ದುಬಾರಿ ಗಿಫ್ಟ್​​ಗಳನ್ನು ತಯಾರಿಸಿ ಲಾಭದಾಯಕ ಉದ್ಯಮ ಸ್ಥಾಪಿಸಿದ ಮಹಿಳಾಮಣಿಗಳು..!

ಟೀಮ್​ ವೈ.ಎಸ್​. ಕನ್ನಡ

1

ಇಷ್ಟಪಟ್ಟವರನ್ನು ಮದುವೆ ಆದ್ರೆ ಜೀವನದಲ್ಲಿ ಖುಷಿ ಹೆಚ್ಚೇ ಇರುತ್ತದೆ. ಕಷ್ಟ ಇದ್ದರೂ ಅದನ್ನು ಮೆಟ್ಟಿ ನಿಲ್ಲುವ ಮನಸ್ಸು ದೊಡ್ಡದಿರುತ್ತದೆ. ಇಷ್ಟಪಟ್ಟವರನ್ನು ಮದುವೆ ಆದರೆ, ಗಂಡನ ಸಹೋದರನ ಹೆಂಡತಿ ಕೂಡ ಹೆಚ್ಚಾಗಿ ಇಷ್ಟವಾಗುತ್ತಾರೆ. ಆದ್ರೆ ಗಂಡನ ಸಹೋದರಿಯ ಮನಸ್ಸು ಮತ್ತು ಮನೆಗೆ ಹೊಸದಾಗಿ ಬಂದವಳ ಮನಸ್ಸು ಒಂದೇ ರೀತಿಯಲ್ಲಿ ಇದ್ದರೆ ಅದಕ್ಕಿಂತಲೂ ಹರ್ಷ ಬೇರೊಂದಿಲ್ಲ. ವ್ಯಾವಹಾರಿಕ ಗುಣ ಮತ್ತು ಮನಸ್ಸು ಇದ್ರೆ ಲಾಭದಾಯಕ ಉದ್ಯಮ ಮಾಡಬಹುದು ಅನ್ನೋದನ್ನ ಈ ಮಾಡಿ ತೋರಿಸಿದ್ದಾರೆ ತಾನ್ವಿ ಮತ್ತು ಸೋನಾಕ್ಷಿ ಕಟರುಕ. ತಾನ್ವಿ ಮತ್ತು ಸೋನಾಕ್ಷಿ ಹುಟ್ಟುಹಾಕಿದ ಸಂಸ್ಥೆಯ ಹೆಸರೇ "ಟಿಕಲ್ ಪಿಂಕ್".

