ಬಿಜೆಪಿ ಈಗ ಗೆದ್ದಿರಬಹುದು- ಮುಂದಿನ ಚುನಾವಣೆಯಲ್ಲಿ ಆಪ್ ಬಲಿಷ್ಠ ಎದುರಾಳಿ- ಅಶುತೋಷ್

ಟೀಮ್​ ವೈ.ಎಸ್​. ಕನ್ನಡ

ಬಿಜೆಪಿ ಈಗ ಗೆದ್ದಿರಬಹುದು- ಮುಂದಿನ ಚುನಾವಣೆಯಲ್ಲಿ ಆಪ್ ಬಲಿಷ್ಠ ಎದುರಾಳಿ- ಅಶುತೋಷ್

Sunday March 19, 2017,

4 min Read

ಲೇಖಕರು: ಅಶುತೋಷ್, ಆಪ್ ನಾಯಕರು

ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದ ತಕ್ಷಣ ಈ ಲೇಖನ ಬರೆಯಬೇಕು ಅಂದುಕೊಂಡಿದ್ದೆ. ಆದ್ರೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಮತ್ತು ವಿಧಾನ ಸಭೆಗಳ ಬಗ್ಗೆ ಸರಿಯಾದ ನಿರ್ಧಾರ ಆಗಲಿ ಎಂದು ಕಾದು ನೋಡಿದೆ. ಕಳೆದೊಂದು ವಾರದಲ್ಲಿ ದೇಶದ ರಾಜಕೀಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹಲವು ಊಹೆಗಳು ಮತ್ತು ವಿಶ್ಲೇಷಣೆಗಳು ನಡೆದಿವೆ. ಆದ್ರೆ ಇವುಗಳ ಮಧ್ಯೆ 3 ವಿಷಯಗಳ ಬಗ್ಗೆ ನಾವು ಗಮನ ಕೊಡಲೇಬೇಕಿದೆ. ಅವುಗಳ ಬಗ್ಗೆ ಚರ್ಚೆ ನಡೆಯಬೇಕಿದೆ,

1. 2019ರ ಲೋಕ ಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಪ್ರಸಿದ್ಧಿಯನ್ನು ತಡೆಯುವುದು ಕಷ್ಟ ಮತ್ತು ಅವರ ವಿಜಯಯಾತ್ರೆಯನ್ನು ಕಟ್ಟಿಹಾಕುವುದು ಕಷ್ಟ

2. ಕಾಂಗ್ರೆಸ್ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದೆ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಬಹದ್ದೂರ್ ಷಾ ಜಾಫರ್ ಆಗುತ್ತಿರುವುದು ಆ ಪಕ್ಷದೊಳಗೆ ಭಿನ್ನಮತ ಸೃಷ್ಟಿಸಿದೆ.

3. ದೇಶದ ರಾಜಕೀಯ ಸ್ಥಿತಿಯಲ್ಲಿ ಆಮ್ ಆದ್ಮಿ ಪಾರ್ಟಿ 2 ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಎಂದು ಬಿಂಬಿತವಾಗಿರುವುದು.

