ನವೀಕರಿಸಬಹುದಾದ ಇಂಧನ ನೀತಿ - ಮುಂಚೂಣಿಯಲ್ಲಿದೆ ಕರ್ನಾಟಕ

ಟೀಮ್ ವೈ.ಎಸ್.ಕನ್ನಡ

ನವೀಕರಿಸಬಹುದಾದ ಇಂಧನ ನೀತಿ - ಮುಂಚೂಣಿಯಲ್ಲಿದೆ ಕರ್ನಾಟಕ

Thursday February 04, 2016,

3 min Read

ಇಡೀ ಏಷ್ಯಾದಲ್ಲೇ ಮೊದಲು ಜಲವಿದ್ಯುತ್ ಶಕ್ತಿ ಕೇಂದ್ರ ಆರಂಭವಾಗಿದ್ದು ಕರ್ನಾಟಕದಲ್ಲಿ ಅಂದ್ರೆ ನೀವು ನಂಬ್ಲೇಬೇಕು. ಶಿವನಸಮುದ್ರದಲ್ಲಿ 1902ರಲ್ಲಿ ಜಲವಿದ್ಯುತ್ ಸ್ಥಾವರವನ್ನು ಆರಂಭಿಸಲಾಯ್ತು. ಸದ್ಯ ಇದನ್ನು ವಿಶ್ವದ ಅತಿ ದೊಡ್ಡ ಸೋಲಾರ್ ಉದ್ಯಾನವನವನ್ನಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲ ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕರ್ನಾಟಕ ಹಲವು ನಿಯಮಗಳನ್ನು ಕೂಡ ಜಾರಿಗೆ ತಂದಿದೆ. ಚರಂಡಿ ನೀರನ್ನು ಮರು ಬಳಕೆ ಮಾಡುವ ಕಂಪನಿಗಳಿಗೆ ಸರ್ಕಾರ ರಿಯಾಯಿತಿಯನ್ನು ನೀಡುತ್ತಿದೆ. ನವೀಕರಿಸಬಹುದಾದ ಇಂಧನ ನೀತಿ ವಿಚಾರಕ್ಕೆ ಬಂದ್ರೆ ಕರ್ನಾಟಕವೇ ಮುಂಚೂಣಿಯಲ್ಲಿದೆ. ಸರ್ಕಾರ ಮತ್ತು ಕೈಗಾರಿಕಾ ಕ್ಷೇತ್ರದ ತಜ್ಞರನ್ನೊಳಗೊಂಡ ಎರಡು ಪ್ಯಾನಲ್​ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಈ ವಲಯ ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸಿದೆ. ಕಾರಣ ದ್ಯುತಿ ವಿದ್ಯುಜ್ಜನಕ ಉತ್ಪಾದನೆಗೆ ಸಂಬಂಧಪಟ್ಟ ಮೌಲ್ಯವರ್ಧಿತ ತೆರಿಗೆಯನ್ನು ಸರ್ಕಾರ ಕಡಿತಗೊಳಿಸಬಹುದೆಂಬ ನಿರೀಕ್ಷೆ ಇದೆ. ಇನ್ವೆಸ್ಟ್ ಕರ್ನಾಟಕ -2016 ಸಮಾವೇಶದಲ್ಲಿ ಮಾತನಾಡಿದ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್, 2020ರ ವೇಳೆಗೆ ಕರ್ನಾಟಕದ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುವುದಾಗಿ ಭರವಸೆ ನೀಡಿದ್ದಾರೆ.

image


ಟೆಕ್ ಪ್ರವೃತ್ತಿಗಳು...

