ಆಟೋ ರಿಕ್ಷಾ ಜಾಹೀರಾತು ಸ್ಟಾರ್ಟ್ ಅಪ್ ನಲ್ಲಿ 1 ಕೋಟಿ ಮೊತ್ತದ ಬಂಡವಾಳ ಸೃಷ್ಠಿ.. !

ಟೀಮ್​ ವೈ.ಎಸ್​. ಕನ್ನಡ

0

ಪುಣೆ ಮೂಲದ ಸಾರ್ಟ್ ಅಪ್ ಇದೀಗ ಸ್ಟಾರ್ಟ್ ಅಪ್ ಲೋಕದಲ್ಲೇ ಭಾರೀ ಕುತೂಹಲಗಳಿಗೆ ಕಾರಣವಾಗಿದೆ. ಬ್ಯುಸಿನೆಸ್ ಮಾರ್ಕೆಟ್ ನಲ್ಲಿ ಈಗ ಇದ್ರದ್ದೇ ಚರ್ಚೆ, ಮಾತುಕತೆ. ಯಾಕಂದ್ರೆ ಈ ಸ್ಟಾರ್ಟ್ ಅಪ್ ಇಡೀ ಉದ್ಯಮ ವಲಯದಲ್ಲಿ ಸಂಚಲನ ಹುಟ್ಟಿಸಿದೆ. ಯಾಕಂದ್ರೆ ಈ ಕಂಪನಿ ಕೇವಲ 1 ವರ್ಷದಲ್ಲಿ ಒಂದು ಕೋಟಿ ರೂಪಾಯಿ ಬಂಡವಾಳ ಉತ್ಪತ್ತಿ ಮಾಡುವ ಮೂಲಕ ನಿಬ್ಬೆರಗು ಹುಟ್ಟಿಸಿದೆ. ಈ ಕಂಪನಿ ಹೆಸ್ರು ಪ್ರೊಕ್ಸಿಮಿಟಿ. ಒನ್ ಕ್ರೌಡ್ ಕಾನ್ಸೆಪ್ಟ್ ನಲ್ಲಿ 2015ರಲ್ಲಿ ಶುರುವಾದ ಈ ಕಂಪನಿ ಇದೀಗ ಇಡೀ ಪುಣೆಯಲ್ಲೇ ಮನೆಮಾತಾಗಿದೆ. ಒಂದು ಕೋಟಿ ರೂಪಾಯಿ ಬಂಡವಾಳವನ್ನ ಹರಿಸುವ ಮೂಲಕ ಸ್ಟಾರ್ಟ್ ಅಪ್ ಪ್ರಪಂಚವನ್ನ ಸೆಳೆದುಕೊಳ್ಳುವುದರ ಜೊತೆಗೆ ಇತರೆ ಮಹಾನಗರಗಳಲ್ಲೂ ಇದು ಬೇರು ಬಿಡುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.

ಪ್ರೊಕ್ಸಿಮಿಟಿ ಹುಟ್ಟಿನ ಕಥೆ..

ಯಶ್ ಮುಥಾ, ಕಮಲೇಶ್ ಸಂಚಿತಿ ಪ್ರೊಕ್ಸಿಮಿಟಿಯ ಸೃಷ್ಠಿಕರ್ತರು. ಇವರೊಂದಿಗೆ 16 ಮಂದಿಯ ಸೂಕ್ತ ತಂಡವೂ ಕೆಲಸ ಮಾಡಿದೆ ಅನ್ನೋದು ವಿಶೇಷ. ಈ ಸ್ಟಾರ್ಟ್ ಅಪ್ ಗ್ರಾಹಕರನ್ನ ಸೆಳೆಯಲು ಮತ್ತು ತಲುಪಲು ಆಯ್ತುಕೊಂಡ ಮಾರ್ಗ ಅತ್ಯಂತ ಕುತೂಹಲಕಾರಿಯಾಗಿದೆ. ಪುಣೆಯಲ್ಲಿನ ಆಟೋ ರಿಕ್ಷಾಗಳನ್ನ ಬಳಸಿಕೊಂಡ ಪ್ರೊಕ್ಸಿಮಿಟಿ ಗ್ರಾಹಕರನ್ನ ಪರಸ್ಪರ ಬೆಸೆದಿದೆ ಅನ್ನೋದು ವಿಶೇಷ. ಆಯ್ದ ಕೆಲವು ಆಟೋ ರಿಕ್ಷಾಗಳಲ್ಲಿ ಟ್ಯಾಬ್ಲೆಟ್ ಗಳನ್ನ ಪ್ರೊಕ್ಸಿಮಿಟಿ ಅಳವಡಿಸಿದೆ. ಹೀಗಾಗಿ ಅತ್ಯುತ್ಕೃಷ್ಟವಾದ ಆಡಿಯೋ ವಿಡಿಯೋ , ಚಿತ್ರಗಳನ್ನ ಲೋಕೇಶನ್ ಸಹಿತ ವಿವರಿಸತ್ತದೆ. ಹೀಗಾಗಿ ಇದು ಗ್ರಾಹಕರನ್ನ ಹಿಡಿದಿಡುವಲ್ಲಿ ಹೆಚ್ಚು ಯಶಸ್ಸು ಕಂಡಿದೆ.

