ವಾಟ್ಸ್​ಆ್ಯಪ್​ ಮೂಲಕ 1.62 ಕೋಟಿ ಮೌಲ್ಯದ ಆಭರಣ ಸೇಲ್ : ಗ್ರಾಹಕರ ಮನಗೆದ್ದ ವೆಲ್ವೆಟ್ ಕೇಸ್.ಕಾಮ್

ಟೀಮ್ ವೈ.ಎಸ್.ಕನ್ನಡ 

ವಾಟ್ಸ್​ಆ್ಯಪ್​ ಮೂಲಕ 1.62 ಕೋಟಿ ಮೌಲ್ಯದ ಆಭರಣ ಸೇಲ್ : ಗ್ರಾಹಕರ ಮನಗೆದ್ದ ವೆಲ್ವೆಟ್ ಕೇಸ್.ಕಾಮ್

Wednesday July 27, 2016,

4 min Read

ಆಭರಣಗಳ ವೆಬ್​ಸೈಟ್​ ``ವೆಲ್ವೆಟ್ ಕೇಸ್'' ಭವಿಷ್ಯ ನಿರ್ಧಾರವಾಗಿದ್ದು ಮದುಮಗಳೊಬ್ಬಳಿಂದ. ಮದುವೆ ಆಭರಣಗಳಿಗಾಗಿ ವೆಬ್​ಸೈಟ್​ಗಳಲ್ಲೆಲ್ಲ ಹುಡುಕಾಡುತ್ತಿದ್ದ ಮುಂಬೈನ ವಧು, ವೆಲ್ವೆಟ್ ಕೇಸ್ ಸೈಟ್​ನಲ್ಲಿರುವ ಸಮಸ್ಯೆಗಳು ಮತ್ತದಕ್ಕೆ ಪರಿಹಾರ ಎಲ್ಲವನ್ನೂ ಸೂಚಿಸಿದ್ದಾಳೆ. ವಿವಿಧ ವಿನ್ಯಾಸದ ಆಭರಣಗಳಿಗಾಗಿ ವೆಬ್​ಸೈಟ್​ನಲ್ಲಿ ಸರ್ಚ್ ಮಾಡಿದ ಆಕೆ ಕಸ್ಟಮರ್ ಕೇರ್ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ಲು. ಅವರು ಆಭರಣ ತಜ್ಞರನ್ನು ಆಕೆಗೆ ಪರಿಚಯಿಸಿದ್ರು. 3ಡಿ ಪ್ರಿಂಟಿಂಗ್ ಇರುವ ಆಭರಣಗಳನ್ನು ಬಳಸುವಂತೆ ಅವರು ಮದುಮಗಳಿಗೆ ಸಲಹೆ ಕೊಟ್ರು. ಇದು ಆಭರಣ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಗೂ ಪ್ರಯೋಜನಕಾರಿಯಾಯ್ತು. ಆಕೆ ತನ್ನ ಕುಟುಂಬದವರನ್ನೆಲ್ಲ ಸೇರಿಸಿ ವಾಟ್ಸ್ಆ್ಯಪ್ ಗ್ರೂಪ್ ಒಂದನ್ನು ಕ್ರಿಯೇಟ್ ಮಾಡಿದ್ಲು. ಅದರಲ್ಲಿ ಸಾವಿರಕ್ಕೂ ಹೆಚ್ಚು ಬಗೆಬಗೆ ವಿನ್ಯಾಸದ ಆಭರಣಗಳ ಬಗ್ಗೆ ಚರ್ಚೆಯಾಯ್ತು. ಅಂತಿಮವಾಗಿ ಆ ವಾಟ್ಸ್ಆ್ಯಪ್ ಗ್ರೂಪ್​ನಿಂದ ಮಾರಾಟವಾದ ಆಭರಣ ಎಷ್ಟು ಗೊತ್ತಾ? ಬರೋಬ್ಬರಿ 1.62 ಕೋಟಿ ರೂಪಾಯಿ ಮೌಲ್ಯದ್ದು.

image


ಒಂದು ತ್ವರಿತ ಮೆಲುಕು...