ತಂತ್ರಜ್ಞಾನದ ದೃಷ್ಟಿಯಿಂದ ನೋಡಿದ್ರೆ ಇಂಧನ ಸಂಗ್ರಹ ವೆಚ್ಚವನ್ನು ಕಡಿತಗೊಳಿಸಿದ್ರೆ ಈ ವಲಯಕ್ಕೆ ಹೆಚ್ಚು ಪ್ರಯೋಜನವಾಗಲಿದೆ ಅನ್ನೋದು ಎಂಎನ್ಆರ್​ಇ ಜಂಟಿ ಕಾರ್ಯದರ್ಶಿ ತರುಣ್ ಕಪೂರ್ ಅವರ ಅಭಿಪ್ರಾಯ. ಇತರ ಉದಯೋನ್ಮುಖ ತಂತ್ರಜ್ಞಾನಗಳು ಪ್ಯಾನಲ್ ದಕ್ಷತೆಯನ್ನು ಶೇ.5ರಷ್ಟು ಹೆಚ್ಚಿಸಿವೆ. ಇನ್ನು ಟ್ರ್ಯಾಕಿಂಗ್ ತಂತ್ರಜ್ಞಾನ ಸೌರ ವಿದ್ಯುತ್ ಸೌಲಭ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ ಎನ್ನುತ್ತಾರೆ ಟಾಟಾ ಸೋಲಾರ್ನ ಸಿಟಿಓ ಅರುಲ್ ಶಣ್ಮುಗಸುಂದರಂ. IoT ಕೂಡ ಮಾದರಿ ಚಾಲಿನ ಒಳನೋಟಗಳ ಅಂಕಿ ಅಂಶಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಅಂತಾ ಜಿಇ ಪವರ್​ನ ಮುಖ್ಯಸ್ಥ ಮರಿಸುಂದರಂ ಆ್ಯಂಟನಿ ಅಭಿಪ್ರಾಯಪಟ್ಟಿದ್ದಾರೆ. ವಿದ್ಯುತ್ ಗ್ರಿಡ್​ಗಳ ಸಮರ್ಥ ಬಳಕೆಗೆ ವಿಶ್ಲೇಷಣ ಶಾಸ್ತ್ರ ಸಹಾಯ ಮಾಡುತ್ತದೆ. ಗಾಳಿ ಬಗೆಗಿನ ಅಂಕಿ ಅಂಶಗಳಿಂದ ವಿದ್ಯುತ್ ಉತ್ಪಾದನೆಯ್ನು ಊಹಿಸಬಹುದು. ಜಿಇ ಪವರ್​ನ ಎಂಜಿನಿಯರ್​ಗಳು ಬೆಂಗಳೂರಲ್ಲಿ ಕಡಿಮೆ ಗಾಳಿಯ ಮತ್ತು ವೇಗವಾದ ಗಾಳಿ ಯಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಇಂಧನ ನೀತಿ

