ಅಭಿನಂದನೆಗಳು..! ಕೊರತೆಯಲ್ಲೂ ಯಶಸ್ಸು ಕಾಣಬಹುದು..!

ಶ್ರದ್ಧಾಶರ್ಮಾ

ಅಭಿನಂದನೆಗಳು..! ಕೊರತೆಯಲ್ಲೂ ಯಶಸ್ಸು ಕಾಣಬಹುದು..!

Saturday October 03, 2015,

2 min Read

ಇದು ಬೆಂಗಳೂರು. ತಂತ್ರಜ್ಞಾನ ಕ್ಷೇತ್ರಕ್ಕೆ ಸಿಲಿಕಾನ್ ಸಿಟಿ ನೀಡಿರುವ ಕೊಡುಗೆ ಅಷ್ಟಿಷ್ಟಲ್ಲ. ಆದ್ರೆ ಈ ಸ್ಟೋರಿ ಎಲ್ಲದಕ್ಕಿಂತ ಡಿಫರೆಂಟ್. ನಿನ್ನೆ ನಾನು ಬೆಂಗಳೂರಿನಲ್ಲ 10 ಕಿಲೋಮೀಟರ್ ಪ್ರಯಾಣ ನಡೆಸಿದ್ದೆ . ಅದೂ ಕೂಡ ಟ್ರಾಫಿಕ್ ನಲ್ಲಿ. ಗಾಡಿ ಗಂಟೆಗೆ 10 ಕಿಲೋಮೀಟರ್ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಮುಂದಕ್ಕೆ ಹೋಗೋದಿಕ್ಕೆ ಸಾಧ್ಯನೇ ಇರಲಿಲ್ಲ. ನಾನು ಕಾರ್ ನಲ್ಲಿರಬೇಕಾದರೆ ಕೆಲವೊಂದು ಫೋನ್ ಕಾಲ್ ಗಳನ್ನು ಮಾಡಬೇಕಿತ್ತು. ಆದ್ರೆ ನೆಟ್ವರ್ಕ್ ಸಮಸ್ಯೆ ಕಾಡುತ್ತಿತ್ತು. ಅಷ್ಟೇ ಅಲ್ಲ ಕಾಲ್ ಡ್ರಾಪ್ ಆಗ್ತಾ ಇತ್ತು. ಆದ್ರೆ ಸರ್ವೀಸ್ ಪ್ರೊವೈಡರ್ಗಳು ಕನಿಷ್ಠ ಸೌಜನ್ಯಕ್ಕಾದ್ರೂ ನೆಟ್ವರ್ಕ್ ಸಮಸ್ಯೆಯಿಂದ ಕಾಲ್ ಡ್ರಾಪ್ ಆಗ್ತಿದೆ ಅನ್ನೋದನ್ನ ತಿಳಿಸೋ ಯೋಚನೆಯನ್ನೂ ಮಾಡಿರಲಿಲ್ಲ. ಡಾಟಾ ಸರ್ವೀಸ್ ಗಳಿ 3ಜಿ, 4ಜಿ ಸ್ಪೀಡ್ ಒದಗಿಸುವ ಬಗ್ಗೆ ಹೇಳುವ ಸರ್ವೀಸ್ ಪ್ರೊವೈಡರ್ಗಳು ಒಂದು ಚಿಕ್ಕ ಕರೆಯನ್ನು ಮಾಡುವಾಗ ಅನುಭವಿಸುವ ತೊಂದರೆಗಳಿಗೆ ಗಮನ ಕೊಡೋದಿಲ್ಲ. ಅದೂ ಕೂಡ ಭಾರತದ ಟೆಕ್ ಕ್ಯಾಪಿಟಲ್ ಬೆಂಗಳೂರಿನಲ್ಲಿ.