image


ಉತ್ತರ ಪ್ರದೇಶದಲ್ಲಿ ಬಿಜೆಪಿ ಸಾಧಿಸಿರುವ ದಿಗ್ವಿಜಯದ ಬಗ್ಗೆ ಎರಡು ಮಾತಿಲ್ಲ. ಚುನಾವಣೆಗೂ ಮುನ್ನ ಮತ್ತು ಚುನಾವಣೋತ್ತರ ಸಮೀಕ್ಷೆ ವೇಳೆ ನಾನು ಹಲವು ರಾಜಕೀಯ ಪಂಡಿತರನ್ನು ಮಾತನಾಡಿಸಿದ್ದೆ. ಅವರೆಲ್ಲರೂ ಬಿಜೆಪಿ ಮುನ್ನಡೆದ್ರೂ ಬಹುಮತ ಗ್ಯಾರೆಂಟಿ ಅಂತ ಹೇಳಿರಲಿಲ್ಲ. ಬಿಜೆಪಿ, ಕಾಂಗ್ರೆಸ್ ಮತ್ತು ಎಸ್.ಪಿ. ಮೈತ್ರಿಕೂಟ ಹೆಚ್ಚು ಸೀಟುಗಳನ್ನು ಪಡೆದ್ರೂ ಬಿಎಸ್​​ಪಿ ಕಿಂಗ್ ಮೇಕರ್ ಅಂತಲೇ ಹೇಳಲಾಗಿತ್ತು. ಬಿಜೆಪಿ ಗೆಲ್ಲುತ್ತೆ ಅಂತ ಒಂದಿಬ್ಬರು ಹೇಳಿದ್ದರೂ ಇಷ್ಟೊಂದು ಗೆಲುವಿನ ಬಗ್ಗೆ ಮಾತನಾಡಿರಲಿಲ್ಲ. ಬಿ.ಎಸ್.ಪಿ. ಕೇವಲ 18 ಸೀಟುಗಳನ್ನು ಗೆದ್ದು ಕಳಪೆ ಪ್ರದರ್ಶನ ನೀಡುತ್ತೆ ಅಂತ ಯಾರೂ ಕೂಡ ಊಹೆ ಮಾಡಿರಲಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ 73 ಸೀಟು ಗೆದ್ದಿದ್ದಾಗ ಇದು ಹಾಗೇ ಸುಮ್ಮನೆ ಬಂದ ಗೆಲುವು ಅಂದಿದ್ದರು. ಆದ್ರೆ ಈ ಬಾರಿ ಮೋದಿ ಆ ಮಾತನ್ನು ಸುಳ್ಳು ಮಾಡಿದ್ದಾರೆ. ವಿಧಾನಸಭೆಯ ಶೇಕಡಾ 80 ಪ್ರತಿಶತ ಸೀಟು ಗೆದ್ದು ಉತ್ತರ ಪ್ರದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಉತ್ತರಾಖಂಡ್ ದಲ್ಲೂ ಬಿಜೆಪಿ ಅದ್ಭುತ ಸಾಧನೆ ಮಾಡಿದೆ. ಆದ್ರೆ ಉತ್ತರ ಪ್ರದೇಶದಲ್ಲಿ ಮೋದಿ ಮಾಡಿರುವ ಮೋಡಿ ಅದ್ಭುತವಾದದ್ದು ಅನ್ನುವುದರಲ್ಲಿ ಸಂಶಯವೇ ಇಲ್ಲ. ಉತ್ತರ ಪ್ರದೇಶದ ಗೆಲುವು ಮೋದಿಗೆ 2019ರ ಲೋಕಸಭಾ ಚುನಾವಣೆಯಲ್ಲೂ ಗೆಲುವು ಪಕ್ಕಾ ಅಂತ ಹೇಳುವಂತೆ ಮಾಡಿರುವುದು ಸುಳ್ಳಲ್ಲ.