ಇವರಿಬ್ಬರೂ ವಿಚಿತ್ರ ಸಹೋದರಿಯರು

ತಾನ್ವಿ ಕಟರುಕಾ ಮಲೆಯಾಳಿ ಹೃದಯದ ಮರ್ವಾಡಿ ಹುಡುಗಿ ಅಂತ ತನ್ನನ್ನು ತಾನೇ ಬಣ್ಣಿಸಿಕೊಳ್ಳುತ್ತಾಳೆ. ಕೊಚ್ಚಿ ಮೂಲದ ತಾನ್ವಿ ಕುಟುಂಬ ಉದ್ಯಮದಲ್ಲಿ ಹೆಸರು ಮಾಡಿತ್ತು. ಮ್ಯಾಂಚೆಸ್ಟರ್ ಯೂನಿವರ್ಸಿಟಿಯಿಂದ ತಾನ್ವಿ ಮಾಸ್ಟರ್ಸ್ ಇನ್ ಫೈನಾನ್ಸ್ ಮತ್ತು ಅಕೌಂಟ್ಸ್​​ನಲ್ಲಿ ಪದವಿ ಪಡೆದುಕೊಂಡ ಸಾಧನೆ ಮಾಡಿದ್ದಾರೆ. ವಿದೇಶದಿಂದ ವಾಪಾಸ್ ಬಂದ ಮೇಲೆ ತಾನ್ವಿ ಮೊದಲಿಗೆ ತನ್ನ ತಂದೆಯ ಜೊತೆ ಕೊಂಚ ದಿನಗಳ ಕಾಲ ಕೆಲಸಮಾಡುತ್ತಾಳೆ. ನಂತರ ಏಜೆನ್ಸಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಆದ್ರೆ ಅಲ್ಲಿ ತಾನ್ವಿ ಖುಷಿಯನ್ನು ಕಾಣುವುದಿಲ್ಲ. ಅಷ್ಟೇ ಅಲ್ಲ ಮುಂಬೈನ ಸೋಫಿ ಕಾಲೇಜಿಗೆ ಸೋಶಿಯಲ್ ಕಮ್ಯುನಿಕೇಷನ್ಸ್ ಮಿಡಿಯಾ ಸಬ್ಜೆಕ್ಟ್​​ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆಯಲು ಕಲಿಕೆ ಆರಂಭಿಸಿದ್ರು. ಕಾಲೇಜು ಮುಗಿಸಿದ ಬಳಿಕ ತಾನ್ವಿ ಕೊಚ್ಚಿಯ ಪ್ರಿಂಟ್ ಮಿಡೀಯಾದಲ್ಲಿ ಕಾಪಿ ಎಡಿಟರ್ ಆಗಿ ಕೆಲಸ ಆರಂಭಿಸಿದ್ರು. ನಂತರ SoDelhi ಅನ್ನುವ ಆನ್​ಲೈನ್ ಪೋರ್ಟಲ್ ಒಂದಕ್ಕೆ ಎಡಿಟರ್ ಆಗಿ ಬಡ್ತಿ ಪಡೆಯುತ್ತಾರೆ. ಸೋನಾಕ್ಷಿಯ ಗಂಡನ ಸಹೋದರನ ಜೊತೆ ಸಪ್ತಪದಿ ತುಳಿದ ಮೇಲೆ ತಾನ್ವಿ ಮತ್ತು ಸೋನಾಕ್ಷಿ ಸಹೋದರಿಯರಾದ್ರು. ಕಟರುಕಾ ಮನೆಯಲ್ಲಿ ಹೊಸ ಹುರುಪು ಬಂದಿತ್ತು. ಕಟರುಕಾ ಮನೆಯ ಇಬ್ಬರು ಸೊಸೆಯಂದಿರು ವಿಭಿನ್ನ ಐಡಿಯಾ ಮತ್ತು ಕ್ರಿಯೇಟಿವ್ ಆಗಿ ಯೋಚನೆ ಮಾಡಲು ಆರಂಭಿಸಿದ್ರು. ಆರಂಭದಲ್ಲಿ ಇಬ್ಬರ ಕ್ರಿಯೇಟಿವಿಟಿ ಅವರ ಆತ್ಮೀಯರಿಗೆ ಮತ್ತು ಗಂಡನಿಗೆ ಮಾತ್ರ ಸೀಮಿತವಾಗಿತ್ತು. ವಿಚಿತ್ರ ಅಂದ್ರೆ ಗಿಫ್ಟಿಂಗ್ ವಿಚಾರದಲ್ಲಿ ಇಬ್ಬರ ಕ್ರಿಯೇಟಿವ್ ಯೋಚನೆಗಳನ್ನು ಕಂಡು ಕುಟುಂಬ ವರ್ಗದವರೇ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಉದ್ಯಮಕ್ಕೆ ಇಳಿಯುವ ಮೊದಲು ಸೋನಾಕ್ಷಿ ಕೂಡ ಕಾರ್ಪೊರೇಟ್ ರೇಸ್ ನಲ್ಲಿದ್ದರೇ. ಪಕ್ಕಾ ದೆಹಲಿ ಹುಡುಗಿ ಆಗಿದ್ದ ಸೋನಾಕ್ಷಿ ಮ್ಯಾನೇಜ್​ಮೆಂಟ್ ಪದವೀಧರೆ. ಕೆಲ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ಸೋನಾಕ್ಷಿ ಕೂಡ ತನ್ನ ಕ್ರೀಯೇಟಿವಿಟಿಗೆ ಹೆಚ್ಚು ಬೆಲೆ ಸಿಗಬೇಕು ಎಂದು ಹಂಬಲಿಸ ತೊಡಗಿದ್ದಳು.

ಇದನ್ನು ಓದಿ: ಇಲ್ಲಿ ನಮಗೆ ನಾವೇ ಬಾಸ್​..!ಉದ್ಯಮಿ ಆಗುವುದರ ಹಿಂದಿದೆ ನೂರಾರು ಕನಸು..!

