ಕೇರಳ ಈಗ 100% ವಿದ್ಯುತ್ ಸಂಪರ್ಕ ಹೊಂದಿದ ರಾಜ್ಯ..!

ಟೀಮ್​ ವೈ.ಎಸ್​. ಕನ್ನಡ

1

"ದೇವರ ನಾಡು" ಖ್ಯಾತಿಯ ಕೇರಳ ಪ್ರವಾಸಿ ತಾಣಗಳಿಂದ ಪ್ರಸಿದ್ಧಿ ಪಡೆದಿದ್ದು ಹಳೆಯ ಮಾತು. ಅಭಿವೃದ್ಧಿ ಮತ್ತು ಶೈಕ್ಷಣಿಕ ವಿಚಾರದಲ್ಲೂ ಕೇರಳಕ್ಕೆ ಯಾವ ರಾಜ್ಯ ಕೂಡ ಸಾಟಿಯಿಲ್ಲ. ಕೇರಳ ಈಗ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದೆ. ಕೇರಳ ಶೇಕಡಾ 100ರಷ್ಟು ವಿದ್ಯುತ್ ಬಳಕೆ ಮಾಡುವ ರಾಜ್ಯವಾಗಲಿದೆ. ಕೇರಳದ ಪ್ರತಿಯೊಂದು ಮನೆಗೂ ವಿದ್ಯುತ್ ಸೌಲಭ್ಯ ಸಿಕ್ಕಿದೆ. ಈ ಮೂಲಕ ದೇಶದಲ್ಲೇ ಈ ಸಾಧನೆ ಮಾಡಿದ ಮೊದಲ ರಾಜ್ಯ ಅನ್ನುವ ಕೀರ್ತಿಯನ್ನು ಪಡೆಯಲಿದೆ.

ಅಂದಹಾಗೇ ಕೇರಳ ರಾಜ್ಯದಲ್ಲಿ ಕೇವಲ 1000 ಕುಟುಂಬಗಳು ಮಾತ್ರ ವಿದ್ಯುತ್ ವಂಚಿತವಾಗಿರಲಿವೆ. ಈ ಪೈಕಿ 150 ಬುಡಕಟ್ಟು ಕುಟುಂಬಗಳಾಗಿವೆ. ಇವರು ದಟ್ಟ ಕಾಡಿನ ಮಧ್ಯೆ ವಾಸ ಮಾಡುತ್ತಿದ್ದಾರೆ. ಇವರಿಗೆ ವಿದ್ಯುತ್ ಒದಗಿಸುವ ಬಗ್ಗೆ ಯೋಜನೆಗಳಿದ್ದರೂ, ಅರಣ್ಯ ಇಲಾಖೆ ವಿದ್ಯುತ್ ಲೈನ್​ಗಳನ್ನು ಎಳೆಯಲು ಅನುಮತಿ ನೀಡಿಲ್ಲ. ಅಷ್ಟೇ ಅಲ್ಲ ಕೆಲವು ಕೋರ್ಟ್ ಕೇಸ್ಗಳು ಕೂಡ ಬಾಕಿ ಉಳಿದುಕೊಂಡಿವೆ.

