ಕನ್ನಡ ಪದ ಹಾಡಿ ಗೆದ್ದರು- ದೇಸಿ ಸ್ಟೈಲ್ ಹಾಡುಗಾರನಿಗೆ ವಿಶ್ವದಾಧ್ಯಂತ ಅಭಿಮಾನಿಗಳು

ಟೀಮ್​ ವೈ.ಎಸ್​. ಕನ್ನಡ

0

ಇವರು ಗಿಟಾರ್​  ಹಿಡಿದು ನಿಂತ್ರ ಅದನ್ನ ನೋಡೋ ಮಜಾನೇ ಬೇರೆ. ಇನ್ನು ತನ್ನ ಸ್ಟೈಲ್​ನಲ್ಲಿ ಹಾಡಿದ್ರು ಅಂದ್ರೆ ಅವ್ರ ಗಾನಸುಧೆಗೆ ತಲೆಯಾಡಿಸದವರಿಲ್ಲ. ಅದ್ಯಾರಪ್ಪಾ ಅಂತೀರ. ಅದು ಮತ್ಯಾರು ಅಲ್ಲ ನಮ್ಮ ದೇಸಿ ಸ್ಟೈಲ್ ಅನ್ನ ಹೊರ ದೇಶಗಳಲ್ಲಿ  ಮಿಂಚಿಸುತ್ತಿರೋ ಗಾಯಕ, ಸಂಗೀತ ನಿರ್ದೇಶಕ ,ಗೀತರಚನಕಾರ ರಘು ದೀಕ್ಷಿತ್ . ಮೈಸೂರಿನಲ್ಲಿ ಹುಟ್ಟಿ ಬೆಳೆದ ರಘುದೀಕ್ಷಿತ್ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು. ಹಾಡಿನಲ್ಲಿ ಮಾತ್ರವಲ್ಲದೆ ರಘುದೀಕ್ಷಿತ್​ ಓದಿನಲ್ಲೂ ನಂಬರ್ ಒನ್. ರಘು ಅವರನ್ನ ಸಕಲ ಕಲಾವಲ್ಲಭ ಅಂದ್ರೆ ತಪ್ಪಿಲ್ಲ. ಯಾಕಂದ್ರೆ ಬರೀ ಓದು ಸಂಗೀತ ಮಾತ್ರವಲ್ಲದೆ ಸಂಗೀತ ನಿರ್ದೇಶನ ಕೂಡ ಮಾಡುತ್ತಾರೆ. ಇನ್ನೂ ಡ್ಯಾನ್ಸ್ ನಲ್ಲೂ, ಭರತನಾಟ್ಯದಲ್ಲಿ ವಿದ್ವಾನ್ ಮಾಡಿಕೊಂಡಿದ್ದಾರೆ. ಮನಸ್ಸಿಟ್ಟರೆ ಏನನ್ನ ಬೇಕಾದ್ರು ಮಾಡಬಹುದು ಅನ್ನೋದಕ್ಕೆ ಉತ್ತಮ ನಿದರ್ಶನ ರಘು ದೀಕ್ಷಿತ್​.  ಕಾಲೇಜಿನ ಸಮಯದಲ್ಲಿ ಸ್ನೇಹಿತರೊಬ್ಬರು ಚಾಲೆಂಜ್ ಮಾಡಿದ ಕಾರಣ ಎರಡೇ ತಿಂಗಳಲ್ಲಿ ಗಿಟಾರ್ ಕಲಿತು ಬಂದ್ರೆ, ಅಂದು ಕಲಿತ ಆ ಗಿಟಾರ್ ಅನ್ನ ಇಂದಿಗೂ ಹಿಡಿದು ದೇಶ ದೇಶ ಸುತ್ತುತ್ತಲೇ ಇದ್ದಾರೆ.

