ಮಕ್ಕಳ ಬಟ್ಟೆಗಳ ಲೋಕದಲ್ಲಿ ‘ಇಂದ್ರಯಾನ’

ಟೀಮ್​​ ವೈ.ಎಸ್​​.

0

ಮೋಹಿತಾ ಇಂದ್ರಯಾನ ಅವರ ಕುಟುಂಬವು ಅಮೆರಿಕಕ್ಕೆ ಪ್ರವಾಸ ಹೋಗಿತ್ತು. ಜೊತೆಗೆ 2 ವರ್ಷ 6 ತಿಂಗಳ ಮಕ್ಕಳಿದ್ದರು. ಈ ಪ್ರವಾಸದ ವೇಳೆಗೆ ಅವರಿಗೆ ಭಾರತ ಮತ್ತು ಅಮೆರಿಕಾದಲ್ಲಿನ ಮಕ್ಕಳ ಉಡುಪುಗಳ ಕ್ಷೇತ್ರದಲ್ಲಿ ಭಾರೀ ವ್ಯತ್ಯಾಸವಿರುವುದು ಗಮನಕ್ಕೆ ಬಂತು. ಅಲ್ಲಿ ಟ್ವೀನ್ಸ್ ಗಳಿಗಾಗಿಯೇ ಪ್ರತ್ಯೇಕ ಆಯ್ಕೆಗಳಿದ್ದವು. ಬೆಳೆಯುತ್ತಿರುವ ಮಕ್ಕಳನ್ನು ಗಮನದಲ್ಲಿಟ್ಟುಕೊಂಡೇ ಅಲ್ಲಿ ಉಡುಪುಗಳನ್ನು ತಯಾರಿಸುತ್ತಿದ್ದರು, ಎನ್ನುತ್ತಾರೆ ಮೋಹಿತಾ.

ಭಾರತದಲ್ಲಿ ನಿಯಮಿತವಾಗಿ ಲಭ್ಯವಿರುವ ಉತ್ಪನ್ನಗಳನ್ನಷ್ಟೇ ಖರೀದಿ ಮಾಡುತ್ತಿದ್ದ ಮೋಹಿತಾಗೆ ಅಮೆರಿಕಾದ ಪ್ರವಾಸವು ಕಣ್ತೆರೆಯುವಂತೆ ಮಾಡಿರು. “ಬಹುತೇಕ ಬಾರಿ ನಾನು ನಮ್ಮ ಇಬ್ಬರೂ ಮಕ್ಕಳಿಗೆ ಸರಿಹೊಂದುವಂತಹ ಬಟ್ಟೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ 6-12ವರ್ಷದೊಳಗಿನ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಏನನ್ನೂ ವಿನ್ಯಾಸ ಮಾಡುತ್ತಿರಲಿಲ್ಲ. ” ಹೀಗಾಗಿ, ತನ್ನ ಪತಿಯ ಜೊತೆ ಸೇರಿಕೊಂಡು, ಈ ವಿಭಾಗದಲ್ಲಿ ಹೊಸ ಉತ್ಪನ್ನಗಳನ್ನು 612 ಲೀಗ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದರು.

ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದ ಮೋಹಿತಾ, ನವದೆಹಲಿಯ ನ್ಯಾಷನಲ್ಇನ್ಸ್​​ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಅಪಾರೆಲ್ ಮಾರ್ಕೆಟಿಂಗ್ ಅಂಡ್ ಮರ್ಚಂಡೈಸಿಂಗ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿಷುವಲ್ ಮರ್ಚಂಡೈಸರ್ ಆಗಿ ಕನ್ಸಲ್ಟೆನ್ಸಿ ಮತ್ತು ಸೇಲ್ಸ್ ತರಬೇತಿ ಕಾರ್ಯಕ್ರಮಗಳನ್ನು ನಿರ್ವಹಿಸುವ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದರು.