ಅಚ್ಚರಿಯ ನಡುವೆ ಒಂದಿಷ್ಟು ಸಂತೋಷ

ಆರಂಭದಲ್ಲಿ ತಾನ್ವಿ ಮತ್ತು ಸೋನಾಕ್ಷಿ ಐದು ವರ್ಷಗಳ ಕಾಲ ಕಾರ್ಪೋರೇಟ್ ವಲಯದಲ್ಲಿ ದುಡಿಮೆ ಮಾಡುವ ನಿರ್ಧಾರ ಮಾಡಿದ್ದರು. ಆದ್ರೆ ಅದರಿಂದ ಕೊಂಚವೂ ಲಾಭವಿಲ್ಲ ಅನ್ನುವುದನ್ನು ಬೇಗನೆ ಅರಿತುಕೊಂಡರು. ಅಷ್ಟೇ ಅಲ್ಲ ಸಮಯ ಕಳೆದು ಹೋದ್ರೆ ಮತ್ತೆ ಸಿಗುವುದಿಲ್ಲ ಅನ್ನುವುದನ್ನು ಅರಿತುಕೊಂಡ್ರು. ಅಷ್ಟೇ ಅಲ್ಲ ತಮ್ಮ ಕ್ರಿಯೇಟಿವ್ ಯೋಚನೆಗಳಿಗೆ ಬೆಲೆ ಕೊಡಲು ಆರಂಭಿಸಿದ್ರು. ಒಂದು ಕಪ್ ಕಾಫಿ ಕುಡಿದು ಮುಗಿಸುವಷ್ಟರಲ್ಲಿ ತಾನ್ವಿ ಮತ್ತು ಸೋನಾಕ್ಷಿ "ಟಿಕಲ್ಡ್ ಪಿಂಕ್" ಅನ್ನುವ ವಿಶೇಷ ಗಿಫ್ಟ್ ಪ್ರಿಪೇರ್ ಮಾಡುವ ಕಂಪನಿಯನ್ನು ಸ್ಥಾಪಿಸಿಬಿಟ್ರು.

“ನಾವು ವಿಶೇಷ ಗಿಫ್ಟ್​​ಗಳನ್ನು ತಯಾರಿಸಿಕೊಡುತ್ತೇವೆ. ಅಷ್ಟೇ ಅಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಇಷ್ಟವಾಗುವಂತೆ ಕಸ್ಟಮೈಸ್ಡ್ ಪ್ಯಾಕೇಜ್​​ಗಳನ್ನು ಒದಗಿಸಿಕೊಡುತ್ತೇವೆ”
ತಾನ್ವಿ, ಟಿಕಲ್ಡ್ ಪಿಂಕ್ ಸಂಸ್ಥಾಪಕಿ

ಟಿಕಲ್ಡ್ ಪಿಂಕ್​​ನಲ್ಲಿ ಉಡುಗೊರೆಗಳು, ಅನುಭವಗಳು, ಪಾರ್ಟಿ ಫೇವರ್​​ಗಳು ಮತ್ತು ಬೆಸ್ಪೋಕ್ ಅನ್ನುವ 4 ಕೆಟಗರಿಗಳಿವೆ. ಟಿಕಲ್ಡ್ ಪಿಂಕ್ ವೆಬ್​ಸೈಟ್​ನಲ್ಲಿ ಉಡುಗೊರೆಗಳನ್ನು ತಯಾರಿಸಲು ಹಲವು ಟೆಂಪ್ಲಿಟ್​​ಗಳಿವೆ.  ಪಾರ್ಟಿ ಫೇವರ್​ಗಳಲ್ಲೂ ಹಲವು ಆಯ್ಕೆಗಳಿವೆ. ಆದ್ರೆ ಬೆಸ್ಟೋಕ್ ಸೆಕ್ಷನ್​​ಗಳಲ್ಲಿ ಮಾತ್ರ ಗ್ರಾಹಕರ ಜೊತೆ ಕುಳಿತುಕೊಂಡು, ಅವರಿಗೆ ಬೇಕಾದ ಹಾಗೇ ಮತ್ತು ತಮ್ಮಲ್ಲಿರುವ ಕಲಾತ್ಮಕತೆಯನ್ನು ಉಪಯೋಗಿಸಿಕೊಂಡು ಉಡುಗೊರೆಗಳನ್ನು ತಯಾರಿಕೊಡಲಾಗುತ್ತದೆ.