ಹೊಸ ಶೈಲಿ ಹುಟ್ಟುಹಾಕಿದ ಗಾಯಕ

ಸಂಗೀತ ಅಂದ್ರೆ ಅದಕ್ಕೆ ಬೌಂಡರಿ ಇರಬಾರದು ಅನ್ನೋ ರಘು, ತಮ್ಮದೇಯಾದ ವಿಭಿನ್ನ ಸ್ಟೈಲ್ ಅನ್ನ ಹುಟ್ಟುಹಾಕಿದ್ದಾರೆ. ಎಲ್ಲರೂ ರಘು ಅವರು ರಾಕ್ ಮ್ಯೂಸಿಕ್ ಸ್ಟೈಲ್ ನಲ್ಲಿ ಹಾಡುತ್ತಾರೆ ಅಂದುಕೊಳ್ತಾರೆ. ಆದ್ರೆ ಅವ್ರ ಪ್ರಕಾರ  ಹಾಡೋದು ಕನ್ನಡಿಗನ ಸ್ಟೈಲ್​ನಲ್ಲಿ, ವಾದ್ಯಗಳು ಮಾತ್ರ ವೆಸ್ಟ್ರನ್​ ಸ್ಟೈಲ್​ನಲ್ಲಿ ಇರುತ್ತವೆ ಅಷ್ಟೇ. ಆರಂಭದಲ್ಲಿ ಅಂತರಾಗ್ನಿ ಅನ್ನೋ ಬ್ಯಾಂಡ್ ಶುರು ಮಾಡಿಕೊಂಡಿದ್ದ ರಘು ದೀಕ್ಷಿತ್, ನಂತರದ ದಿನಗಳಲ್ಲಿ ಸ್ವಂತವಾಗಿ ಹಾಡೋದಕ್ಕೆ ಶುರು ಮಾಡಿದ್ರು. ಸಂಗೀತದ ಮೇಲೆ, ಮಾತ್ರವಲ್ಲದೆ ಭಾಷೆಯ ಮೇಲೂ ರಘು ದೀಕ್ಷಿತ್ ಅವ್ರಿಗೆ ಅಷ್ಟೇ ಪ್ರೀತಿ ಇದೆ.

ಭಾಷೆ ಅರ್ಥವಾಗದ ದೇಶದಲ್ಲಿ ಕನ್ನಡದ ಕಂಪು ಬೀರಿದ ಗಾಯಕ

ಬೆಲ್ಜಿಯಂನಲ್ಲಿದ್ದ ಸ್ನೇಹಿತರಿಂದ ರಘು ಅಲ್ಲಿಯ ಪ್ರಾದೇಶಿಕ ರೇಡಿಯೋದಲ್ಲಿ ಹಾಡುವ ಅವಕಾಶವನ್ನ ಪಡೆದುಕೊಂಡರು. ಅಲ್ಲಿ ರಘು ದೀಕ್ಷಿತ್ ಅವ್ರು ಹಾಡಿದ್ದು ಕನ್ನಡದ ಹಾಡು...! ಅಲ್ಲಿಯ ಜನರು ಮೆಚ್ಚಿಕೊಂಡ ರೀತಿಯನ್ನ ನೋಡಿ, ಇಲ್ಲಿಯ ಜನರೇ ಮೆಚ್ಚಿಕೊಂಡ ಮೇಲೆ ಇನ್ನೇನು ನಮ್ಮ ಜನ ನಮ್ಮ ಹಾಡನ್ನ ಪ್ರೀತಿ ಮಾಡೇ ಮಾಡುತ್ತಾರೆ ಅನ್ನೋದನ್ನ ನಿರ್ಧಾರ ಮಾಡಿ ಗಾಯನವನ್ನ ಸೀರಿಯಸ್ ಆಗಿ ತೆಗೆದುಕೊಂಡರು. ರಘು ಅವ್ರ ಸಂಗೀತ ಪ್ರತಿಭಾವಂತಿಕೆಯನ್ನ ಮೊದಲಿಗೆ ಗುರುತಿಸಿದ್ದು ಹರಿಹರನ್..ಅವ್ರ ಗಾನವನ್ನ ಮೆಚ್ಚಿ ಬೆಲೆ ಕಟ್ಟಿದ್ರು..ನಂತ್ರ ಸಂಗೀತ ಕ್ಷೇತ್ರದಲ್ಲಿ ಮುಂದುವರೆದ ರಘು ಅವ್ರು 2005 ರಲ್ಲಿ ಮುಂಬೈನ ದೊಡ್ಡ ರೆಕಾರ್ಡಿಂಗ್ ಕಂನಿ ಮೆಟ್ಟಿಲು ತುಳಿದಿದ್ರು..ಅಲ್ಲಿ ಸಾಕಷ್ಟು ಅವಮಾನವನ್ನ ಅನುಭವಿಸಿದ್ರು.ನಂತ್ರ ಬಿಟೌನ್ ನಲ್ಲಿ ಇವ್ರ ಪ್ರತಿಭೆ ಕಂಡಿದ್ದು ವಿಶಾಲ್ ಶೇಖರ್ ಅವ್ರಿಗೆ ..ಅವ್ರದ್ದೇ ಕಂಪನಿಯಿಂದ ರಘು ಅವ್ರ ಮೊದಲ ಆಲ್ಬಂ ಬಿಡುಗಡೆಯಾಗಿತ್ತು ಅನ್ನೋದು ವಿಶೇಷ.