“ ಕೇರಳ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್ ಸುಮಾರು 1.25 ಕೋಟಿ ಗ್ರಾಹಕರನ್ನು ಹೊಂದಿದೆ. 1000 ಕುಟುಂಬಗಳನ್ನು ಹೊರತು ಪಡಿಸಿ, ಉಳಿದವರೆಲ್ಲರಿಗೂ ವಿದ್ಯುತ್ ನೀಡಲಾಗಿದೆ. ಸುಮಾರು 1.25 ಲಕ್ಷ ಕುಟುಂಬಗಳು ಬಡತನ ರೇಖೆಗಿಂತಲೂ ಕೆಳಗಿವೆ. ಈ ಪೈಕಿ 32,000 ಪರಿಶಿಷ್ಟ ಜಾತಿಯ ಮನೆಗಳಿದ್ದರೆ, 17, 500 ಬುಡಕಟ್ಟು ಕುಟುಂಬಗಳಾಗಿವೆ. ಕೆಲವು ಕುಟುಂಬಗಳು ವೈರಿಂಗ್ ಕೂಡ ಮಾಡಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇವರಿಗೆ ಕೇರಳ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್​ನ ಉದ್ಯೋಗಿಗಳ ಸಂಘ ನೆರವು ನೀಡಿದೆ. ”
- ಎಂ.ಎಂ.ಮಣಿ, ಇಂಧನ ಸಚಿವ, ಕೇರಳ ರಾಜ್ಯ

ಕೇರಳ ಸರಕಾರ 4,70,000 ಕುಟುಂಬಗಳಿಗೆ ವಿದ್ಯುತ್ ನೀಡಿದೆ. ಈ ಪೈಕಿ 1,50,000 ಕುಟುಂಬಗಳು ಸಂಪೂರ್ಣ ವಿದ್ಯುತ್ ಯೋಜನೆಯ ಅಡಿಯಲ್ಲಿ ಸಂಪರ್ಕ ಪಡೆದುಕೊಂಡಿವೆ. ಪ್ರತಿ ತಿಂಗಳು 20 ಯುನಿಟ್​ಗಿಂತಲೂ ಕಡಿಮೆ ವಿದ್ಯುತ್ ಉಪಯೋಗಿಸುವ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಕೇಂದ್ರ ಸರಕಾರದ ನಿಯಮದಂತೆ ಪ್ರತಿಯೊಂದು ಗ್ರಾಮ ಶೇಕಡಾ 90 ರಷ್ಟು ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರೆ, ಆ ಗ್ರಾಮವನ್ನು ಪೂರ್ಣವಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಮವೆಂದು ಘೋಷಿಸಬಹುದಾಗಿದೆ. ಈಗ ಕೇರಳ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡ ದೇಶದ ಮೊದಲ ರಾಜ್ಯವಾಗಲಿದೆ.

ಕೇರಳ ರಾಜ್ಯವನ್ನು ಸಂಪೂರ್ಣ ವಿದ್ಯುತ್ ಸಂಪರ್ಕ ಪಡೆದ ರಾಜ್ಯವೆಂದು ಮಾಡಲು ಸುಮಾರು 174 ಕೋಟಿ ರೂಪಾಯಿಗಳ ಖರ್ಚಾಗಿದೆ. ಈ ಪೈಕಿ ಶಾಸಕರ ನಿಧಿಯಿಂದ 37.34 ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಲಾಗಿದೆ. ಹೊಸ ಸಂಪರ್ಕ ಪಡೆಯ ಬಯಸುವವರಿಗಾಗಿ ಗ್ರಾಹಕ ಸೇವೆಯನ್ನು ಕೂಡ ಜಾರಿಗೊಳಿಸಲಾಗಿದೆ. ವಾಟ್ಸ್ ಆ್ಯಪ್ ಅಥವಾ ಎಸ್ಎಂಎಸ್ ಮೂಲಕ ಹೊಸ ಸಂಪರ್ಕ ಪಡೆಯಬಹುದು. ಒಟ್ಟಿನಲ್ಲಿ ಕೇರಳದ ಸಾಧನೆ ಎಲ್ಲಾ ರಾಜ್ಯಗಳಿಗೂ ಮಾದರಿ ಆಗಲಿದೆ.

ಇದನ್ನು ಓದಿ:

1. ಸ್ಟಾರ್ಟ್​ಅಪ್​ ಯಶಸ್ಸಿಗೆ ಏನೇನು ಮುಖ್ಯ..? 

2. 5 ದಿನಗಳಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಧೀರ ಮಹಿಳೆ

3. ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"

Related Stories