಮೆಟ್ರೋ ಗೈ ಅನ್ನುವುದು, ಇಂತಹ ವಲಸೆ ಬರುವ ಬೇರೆ ಬೇರೆ ಭಾಗಗಳ ಯುವಕರ ಬದುಕಿನ ಹಂತಗಳನ್ನು ಅಭ್ಯಸಿಸುವ ಮನಃಶಾಸ್ತ್ರೀಯ ಗ್ರಾಫ್. ಸಾಮಾಜಿಕ ಮಾಧ್ಯಮಗಳಾದ ಜಾಲತಾಣಗಳನ್ನು ಬಳಸುವ ಅವರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಂಶೋಧಿಸುವ ತಂತ್ರಜ್ಞಾನವನ್ನು ನೆಟ್ನೋಗ್ರಫಿ ಎಂದು ಕರೆಯುತ್ತಾರೆ. ಈ ಅವಲೋಕನದ ಅನ್ವಯ ಮುಖ್ಯವಾಗಿ 5 ಅಂಶಗಳ ಮೇಲೆ ಮಾರ್ಕೆಟಿಂಗ್ ನಡೆಸಿ ಅವರ ಅಗತ್ಯತೆಗಳನ್ನು ಪೂರೈಸಲಾಗುತ್ತದೆ.

ಅವರು ಯಾರು?: ತರುಣ, ವಿಭಾಗ, ಬೇರೆ ಊರುಗಳಿಂದ ಬಂದು ಮೆಟ್ರೋ ಪಟ್ಟಣದಲ್ಲಿ ಬದುಕುತ್ತಿರುವವರು, ಪದವೀಧರ ಹಾಗೂ ಮಹಾನಗರಗಳಲ್ಲಿ ಯಾವುದೋ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು.

ಅವರು ಏನನ್ನು ಕೊಳ್ಳುತ್ತಾರೆ/ ಬಳಸುತ್ತಾರೆ: ಬ್ರಾಂಡೆಡ್ ಉತ್ಪನ್ನಗಳು(ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಗಳಿಂದ), ಮೊಬೈಲ್ ಅಪ್ಲಿಕೇಶನ್ಸ್(ಮನೋರಂಜನೆಗೆ, ಸಂವಹನಕ್ಕೆ, ಮಾಹಿತಿಗಾಗಿ ಹಾಗೂ ವ್ಯವಹಾರಕ್ಕಾಗಿ), ಬೈಕ್, ಪ್ರಯಾಣ ಸೇವೆಗಳು(ಇಂಟರ್ ಮತ್ತು ಇಂಟ್ರಾ ಸಿಟಿ), ಆರ್ಥಿಕ ಸೇವೆಗಳು(ಬ್ಯಾಂಕಿಂಗ್, ಲೋನ್,ಕ್ರೆಡಿಟ್ ಕಾರ್ಡ್) ಹಾಗೂ ಗೃಹಬಳಕೆಗೆ ಸಂಬಂಧಿಸಿದ್ದು(ಎಫ್‌ಎಂಸಿಜಿ, ಸೇವೆಗಳು) ಇತ್ಯಾದಿ.

ಅವರು ಹೊರಜಗತ್ತಿನೊಂದಿಗೆ ಹೇಗೆ ಸಂಪರ್ಕಿಸುತ್ತಾರೆ(ಭಾಷೆ ಹಾಗೂ ನಡತೆ): ಬೇರೆ ರಾಜ್ಯಗಳಿಂದ ತಮಗೆ ಪರಿಚಯವಿಲ್ಲದ ಮಹಾನಗರಗಳಿಗೆ ಭೇಟಿಕೊಟ್ಟ ಯುವಕರು ಅಲ್ಲಿನ ವಾತಾವರಣ ಹಾಗೂ ಸಾಂಸ್ಕೃತಿಕ ಪರಿಸರದೊಂದಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಮತ್ತು ಇಲ್ಲಿ ಅವರ ಭಾಷೆ ಹಾಗೂ ವರ್ತನೆ ಹೇಗಿರುತ್ತವೆ ಎನ್ನುವುದನ್ನು ಅವಲೋಕಿಸಬೇಕು. ಪ್ರಾದೇಶಿಕ ಭಾಷೆ ಹಾಗೂ ಪ್ರಾದೇಶಿಕ ನಡವಳಿಕೆಗಳನ್ನು ಕಲಿಯುವಲ್ಲಿ ಸಾಮಾಜಿಕ ಜಾಲತಾಣಗಳ ನೆರವು, ಉಡುಗೊರೆಗಳು, ಕವಿತೆಗಳು ಮತ್ತು ಚಲನಚಿತ್ರ ಇತ್ಯಾದಿಗಳ ಪಾತ್ರ ಮಹತ್ತರವಾಗಿರುತ್ತವೆ.