ಆದ್ರೆ ನನ್ನ ಪ್ರಕಾರ 2019ರ ಚುನಾವಣೆಗೆ ಈಗಲೇ ಷರಾ ಬರೆದಿರುವುದು ಸರಿಯಲ್ಲ. ಲೋಕಸಭಾ ಚುನಾವಣೆಗೆ ಎರಡು ವರ್ಷಕ್ಕಿಂತ ಕೊಂಚ ಹೆಚ್ಚಿನ ಸಮಯ ಇದೆ. ರಾಜಕೀಯ ಲೆಕ್ಕಾಚಾರದಲ್ಲಿ ಒಂದೇ ಒಂದು ವಾರದಲ್ಲಿ ಎಲ್ಲವೂ ಬದಲಾಗಬಹುದು. ಇದಕ್ಕೆ ಇತಿಹಾಸಲ್ಲಿ ಉದಾಹರಣೆಯೂ ಇದೆ. 1971ರಲ್ಲಿ ಪಾಕಿಸ್ತಾನವನ್ನು ಒಡೆದು ಬಾಂಗ್ಲಾದೇಶಕ್ಕೆ ಸ್ವಾತಂತ್ರ ತಂದುಕೊಟ್ಟಾಗ ಶ್ರೀಮತಿ ಇಂದಿರಾ ಗಾಂಧಿಯವರನ್ನು ದುರ್ಗಾ ಮಾತೆ ಎಂದು ಪೂಜಿಸಲಾಗಿತ್ತು. ಆಗ ಇಂದಿರಾರನ್ನು ಭಾರತ, ಭಾರತವನ್ನು ಇಂದಿರಾ ಎಂದು ಬಿಂಬಿಸಲಾಗಿತ್ತು. 1972ರ ಹೊತ್ತಿಗೆ ಆಕೆಯ ವಿರುದ್ಧ ಜನಕ್ಕೆ ಬೇಸರ ಬಂದಿತ್ತು. 1975ರಲ್ಲಿ ಜನ ಇಂದಿರಾ ವಿರುದ್ಧ ತಿರುಗಿಬಿದ್ದಿದ್ದರು. ತುರ್ತಪರಿಸ್ಥಿತಿ ಕೂಡ ಹೇರಲಾಗಿತ್ತು. 1977ರ ಚುನಾವಣೆಯಲ್ಲಿ ಇಂದಿರಾ ಸೋತಿದ್ದರು. ಕಾಂಗ್ರೆಸ್ ಸೋತಿತ್ತು. ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಆಡಳಿತಕ್ಕೆ ಬಂದಿತ್ತು.

1984ರ ಚುನಾವಣೆಯಲ್ಲಿ ರಾಜೀವ್ ಗಾಂಧಿ 405 ಸೀಟುಗಳನ್ನು ಗೆದ್ದಿದ್ದರು. ರಾಜೀವ್ ನೇತೃತ್ವದಲ್ಲಿ ಗೆದ್ದಿದ್ದಷ್ಟು ಸ್ಥಾನವನ್ನು ಯಾರೂ ಗೆದ್ದಿರಲಿಲ್ಲ. ಆದ್ರೆ 1987ರ ಬೋಫೋರ್ಸ್ ಹಗರಣ ರಾಜೀವ್ ಗಾಂಧಿ ವಿ.ಪಿ. ಸಿಂಗ್​ಗೆ 1989ರಲ್ಲಿ ಪಟ್ಟ ಬಿಟ್ಟುಕೊಡುವಂತೆ ಮಾಡಿತ್ತು. 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ತಮ್ಮ ಪರ ಜನಮತವಿದೆಯೆಂದು ಲೆಕ್ಕಾಚಾರ ಹಾಕಿ 6 ತಿಂಗಳ ಮುಂಚೆಯೇ ಚುನಾವಣೆ ಘೋಷಿಸಿ ಸೋಲುಕಂಡಿತ್ತು. 2009ರ ಚುನಾವಣೆಯಲ್ಲೂ ಬಿಜೆಪಿ ಸೋಲುಕಂಡಿತ್ತು. ಅಷ್ಟೇ ಅಲ್ಲ 2014ರಲ್ಲಿ ಗೆಲುವು ಅಸಾಧ್ಯ ಅನ್ನುವುದನ್ನು ಯೋಚನೆ ಮಾಡಿ 2019ರ ಚುನಾವಣೆ ಬಗ್ಗೆ ಯೋಚಿಸಿ ತೊಡಗಿತ್ತು. ಆದ್ರೆ ಲೆಕ್ಕಾಚಾರ ಹೇಗೆ ಬದಲಾಯ್ತು ಅನ್ನುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಹೇಗೆ ನೆಲಕಚ್ಚಿತು ಅನ್ನುವ ಬಗ್ಗೆ ತಿಳಿದಿದೆ. ಇದೇ ಲೆಕ್ಕಾಚಾರ ನನ್ನ ತಲೆಯಲ್ಲಿದೆ. ಹೀಗಾಗಿ ಮೋದಿ ಅಲೆ ಇನ್ನೂ ಎರಡೂವರೆ ವರ್ಷ ಉಳಿಯುತ್ತಾ ಅನ್ನುವುದು ನನ್ನ ಪ್ರಶ್ನೆ.