ಟಿಕಲ್ಡ್ ಪಿಂಕ್​ನ್ನು ಆರಂಭಿಸುವ ಮೊದಲು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದರು. ಮಾರ್ಕೆಟ್​ಗೆ ಎಂಟ್ರಿಯಾಗುವ ಮೊದಲು ತಾವು ತಯಾರಿಸಿದ ಗಿಫ್ಟ್​​ಗಳನ್ನು ತಮ್ಮ ಆತ್ಮೀಯರಿಗೆ ನೀಡಿ ಅವರ ಫೀಡ್ ಬ್ಯಾಕ್ ಅನ್ನು ಪಡೆದುಕೊಳ್ಳುತ್ತಿದ್ದರು. ಈ ಮೂಲಕ ತಮ್ಮ ಕ್ರೀಯೇಟಿವಿಟಿಗೆ ಮತ್ತಷ್ಟು ಹೊಸ ಟಚ್ ನೀಡುತ್ತಿದ್ದರು. ತಾವು ಪಡೆದ ಮೊದಲ ಆರ್ಡರ್​​ನಲ್ಲೇ ಸುಮಾರು 23 ವಿಭಿನ್ನ ಉಡುಗೊರೆಗಳನ್ನು ನೀಡಿ ಗ್ರಾಹಕರ ಮನಸ್ಸು ಗೆದ್ದಿದ್ದರು. ಗ್ರಾಹಕರೊಬ್ಬರು ತನ್ನ ಲಂಡನ್ ಪ್ರೀತಿಯನ್ನು ತೋರ್ಪಡಿಸಿದ್ದಾಗ "ಟಿಕಲ್ಡ್ ಪಿಂಕ್" ಲಂಡನ್ ಟೆಲಿಫೋನ್ ಬೂತ್​​ನಂತಹ ಗಿಫ್ಟ್ ತಯಾರಿಸಿ, ತನ್ನ ಪ್ರೀತಿ ತೋರ್ಪಡಿಸಲು ಸಾಥ್ ನೀಡಿದ್ದರು. ಪ್ರೇಮಿಗಳ ವಾರ ಬಂತು ಅಂದ್ರೆ ಸಾಕು ಟಿಕಲ್ಡ್ ಪಿಂಕ್​ನಲ್ಲಿ ಕೈತುಂಬಾ ಕೆಲಸ ಗ್ಯಾರೆಂಟಿ. ಪ್ರೇಮಿಗಳ ರೊಮ್ಯಾಂಟಿಕ್ ಮೂಡ್​​ಗೆ ಗುಲಾಬಿ ಮತ್ತು ಇತರ ವಿಭಿನ್ನ ಯೋಚನೆಗಳ ಮೂಲಕ ವಿಶೇಷತೆಯನ್ನು ಸೃಷ್ಟಿ ಮಾಡುತ್ತಿದ್ದರು.

ಹೀಗೆ ಟಿಕಲ್ ವರ್ಲ್ಡ್ ವಿಭಿನ್ನ ಗಿಫ್ಟ್ ಯೋಚನೆಗಳೊಂದಿಗೆ ಗಮನ ಸೆಳೆದಿದೆ. ಕೇಕ್, ಚಾಕೋಲೇಟ್, ಹೂವುಗಳಿಂದ ಹಿಡಿದು ಎಲ್ಲಾ ರೀತಿಯ ವಿಭಿನ್ನ ಗಿಫ್ಟ್​​ಗಳ ಮೂಲಕ ಗ್ರಾಹಕಕರ ಮನಸ್ಸು ಗೆದ್ದ ಕೀರ್ತಿ ತಾನ್ವಿ ಮತ್ತು ಸೋನಾಕ್ಷಿಗೆ ಸಲ್ಲುತ್ತದೆ.