ವ್ಯಕ್ತಿತ್ವ ಪ್ರತಿನಿಧಿಸಿಕೊಳ್ಳುವುದು: ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಕಿಕೊಳ್ಳುವ ಪೋಸ್ಟ್‌ ಗಳು, ಇಮೇಜ್‌ಗಳು, ಶೇರು ಮಾಡುವ ವೀಡಿಯೋಗಳು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಅವರ ಚಟುವಟಿಕೆ, ಅವರ ಮನಃಸ್ಥಿತಿ ಹಾಗೂ ಅಭಿರುಚಿಗಳನ್ನು ತೋರಿಸುವಂಥದ್ದಾಗಿರುತ್ತದೆ.

ಸ್ವಯಂ ವ್ಯಕ್ತಿತ್ವ 1: ಸಮಾಧಾನಚಿತ್ತ ಮತ್ತು ಟ್ರೆಂಡೀ

ನಗರಗಳ ಫ್ಯಾಶನ್ ಜಗತ್ತಿಗೆ ಸಂಬಂಧಿಸಿದಂತೆ ಅವರು ಆತ್ಮವಿಶ್ವಾಸದಿಂದ ಬದುಕಬೇಕಾಗುತ್ತದೆ. ಕಣ್ಣಿಗೆ ಕಡುಕಪ್ಪು ಬಣ್ಣದ ಗಾಗಲ್ಸ್ ತೊಡುವುದು, ಬೈಕ್‌ಗಳಲ್ಲಿ ಸುತ್ತುವುದು, ನಡುರಾತ್ರಿಯ ಪಬ್ ಪಾರ್ಟಿಗಳು, ಮಹಿಳಾ ಸಹೋದ್ಯೋಗಿಗಳೊಂದಿಗೆ ಡೇಟಿಂಗ್, ವೀಕೆಂಡ್ ಜಾಲಿಟ್ರಿಪ್‌ಗಳು, ದೊಡ್ಡ ದೊಡ್ಡ ಕಟ್ಟಡಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವುದು, ಯಾವುದೋ ದೇಶದ ಸುಂದರ ಚಿತ್ರಗಳನ್ನು ಟ್ಯಾಗ್ ಮಾಡುವುದು ಇತ್ಯಾದಿ.