ವೆಲ್ವೆಟ್ ಕೇಸ್, ಸಮಕಾಲೀನ ಹಾಗೂ ಶಾಸ್ತ್ರೀಯ ವಿನ್ಯಾಸದ ಆಭರಣಗಳನ್ನೊಳಗೊಂಡ ವೇದಿಕೆ. ವಿನ್ಯಾಸಗಳನ್ನು ಬದಲಾಯಿಸಬಹುದು, ಆರ್ಡರ್ ಕೂಡ ಮಾಡಬಹುದು. 2012ರ ಆರಂಭದಲ್ಲಿ ಕಪಿಲ್ ಹೇತಮ್ಸರಿಯಾ ಹಾಗೂ ರುನಿತ್ ಶಾ ವೆಲ್ವೆಟ್ ಕೇಸ್ ಆರಂಭಿಸಿದ್ರು. ನವೆಂಬರ್​ನಲ್ಲಿ ಮೊದಲ ಉತ್ಪನ್ನವನ್ನು ಬಿಡುಗಡೆ ಮಾಡಿದ್ರು. ``ಗ್ರಾಹಕರಿಗೆ ನಿಜವಾಗಿ ಏನು ಬೇಕೋ ಅದನ್ನು ಒದಗಿಸಲೆಂದೇ ವೆಲ್ವೆಟ್​ಕೇಸ್​ ಡಾಟ್ ಕಾಮ್ ಹುಟ್ಟಿಕೊಂಡಿದೆ. ಈಗ ನಮ್ಮ ಬಳಿ ಇರುವುದು ಸಹ ಅದೇ'' ಎನ್ನುತ್ತಾರೆ ಕಪಿಲ್. ಅಮೆರಿಕದಿಂದ ಹಿಂದಿರುಗಿದ ಬಳಿಕ ಕಪಿಲ್ ಮತ್ತವರ ಪತ್ನಿ ಆಭರಣ ಖರೀದಿಸಲು ತೆರಳಿದ್ರು. ನಗರದ ಖ್ಯಾತ ಮಳಿಗೆಗಳಲ್ಲಿ ಕೂಡ ಅವರಿಗೆ ಬೇಕಾದಂತಹ ವಿನ್ಯಾಸಗಳಿರಲಿಲ್ಲ. ಅಂಥದ್ದನ್ನು ಮಾಡಿಕೊಡಲು ಯಾರೂ ಒಪ್ಪಲಿಲ್ಲ. ಈ ಘಟನೆಯೇ ಹೊಸ ಉದ್ಯಮ ಆರಂಭಿಸಲು ಕಪಿಲ್ ಅವರಿಗೆ ಪ್ರೇರಣೆಯಾಯ್ತು.

ಕಪಿಲ್ ಆಭರಣ ಕಂಪನಿಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ರು. ಗ್ರಾಹಕರಿಗೆ ಬೇಕಾಗಿದ್ದು ಅವರದ್ದೇ ಲ್ಯಾಪ್​ಟಾಪ್​ ಮೂಲಕ ಸಿಗುವಂತೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಂಡ್ರು. ಡೆಲ್ ಕಂಪನಿಯ ಕಾರ್ಯವೈಖರಿ, ರೇಮಂಡ್ಸ್​ನ ಅಳತೆ ಮಾದರಿ ಇವನ್ನೆಲ್ಲ ಅರಿತರು. ಬಟ್ಟೆ, ಕಂಪ್ಯೂಟರ್ ಉದ್ಯಮದಲ್ಲಿ ಇದು ಸಾಧ್ಯ ಅಂತಾದ್ರೆ ಒಳ್ಳೆಯ ಆಭರಣ ಖರೀದಿ ಸಮಯದಲ್ಲೂ ಇದನ್ನೆಲ್ಲ ಸಾಧ್ಯವಾಗಿಸಬಹುದು ಅನ್ನೋ ಆಲೋಚನೆ ಅವರಿಗೆ ಬಂದಿತ್ತು.

ಹೊಳಪಿನ ಆರಂಭ...