ಇದನ್ನು ಓದಿ: ನಮ್ಮ ಮೆಟ್ರೋದ ಪಿಲ್ಲರ್​ಗಳಿಗೆ ಹೊಸ ಜೀವ- ಹೊಸ ತಂತ್ರಜ್ಞಾನದ ಮೂಲಕ ಪರಿಸರ ಕಾಯುವ ಕೆಲಸ

ಇನ್ನೊಂದು ರಾಜಕೀಯ ಲೆಕ್ಕಾಚಾರವಿದೆ. ಮೋದಿ ಅಲೆಯ ನಡುವೆಯೂ ಬಿಜೆಪಿ/ ಎನ್.ಡಿ.ಎ ಮೈತ್ರಿಕೂಟ ಗೆದ್ದಿದ್ದು ಉತ್ತರ ಪ್ರದೇಶ ಮತ್ತು ಉತ್ತರ ಪ್ರದೇಶವನ್ನು ಮಾತ್ರು. ಪಂಜಾಬ್ ಮತ್ತು ಗೋವಾದಲ್ಲಿ ಆಡಳಿತದಲ್ಲಿದ್ದರು ಬಿಜೆಪಿ ಸೋತಿತ್ತು. ಮಣಿಪುರದಲ್ಲಿ ಕಾಂಗ್ರೆಸ್ ನಂಬರ್ ವನ್ ಪಾರ್ಟಿಯಾಗಿತ್ತು. ಪಂಜಾಬ್​ನಲ್ಲಿ ಅಕಾಲಿದಳ ಮತ್ತು ಬಿಜೆಪಿಗೆ ಕಾಂಗ್ರೆಸ್​ನ ದೊಡ್ಡ ಗೆಲುವನ್ನು ತಡೆಯಲು ಅಗಲಿಲ್ಲ. ಗೋವಾದಲ್ಲಿ ಬಿಜೆಪಿಗೆ ಜನ ಮತ ನೀಡದೇ ಇದ್ದರೂ ಮತ್ತೊಂದು ದಾರಿ ಮೂಲಕ ಅಧಿಕಾರಕ್ಕೇರಿದೆ. ಮಣಿಪುರದಲ್ಲೂ ಬಿಜೆಪಿಗೆ ದೊಡ್ಡ ಗೆಲುವು ಸಿಗಲಿಲ್ಲ. ಇದೇ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿರುವುದು. ಮೋದಿ ಸುನಾಮಿ ಕೆಲವು ರಾಜ್ಯಗಳಿಗೆ ಬೀಸಲೇ ಇಲ್ಲ ಅನ್ನುವುದು ಕಟು ಸತ್ಯ. 2019ರ ಚುನಾವಣೆಯಲ್ಲೂ ಇದೇ ನಡೆಯಬಹುದು ಅನ್ನುವುದು ನನ್ನ ಲೆಕ್ಕಾಚಾರ.

