ಲೋಕ್ ಕ್ಯಾಪಿಟಲ್‍ನಿಂದ ಲೋಕ ಕಲ್ಯಾಣ

ಟೀಮ್​​ ವೈ.ಎಸ್​​.ಕನ್ನಡ

ಲೋಕ್ ಕ್ಯಾಪಿಟಲ್‍ನಿಂದ ಲೋಕ ಕಲ್ಯಾಣ

Wednesday November 25, 2015,

2 min Read

ಇಂಪ್ಯಾಕ್ಟ್ ಇನ್ವೆಸ್ಟ್​​​​ಮೆಂಟ್ ಫಂಡ್ ಲೋಕ್ ಕ್ಯಾಪಿಟಲ್, 2009ರಲ್ಲಿ ತನ್ನ ಫಂಡ್ 1ರಿಂದ ಬಂಡವಾಳ ಹೂಡಿಕೆ ಮಾಡಿದ್ದ ಭಾರತದ ಮಟ್ಟ ಮೊದಲ ಗ್ರಾಮೀಣ ಬಿಪಿಓ ರೂರಲ್‍ಶೋರ್ಸ್‍ನಿಂದ (RuralShores) ನಿರ್ಗಮಿಸುವ ಘೋಷಣೆ ಮಾಡಿತು. ಆದ್ರೆ ಅಷ್ಟರಲ್ಲಾಗಲೇ ರೂರಲ್‍ ಶೋರ್ಸ್‍ನಲ್ಲಿ ಮಾಡಿದ್ದ ಹೂಡಿಕೆ ಲಾಭದಾಯಕವಾಗಿತ್ತು. ಯಾಕಂದ್ರೆ ಅವರು ಹೂಡಿದ್ದ ಬಂಡವಾಳಕ್ಕಿಂತ ಆರು ಪಟ್ಟು ಹೆಚ್ಚು ಲಾಭ ಅವರಿಗೆ ದೊರಕಿತ್ತು.

ಆರ್ಥಿಕವಾಗಿ ಹೆಚ್ಚು ಸಾಮರ್ಥ್ಯವುಳ್ಳ ಹಾಗೂ ಹೂಡಿಕೆಗೆ ವಿಶಾಲವಾದ ಅವಕಾಶಗಳುಳ್ಳ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯಗಳ ಇತರೆ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿರುವ ಲೋಕ್ ಕ್ಯಾಪಿಟಲ್ ಕೆಳ ಹಂತದಲ್ಲಿರುವ ಹಾಗೂ ಕಡಿಮೆ ಆದಾಯದವರಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಲೋಕ್ ಕ್ಯಾಪಿಟಲ್ ಫಂಡ್ 1 ಅನ್ನು 2004ರಲ್ಲಿ ಸ್ಥಾಪಿಸಲಾಯ್ತು. ಆಗ ಪ್ರಮುಖವಾಗಿ ಕಿರು ಹಣಕಾಸು ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಲಾಗುತ್ತಿತ್ತು. ಅದು ಅವರಿಗೆ ಕಡಿಮೆ ಆದಾಯ ಗಳಿಸುವವರ ಜೊತೆಯೇ ಕೆಲಸ ಮಾಡುವ ಅವಕಾಶ ಒದಗಿಸಿತು. ಈ ಅನುಭವಗಳು ಅವರಿಗೆ ಸಣ್ಣ ಸಾಲದಾರರು ಮಾತ್ರವಲ್ಲ, ಅವರೊಂದಿಗೆ ಇನ್ನೂ ಹೆಚ್ಚಿನ ಕ್ಷೇತ್ರಗಳತ್ತ ಗಮನ ಹರಿಸುವವಂತೆ ಮಾಡಿತು. ಇದೇ ಅವರು ರೂರಲ್‍ಶೋರ್ಸ್ ಮೂಲಕ ಗ್ರಾಮೀಣ ಬಿಪಿಒಗಳಿಗೂ ಲಗ್ಗೆ ಹಾಕುವಂತೆ ಮಾಡಿತು.