ಆಭರಣ ಮಾರುಕಟ್ಟೆ ವಿಶಾಲವಾಗಿದೆ. ಸಂದರ್ಭಕ್ಕೆ ತಕ್ಕಂತೆ ತಮಗೆ ಬೇಕಾದ ಆಭರಣಗಳನ್ನು ಗ್ರಾಹಕರು ಮನೆಯಲ್ಲಿ ಕುಳಿತೇ ಕೊಂಡುಕೊಳ್ಳಬಹುದು. 300ಕ್ಕೂ ಹೆಚ್ಚು ವಿನ್ಯಾಸಗಾರರ ಅಪರೂಪದ ಆಭರಣಗಳುಳ್ಳ ಜಾಗತಿಕವಾದ ವಿಶಿಷ್ಟ ವೇದಿಕೆ ಇದು. ಆರಂಭದಲ್ಲಿ ಸಾಲು ಸಾಲು ಸವಾಲುಗಳು ಎದುರಾದ್ವು. ದೃಢವಾದ ಶೂನ್ಯ ದಾಸ್ತಾನು ದಾಸ್ತಾನು ಪೂರೈಕೆ ಸರಪಳಿ ಒಂದು ಕಚ್ಚಾ ಪರಿಕಲ್ಪನೆಯಾಗಿತ್ತು. ಮೊದಲ ಬಾರಿ ನೀರನ್ನು ಪರೀಕ್ಷಿಸಿದ ಕೃಷಿ ಕಂಪನಿಯಂತಿತ್ತು ವೆಲ್ವೆಟ್​ಕೇಸ್​ನ ಕಾರ್ಯವೈಖರಿ. ಗ್ರಾಹಕರ ರೆಸ್ಪಾನ್ಸ್ ಬಗ್ಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಕೆಲವು ಗ್ರಾಹಕರು ಆಭರಣ ಇಂಡಸ್ಟ್ರಿಯನ್ನು ಸಂಘಟಿಸುವ ಪರಿಕಲ್ಪನೆಯನ್ನು ಅತ್ಯಂತ ಶೀಘ್ರವಾಗಿ ಸ್ವೀಕರಿಸಿದ್ರು. ಸೃಷ್ಟಿ ಮತ್ತು ಗ್ರಾಹಕೀಕರಣದ ಜೊತೆಗೆ ಎಲ್ಲರ ಮನಕ್ಕೊಪ್ಪುವಂತೆ ನಿರ್ಮಿಸುವ ಅಗತ್ಯವಿತ್ತು.

ಆದ್ರೆ ಮಳಿಗೆಗಳಲ್ಲಿ ನೇರವಾಗಿ ಖರೀದಿಸಿದಂತೆ ಸ್ಪರ್ಷಿಸಿ ನೋಡುವ ಅವಕಾಶವಿಲ್ಲ ಅನ್ನೋ ಕೊರಗು ಆರಂಭದಲ್ಲಿ ಗ್ರಾಹಕರನ್ನು ಕಾಡಿದ್ದು ನಿಜ. ಎಲ್ಲಕ್ಕಿಂತ ಹೆಚ್ಚಾಗಿ ಆಭರಣ ಮಾರುಕಟ್ಟೆಯೊಂದನ್ನು ಮುನ್ನಡೆಸುವುದೇ ಬಹುದೊಡ್ಡ ಸವಾಲು. ಆಭರಣ ವಿನ್ಯಾಸಗಾರರಿಗೆ ತರಬೇತಿ, ಆನ್​ಲೈನ್​ ಖರೀದಿ, ಜಗತ್ತಿನ ಮೂಲೆಮೂಲೆಯಲ್ಲಿರುವ ಗ್ರಾಹಕರಿಗೆ 3ಡಿ ಪ್ರಿಂಟ್​ನ ಆಭರಣಗಳನ್ನು ವಿತರಿಸುವ ಬಗ್ಗೆ ತರಬೇತಿ ಹೀಗೆ ವಿವಿಧ ಪ್ರಕ್ರಿಯೆಗಳು ನಡೆದವು. ಅವರ ಬೆಳವಣಿಗೆ ಪೂರಕವಾಗಿದ್ದು ವಾಟ್ಸ್ಆ್ಯಪ್. ಆಗಷ್ಟೆ ಬಿಬಿಎಂ, ಫೇಸ್ಬುಕ್, ವಾಟ್ಸ್ಆ್ಯಪ್ ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ಪ್ರಚಲಿತಕ್ಕೆ ಬಂದಿತ್ತು. ``ಮದುವೆ ಆಭರಣಗಳಿಗಾಗಿ ನಾವು ವಾಟ್ಸ್ಆ್ಯಪ್ ಗ್ರೂಪ್ ಒಂದನ್ನು ಆರಂಭಿಸಿದೆವು. ಅದರಲ್ಲಿ ಗ್ರಾಹಕರಿಗೆ ಇಷ್ಟವಾಗುವಂತಹ 1000ಕ್ಕೂ ಹೆಚ್ಚು ವಿನ್ಯಾಸಗಳನ್ನು ಪರಿಚಯಿಸಿದೆವು. ವಾಟ್ಸ್ಆ್ಯಪ್ ಮೂಲಕ ನಮಗೆ ಸಿಕ್ಕಿದ ಅತಿ ದೊಡ್ಡ ಆರ್ಡರ್ ಅಂದ್ರೆ 1.62 ಕೋಟಿ ರೂಪಾಯಿ ಮೌಲ್ಯದ್ದು'' ಅಂತಾ ಕಪಿಲ್ ವಿವರಿಸಿದ್ದಾರೆ.