ಭಾರತದಲ್ಲಿ ಉದ್ಯಮಿಯಾಗೋದು ಅಂದ್ರೆ ಅದು ಸುಲಭದ ಮಾತಲ್ಲ. ಇಂತಹ ಸಮಸ್ಯೆಗಳ ಜೊತೆಗೆ ಹಲವು ನಾಟಕೀಯತೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಇದ್ರ ಜೊತೆಗೆ ಅಧಿಕಾರ ಶಾಹಿಗಳ ದರ್ಪ ಮತ್ತು ಇತರೆ ನೋವುಗಳನ್ನು ಕೂಡ ಅನುಭವವಿಸಲೇಬೇಕು. ಇದೆಲ್ಲದರ ನಡುವೆ ಮೂಲ ಸೌಕರ್ಯಗಳ ಕೊರತೆ ಉದ್ಯಮಿಗಳನ್ನು ಸಾಕಷ್ಟು ಕಾಡುತ್ತಿದೆ. ಚೀನಾ ಭಾರತಕ್ಕಿಂತ ಉದ್ದ ಅಗಲಗಳಲ್ಲಿ 3 ಪಟ್ಟು ದೊಡ್ಡದಾಗಿದ್ರೂ, ಜನಸಂಖ್ಯೆಯಲ್ಲಿ ಭಾರತ ಚೀನಾಕ್ಕೆ ಸಮನಾಗಿ ನಿಲ್ಲುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

image


ಇದ್ರಿಂದ ನನ್ನಂತಹವರು ಸಾಕಷ್ಟು ಬಾರಿ ನಿರಾಸೆಗೊಂಡಿರೋದು ಸಹಜ. ಆದ್ರೆ ಪ್ರತಿದಿನ ಇಂತಹ ಸಮಸ್ಯೆಗಳನ್ನು ನಿರೀಕ್ಷೆ ಮಾಡುವಷ್ಟು ಸಮಸ್ಯೆಗಳು ನಮ್ಮಲ್ಲಿವೆ.

ಇದೆಲ್ಲವನ್ನು ನೀವು ನಂಬೋದು ಕಷ್ಟ. ಅದಕ್ಕಾಗಿ ಒಂದು ಅತ್ಯುತ್ತಮ ಅನುಭವವನ್ನು ಕೂಡ ಹೇಳ್ತಿನಿ. ನಾನು ಸೈಂಟ್ ಸ್ಟೀಫನ್ಸ್ ಕಾಲೇಜಿಗೆ ಸೇರುವ ಸಲುವಾಗಿ ಪಟ್ನಾದಿಂದ ದೆಹಲಿಗೆ ಶಿಫ್ಟ್ ಆಗಿದ್ದೆ. ಶಾಲಾದಿನಗಳಲ್ಲಿ ನಾನು ಚರ್ಚಾ ಸ್ಪರ್ಧೆಯಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದೆ. ಹೀಗಾಗಿ ನನಗೆ ದೆಹಲಿ ಕಾಲೇಜ್ ನಲ್ಲೂ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸೋದಿಕ್ಕೆ ಅವಕಾಶ ಸಿಗುತ್ತೆ ಅಂತ ನಂಬಿದ್ದೆ. ಆದ್ರೆ ಅಲ್ಲಿ ಅವಕಾಶ ನನಗೆ ಸಿಗಲಿಲ್ಲ. ಕಾರಣ ಕೇಳಿ ನನಗೆ ಅಚ್ಚರಿಯಾಯಿತು. ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವ ನಿಯಮ ನನಗೆ ಗೊತ್ತಿಲ್ಲ ಅಂತ ಹೇಳಿಬಿಟ್ರು. ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲು ನನ್ನ ವಿಷಯವನ್ನು ಪ್ರಸ್ತುತ ಪಡಿಸುವಾಗ ಕೆಲ ನಿಮಯಗಳನ್ನು ಪಾಲಿಸಬೇಕಿತ್ತು. ಆದ್ರೆ ನನಗೆ ಅದು ಗೊತ್ತಿರಲಿಲ್ಲ. ನಾನು ಭ್ರಮನಿರಸನಗೊಂಡಿದ್ದೆ.