image


ರೂರಲ್‍ಶೋರ್ಸ್ ಪ್ರಮುಖಾಂಶಗಳು

• ಉದ್ಯಮಿ ಮುರಳಿ ಉಳ್ಳಗಂಟಿ 2008ರ ಮೇನಲ್ಲಿ ರೂರಲ್‍ಶೋರ್ಸ್ ಪ್ರಾರಂಭಿಸಿದ್ರು

• ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಿ, ನಗರ ಪ್ರದೇಶಗಳಿಗೆ ವಲಸೆ ತಪ್ಪಿಸುವುದು ಇದರ ಉದ್ದೇಶ

• ಗ್ರಾಮೀಣ ಯುವಕರ ನೈಪುಣ್ಯತೆಗಳನ್ನು ಸುಧಾರಿಸಲು, ಆದಾಯಮಟ್ಟವನ್ನು ವೃದ್ಧಿಸುವ ಗುರಿ

• ಸದ್ಯ ಭಾರತದ ವಿವಿಧ ಭಾಗಗಳಲ್ಲಿರುವ 18 ವಿತರಣಾ ಕೇಂದ್ರಗಳಲ್ಲಿ 2500ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಸೃಷ್ಟಿ

• 2013ರಲ್ಲಿ 31.50 ಕೋಟಿ ರೂಪಾಯಿಯಷ್ಟು ಆದಾಯ ಗಳಿಸಲಾಗಿದೆ

• 45% ಶೇಕಡಾ ರೂರಲ್‍ಶೋರ್ಸ್ ಉದ್ಯೋಗಿಗಳು ಮಹಿಳೆಯರಾಗಿದ್ದಾರೆ

• ಇವರೊಂದಿಗೆ ಕೆಲಸಕ್ಕೆ ಸೇರಿದ್ರೆ, ಕುಟುಂಬವೊಂದರ ಆದಾಯ ಶೇಕಡಾ 100%ರಷ್ಟು ಹೆಚ್ಚಾಗುತ್ತಿದೆ. ಈ ಮೂಲಕ ಅವರು ಶೇಕಡಾ 20%ರಷ್ಟು ಉಳಿತಾಯ ಮಾಡಬಹುದು.

• ಬಿಪಿಒ ಸೇವೆಯಲ್ಲಿ ಕಸ್ಟಮರ್ ಕೇರ್ ಮತ್ತು ವೇತನದಾರರ ನಿರ್ವಹಣೆಯಲ್ಲಿ ವೈವಿಧ್ಯತೆ ರೂಢಿಸಿಕೊಳ್ಳಲಾಗಿದೆ

• ಪ್ರಮುಖ ಐಟಿ ಮತ್ತು ಟೆಲಿಕಾಂ ಕಂಪನಿಗಳು ಹಾಗೂ ಭಾರತೀಯ ಸರ್ಕಾರ ಸೇರಿದಂತೆ ಈಗ 24 ಗ್ರಾಹಕರಿದ್ದಾರೆ

• 2025ರ ಒಳಗೆ ಭಾರತದ ಎಲ್ಲಾ ಭಾಗಗಳಲ್ಲೂ 500 ಗ್ರಾಮೀಣ ಕೇಂದ್ರಗಳನ್ನು ಸ್ಥಾಪಿಸಿ 1 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಯುವಕ/ ಯುವತಿಯರಿಗೆ ಉದ್ಯೋಗ ನೀಡುವ ಗುರಿ