ಇದನ್ನು ಓದಿ: ಪ್ರಯಾಣಕ್ಕಾಗಿ ಮನೆಯನ್ನೇ ಮಾರಿದ್ರು.. ಹವ್ಯಾಸದಿಂದ ಕೋಟ್ಯಾಧಿಪತಿಗಳಾದ್ರು..!

ಎಷ್ಟೇ ಬೆಳೆದ್ರು ತನ್ನ ಸ್ಟೈಲ್ ಬಿಡದ ಗಾಯಕ

ಎಷ್ಟೇ ಫೇಮಸ್ ಆದ್ರೂ ಕೂಡ ಪಂಚೆ ಉಡೋದಂತು ಬಿಡಲ್ಲ ಅಂತಾರೆ ರಘು. ಮೊದಲಿನಿಂದಲೂ ಪಂಚೆ ಹುಟ್ಟು ರೂಡಿ ಇರೋದ್ರಿಂದ ಈಗ ಅದನ್ನ ಮುಂದುವರೆಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಉಡುಪು ನಮ್ಮ ದೇಶದ ಸಂಸ್ಕೃತಿಯನ್ನ ಬಿಂಬಿಸುತ್ತೆ. ಈ ಪಂಚೆ ಉಡೋದ್ರಿಂದ ಅದೆಷ್ಟೋ ಜನರಿಗೆ ನಾವು ಭಾರತದವರು ಅನ್ನೋದು ತಿಳಿದಿದೆ. ಇನ್ನು ಗೆಜ್ಜೆ ವಿಚಾರಕ್ಕೆ ಬಂದ್ರೆ ಗೆಜ್ಜೆ ನಮ್ಮ ಸಾಂಪ್ರದಾಯಿಕ ಸಂಕೇತ. ಅಷ್ಟೇ ಅಲ್ಲದೆ ರಘು ದೀಕ್ಷಿತ್‍ ಭರತನಾಟ್ಯ ಕಲಿತಿರೋದ್ರಿಂದ ಗೆಜ್ಜೆಯನ್ನ ತಾಳಕ್ಕೆ ತಕ್ಕಂತೆ ಬಳಸಿಕೊಳ್ತಾರೆ. ರಘು ಅಂದ್ರೆ ದೇಶದ ಮೂಲೆ ಮೂಲೆ ಜನಕ್ಕೂ ಪ್ರಾಣ.