ಖುಷಿ ನಡುವೆ ನೋವು

" ನಮ್ಮ ವ್ಯವಹಾರದ ಅತೀ ದೊಡ್ಡ ಕಷ್ಟ ಅಂದ್ರೆ ನಾವು ಮಾರಾಟಗಾರರನ್ನು ಹಡುಕುವಾಗ ಎದುರಿಸಿದ್ದೆವು. ಮಹಿಳೆಯರಾಗಿ ಕೆಲವೊಂದು ಐಡಿಯಾಗಳನ್ನು ಕೊಡಲು ಕಷ್ಟ ಕೂಡ ಆಗುತ್ತಿತ್ತು. 27 ವರ್ಷ ವಯಸ್ಸಿನ ಹುಡುಗಿಯರು ವ್ಯವಹಾರ ಮಾಡುತ್ತಾರೆ ಅನ್ನುವ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತನಾಡಿದ್ದರು. ನಮ್ಮ ವ್ಯವಹಾರವನ್ನು ಹವ್ಯಾಸ ಅಂತ ಕರೆದವರೇ ಹೆಚ್ಚು."
- ತಾನ್ವಿ, ಟಿಕಲ್ಡ್​​ವರ್ಲ್ಡ್ ಸಂಸ್ಥಾಪಕಿ

ಆರಂಭದಲ್ಲಿ ತಾನ್ವಿ ಮತ್ತು ಸೋನಾಕ್ಷಿ ಮಾಡುತ್ತಿದ್ದ ಉದ್ಯಮದ ಬಗ್ಗೆ ಹಲವರಿಗೆ ಐಡಿಯಾವೇ ಇರಲಿಲ್ಲ. ಇದು ಕೊಂಚ ಹಿನ್ನಡೆಗೆ ಕಾರಣವಾಗಿತ್ತು. ತಮ್ಮ ಉದ್ಯಮಗಳನ್ನು ಜನರಿಗೆ ತಿಳಿಸುವುದೇ ಇವರಿಬ್ಬರ ಪಾಲಿಗೆ ಅತೀ ದೊಡ್ಡ ಸವಾಲಾಗಿತ್ತು. ಕಾರ್ಪೋರೇಟ್ ಗಿಫ್ಟ್ ಅನ್ನುವ ಕಾಮನ್ ಉದ್ಯಮ ಅಂತ ಹಲವರು ಲೆಕ್ಕಾಚಾರ ಹಾಕಿದ್ದರು.

ತಾನ್ವಿ ಮತ್ತು ಸೋನಾಕ್ಷಿ ವೃತ್ತಿ ಜೀವನದ ಜೊತೆ ತಮ್ಮ ವೈಯಕ್ತಿಕ ಸವಾಲುಗಳನ್ನು ಕೂಡ ಎದುರಿಸಿದ್ದರು. ಹೊಸದಾಗಿ ಮದುವೆ ಆಗಿದ್ದ ಕಾರಣದಿಂದಾಗಿ ಕುಟುಂಬದವರ ಮನಸ್ಸು ಕೂಡ ಗೆಲ್ಲಬೇಕಿತ್ತು. ಕುಟುಂಬ ಮತ್ತು ವೃತ್ತಿ ಕವಲು ದಾರಿ ಆಗಿದ್ದರು, ಅದನ್ನು ಸರಿದೂಗಿಸಿಕೊಂಡು ಹೋಗುವುದು ಇವರಿಬ್ಬರ ಕೈಯಲ್ಲೇ ಇತ್ತು. ಅಷ್ಟೇ ಅಲ್ಲ ಕುಟುಂಬಕ್ಕೆ ಎರಡನೇ ಪ್ರಾಶಸ್ತ್ಯ ಕೊಡುವ ಹಾಗೂ ಇರಲಿಲ್ಲ.

ಆದ್ರೆ ತಾನ್ವಿ ಮತ್ತು ಸೋನಾಕ್ಷಿ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತರು. ತಮ್ಮಲ್ಲಿದ್ದ ಕ್ರಿಯೇಟಿವ್ ಯೋಚನೆಗಳಿಂದಲೇ ಉದ್ಯಮದಲ್ಲಿ ಯಶಸ್ಸಿನ ಹೆಜ್ಜೆ ಇಟ್ಟರು. ವೈಯಕ್ತಿಕ ಬದುಕಿನ ಮಧ್ಯೆ ವ್ಯವಹಾರವನ್ನು ತರಲಿಲ್ಲ. ಹೀಗಾಗಿ ತಾನ್ವಿ ಮತ್ತು ಸೋನಾಕ್ಷಿ ನಡುವೆ ಉತ್ತಮ ಸಂಬಂಧವೂ ಬೆಳೆಯಿತು.