ಕಾಂಗ್ರೆಸ್ ಸಮಸ್ಯೆಯ ದೊಡ್ಡ ಸುಳಿಯಲ್ಲಿದೆ. ರಾಹುಲ್ ಗಾಂಧಿಯ ನಾಯಕತ್ವದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ ಅನ್ನುವ ಅರಿವು ಕಾರ್ಯಕರ್ತರಿಗೆ ಬಂದಾಗಿದೆ. ಗೋವಾ, ಮಣಿಪುರ ಮತ್ತು ಪಂಜಾಬ್​ನಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದರೂ ರಾಹುಲ್ ವಿರುದ್ಧ ಕಾಂಗ್ರೆಸ್​​ನಲ್ಲೇ ಅಲೆ ಇದೆ. ರಾಹುಲ್ ಪ್ರಚಾರದ ಶೈಲಿಯನ್ನು ಬದಲಿಸಿಕೊಳ್ಳಬೇಕು ಅನ್ನುವ ಒತ್ತಡ ಎದುರಿಸುತ್ತಿದ್ದಾರೆ. ರಾಹುಲ್ ಕಾಂಗ್ರೆಸ್​​ನಲ್ಲಿದ್ದ ನಾಯಕರಂತೆ ಅನುಭವವಾಗಲಿ ಅಥವಾ ಪಾಪ್ಯುಲಾರಿಟಿ ಆಗಲಿ ಇಲ್ಲ. ಮಿತ್ರಪಕ್ಷಗಳ ಜೊತೆ ಸೇರಿಕೊಂಡು ರಾಜಕೀಯ ಆಟ ಆಡುವ ಯೋಚನಾಶಕ್ತಿಯೂ ಇಲ್ಲ. ಅರುಣಾಚಲ ಪ್ರದೇಶದಲ್ಲಿ ಮತ್ತು ಉತ್ತರಾಖಂಡದಲ್ಲಿ ಅಧಿಕಾರದಲ್ಲಿದ್ದ ಸರಕಾರವನ್ನು ಉಚ್ಛಾಟನೆ ಮಾಡಿದ್ದು ರಾಹುಲ್ ರಾಜಕೀಯದ ಅನನುಭವಕ್ಕೆ ಹಿಡಿದ ಕೈಗನ್ನಡಿ. ಇತ್ತೀಚಿನ ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾದರೂ ಅಧಿಕಾರ ಹಿಡಿಯಲಿಲ್ಲ. ರಾಹುಲ್ ತುಂಬಾ ರಕ್ಷಣಾತ್ಮಕ ತಂತ್ರ ಪ್ರಯೋಗಿಸುತ್ತಿದ್ದಾರೆ. ಸೋನಿಯಾ ಗಾಂಧಿಯವರಂತೆ ರಾಹುಲ್​ಗೆ ಖಡಕ್ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ. ಅಷ್ಟೇ ಅಲ್ಲ ಪಕ್ಷದೊಳಗಿರುವವರನ್ನು ಹತೋಟಿಗೆ ತೆಗೆದುಕೊಳ್ಳುವ ಶಕ್ತಿಯೂ ಇಲ್ಲ. ಒಬ್ಬ ಮಾತುಗಾರನಾಗಿ, ಒಬ್ಬ ಮಾರ್ಕೆಟಿಂಗ್ ಏಜೆಂಟ್ ಆಗಿ ರಾಹುಲ್ ಕೆಲಸ ಮಾಡಲು ಸಾಧ್ಯವಿಲ್ಲ. ರಾಹುಲ್ ಈಗಿರುವ ಎಲ್ಲಾ ಇಮೇಜ್ಗಳನ್ನು ಬದಲಿಸಿಕೊಂಡರೆ ಮಾತ್ರ ನಾಯಕನಾಗಿ ಬೆಳೆಯಬಹುದು.