ಸ್ವಯಂ ವ್ಯಕ್ತಿತ್ವ 2: ಬದುಕಿಗಾಗಿ ಹೋರಾಡುವವರು ಆದರೆ ಸ್ಫೂರ್ತಿದಾಯಕರು

ತಾವು ಪದೇ ಪದೇ ನೆನೆಸಿಕೊಳ್ಳುವವರ ಬಗ್ಗೆ ತಮ್ಮ ವಾಲ್‌ನಲ್ಲಿ ಪೋಸ್ಟ್ ಮಾಡುವವರು(ಮುಖ್ಯವಾಗಿ ತಾಯಿ), ಸಹಕಾರ ನೀಡದ ಬಾಸ್‌ಗಳ ವಿರುದ್ಧ ತಿರುಗಿ ಬೀಳುವವರು, ವಿಶೇಷವಾದವರ ಬಗ್ಗೆ ವರ್ಣಿಸುವವರು, ತಮ್ಮ ಹಣಕಾಸಿನ ತೊಂದರೆಗಳ ಬಗ್ಗೆ ಮುಕ್ತವಾಗಿ ಪೋಸ್ಟ್ ಮಾಡುವವರು ಇತ್ಯಾದಿ. ಅವರು ಕೆಲವು ಸ್ಫೂರ್ತಿದಾಯಕ ಪದ್ಯಗಳನ್ನು ಪೋಸ್ಟ್ ಮಾಡುತ್ತಾರೆ. ಆಧ್ಯಾತ್ಮಕ್ಕೆ ಸಂಬಂಧಿಸಿದ ಉಡುಗೊರೆಗಳು ಹಾಗೂ ಧಾರ್ಮಿಕ ನುಡಿಮುತ್ತುಗಳನ್ನು ಶೇರ್ ಮಾಡುತ್ತಾರೆ. ಮುಖ್ಯವಾಗಿ ನಗರಗಳಲ್ಲಿ ಬೆಳೆದವರು, ಮನೆಯಿಂದ ದೂರ ಉಳಿದು ಬದುಕುತ್ತಿರುವವರು ತಮ್ಮ ಮಾನಸಿಕ ದೌರ್ಬಲ್ಯವನ್ನು ತೆರೆದಿಡುತ್ತಾರೆ ಹಾಗೂ ಬದುಕಿಗಾಗಿ ತಾವು ನಡೆಸುತ್ತಿರುವ ಹೋರಾಟವನ್ನು ಹೇಳಿಕೊಳ್ಳುವವರಾಗಿರುತ್ತಾರೆ. ಇದು ಅವರ ಸ್ವಯಂ ವ್ಯಕ್ತಿತ್ವವನ್ನು ಬದಲಾಯಿಸಬಹುದಾದ ಆಸಕ್ತಿಕರ ಸವಾಲು. ಅವರನ್ನು ಗಮನದಲ್ಲಿಟ್ಟುಕೊಂಡು ಅವರ ಮನವೊಲಿಸಿ ಬ್ರಾಂಡೆಡ್ ಉತ್ಪನ್ನಗಳತ್ತ ಅವರನ್ನು ಸೆಳೆಯಬಹುದು.

image


ಬ್ರಾಂಡ್‌ಗಳ ಪಾತ್ರ: ಅವರ ಸ್ಥಿತಿಗತಿಗನುಗುಣವಾಗಿ ಎರಡು ವಿಧದಲ್ಲಿ ಬ್ರಾಂಡಿಂಗ್ ಮುಖ್ಯವಾಗುತ್ತದೆ.

ಸಮೂಹ ನಗರ ಐಕಾನ್‌ಗಳು: ನಗರ ಸಮುದಾಯದ ಬದುಕಿನ ಮೌಲ್ಯ

ಬ್ರಾಂಡ್‌ಗಳು ನಗರ ಬದುಕಿನ ಸೂಚಕಗಳು. ಅನ್ ಮೆಟ್ರೋ ಗೈ ಲೆವಿಸ್ ಬ್ರಾಂಡ್ ಖರೀದಿಸುತ್ತಾನೆ, ರೇಬಾನ್ ಗಾಗಲ್ಸ್ ತೊಡುತ್ತಾನೆ, ಕೋಕ್ ಕುಡಿಯುತ್ತಾನೆ ಹಾಗೂ ಐಸಿಐಸಿಐ ಬ್ಯಾಂಕ್‌ನೊಂದಿಗೆ ಮಾತ್ರ ವ್ಯವಹರಿಸುತ್ತಾನೆ. ದೊಡ್ಡ ಬ್ರಾಂಡ್‌ಗಳು ನಗರದ ಯುವಕರನ್ನು ಅತಿಯಾಗಿ ಆಕರ್ಷಿಸುತ್ತವೆ. ಸಿಟಿ ಬದುಕು ಎಂದರೆ ಬ್ರಾಂಡೆಡ್ ಉತ್ಪನ್ನಗಳೊಂದಿಗೆ ಸಂಸಾರ ಎಂಬ ಮಾತೇ ಇದೆ. ಅವರು ಹೊಸ ಬ್ರಾಂಡ್‌ಗಳನ್ನು ಉಪಭೋಗಿಸಲು ಸಿದ್ಧರಿರುವುದಿಲ್ಲ.