6-12 ವಯೋಮಾನದ ಮಕ್ಕಳಿಗೆ ವಿನ್ಯಾಸ

ಇಂಡಿಯನ್ ಕ್ಲೋತಿಂಗ್ ಲೀಗ್ ಪ್ರೈವೇಟ್ ಲಿಮಿಟೆಡ್ (ಐಸಿಎಲ್ಪಿಎಲ್)ನ ನೋಂದಾಯಿತ ಟ್ರೇಡ್​​ಮಾರ್ಕ್ ಆಗಿರುವ 612 ಲೀಗ್, ಭಾರತದ ಟ್ವೀನ್ಸ್ ಗಾಗಿನ ಚೊಚ್ಚಲ ಉಡುಪುಗಳ ಬ್ರಾಂಡ್ ಆಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಭಾರತದಲ್ಲೇ ಉತ್ಪಾದನೆ ಮಾಡುತ್ತಿರುವ ಈ ಬ್ರಾಂಡ್ ಮಕ್ಕಳ ಜೀವನಶೈಲಿಯನ್ನು ಸಂಭ್ರಮಿಸುವ ರೀತಿಯಲ್ಲಿ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತಿದೆ. ಬಾಲ್ಯದಿಂದ ಯೌವ್ವನಕ್ಕೆ ಕಾಲಿಡುವ ಈ ಅವಧಿಯಲ್ಲಿ ಮಕ್ಕಳನ್ನು ಉತ್ತಮರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಬ್ರ್ಯಾಂಡ್ ಕೆಲಸ ಮಾಡುತ್ತಿದೆ. ಐಸಿಎಲ್​​ಪಿಎಲ್ ನಡಿಯಲ್ಲೇ 2013ರಲ್ಲಿ ಬೇಬಿ ಲೀಗ್ ಎನ್ನುವ ಮತ್ತೊಂದು ಬ್ರಾಂಡ್ ಆರಂಭಿಸಲಾಯಿತು. ಇದರ ಮೂಲಕ 0-2 ವರ್ಷದೊಳಗಿನ ಪುಟಾಣಿಗಳಿಗೆ ಉಡುಪುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಅಮೆರಿಕಾದಿಂದ ಹಿಂತಿರುಗಿದ ಬಳಿಕ ಮೋಹಿತಾ ಸುಮಾರು ಒಂದು ವರ್ಷಗಳ ಕಾಲ ಸಂಶೋಧನೆ, ಸಂವಹನ, ಸೈಜ್ ಚಾರ್ಟ್ ತಯಾರಿ, ಬಣ್ಣಗಳ ಆಯ್ಕೆ ಮತ್ತಿತರ ವಿಚಾರಗಳನ್ನು ಅಭ್ಯಾಸ ಮಾಡಿದರು.

ಲುಧಿಯಾನ, ಜೈಪುರ, ನಾಗ್ಪುರ ಮತ್ತು ಪುಣೆಗಳಲ್ಲಿ 2008ರ ಅಕ್ಟೋಬರ್​​ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಬಿಡುಗಡೆ ಮಾಡಿದರು. ಇವರ ಉತ್ಪನ್ನಗಳಿಗೆ ಬಹುಬೇಗ ಜನಪ್ರಿಯತೆ ಲಭಿಸಿತು. ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಆಸಕ್ತಿದಾಯಕ ವಿಚಾರವೇನೆಂದರೆ, ಬ್ರಾಂಡ್ ರೇಂಜನ್ನು ಆಧುನಿಕ ಫಾರ್ಕಾಸ್ಟಿಂಗ್ ತಂತ್ರಜಾನ ಬಳಸಿ ಡಿಸೈನರ್​ಗಳ ತಂಡವೊಂದು ವಿನ್ಯಾಸಗೊಳಿಸಿದೆ. ಈ ಪರಿಕಲ್ಪನೆ ಭಾರತೀಯ ಮೂಲದ ಬ್ರಾಂಡ್​​ಗಳಿಗೆ ತುಂಬಾ ಹೊಸದು. ಆದರೆ, ಈ ಉತ್ಪನ್ನಗಳು ಅತ್ಯಂತ ಗರಿಷ್ಟ ಗುಣಮಟ್ಟ ಕಾಯ್ದುಕೊಳ್ಳುತ್ತವೆ. ಅಂದರೆ, ಬಟನ್, ಜಿಪ್ ಮತ್ತು ಇತರ ಸಾಮಗ್ರಿಗಳೂ ಕೂಡಾ ನಿರ್ದಿಷ್ಟವಾದ ಪರಿಕ್ಷೆಗೆ ಒಳಪಡುತ್ತವೆ.

ಅತ್ಯಾಧುನಿಕ ಮೂಲಸೌಕರ್ಯ ಹೊಂದಿರುವ ಘಟಕದಲ್ಲೇ ಈ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಲುಧಿಯಾನದ ಎರಡು ಕಡೆಗಳಲ್ಲಿ ಘಟಕಗಳನ್ನು ಹೊಂದಿದ್ದು, ಬಟ್ಟೆಯಿಂದ ಆರಂಭಿಸಿ, ಗಾರ್ಮೆಂಟ್ ಫಿನಿಶಿಂಗ್ ವರೆಗೆ ಎಲ್ಲವನ್ನೂ ಇಲ್ಲೇ ನಿರ್ವಹಿಸಲಾಗುತ್ತಿದೆ. ಉತ್ಪಾದನಾ ಘಟಕಗಳು ಪ್ರತಿ ತಿಂಗಳು ಸುಮಾರು 1,35,000 ಉತ್ಪನ್ನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.

