ಉದ್ಯಮ ಆರಂಭಿಸಿದ ಮೊದಲ 100 ದಿನಗಳಲ್ಲಿ ಅಭಿಪ್ರಾಯಗಳನ್ನು ಸಾಕ್ಷೀಭೂತಗೊಳಿಸುವ ಕಾರ್ಯಕ್ರಮದಿಂದಾಗುವ ಪ್ರಯೋಜನಗಳು

ಟೀಮ್​ ವೈ.ಎಸ್​. ಕನ್ನಡ

1


ಒಂದೇ ರೀತಿಯ ಕೆಲಸವನ್ನು ಮಾಡೋದು ನಿಜಕ್ಕೂ ಬೇಸರದಾಯಕ. ಆದರೆ ಇದರಿಂದ ಲಾಭಗಳು ಹಲವು. ಸ್ವಲ್ಪ ಹೆಚ್ಚಿನ ಗಮನ ನೀಡುವುದರಿಂದ ಕೆಲಸದ ಒಂದು ಸೂಕ್ತ ಮಾದರಿಯನ್ನು ಕಂಡುಕೊಳ್ಳುವಂತಾಗುತ್ತದೆ. ಇದರಿಂದ ಸಾಕಷ್ಟು ಸಹಾಯವಾಗುತ್ತದೆ.

ಯುವ ಉದ್ಯಮಿಗಳ ಜೊತೆ ಕಾಲ ಕಳೆಯುವುದು ಮತ್ತು ಅವರ ಯೋಜನೆಗಳ ಕುರಿತು ಕೇಳುವುದು, ಅದರಲ್ಲೂ ಅವರ ಮೊದಲ ಹಂತದಲ್ಲಿಯೇ ಅವರ ಯೋಜನೆಗಳ ಬಗ್ಗೆ ಕೇಳಿಕೊಳ್ಳುವುದು ನಿಜಕ್ಕೂ ಒಂದು ಅಪೂರ್ವ ಅನುಭವ ನೀಡುತ್ತದೆ. ಇದು ನಿಮಗೆ ನಿಮ್ಮದೇ ಆದ ಮಾದರಿಗಳನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗಿರುತ್ತವೆ.

ಈ ಮಾತುಗಳನ್ನು ನೀವು ಈ ಮೊದಲು ಕೇಳಿದ್ದೀರಾ?

1. ಇದೊಂದು ದೊಡ್ಡ ಮಾರುಕಟ್ಟೆ ಅವಕಾಶ. ನಮಗೆ ಇದರಲ್ಲಿ ಕೆಲ ಸಮಸ್ಯೆಗಳಿವೆ ಮತ್ತು ಬೇರೆಯವರಿಗೂ ಇಂಥದ್ದೇ ಸಮಸ್ಯೆ ಇದೆ ಎಂದು ನಮಗೆ ತಿಳಿದಿದೆ.

2. ನಾವು ಹಲವು ಜನರೊಂದಿಗೆ ಮಾತನಾಡಿದ್ದೇವೆ ಮತ್ತು ಅವರಿಗೆಲ್ಲಾ ನಮ್ಮ ಯೋಜನೆ ಬಹಳ ಇಷ್ಟವಾಗಿದೆ.

3. ನಮಗೆ ಈ ಯೋಜನೆಯ ಬಗ್ಗೆ ಅತಿಯಾದ ಒಲವಿದೆ. ನಾವು ಈ ಮೊದಲು ಇನ್ನೊಂದು ಸ್ಟಾರ್ಟ್ ಅಪ್‌ನಲ್ಲಿ ಕೆಲಸ ಮಾಡಿದ್ದೇವೆ. ಹೀಗಾಗಿ ನಾವು ಉತ್ತಮವಾದ ಸ್ಟಾರ್ಟ್ ಅಪ್‌ವೊಂದನ್ನು ನಿರ್ಮಿಸಲು ಸಾಧ್ಯವಿದೆ ಎನ್ನಿಸುತ್ತಿದೆ.

4. ನಮಗೆ ಕೆಲವು ಪ್ರತಿಸ್ಪರ್ಧಿಗಳಿದ್ದಾರೆ. ಆದರೆ ಯಾರೂ ನಾವು ಕಾರ್ಯನಿರ್ವಹಿಸಿರುವ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ.

5. ಮುಂದಿನ 24 ತಿಂಗಳಿಗೆ ಅಗತ್ಯವಿರುವ ಯೋಜನೆಯನ್ನು ಹಾಕಿಕೊಂಡಿದ್ದೇವೆ.