ಹೀಗೆ ಆರಂಭವಾದ ವೆಲ್ವೆಟ್ ಕೇಸ್ ನಿಧಾನವಾಗಿ ಹೊಳಪು ಪಡೆದುಕೊಳ್ಳಲಾರಂಭಿಸಿತ್ತು. 2012-13ರಲ್ಲಿ ಅವರ ಆದಾಯ 3 ಕೋಟಿ ರೂಪಾಯಿ. 2013-14ರ ವೇಳೆಗೆ ಶೇ.300ರಷ್ಟು ಪ್ರಗತಿ ಸಾಧಿಸಿದ ವೆಲ್ವೆಟ್ ಕೇಸ್, ಕೇವಲ 5 ಸಿಬ್ಬಂದಿಗಳನ್ನಿಟ್ಟುಕೊಂಡು 8 ಕೋಟಿ ರೂಪಾಯಿ ವಹಿವಾಟು ನಡೆಸಿದೆ.

ಲೀಗ್ ಮತ್ತು ತಂಡ..

ಸುಮಾರು ಒಂದೂವರೆ ವರ್ಷ ತಮ್ಮ ಸ್ವಂತ ಹಣವನ್ನೇ ಉದ್ಯಮಕ್ಕೆ ಬಂಡವಾಳವಾಗಿ ಕಪಿಲ್ ಹಾಗೂ ರುನಿತ್ ತೊಡಗಿಸಿದ್ದಾರೆ. 2014ರಲ್ಲಿ ಚೆನ್ನೈ ಏಂಜೆಲ್ಸ್​ನಿಂದ ಅವರಿಗೆ 1 ಮಿಲಿಯನ್ ಡಾಲರ್ ಬಂಡವಾಳ ದೊರೆತಿತ್ತು. ``ಬಲವಾದ ಕೆಲಸದ ನೈತಿಕತೆ, ಟೀಮ್ ಸ್ಪಿರಿಟ್ ಹಾಗೂ ಉತ್ಸಾಹ ಇರುವ ಪ್ರತಿಭಾವಂತರ ತಂಡವನ್ನು ಕಟ್ಟುವುದೇ ನಿಜಕ್ಕೂ ಸವಾಲು. ಸಿಬ್ಬಂದಿಯೇ ನಮ್ಮ ದೀರ್ಘಾವಧಿ ಆಸ್ತಿಯಾಗಿರೋದ್ರಿಂದ ನೇಮಕಾತಿಯಲ್ಲಿ ನಾವು ಹೆಚ್ಚು ಕಾಳಜಿ ವಹಿಸಿದ್ದೇವೆ'' ಎನ್ನುತ್ತಾರೆ ಕಪಿಲ್. 2014-15ರಲ್ಲಿ ಅವರ ತಂಡ ದುಪ್ಪಟ್ಟಾಗಿದೆ. ಸದಸ್ಯರ ಸಂಖ್ಯೆ 40ಕ್ಕೇರಿದೆ. ಅಷ್ಟೇ ಅಲ್ಲ ವೆಲ್ವೆಟ್ ಕೇಸ್ ಬ್ರಾಂಡ್ 23 ಕೋಟಿ ರೂಪಾಯಿ ಆದಾಯ ಗಳಿಸಿದೆ. ಈ ಯಶಸ್ಸಿನ ಹಿಂದಿರುವುದು ಕಾರ್ಯತಂತ್ರ, ಆವಿಷ್ಕಾರ, ಶ್ರೀಮಂತ ಗ್ರಾಹಕ ಸೇವೆ ಮತ್ತು ಅಧಿಕ ಮೌಲ್ಯದ ಉತ್ಪನ್ನ ಮಾರಾಟ.