ಪಂಜಾಬ್ ಚುನಾವಣೆಯಲ್ಲಿ ಆಪ್ ಪಕ್ಷಕ್ಕೆ ಹೆಚ್ಚಿನ ನಿರೀಕ್ಷೆ ಇತ್ತು. ಮಾಧ್ಯಮಗಳು ಪಂಜಾಬ್​​ನಲ್ಲಿ ಆಪ್ ಅಧಿಕಾರಕ್ಕೆ ಬರುತ್ತೆ ಅನ್ನುವ ಭವಿಷ್ಯ ನುಡಿದಿದ್ದರು. ಗೋವಾದಲ್ಲೂ ಆಪ್ ಉತ್ತಮ ಸಾಧನೆ ಮಾಡುತ್ತದೆ ಅನ್ನುವ ಊಹೆ ಇತ್ತು. ಆದ್ರೆ ಪಂಜಾಬ್​ನಲ್ಲಿ ಆಪ್ ಗೆದ್ದಿದ್ದು 22 ಸ್ಥಾನಗಳನ್ನು. ಗೋವಾದಲ್ಲಿ ಖಾತೆ ಕೂಡ ತೆರೆಯಲಿಲ್ಲ. ಆಪ್ ಪಕ್ಷವನ್ನು ಬಿಜೆಪಿ ಮತ್ತು ಕಾಂಗ್ರೆಸ್​​ಗೆ ಪರ್ಯಾಯ ಪಕ್ಷ ಅನ್ನುವ ರೀತಿಯಲ್ಲಿ ಯೋಚನೆ ಮಾಡಿತ್ತು. 2014ರ ಲೋಕಸಭೆಯ ಚುನಾವಣೆಯಲ್ಲಿ ಆಪ್ 409 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಅವಮಾನ ಅನುಭವಿಸಿತ್ತು. ಆದ್ರೆ 2015ರ ದೆಹಲಿ ಚುನಾವಣೆಯಲ್ಲಿ ಗೆದ್ದು ಮಿಂಚು ಹರಿಸಿತ್ತು. ಅಂದಹಾಗೇ ಆಪ್ ಕೇವಲ 4 ವರ್ಷಗಳ ಹಿಂದೆ ರಚನೆಯಾದ ಪಕ್ಷ. ಆದ್ರೆ ಈ ಅವಧಿಯಲ್ಲೇ ದೆಹಲಿಯಲ್ಲಿ 2 ಬಾರಿ ಸರ್ಕಾರ ರಚಿಸಿತ್ತು. ಮತ್ತೊಂದು ರಾಜ್ಯದಲ್ಲಿ ವಿಪಕ್ಷವಾಗಿ ಕುಳಿತಿದೆ. ಆಪ್ ಪಕ್ಷದ ಸಾಧನೆ ಮಾಡಲು ಹಲವಾರು ವರ್ಷಗಳನ್ನೇ ತೆಗೆದುಕೊಂಡಿದ್ದವು. ಎರಡು ದಶಕಗಳಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಇದ್ದರೂ, 1980ರ ಚುನಾವಣೆಯಲ್ಲಿ ಕೇವಲ 3 ಪ್ರತಿಶತ ಮತ್ತು 1985ರಲ್ಲಿ ಕೇವಲ 4 ಪ್ರತಿಶತ ಮತಗಳನ್ನು ಮಾತ್ರ ಪಡೆದುಕೊಂಡಿತ್ತು.

ಸದ್ಯದ ಪರಿಸ್ಥಿತಿ ಬಗ್ಗೆ ಆಪ್ ಹೆಚ್ಚು ಯೋಚನೆ ಮಾಡುತ್ತಿಲ್ಲ. ಆಪ್ ಟೀಕಾಕಾರಿಗೆ ಮತ್ತೆ ನಿರಾಸೆ ಆಗಿರಬಹುದು. ಆದ್ರೆ ಒಂದಂತೂ ಸತ್ಯ, ಆಡಳಿತ ಪಕ್ಷ ಬಲವಾಗಿರಬಹುದು. ಆದ್ರೆ ಉತ್ತಮ ವಿರೋಧ ಪಕ್ಷವೂ ಬೇಕೇ ಬೇಕು. ಪ್ರಜಾಫ್ರಭುತ್ವ ಬೆಳೆಯಬೇಕು ಅಂದ್ರೆ ವಿಪಕ್ಷಗಳು ಇರಲೇಬೇಕು. ಆರ್ ಎಸ್ ಎಸ್ . ಬಿಜೆಪಿಗೆ ಜನ ಈಗ ಅಧಿಕಾರ ಕೊಟ್ಟಿರಬಹುದು. ಆದ್ರೆ ಅಟಲ್ ಬಿಹಾರಿ ವಾಜಪೇಯವರಂತೆ ಮಾದರಿ ಸರಕಾರ ಇದಲ್ಲ.

ಲೇಖಕರು: ಅಶುತೋಷ್, ಆಪ್ ನಾಯಕರು

ಇದನ್ನು ಓದಿ:

1. ಇಳಿವಯಸ್ಸಿನಲ್ಲೂ ದೇಶ ಸುತ್ತುವ ಸಾಹಸಿ : ವಿಶ್ವಪರ್ಯಟನೆ ಮಾಡ್ತಿದ್ದಾರೆ 95ರ ಅಮ್ಮಾಚಿ 

2. ರೈತರ ಪ್ರಾಣ ಉಳಿಸಲು "ಬೀಜೋತ್ಸವ"

3. ಹೈ-ವೇನಲ್ಲೇ ಡಾಬಾಕ್ಕೆ ಹೋಗಬೇಕಿಲ್ಲ- ಸಿಟಿಗೂ ಎಂಟ್ರಿಯಾಗಿದೆ..!