6. ನಾವೊಂದು ಉತ್ಪನ್ನವನ್ನು ನಿರ್ಮಿಸಿದ್ದೇವೆ. ಕೆಲವೇ ತಿಂಗಳಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ. ನಮ್ಮ ಉತ್ಪನ್ನದಿಂದ ಗ್ರಾಹಕರಿಗೆ ಖಂಡಿತವಾಗಿ ಸಂತೋಷವಾಗುತ್ತದೆ.

7. ಇದೊಂದು ಸಮರ್ಪಕ ಯೋಜನೆ. ಇದು ಅಷ್ಟೇ ಸರಿಯಾಗಿ ಜಾರಿಗೆ ಬಂದದ್ದೇ ಆದರೆ ನಮಗೆ ಸಾವಿರಾರು ಗ್ರಾಹಕರು ದೊರಕುತ್ತಾರೆ.

ಈ ಎಲ್ಲಾ ಮಾತುಗಳಲ್ಲಿ 2 ಅಂಶಗಳು ಸಾಮಾನ್ಯವಾಗಿರುತ್ತದೆ. ಒಂದು, ಇಂತಹ ಮಾತುಗಳನ್ನು ನೀವು ಉದ್ಯಮದ ಮೊದಲ ಹಂತದಲ್ಲಿ ಕೇಳಿಯೇ ಕೇಳಿರುತ್ತೇವೆ. ಎರಡನೆಯದು, ಇವೆಲ್ಲವೂ ಅತ್ಯುತ್ತಮ ಅಭಿಪ್ರಾಯಗಳು. ಒಂದು ಸ್ಟಾರ್ಟ್ ಅಪ್ ಎದುರಿಸುವ ಮೊತ್ತ ಮೊದಲ ಸವಾಲೆಂದರೆ ಯೋಜನೆಯ ಕುರಿತು ಇರುವ ತಮ್ಮ ಅಭಿಪ್ರಾಯಗಳನ್ನು ಸಾಕ್ಷಿಭೂತಗೊಳಿಸುವುದು. ಇಂತಹ ಕಾರ್ಯಗಳು ಸಂಸ್ಥಾಪಕರಿಂದ ಅತೀ ವೇಗವಾಗಿ ನಡೆಯುತ್ತವೆ. ಇದಕ್ಕೆ ಜಾಸ್ತಿ ಹಣವೂ ಖರ್ಚಾಗುವುದೂ ಇಲ್ಲ.

ಯಾವುದೇ ಸಂಸ್ಥೆಯ ಸಂಸ್ಥಾಪಕರು ತಮ್ಮ ಅಭಿಪ್ರಾಯಗಳನ್ನು ಸಾಕ್ಷೀಕರಿಸಿಕೊಳ್ಳಲು 100 ದಿನಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಾರೆ. ಇದು 3 ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಒಂದು, ಅವರು ಜನರಿಗೆ ಅವಶ್ಯಕವಿರುವ ವಿಷಯದ ಅಥವಾ ಉತ್ಪನ್ನದ ಬಗ್ಗೆಯೇ ಕೆಲಸ ಮಾಡುತ್ತಿದ್ದಾರೆಯೇ?, ಎರಡನೆಯದು, ಯಾವ ರೀತಿಯ ಜನರು ತಮ್ಮ ಉತ್ಪನ್ನವನ್ನು ಸ್ವೀಕರಿಸಬಲ್ಲರು?, ಮೂರನೆಯದು, ತಮ್ಮ ಉತ್ಪನ್ನಕ್ಕೆ ನಿಗದಿಪಡಿಸಲಿರುವ ದರವನ್ನು ಪಾವತಿಸಬಲ್ಲರೇ?

ಈ ಮೂರು ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಂಸ್ಥೆಯ ಸಂಸ್ಥಾಪಕರು ಉದ್ಯಮದ ನಿಜವಾದ ಪ್ರಪಂಚ ಮತ್ತು ಉದ್ಯಮದ ನಿಜವಾದ ಗ್ರಾಹಕರನ್ನು ಭೇಟಿಯಾಗಬೇಕಾಗುತ್ತದೆ. ಇದು ಅವರಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳು ಸರಿಯಾದದ್ದೇ ಮತ್ತು ಆ ಸಮಸ್ಯೆಗಳ ಮೂಲ ಎಲ್ಲಿವೆ ಎಂದು ತಿಳಿದುಕೊಳ್ಳಲು ಸಹಕಾರಿಯಾಗಿರುತ್ತವೆ. ಪ್ರಮುಖವಾಗಿ, ತಾವು ತಮ್ಮ ಯೋಜನೆಯ ಬಗ್ಗೆ ಅದೆಷ್ಟು ಎಕ್ಸೈಟ್ ಆಗಿದ್ದಾರೋ ಗ್ರಾಹಕರೂ ಸಹ ಅಷ್ಟೇ ಎಕ್ಸೈಟ್ ಆಗಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತವೆ.