ಇದನ್ನು ಓದಿ: ಗಾಳಿಪಟದಿಂದ ವಿದ್ಯುತ್ ಉತ್ಪಾದನೆ: ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸಂಶೋಧನೆ

ಆಟೋ ರಿಕ್ಷಾಗಳಲ್ಲಿ ಟ್ಯಾಬ್ಲೆಟ್ ಗಳನ್ನ ಬಳಸುವುದರಿಂದ ಇತರೆ ಬೇರೆ ಬೇರೆ ವ್ಯಕ್ತಿಗಳನ್ನ ಬೆಸೆಯಲು ಹಾಗೂ ಇತರೆ ಅಂಕಿ ಅಂಶಗಳನ್ನ ಖಚಿತವಾಗಿ ನೀಡಲು ಸಾಧ್ಯವಾಗುತ್ತಿದೆ. ಅಲ್ಲದೆ ಇತರೆ ಬ್ರ್ಯಾಂಡ್ ಗಳ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಲು ಇಲ್ಲಿ ಸಾಧ್ಯವಾಗುತ್ತಿದೆ. 1 ಕ್ರೌಡ್ ಕಾನ್ಸೆಪ್ಟ್ ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಅನಿಲ್ ಗುಡಿ ಬಂಡೆ ಇದ್ರ ಹಿಂದಿರುವ ಮಾಸ್ಟರ್ ಮೈಂಡ್. ವಿಶೇಷ ಅಂದ್ರೆ ಪ್ರೊಕ್ಸಿಮಿಟಿ ತನಗೆ ಬರುವ ಲಾಭಾಂಶದಲ್ಲಿ ಆಟೋ ರಿಕ್ಷಾ ಮಾಲಿಕರಿಗೆ ಶೇಕಡಾ 10 ರಿಂದ 15 ರಷ್ಟು ಲಾಭಾಂಶವನ್ನ ಹಂಚಿಕೊಳ್ಳುತ್ತಿದೆ. ಇದರಿಂದಾಗಿ ಆಟೋ ವಲಯದಿಂದಲೂ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

 “ ಭಾರತದ ಹೊಸ ಸ್ಟಾರ್ಟ್ ಅಪ್ ಹೊಸತವನ್ನ ಸೃಷ್ಠಿಸುವತ್ತ ಸಾಗಿದೆ. ಇನ್ನು ಪ್ರೊಕ್ಸಿಮಿಟಿ ಒನ್ ಕ್ರೌಡ್ ಕಾನ್ಸೆಪ್ಟ್ ನಿಂದಾಗಿ ಶೂನ್ಯ ಬಂಡವಾಳ ಹೂಡಿಕೆಗಳನ್ನ ಮಾಡಲು ಸಾಧ್ಯವಾಗುತ್ತಿದೆ ”