ರಾಜ್ಯದ ಸಂಪೂರ್ಣ ವಿದ್ಯುತ್ ವಲಯವನ್ನೇ ಸುಧಾರಿಸಲು ಕೆಲವು ಆಫರ್​ಗಳನ್ನು ನೀಡಲಾಗಿದೆ. ಉದಾಹರಣೆಗೆ ಕಲ್ಲಿದ್ದಲನ್ನು ಆಮದು ಮಾಡಿಕೊಂಡು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಬಯಸುವವರಿಗೆ ಕರಾವಳಿ ಉತ್ತಮ ತಾಣ ಅನ್ನೋದು ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಮುಖ್ಯಸ್ಥ ಶಂಕರಲಿಂಗೇ ಗೌಡ ಅವರ ಅಭಿಪ್ರಾಯ. ಅದೇ ಜಾಗದಲ್ಲಿ ಸೌರ ಮತ್ತು ಪವನ ಶಕ್ತಿಯನ್ನು ಕೂಡ ಒಗ್ಗೂಡಿಸಿ ಸ್ಥಳಾಂತರಿಸಬಹುದು. ಭಾರತದಲ್ಲಿ ಮೇಲ್ಛಾವಣಿಯಲ್ಲಿ ಪ್ಯಾನಲ್ಗಳನ್ನಿಟ್ಟು ಸೌರಶಕ್ತಿ ಉತ್ಪಾದಿಸುವ ವಿಪುಲ ಅವಕಾಶಗಳಿವೆ ಎನ್ನುತ್ತಾರೆ ನವದೆಹಲಿಯ ಕೆಎಫ್​ಡಬ್ಲ್ಯೂ ಎನರ್ಜಿ ಸೆಲ್ ಮುಖ್ಯಸ್ಥ ಸ್ಟೀಫನ್ ಹೆಡಿಗರ್. ವಿದ್ಯುತ್ ಉತ್ಪಾದನೆ ಮತ್ತು ವಿತರಣೆಗೆ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಿದ ಮೊದಲ ರಾಜ್ಯ ಕರ್ನಾಟಕ. ಎಸ್ಕಾಮ್​ಗಳು ಗ್ರಾಹಕರಿಗೆ ಅಗತ್ಯ ಸೇವೆಗಳನ್ನು ಸಮರ್ಪಕ ರೀತಿಯಲ್ಲಿ ಒದಗಿಸುತ್ತಿವೆ. ಬೆಂಗಳೂರಲ್ಲಿ ಎನರ್ಜಿ ಸೆಂಟರ್ ಆಫ್ ಎಕ್ಸಲೆನ್ಸ್ ಮತ್ತು ಇನ್ಕ್ಯುಬೇಶನ್ ಕೇಂದ್ರಗಳನ್ನು ತೆರೆಯಲು ಯೋಜನೆ ಹಾಕಿಕೊಳ್ಳಲಾಗಿದೆ. ಬೆಸ್ಕಾಮ್ನಲ್ಲಿ ಟೆಕ್ನಾಲಜಿ ಇನ್ನೋವೇಶನ್ ಕೇಂದ್ರ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಸೌರಶಕ್ತಿ ಮತ್ತು ಪವನ ಶಕ್ತಿ ಉತ್ಪಾದನೆಗಾಗಿ ರೈತರ ಭೂಮಿಯನ್ನು ಗುತ್ತಿಗೆಗೆ ಪಡೆಯುವ ಬಗ್ಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಅಷ್ಟೇ ಅಲ್ಲ ಭವಿಷ್ಯದಲ್ಲಿ ಅವರನ್ನೂ ಷೇರುದಾರರನ್ನಾಗಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವಿಶೇಷ ಅಂದ್ರೆ ಕರ್ನಾಟಕದ ರೈತರು ಸ್ವಯಂಪ್ರೇರಿತರಾಗಿ 12,000 ಎಕರೆ ಭೂಮಿಯನ್ನು ನೀಡಿದ್ದಾರೆ. ಭೂ ಸುಧಾರಣಾ ಕಾಯ್ದೆಗಳು ಕೂಡ ನವೀಕರಿಸಬಹುದಾದ ಇಂಧನ ವಲಯದ ಮೇಲೆ ಹೆಚ್ಚು ಗಮನಹರಿಸಲಿವೆ ಅಂತಾ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಯಮಿತ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಬಲರಾಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೊಸ ಟೆಂಡರ್ಗಳು ಮತ್ತು ಪ್ರಾಜೆಕ್ಟ್​ಗಳ ಬಗ್ಗೆ ಮಾಹಿತಿ ಪಡೆಯಲು KREDL ವೆಬ್ಸೈಟ್ ನೋಡುವಂತೆ ಅವರು ಹೂಡಿಕೆದಾರರಲ್ಲಿ ಮನವಿ ಮಾಡಿದ್ದಾರೆ.