2008ರಲ್ಲಿ ಲುಧಿಯಾನದಲ್ಲಿ ಸುಮಾರು 8 ಮಿಷನ್​​ಗಳ ಪುಟ್ಟ ಘಟಕವೊಂದನ್ನು ಸ್ಥಾಪಿಸಲಾಯಿತು. 2009ರಲ್ಲಿ ದೆಹಲಿಯ ನಾಲ್ಕು ಮಳಿಗೆಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡಲು ಆರಂಭಿಸಿದರು. ದೆಹಲಿ ಮಾರುಕಟ್ಟೆಯಲ್ಲಿ ಉತ್ಪನ್ನಕ್ಕೆ ಒಳ್ಳೆಯ ಸ್ವಾಗತ ಸಿಕ್ಕಿತು.

ಪ್ರಯಾಣದ ಜೊತೆಗೆ ಕಲಿಕೆ

ಮಕ್ಕಳ ಉಡುಪುಗಳು ನೋಡಲು ತುಂಬಾ ಸರಳವಾಗಿ ಕಾಣಿಸುತ್ತದೆ. ಆದರೆ, ಮಕ್ಕಳು ತುಂಬಾನೇ ಫ್ಯಾಷನ್ ಪ್ರಿಯರಾಗಿರುವುದರಿಂದ ಅವರಿಗೆ ಬಟ್ಟೆಗಳನ್ನು ವಿನ್ಯಾಸ ಮಾಡುವುದು ತುಂಬಾ ಕಷ್ಟದ ಕೆಲಸ. ಅಮೆರಿಕಾದಲ್ಲಿನ ಮತ್ತೊಂದು ಘಟನೆಯಿಂದಾಗಿ ಅವರಿಗೆ ತಮ್ಮ ಬಟ್ಟೆಗಳ ಜನಪ್ರಿಯತೆಯ ಅರಿವಾಯಿತು. “ಪುಟಾಣಿ ಭಾರತೀಯ ಹುಡುಗಿಯೊಬ್ಬಳು ವಿದೇಶದಲ್ಲಿ ನನ್ನ ವಿನ್ಯಾಸ ಬಟ್ಟೆ ಧರಿಸಿರುವುದನ್ನು ನಾನು ನೋಡಿದ್ದೆ. ಆ ಕ್ಷಣವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ” ಎನ್ನುತ್ತಾರೆ ಮೋಹಿತಾ.

ಉದ್ಯಮದ ಪಾಲುದಾರನಾಗಿ ಪತಿ

ಉದ್ಯೋಗಸ್ಥ ಮಹಿಳೆಯಾಗಿ, ಮೋಹಿತಾರ ದೊಡ್ಡ ಸವಾಲೇ ತಮ್ಮ ಮಕ್ಕಳಾಗಿದ್ದರು. ಆದರೆ, ತಮ್ಮ ಪತಿಯನ್ನು ಉದ್ಯಮದ ಪಾಲುದಾರನಾಗಿ ಮಾಡಿಕೊಂಡಿದ್ದು ಮೋಹಿತಾರಿಗೆ ತುಂಬಾನೇ ಸಹಾಯ ಮಾಡಿತು. ಮನು ಇಂದ್ರಯಾನ್ ಅವರು ಮಾರುಕಟ್ಟೆಯ ಸಂಕೀರ್ಣತೆ, ಆರ್ಥಿಕ ಯೋಜನೆಗಳನ್ನು ನೋಡಿಕೊಂಡರೆ, ಮೋಹಿತಾ ಅವರು ಕ್ರಿಯೇಟಿವ್ ಕಡೆಗೆ ಗಮನ ಹರಿಸಿದರು.

ನಿಮಗೆ ಆಸಕ್ತಿ ಇರುವುದನ್ನೇ ಆರಂಭಿಸಿ

ಮಹಿಳೆಯರಿಗೂ ಉದ್ಯಮಶೀಲತೆ ಇರಬೇಕು ಎನ್ನುವುದನ್ನು ಮೋಹಿತಾ ಬಲು ಗಟ್ಟಿಧ್ವನಿಯಿಂದ ಪ್ರತಿಪಾದಿಸುತ್ತಾರೆ. ಆದರೆ, ಉದ್ಯಮ ಆರಂಭಿಸುವಾಗ ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲೇ ಆರಂಭಿಸಿ ಎನ್ನುವ ಸಲಹೆಯನ್ನೂ ನೀಡುತ್ತಾರೆ. “ನೀವು ಖುಷಿಪಡುವ ಕಾಯಕದಲ್ಲೇ ಮುಂದುವರಿಯಿರಿ, ಇಲ್ಲದಿದ್ದರೆ ಅದು ಹೊರೆಯಾಗುತ್ತದೆ. ನಿಮ್ಮ ಕನಸುಗಳನ್ನು ಬೆನ್ನತ್ತಿ. ಅದಕ್ಕೆ ನಿಮ್ಮಲ್ಲಿರುವ ಕೌಶಲ್ಯವನ್ನು ಧಾರೆ ಎರೆಯಿರಿ” ಎನ್ನುತ್ತಾರೆ ಮೋಹಿತಾ.

Related Stories