ತಮ್ಮ ಬ್ಯುಸಿನೆಸ್ ಬಗ್ಗೆ ಯುವರ್ ಸ್ಟೋರಿಯೊಂದಿಗೆ ಮಾತುಕತೆಗಿಳಿದ ಪ್ರೊಕ್ಸಿಮಿಟಿಯ ಅಭಯ್ ಜಾಹೀರಾತಿನ ಗುಣಮಟ್ಟವನ್ನ ಎತ್ತರಿಸಬೇಕು. ಜೊತೆಗೆ ಅದರ ಹಿಂದಿರುವ ಅಂತಃ ಸತ್ವವನ್ನ ಸ್ಪಷ್ಟಪಡಿಸಲು ಇಲ್ಲಿ ಪ್ರಯತ್ನಿಸಬೇಕು ಅಂತ ಅಭಿಪ್ರಾಯಪಡುತ್ತಾರೆ. ಇನ್ನು ಕಂಪನಿಯ ಲೈಫ್ ಸೌಕಲ್ ಬಗ್ಗೆ ಎಲ್ಲಾ ರೀತಿ ಸ್ಪಷ್ಟತೆಗಳು ಹಾಗೂ ಗೌಪ್ಯತೆಗಳ ಬಗ್ಗೆ ಒತ್ತು ನೀಡುವುದು ಒಂದು ಉತ್ತಮ ನಡೆ ಅನ್ನೋದು ರಿಕಿ ಅಭಿಮತ. ಯಾವುದೇ ಉದ್ಯಮ ಅಥವಾ ಉತ್ಪನ್ನದಲ್ಲಿ ಬ್ರಾಂಡ್ ಗಟ್ಟಿಯಾಗಿದ್ದರೆ ಅದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕೇ ಸಿಗುತ್ತದೆ ಅನ್ನೋದು ಇವರ ಅನುಭವದ ಮಾತು. ಇನ್ನು ಇವರು ಗ್ರಾಹಕರ ಮುಂದೆ ವಿವರಿಸುವ ಟೇಬಲ್ ನಲ್ಲಿ ಎಲ್ಲಾ ಅಂಶಗಳನ್ನ ಸವಿವರವಾಗಿ ತೆರೆದಿಡುತ್ತಾರೆ. ಇನ್ನು ಇಲ್ಲಿನ ಆನ್ ಲೈನ್ ಮಾಹಿತಿಗಳಲ್ಲಿ ಎಲ್ಲವನ್ನೂ ದಾಖಲಿಸಲಾಗಿದೆ. ಭಾರತದಲ್ಲಿ ಕೊಡಲಾಗುವ ಮೂಲಭೂತ ಸೌಕರ್ಯಗಳಿಂದ ಹಿಡಿದು ಬ್ಯುಸಿನೆಸ್ ಗೆ ಸಿಗಬಹುದಾದ ಎಲ್ಲಾ ಬೆಂಬಲಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಈ ಮೂಲಕ ಆಟೋ ವಲಯವನ್ನ ಸಂಪೂರ್ಣವಾಗಿ ಬಳಸಿಕೊಂಡಿರುವ ಪ್ರೊಕ್ಸಿಮಿಟಿ ಸದ್ಯದಲ್ಲೇ ಟ್ಯಾಕ್ಸಿಗಳನ್ನೂ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಸ್ಟಾರ್ಟ್ ಅಪ್ ನ ವಿಶ್ಲೇಷಣೆ

ಪ್ರೊಕ್ಸಿಮಿಟಿ ಸ್ಟಾರ್ಟ್ ಅಪ್ ಇತ್ತೀಚೆಗೆ ಐಬಯೋಕಾನ್ ನಡೆದ ಹಾದಿಯಲ್ಲೇ ಸಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಬಯೋಕಾನ್ ಪವರ್ ಫುಲ್ ಸ್ಮಾರ್ಟ್ ಫೋನ್ ಗಳ ಮೂಲಕ ಜನರನ್ನ ಸುಲಭವಾಗಿ ತಲುಪುತ್ತಿತ್ತು. ಬ್ಯುಸಿನೆಸ್ ತಂತ್ರಜ್ಞರ ಪ್ರಕಾರ ಇದ್ರ ಮೂಲಕ 2014ರಲ್ಲಿ 4 ಬಿಲಿಯನ್ ಯುಎಸ್ ಡಾಲರ್ ನಷ್ಟು ಲಾಭಾಂಶವನ್ನ ದಾಖಲಿಸಲಾಗಿತ್ತು. ಇದೇ ಹಾದಿಯಲ್ಲಿ ಸಾಗುತ್ತಾ ಪುಣೆಯಲ್ಲಿ ಭರ್ಜರಿಯಾಗಿ ಮಿಂಚಿರುವ ಪ್ರೊಕ್ಸಿಮಿಟಿ, ಇದೀಗ ಇತರ ನಗರಗಳತ್ತಲೂ ಕಣ್ಣಿಟ್ಟಿದೆ. ಹೀಗಾಗಿ ಮಹಾನಗರಗಳಲ್ಲಿರುವ ಆಟೋ ರಿಕ್ಷಾ ಚಾಲಕರು ಹಾಗೂ ಮಾಲಿಕರು ಕೂಡ ಭರ್ಜರಿ ನಿರೀಕ್ಷೆಯೊಂದಿಗೆ ಕಾದಿದ್ದಾರೆ.

ಲೇಖಕರು – ಹರ್ಷಿತ್ ಮಲ್ಯ

ಅನುವಾದ – ಸ್ವಾತಿ 

ಇದನ್ನು ಓದಿ

1. ನನಗೆ ಗೊತ್ತಿಲ್ಲ ಎನ್ನಲು ಏಕೆ ಮುಜುಗರ..?

2. ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

3. 60 ವರ್ಷದ ಟೂ-ಪೀಸ್ ಮಾಡೆಲ್..! ಬಿಕಿನಿ ಧರಿಸೋ ಬಿಂದಾಸ್ ಅಜ್ಜಿ...

Related Stories