ಎರಡು ಬಾರಿ ಮಿಂಚಿನ ಸ್ಪರ್ಷ...

ಇತ್ತೀಚೆಗಷ್ಟೆ ಎರಡನೇ ಸುತ್ತಿನ ಫಂಡಿಂಗ್ ಕೂಡ ವೆಲ್ವೆಟ್ಕೇಸ್ಗೆ ದಕ್ಕಿದೆ. 1.5 ಮಿಲಿಯನ್ ಡಾಲರ್ ಬಂಡವಾಳ ಗಿಟ್ಟಿಸಿಕೊಂಡಿದೆ. ``ಅಸಾಧಾರಣ ವೈವಿಧ್ಯತೆಯುಳ್ಳ ಆಭರಣ ಮಾದರಿಗಳು ಭಾರತದಾದ್ಯಂತ ಲಭ್ಯವಿವೆ. ಲೈಫ್​ಸ್ಟೈಲ್​ ಕೊಳ್ಳುವಿಕೆಯಲ್ಲಿ ಬೆಳವಣಿಗೆ, ವಿಶೇಷ ಮಾರುಕಟ್ಟೆ, ಅದ್ಭುತ ವಿನ್ಯಾಸಗಳು, ಉತ್ತಮ ಬೆಲೆ, ಸಾಟಿಯಿಲ್ಲದ ಮೌಲ್ಯದೊಂದಿಗೆ ವೆಲ್ವೆಟ್​ಕೇಸ್ ಭಾರತದಾದ್ಯಂತ ಗ್ರಾಹಕರ ಮನೆ ಬಾಗಿಲಿಗೆ ತಲುಪುತ್ತಿದೆ. ಆಭರಣ ಹುಡುಕಾಟ ಮತ್ತು ಖರೀದಿ ಶೈಲಿಯನ್ನು ಇದು ಬದಲಾಯಿಸಲಿದೆ ಮತ್ತು ಆಭರಣ ತಯಾರಕರು, ಗ್ರಾಹಕರ ಪಾಲಿಗೆ ಪ್ರಮುಖ ಗಮ್ಯಸ್ಥಾನವಾಗಿ ಹೊರಹೊಮ್ಮಲಿದೆ'' ಅನ್ನೋ ವಿಶ್ವಾಸ ಯುನಿಕಾರ್ನ್ ವೆಂಚರ್ಸ್ ಫಂಡ್ ಹೂಡಿಕೆದಾರ ಶಿರಾಜ್ ಬಗ್ವಾಡಿಯಾ ಅವರದ್ದು.

