ಅಮೆರಿಕ ಆಯ್ತು.. ಈಗ ಸಿಂಗಪೂರದ ಸರದಿ- ಭಾರತೀಯ ಐಟಿ ಉದ್ಯೋಗಿಗಳ ವೀಸಾಕ್ಕೆ ಬ್ರೇಕ್

ಟೀಮ್​ ವೈ.ಎಸ್​. ಕನ್ನಡ

1

ಭಾರತದ ಐಟಿ ಉದ್ಯೋಗಿಗಳ ಗತಿಯೇನು..? ಭಾರತದ ಐಟಿ ಇಂಡಸ್ಟ್ರಿಯ ಭವಿಷ್ಯವೇನು..? ಇಂತಹ ಪ್ರಶ್ನೆಗಳು ದಿನದಿಂದ ದಿನಕ್ಕೆ ಬೆಟ್ಟದಷ್ಟು ದೊಡ್ಡದಾಗಿ ಬೆಳೆಯುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಅಮೆರಿಕ ತನ್ನ ವೀಸಾ ನೀತಿಯನ್ನು ಬದಲಿಸಿದೆ. ಯು.ಎಸ್. ಎಂಟ್ರಿ ಲೆವೆಲ್ ಐಟಿ ಉದ್ಯೋಗಿಗಳಿಗೆ H-1B ವೀಸಾ ನೀಡಲು ನಿರಾಕರಿಸಿದ ಬೆನ್ನಲ್ಲೇ ಸಿಂಗಪೂರ ಹೊಸ ಶಾಕ್ ನೀಡಿದೆ. ಕಾಂಪ್ರೆಹನ್ಸಿವ್ ಎಕಾನಮಿಕ್ ಕೊ-ಆಪರೇಷನ್ ಅಗ್ರಿಮೆಂಟ್ ಪ್ರಕಾರ, ಟ್ರೇಡ್ ಪಾಕ್ಟ್ ಕಾಯ್ದೆ ಉಲ್ಲಂಘನೆಯಾಗುತ್ತಿರುವುದನ್ನು ಮನಗಂಡು, ಹೊಸ ಐಟಿ ಉದ್ಯೋಗಿಗಳಿಗೆ ವೀಸಾ ನೀಡುವ ಪ್ರಕ್ರಿಯೆಗೆ ತಡೆಯೊಡ್ಡಿದೆ.

ಸಿಂಗಪೂರದಲ್ಲಿ ಭಾರತದ ಹಲವು ಐಟಿ ಕಂಪನಿಗಳಿವೆ. ಆ ಕಂಪನಿಗಳು ತಮ್ಮ ಬೇಡಿಕೆ ಅನುಗುಣವಾಗಿ ಸ್ಥಳೀಯರನ್ನೇ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸರಕಾರ ಸಲಹೆ ನೀಡಿದೆ. ವಿದೇಶದಿಂದ ಉದ್ಯೋಗಿಗಳನ್ನು ಕರೆತರುವುದಕ್ಕೆ ಸದ್ಯಕ್ಕೆ ತಡೆಯೊಡ್ಡಿದೆ. ಸಿಂಗಪೂರದಲ್ಲಿ HCL, TCS, ಇನ್ಫೋಸಿಸ್, ವಿಪ್ರೊ, ಕಾಗ್ನಿಝಂಟ್ ಮತ್ತು ಎಲ್&ಟಿ ಸೇರಿದಂತೆ ಹಲವು ಕಂಪನಿಗಳಿವೆ.

“ ಕಳೆದ ಕೆಲವು ವರ್ಷಗಳಿಂದ ವಿದೇಶಿ ಉದ್ಯೋಗಿಗಳಿಗೆ ವೀಸಾ ಸಮಸ್ಯೆ ಆಗುತ್ತಿದೆ. 2016ರಿಂದ ಈ ಸಮಸ್ಯೆ ದ್ವಿಗುಣಗೊಂಡಿದೆ. ಭಾರತೀಯ ಐಟಿ ಕಂಪನಿಗಳಿಗೆ ಸರಕಾರ ಸ್ಥಳೀಯ ಉದ್ಯೋಗಿಗಳನ್ನು ನೇಮಕ ಮಾಡುವಂತೆ ಸೂಚಿಸಿದೆ. ”
- ಆರ್. ಚಂದ್ರಶೇಖರ್, ಅಧ್ಯಕ್ಷರು Nasscom

ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಈಗಾಗಲೇ ಕೇಂದ್ರ ಸರಕಾರಕ್ಕೆ ಸಾಕಷ್ಟು ಮಾಹಿತಿ ಇದೆ. ಅಷ್ಟೇ ಅಲ್ಲ ಆ ದೇಶಗಳ ಜೊತೆ ವಿವಿಧ ವ್ಯವಹಾರಗಳಿಗೆ ಕಡಿವಾಣ ಹಾಕುವ ಸಾಧ್ಯತೆಯೂ ಇದೆ. ಸಿಂಗಪೂರ ಸರಕಾರ ಎಕಾನಮಿಕ್ ಕೊ-ಆಪರೇಷನ್ ಅಗ್ರಿಮೆಂಟ್ ಕಾಯ್ದೆ ಉಲ್ಲಂಘನೆ ಆಗಿದ್ದಕ್ಕೆ ವೀಸಾ ಕ್ರಮವನ್ನು ತಡೆಹಿಡಿದ್ದೇವೆ ಎಂದು ಸಮಜಾಯಿಷಿಕೆ ನೀಡುತ್ತಿದೆ.

ಕಳೆದ ಕೆಲ ದಿನಗಳ ಹಿಂದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ H-1B ವೀಸಾ ನೀತಿಯನ್ನು ಬದಲಿಸಿದ್ದರು. ಇದು ಎಂಟ್ರಿ ಲೆವೆಲ್ ಐಟಿ ಉದ್ಯೋಗಿಗಳ ಪಾಲಿಗೆ ಮಾರಕವಾಗಿತ್ತು. ಮಾರ್ಚ್ 31ರ ಆದೇಶದ ಪ್ರಕಾರ H-1B ವೀಸಾ ನೀತಿ ಬದಲಾಗಿತ್ತು.  ಇದು ಎಂಟ್ರಿ ಲೆವೆಲ್ ಸಾಫ್ಟ್ ವೇರ್ ಪ್ರೋಗ್ರಾಮರ್ಸ್ ಮತ್ತು ಐಟಿ ಕಂಪನಿಗಳ ವೀಸಾ ನೀತಿಗೆ ಕಡಿವಾಣ ಹಾಕಿದೆ.

ಒಟ್ಟಿನಲ್ಲಿ ಭಾರತದ ಐಟಿ ಉದ್ಯೋಗಿಗಳು ಅಮೆರಿಕಾ ಹಾಗೂ ಸಿಂಗಪೂರದಿಂದ ವಾಪಾಸಾಗುವ ಸ್ಥಿತಿ ಎದುರಾಗಿರುವುದು ಸತ್ಯ. ಆದ್ರೆ ಕೇಂದ್ರ ಸರಕಾರ ಯಾವ ಕ್ರಮ ಕೈಗೊಳ್ಳುತ್ತೆ..? ಭಾರತದಲ್ಲಿನ ಐಟಿ ಕಂಪನಿಗಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತವೆ ಅನ್ನುವ ಬಗ್ಗೆ ಕುತೂಹಲ ಹೆಚ್ಚಿದೆ.

ಇದನ್ನು ಓದಿ:

1. ಮುಂಬೈನಿಂದ ಆಸ್ಕರ್​ವರೆಗೆ ಸನ್ನಿ ಪವಾರ್ – 8 ವರ್ಷದ ಪುಟಾಣಿಯ ಸಾಧನೆಯ ಹಾದಿ

2. ಅಭಿವೃದ್ಧಿ ಮಂತ್ರಕ್ಕೆ ಟೂರಿಸಂನ ಮಾಂತ್ರಿಕ ಸ್ಪರ್ಶ

3. ಎಲ್ಲರಿಗೂ ಸಿಗಬೇಕಿದೆ ಸೂರು- ಗುರಿ ಮುಟ್ಟಲು ಕೇಂದ್ರ ಸರಕಾರ ಮಾಡಿದೆ ನೂರು ಯೋಜನೆ