ರೂರಲ್‍ಶೋರ್ಸ್‍ನಿಂದ ನಿರ್ಗಮನದ ಘೋಷಣೆ ಮಾಡಿದ ಬಳಿಕ ಲೋಕ್ ಕ್ಯಾಪಿಟಲ್‍ನ ವ್ಯವಸ್ಥಾಪಕ ಪಾಲುದಾರ ವೆಂಕಿ ನಟರಾಜನ್, ‘ಸಣ್ಣಸಾಲದಾರರನ್ನೂ ಮೀರಿ ಗ್ರಾಮೀಣ ಪ್ರದೇಶದಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡಲು ರೂರಲ್‍ಶೋರ್ಸ್, ಲೋಕ್ ಕ್ಯಾಪಿಟಲ್‍ಗೆ ಒಂದೊಳ್ಳೆ ಅವಕಾಶ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಈ ಉದ್ಯಮ ಮಾದರಿಯ ಸಾಮಥ್ರ್ಯ ನನಗೆ ಪ್ರಾರಂಭದಲ್ಲೇ ಮನವರಿಕೆ ಮಾಡಿಕೊಟ್ಟಿತು. ಕಡಿಮೆ ಆದಾಯ ಮಟ್ಟದವರಿಗೆ ಒಂದೊಳ್ಳೆ ಜೀವನೋಪಾಯ ನೀಡುವಲ್ಲಿ ರೂರಲ್‍ಶೋರ್ಸ್ ಪರಿಣಾಮಕಾರಿಯಾಗಿದೆ. ಇದೇ ಮಾದರಿಯನ್ನು ಬೇರೆ ಕ್ಷೇತ್ರ/ ವಲಯಗಳಲ್ಲೂ ಉಪಯೋಗಿಸಿಕೊಳ್ಳಬಹುದು. ಆ ಮೂಲಕ ಅಂತ್ಯವಿಲ್ಲದ ಅವಕಾಶಗಳನ್ನು ಸೃಷ್ಟಿಸಬಹುದು.’ ಅಂತ ರೂರಲ್‍ಶೋರ್ಸ್‍ನಲ್ಲಿ ತಮಗಾದ ಅನುಭವ ಮತ್ತು ಅದರ ಸಾಮಥ್ರ್ಯಗಳನ್ನು ಬಿಚ್ಚಿಡುತ್ತಾರೆ.

ಹಾಗಂತ ಲೋಕ್ ಕ್ಯಾಪಿಟಲ್, ರೂರಲ್‍ಶೋರ್ಸ್‍ನಿಂದ ಸಂಪೂರ್ಣವಾಗಿ ತನ್ನ ಸಂಬಂಧ ಕಡಿದುಕೊಂಡಿದೆ ಅಂತಲ್ಲ. ಬದಲಿಗೆ 2011ರಲ್ಲಿ ತಾನೇ ಸ್ಥಾಪಿಸಿದ ಫಂಡ್ 2ನಿಂದ ಈಗಲೂ ರೂರಲ್‍ಶೋರ್ಸ್‍ನಲ್ಲಿ ಬಂಡವಾಳ ಹೂಡಿದೆ.

ರಾಜೀವ್ ಬಿ ಲಾಲ್ 2000ರಲ್ಲಿ ರಾಕ್‍ಫೆಲ್ಲರ್ ಫೌಂಡೇಶನ್‍ನ ಸಹಾಯದೊಂದಿಗೆ ಲೋಕ್ ಕ್ಯಾಪಿಟಲ್‍ಅನ್ನು ಪ್ರಾರಂಭಿಸಿದ್ರು. ಡೊನಾಲ್ಡ್ ಪೆಕ್ ಮತ್ತು ವಿಶಾಲ್ ಮೆಹ್ತಾ ಇದರ ಸಹ ಸಂಸ್ಥಾಪಕರು. ಸದ್ಯ ಇವರು 90 ಮಿಲಿಯನ್ ಡಾಲರ್‍ಗಳ 2 ಫಂಡ್‍ಗಳನ್ನು ನಿರ್ವಹಿಸುತ್ತಿದ್ದಾರೆ. ಉಜ್ಜೀವನ್, ಬೇಸಿಕ್ಸ್, ಜನಲಕ್ಷ್ಮೀ, ಆಶಿರ್ವಾದ್ ಮತ್ತು ರೂರಲ್‍ಶೋರ್ಸ್ ಸೇರಿದಂತೆ ಇನ್ನೂ ಹಲವು ಯೋಜನೆಗಳ ಮೂಲಕ ಈ ತಂಡ ಕಾರ್ಯೋನ್ಮುಖವಾಗಿದೆ.

ಈಗ ರೂರಲ್‍ಶೋರ್ಸ್ ಜೊತೆಗೆ ಸ್ಪಂದನಾ, ಜನಲಕ್ಷ್ಮೀ ಮತ್ತು ಸಾಟಿನ್ ಯೋಜನೆಗಳಿಂದಲೂ ಲೋಕ್ ಕ್ಯಾಪಿಟಲ್ ನಿರ್ಗಮನ ಘೋಷಿಸಿದೆ.

ಲೇಖಕರು: ಮಾಳವಿಕ ವೆಲಯಾನಿಕಲ್​​

ಅನುವಾದಕರು: ವಿಶಾಂತ್​​​​​​​