2018ರ ವೇಳೆಗೆ ಆಭರಣ ಮಾರುಕಟ್ಟೆಯ ಮೌಲ್ಯ 90 ಬಿಲಿಯನ್ ಡಾಲರ್​ಗೆ ತಲುಪಲಿದೆ. ವೊಯ್ಲಾ ಡಾಟ್ ಕಾಮ್, ಕ್ಯಾರಟ್ಲೇನ್, ಬ್ಲೂಸ್ಟೋನ್, ವೇರ್ ಯುವರ್ ಶೈನ್ ಸೇರಿದಂತೆ ಹಲವು ಸಂಸ್ಥೆಗಳು ಗ್ರಾಹಕರ ಮನಗೆದ್ದಿವೆ. ಟೈಟನ್, ಕ್ಯಾರಟ್ಲೇನ್ನ ಹೆಚ್ಚಿನ ಷೇರುಗಳನ್ನೆಲ್ಲ ಸ್ವಾಧೀನಪಡಿಸಿಕೊಂಡಿದೆ. 12 ಆಫ್​ಲೈನ್ ಮಳಿಗೆಗಳಿದ್ದು, 100,000 ಡೌನ್​ಲೋಡ್​ಗಳಿಗೂ ಸಾಕ್ಷಿಯಾಗಿದೆ. ವೇರ್ ಯುವರ್ ಶೈನ್​ ಹೊಸ ಸೌಲಭ್ಯವೊಂದನ್ನು ಪರಿಚಯಿಸಿದೆ. ಅಲ್ಲಿ ಖರೀದಿಸಿದ ಆಭರಣಗಳನ್ನು ಅವರ 40 ಆಫ್​ಲೈನ್​ ಮಳಿಗೆಗಳಲ್ಲಿ ಹಿಂದಿರುಗಿಸಬಹುದು, ಬೇಕಾದಲ್ಲಿ ಎಕ್ಸ್​ಚೇಂಜ್​ ಮಾಡಿಸಿಕೊಳ್ಳಬಹುದು.

ಅದ್ಭುತ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ವೆಲ್ವೆಟ್ ಕೇಸ್, ಈ ವಿಭಾಗದಲ್ಲಿ ನಾವೀನ್ಯತೆಯ ಅಲೆಯನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದೆ. 3ಡಿ ಮುದ್ರಣದಲ್ಲಿ ಹೂಡಿಕೆ, ವರ್ಧಿತ ವಾಸ್ತವ, ಉತ್ತಮ ಗುಣಮಟ್ಟದ ವಿಶ್ಲೇಷಣೆ ಇದರ ವೈಶಿಷ್ಟ್ಯ. ವೆಲ್ವೆಟ್ ಕೇಸ್ ಬ್ರಾಂಡ್ ಇತ್ತೀಚೆಗೆ ತನ್ನ ತಂತ್ರಜ್ಞಾನವನ್ನು ಕೂಡ ಬಲಪಡಿಸಿಕೊಂಡಿದೆ. ಟೆಕ್ನಾಲಜಿ ವೈಸ್ ಪ್ರೆಸಿಡೆಂಟ್ ಆಗಿ ಧೀರೇಂದ್ರ ಕುಲಕರ್ಣಿ, ಮಾರ್ಕೆಟಿಂಗ್ & ಎನಾಲಿಟಿಕ್ಸ್ನ ಡೈರೆಕ್ಟರ್ ಆಗಿ ಅಭಿಷೇಕ್ ಭಾರ್ತಿಯ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮತ್ತಷ್ಟು ಸ್ಕೇಲಿಂಗ್ ಹಾಗೂ ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡಲು ಅದ್ಭುತ ವೇದಿಕೆಯೊಂದನ್ನು ವೆಲ್ವೆಟ್ ಕೇಸ್ ನಿರ್ಮಿಸುತ್ತಿದೆ.

ಇದನ್ನೂ ಓದಿ...

ಪರಿಸರ ಉಳಿಸಲು ಹೊಸ ಪ್ಲಾನ್​- ಎಲೆಕ್ಟ್ರಿಕ್​ ಕಾರುಗಳನ್ನು ಬಳಸುವ ಚಿಂತನೆ

ಭಾರತೀಯ ರೈಲ್ವೇಗೆ ಶೀಘ್ರದಲ್ಲೇ ಸಿಗಲಿದೆ “ಹೈ ಸ್ಪೀಡ್” ಟಚ್..!