image


ವಿದೇಶಿ ಹೂಡಿಕೆದಾರರು

ನವೀಕರಿಸಬಹುದಾದ ಇಂಧನಗಳನ್ನು ಬಳಸಿಕೊಂಡು ಭಾರತದ ಉಳಿದ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕ ಶೇ.3ರಷ್ಟು ಅಧಿಕ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಅಂತಾ ಜರ್ಮನಿಯ ರಾಯಭಾರಿ ಜೊರ್ನ್ ರೋಡೆ ಅಭಿಪ್ರಾಯಪಟ್ಟಿದ್ದಾರೆ. ಜರ್ಮನಿ ಇಂಧನ ನೀತಿಯ ಮಾದರಿಯಲ್ಲಿ ಸ್ಥಳಾಂತರವನ್ನು ಎದುರಿಸುತ್ತಿದೆ. ಪವನ ವಿದ್ಯುತ್, ಜೈವಿಕ ಇಂಧನದಂತಹ ನವೀಕರಿಸಬಹುದಾದ ಶಕ್ತಿಗಳತ್ತ ಗಮನ ವಿಕೇಂದ್ರೀಕರಿಸಿದೆ. 1990ರಿಂದೀಚೆಗೆ ಜರ್ಮನಿಯಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಶೇ.30ರಷ್ಟು ಕಡಿಮೆಯಾಗಿದೆ. ಭಾರತದ ಕೂಡ ಇದೇ ಹಾದಿಯಲ್ಲಿ ಸಾಗಬಹುದು ಅಂತಾ ರೋಡೆ ಹೇಳಿದ್ದಾರೆ. ಕಳೆದ ವರ್ಷ ಜರ್ಮನಿಯಲ್ಲಿ ವಿದ್ಯುತ್ ಘಟಕ ಕೇವಲ 15 ನಿಮಿಷಗಳ ಕಾಲ ಮಾತ್ರ ಅಲಭ್ಯತೆಯನ್ನು ಎದುರಿಸಿತ್ತು. ಜರ್ಮನಿಯ ಸೌರಶಕ್ತಿ ಚಾಲಿತ ಕೊಚ್ಚಿ ವಿಮಾನ ನಿಲ್ದಾಣ ಉಳಿದ ರಾಷ್ಟ್ರಗಳಿಗೆ ಮಾದರಿ ಎನಿಸಿಕೊಂಡಿದೆ. ಜರ್ಮನಿಯಲ್ಲಿ ನವೀಕರಿಸಬಹುದಾದ ಇಂಧನ ವಲಯ ಅರ್ಧ ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸಿದೆ.

ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ನೋಡಿ ಸ್ಪೇನ್ ಕೂಡ ಪ್ರಭಾವಿತವಾಗಿದೆ ಎನ್ನುತ್ತಾರೆ ಎಕ್ಸಿಯೋನಾ ಎನರ್ಜಿಯ ಕಂಟ್ರಿ ಮ್ಯಾನೇಜಿಂಗ್ ಡೈರೆಕ್ಟರ್ ಗ್ಲೆನ್ ರೆಕಾನಿ. ಕರ್ನಾಟಕದ ಬಿಜಾಪುರದಲ್ಲಿ 15 ಕೋಟಿ ವೆಚ್ಚದ ಕಾರ್ಖಾನೆ ಆರಂಬಿಸಿರುವ ಈ ಸಂಸ್ಥೆ ಟರ್ಬೈನ್ ಟವರ್​ಗಳನ್ನು ನಿರ್ಮಿಸುತ್ತಿದೆ. ನವೀಕರಿಸಬಹುದಾದ ಇಂಧನ ಸಬ್ಸಿಡಿ ಸೇರಿದಂತೆ ಕೆಲ ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕೆಂದು ಅವರು ಆಗ್ರಹಿಸಿದ್ದಾರೆ. ದೀರ್ಘಾವಧಿ ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಸ್ತಾವಿತ ಕಾಯ್ದೆಗಳಲ್ಲಿ 15-20 ವರ್ಷಗಳವರೆಗಾದರೂ ಸ್ಥಿರತೆ ಇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ನವೀಕರಿಸಬಹುದಾದ ಇಂಧನ ನೀತಿಯ ವೇಗ ಮತ್ತು ಮಾನದಂಡಗಳ ಮೂಲಕ ಕರ್ನಾಟಕ ಗುರುತಿಸಿಕೊಳ್ಳಲಿದೆ ಅನ್ನೋ ವಿಶ್ವಾಸ ಭೋರುಕಾ ಪವರ್ ಕಾರ್ಪೊರೇಶನ್​ನ ವ್ಯವಸ್ಥಾಪಕ ನಿರ್ದೇಶಕ ಎಸ್.ಚಂದ್ರಶೇಖರ್ ಅವರಿಗಿದೆ.