ಇಂಗ್ಲೆಂಡ್ ರಾಣಿ ರಘು ಗಾನವೆಂದ್ರೆ ಅಚ್ಚುಮೆಚ್ಚು

ರಘು ದೀಕ್ಷತ್ ಅವ್ರ ಸಂಗೀತವನ್ನ ಮೆಚ್ಚದೇ ಇರೋರು ಯಾರು ಇಲ್ಲ ಅಂದ್ರೆ ತಪ್ಪಿಲ್ಲ. ಯಾಕಂದ್ರೆ ಅವರ ಕಂಠಕ್ಕೆ ಅಂತಹ ಶಕ್ತಿ ಇದೆ. ಇಂಗ್ಲೆಂಡ್​ನ ರಾಣಿ ಕೂಡ ಇವರ ಸಾಂಗ್​ಗೆ ಫಿದಾ ಆಗಿರೋದುಂಟು. ಎಲ್ಲಾ ದೇಶಗಳನ್ನು ಸುತ್ತಿಕೊಂಡು ಕನ್ನಡ ಹಾಗೂ ದೇಸಿ ಸಂಗೀತವನ್ನ ಪಸರಿಸುತ್ತಿರೋ ರಘು ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರ ಗಾಯನ ಮತ್ತು ಸಂಗೀತವನ್ನ ನೋಡಿ ಸಾಕಷ್ಟು ಪ್ರಶಸ್ತಿಗಳು ಕೂಡ ಸಂದಿವೆ. ವಿದೇಶದ ಮೂಲೆ ಮೂಲೆ ತಲುಪಿರೋ ರಘು ಇಂದಿಗೂ ಕೂಡ ಬೇಡಿಕೆ ಉಳಿಸಿಕೊಂಡಿದ್ದಾರೆ. ಕನ್ನಡದವರೇ ಆಗಿದ್ದುಕೊಂಡು ಕನ್ನಡ ಸಿನಿಮಾಗಳಲ್ಲಿ ಹಾಡೋದಿಲ್ಲ, ಸಂಗೀತ ನಿರ್ದೇಶನ ಮಾಡಿಸೋಣ ಅಂದ್ರೆ ರಘು ದೀಕ್ಷಿತ್ ಬಿಡುವು ಸಿಗಲ್ಲ ಅಂತ ಗೊಣಗಾಡುತ್ತಿದ್ದವರಿಗೆಗೆ ಸಿಹಿ ಸುದ್ದಿ ಅಂದ್ರೆ ರಘು ದೀಕ್ಷಿತ್ ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮದೇಯಾದ ಸ್ಟುಡಿಯೋವನ್ನ ಓಪನ್ ಮಾಡಿದ್ದಾರೆ. ಇನ್ನು ಮುಂದೆ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ರಘು ಅವರ ಹಾಡುಗಳನ್ನ ಮಾತ್ರವಲ್ಲದೆ ಮ್ಯೂಸಿಕ್ ಮ್ಯಾಜಿಕ್ ಕೂಡ ಕಾಣಬಹುದು.

ಇದನ್ನು ಓದಿ:

1.ಕೈ ಹಿಡಿಯಿತು ಕೈ ರುಚಿಯ ರಹಸ್ಯ- ಶ್ರಮದ ಹಿಂದಿತ್ತು ಕಿಚ್ಚನ ಸಪೋರ್ಟ್​

2. ವಯಸ್ಸಿನಲ್ಲೇನಿದೆ..? ಉದ್ಯಮಿಗಳಿಗೆ ಅದು ಕೇವಲ ಸಂಖ್ಯೆಯಷ್ಟೇ..

3. ಬಾಡಿಗೆಗೆ ಬೈಕ್​​ ತೆಗೆದುಕೊಳ್ಳಿ- ಸಿಲಿಕಾನ್​ ಸಿಟಿಯಲ್ಲಿ ಎಂಜಾಯ್​ ಮಾಡಿ

Related Stories

Stories by YourStory Kannada