ಹೊಸ ಪರಿಹಾರಗಳನ್ನು ಒದಗಿಸುವವರು: ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಬದುಕುವವರಿಗೆ ಜೀವನವನ್ನು ಸರಳೀಕರಿಸುವ ಪ್ರಯತ್ನ

ಬೃಹತ್ ನಗರಗಳಲ್ಲಿ ಬದುಕುವ ಅನ್ ಮೆಟ್ರೋ ಗೈ ಸಮುದಾಯದವರಿಗೆ ಈ ಬ್ರಾಂಡ್‌ಗಳು ನೆರವಾಗುತ್ತವೆ. ಮನೆಯಲ್ಲಿ ಮಾಡಿದ ಅಡಿಗೆಯಂತಹ ಗುಣಮಟ್ಟದಂತಹ ಆಹಾರ, ತಮ್ಮ ಬಜೆಟ್ ಒಳಗೆ ಬದುಕುವ ಪ್ರಯತ್ನ, ವೀಕೆಂಡ್ ಕಳೆಯಲು ಸರಳ ಹಾಗೂ ಸುಲಭ ವೆಚ್ಚದ ಸ್ಥಳಗಳನ್ನು ಹುಡುಕಿಕೊಡುವುದು ಮುಂತಾದ ಸೌಕರ್ಯಗಳನ್ನು ಕಲ್ಪಿಸಿಕೊಡುವ ಮೊಬೈಲ್ ಆ್ಯಪ್ ಈ ವರ್ಗದ ಗ್ರಾಹಕರಿಗೆ ನೆರವಾಗುತ್ತಿದೆ.

ಅನ್ ಮೆಟ್ರೋ ಗೈಗೆ ಲಭ್ಯವಿರದ ಮಾಹಿತಿಗಳನ್ನು ಒದಗಿಸಿ ನೆರವಾಗಲು ಈ ಮೊಬೈಲ್ ಆ್ಯಪ್‌ಗಳು ಸಾಕಷ್ಟು ನೆರವಾಗುತ್ತವೆ.

ಸಾರಾಂಶ

ಅನ್‌ಮೆಟ್ರೋ ಗೈ ಅನ್ನುವ ಗ್ರಾಹಕ ವಲಯವನ್ನು ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ನಗರದ ಪ್ರತ್ಯೇಕ ಸಮುದಾಯ ಎಂದೇ ಗುರುತಿಸಬಹುದು. ಅವರು ಸಮೂಹ ನಗರವಾಸಿಗಳೊಂದಿಗೆ ಬದುಕುತ್ತಾರಾದರೂ ತಮ್ಮ ಚೌಕಟ್ಟಿನೊಳಗೆ ಯೋಚಿಸುತ್ತಾರೆ. ಅವರು ಸದಾ ಅವಕಾಶಗಳನ್ನು ಹುಡುಕುತ್ತಿರುತ್ತಾರೆ, ತಮ್ಮ ಅಸ್ತಿತ್ವದ ಅನ್ವೇಷಣೆಯಲ್ಲಿರುತ್ತಾರೆ, ಬ್ರಾಂಡೆಡ್ ಉತ್ಪನ್ನಗಳ ಮೇಲೆ ಮೋಹ ಬೆಳೆಸಿಕೊಂಡಿರುತ್ತಾರೆ.

ಈ ವಲಯದಲ್ಲಿ ಬದುಕುವ ಅನ್‌ಮೆಟ್ರೋ ಗೈ ಅಥವಾ ಪರವೂರಿನಿಂದ ಮೆಟ್ರೋ ಸಿಟಿಗೆ ಬಂದು ನೆಲೆಸುವ ಯುವ ಸಮುದಾಯದ ನಂಬಿಕೆ ಹಾಗೂ ಜೀವನ ಶೈಲಿಯನ್ನು ಗೌರವಿಸಿ ಅವರಿಗೆ ನೆರವಾಗುವ ಕೆಲಸವಾಗಬೇಕು. ಬ್ರಾಂಡ್ ಅಥವಾ ಇನ್ಯಾವುದೋ ಜೀವನ ಶೈಲಿಯೇ ಅವರ ಮತ್ತು ಸುತ್ತಮುತ್ತಲಿನ ಸಮಾಜದ ಸಂವಹನದ ಭಾಷೆಯಾಗಿರುತ್ತದೆ. ಹಾಗಾಗಿ ಈ ಭಾಷೆಯ ವ್ಯವಹಾರಕ್ಕಾಗಿ ಅವರಿಗೆ ನೆರವು ನೀಡುವ ಜೊತೆಗೆ ಸರಳ ಅವಕಾಶಗಳನ್ನು ಕಲ್ಪಿಸಬೇಕು.


ಲೇಖಕರು: ರಿನಿ ದತ್ತ

ಅನುವಾದಕರು: ವಿಶ್ವಾಸ್​​