ನಾನು ಪಾಟ್ನಾಕ್ಕೆ ವಾಪಾಸಾದ ಮೇಲೆ ನನ್ನ ಟೀಚರ್ ರೇಖಾ ಶ್ರೀವಾಸ್ತವ್ ಗೆ ನನಗಾದ ಅನುಭವದ ಬಗ್ಗೆ ತಿಳಿಸಿದೆ. ಪಾಟ್ನಾದ ಅತ್ಯುತ್ತಮ ಶಾಲೆಗೆ ಒಂದು ಅತ್ಯುತ್ತಮ ವಿದ್ಯಾರ್ಥಿಯನ್ನು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುವ ಶಕ್ತಿ ಇಲ್ಲದೇ ಇದ್ದಿದ್ದು ನನ್ನನ್ನು ಇಂದಿಗೂ ಕಾಡುತ್ತಿದೆ. ಆದ್ರೆ ಆವತ್ತು ಆ ಟೀಚರ್ ನಿನಗೇನು ಸಿಗಲಿಲ್ಲವೋ ಅದು ನಿನ್ನನ್ನು ಮತ್ತಷ್ಟು ಎತ್ತರಕ್ಕೆ ಏರುವಂತೆ ಹುರಿದುಂಬಿಸುತ್ತದೆ ಅಂತ ಬೆನ್ನು ತಟ್ಟಿ ಕಳುಹಿಸಿದ್ರು. 1999ರ ಈ ಘಟನೆ ನನ್ನನ್ನು ಸಾಕಷ್ಟು ಕಾಡಿತು, ಇನ್ನೂ ಕಾಡ್ತಿದೆ. ನನಗೇನು ಗೊತ್ತಿಲ್ಲವೋ ಅಥವಾ ನನ್ನಲ್ಲೇನು ಕೊರತೆ ಇದೆಯೋ ಅದನ್ನು ನಾನು ಮೀರಿ ನಿಲ್ಲುವ ಪ್ರಯತ್ನವನ್ನು ಇಂದಿಗೂ ಮಾಡುತ್ತಿದ್ದೇನೆ.

ನೋವು ಅನುಭವಿಸದ ಹೊರತು ಸಂತೋಷದ ಅನುಭವವನ್ನು ವರ್ಣಿಸಲು ಅಸಾಧ್ಯ. ವೈಫಲ್ಯ ಕಾಣದ ಹೊರತು ಯಶಸ್ಸನ್ನು ಅನುಭವಿಸಲು ಹೇಗೆ ಸಾಧ್ಯ..? ಇಲ್ಲದೇ ಇರುವ ಅನುಭವ ಹೇರಳವಾಗಿ ಇರುವುದರ ಬಗ್ಗೆ ತಿಳಿಸಿಕೊಡುತ್ತದೆ ಅನ್ನೋದು ಸತ್ಯ.

ಭಾರತದ ಎಲ್ಲಾ ಉದ್ಯಮಿಗಳು ಮತ್ತು ಉದ್ಯಮಿಯಾಗುವ ಕನಸು ಕಾಣುವವರು ಒಳ್ಳೆ ಅವಕಾಶವನ್ನು ಪಡೆದುಕೊಂಡಿದ್ದಾರೆ. ಆದ್ರೆ ನಾವು ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಆದ್ರೆ ನಮ್ಮ ಯಶಸ್ಸಿನ ಮಾರ್ಗಗಳ ಬಗ್ಗೆ ನಾವೇ ಆಲೋಚನೆ ಮಾಡಿ ಹೆಜ್ಜೆ ಇಡಬೇಕಿದೆ. ಒಂದು ಬದಲಾವಣೆ ಬೇಕಿದೆ. ಆ ಬದಲಾವಣೆಯಿಂದ ಎಲ್ಲವೂ ಸರಿ ಹೋಗಬೇಕಿದೆ. ಆದ್ರೆ ಇದು ಹೇಗೆ ಸಾಧ್ಯ..?

ಸಾರೇ ಜಹಾಸೇ ಅಚ್ಛಾ ಅನ್ನೋದು ಭಾರತದ ಅವಕಾಶಗಳು ನಮ್ಮದೇ ಅನ್ನೋದು ಆಗಿದೆ.

    Share on
    close