ಸವಾಲು ಗೆದ್ದ ಸಾಧಕಿಯರು

ಆರಂಭದಲ್ಲಿ ಮನೆಯ ಬೇಸ್​ಮೆಂಟ್​ನಲ್ಲಿ ಕೆಲಸ ಆರಂಭಿಸಿ, ಕಾಫಿ ಡೇಯಲ್ಲಿ ಗ್ರಾಹಕರ ಜೊತೆ ಮೀಟಿಂಗ್ ನಡೆಸಿ 2016ರಲ್ಲಿ ತಾನ್ವಿ ಮತ್ತು ಸೋನಾಕ್ಷಿ ಉದ್ಯಮ ಆರಂಭಿಸಿದ್ರು. ಈಗ ಚಿಕ್ಕದೊಂದು ಕ್ಯಾಬಿನ್ ಮತ್ತು ಆಫೀಸ್ ಹೊಂದುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಗ್ರಾಫಿಕ್ ಡಿಸೈನರ್​​ಗಳು ಸೇರಿದಂತೆ ಹಲವರಿಗೆ ಕೆಲಸ ನೀಡಿದ್ದಾರೆ. ಇತ್ತೀಚೆಗೆ ವೆಬ್​ಸೈಟ್ ಒಂದನ್ನು ಕೂಡ ಲಾಂಚ್ ಮಾಡಿದ್ದಾರೆ. NCR ಮತ್ತು ದೆಹಲಿಯಲ್ಲಿ ಪ್ಲಾನ್​​ಗಳನ್ನು ಮಾಡುತ್ತಿದ್ದರೂ ದೇಶದ ಉದ್ದಗಲಕ್ಕೂ ಆರ್ಡರ್​​ಗಳನ್ನು ಡೆಲಿವರಿ ಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಟಿಕಲ್ ವರ್ಲ್ಡ್​​ನ ಫೇಮಸ್ ಪರ್ಸನಲೈಸ್ಡ್ ಡಿನ್ನರ್ ಡೇಟ್ ಗಿಫ್ಟ್ ಸುಮಾರು 10,000 ರೂಪಾಯಿಗಳಿಂದ ಆರಂಭವಾಗುತ್ತದೆ. ಸಾಮಾನ್ಯ ಗಿಫ್ಟ್​​ಗಳು 500 ರೂಪಾಯಿಯಿಂದ 5000 ರೂಪಾಯಿಗಳ ರೇಂಜ್​ನಲ್ಲಿ ಲಭ್ಯವಿದೆ. ಆರಂಭದಲ್ಲಿ ತಿಂಗಳೊಂದಕ್ಕೆ 2 ಆರ್ಡರ್​​ಗಳನ್ನು ಪಡೆಯುತ್ತಿದ್ದವರು ಈಗ ದಿನವೊಂದಕ್ಕೆ ಹಲವು ಆರ್ಡರ್​​ಗಳನ್ನು ಪಡೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲೂ ಸಾಕಷ್ಟು ಫಾಲೋವರ್​​ಗಳನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಟಿಕಲ್ಡ್​​ಪಿಂಕ್ ತಾನ್ವಿ ಮತ್ತು ಸೋನಾಕ್ಷಿಯವರಲ್ಲಿ ಅಡಗಿದ್ದ ಉದ್ಯಮಿಯನ್ನು ಹೊರಹಾಕಿದೆ.

ಇದನ್ನು ಓದಿ:

1. ಮಹಿಳೆಯರ ಒಳಿತಾಗಿ ಎದ್ದು ನಿಂತ ನಾರಿಯರು- "ಸ್ಕಿಲ್ ಶ್ರೀ"ನಿಂದ ಹೆಣ್ಣುಮಕ್ಕಳ ಜೀವನಕ್ಕೆ ಶ್ರೀಕಾರ

2. ಕೊಹ್ಲಿ, ಧೋನಿಗಿಂತ ಇವರು ಕಡಿಮೆಯಲ್ಲ- ವಿಶ್ವಚಾಂಪಿಯನ್ನರಾದರೂ ಜೀವನದಲ್ಲಿ ನೆಮ್ಮದಿ ಕಂಡಿಲ್ಲ..!

3. “ಪಂಕ್ಚರ್ ಪ್ಲಾನರ್”ಗಳಿಗೆ ಪಾಠ ಕಲಿಸಿದ ಎಂಜಿನಿಯರ್- ರಸ್ತೆಯಿಂದ ಮೊಳೆ ಹೆಕ್ಕಿದ ಸಾಧಕ..!

 

 

Related Stories