ಇಂತಹ ಹಲವು ವಿಚಾರಗಳನ್ನು ಉದ್ಯಮಿಗಳು ತಮ್ಮ ಮೊದಲ ಹಂತಗಳಲ್ಲಿ ಎದುರಿಸುತ್ತಾರೆ. ತಮ್ಮ ಉತ್ಪನ್ನ ಬಿಡುಗಡೆ ಮಾಡುವುದಕ್ಕೂ ಮುನ್ನ ತಾವು ಮಾಡಬೇಕಿರುವುದೇನು?, ಎಷ್ಟು ಸಾಧ್ಯವೋ ಅಷ್ಟು ಬೇಗ ಹೂಡಿಕೆ ಪಡೆಯುವುದು ಒಳ್ಳೆಯದಲ್ಲವೇ?, ನಾವು ಈ ಉತ್ಪನ್ನವನ್ನು ಬೇರೆಲ್ಲರಿಗಿಂತ ಅತ್ಯುತ್ತಮವಾಗಿ ನಿರ್ಮಿಸಬಲ್ಲೆವು ಎಂದು ನಮಗೆ ತಿಳಿದಿದ್ದರೂ ನಾವೇಕೆ ಅದನ್ನು ಮಾಡಲು ಹಿಂಜರಿಯುತ್ತಿದ್ದೇವೆ?, ನಮ್ಮ ಉತ್ಪನ್ನದ ಮೊದಲ ಆವೃತ್ತಿ ಅಷ್ಟೇನೂ ಚೆನ್ನಾಗಿರದಿದ್ದರೆ ಏನು ಮಾಡುವುದು?, ಉತ್ಪನ್ನದ ವೈಶಿಷ್ಟ್ಯಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುವಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆ, ಬೇಡವೆ ಎಂಬಂತಹ ಪ್ರಶ್ನೆಗಳು ಯಾವುದೇ ಸ್ಟಾರ್ಟ್ ಅಪ್‌ನ ಆರಂಭದ ಸಮಸ್ಯೆಗಳಾಗಿರುತ್ತವೆ.

ಈ ರೀತಿಯ ಸವಾಲುಗಳ ಪಟ್ಟಿ ಬೆಳೆಯುತ್ತಲೇ ಹೋಗುವ ಸಾಧ್ಯತೆಗಳಿವೆ. ಆದರೆ ಇವುಗಳನ್ನು ಎದುರಿಸುತ್ತಾ ಹೋದಷ್ಟು ಗುರಿ ತಲುಪಲು ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತವೆ. ಇವುಗಳ ಸಂಸ್ಥಾಪಕರ ಅಷ್ಟೂ ಸಮಯವನ್ನು ನುಂಗಿಬಿಡುತ್ತವೆ ಮತ್ತು ಪ್ರಗತಿಯ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುತ್ತವೆ. ಒಂದು ರೀತಿಯಲ್ಲಿ ಇವುಗಳು ಮೊದಲ ಹಂತದಲ್ಲಿ ಗಮನಿಸಬೇಕಾದ ಅಂಶಗಳೇನೂ ಆಗಿರುವುದಿಲ್ಲ. ಈ ಸಮಸ್ಯೆಗಳು ಪ್ರಮುಖವಾಗಲು ನಿರ್ದಿಷ್ಟ ಸಮಯ ಮತ್ತು ಸ್ಥಳಗಳೂ ಇರುತ್ತವೆ. ಆದರೆ ಅದು ನಿಮ್ಮ ಆರಂಭದ ದಿನಗಳಲ್ಲೇ ಕಂಡುಬರುವುದಿಲ್ಲ.

ಹಾಗಾದರೆ ನೀವು ಪ್ರಗತಿಯ ಸರಿಯಾದ ಪಥದಲ್ಲಿಯೇ ಇದ್ದೀರಿ ಎಂದು ಗುರುತಿಸುವುದು ಹೇಗೆ? ಬಹಳಷ್ಟು ಸಂಸ್ಥೆಯ ಸಂಸ್ಥಾಪಕರು ಇದೇ ಕ್ಷೇತ್ರದಲ್ಲಿ ತಾವಲ್ಲದೇ ಇನ್ನೂ ಹಲವರು ಕೆಲಸ ಮಾಡುತ್ತಿದ್ದಾರೆ ಎಂದು ಗುರುತಿಸುತ್ತಾರೆ. ಇದೇ ಯೋಜನೆಯೊಂದಿಗೆ ಮುಂದುವರೆಯುತ್ತಿದ್ದಾರೆಯೇ ಎಂದು ಗಮನಿಸುತ್ತಾರೆ. ಆಕ್ಸಿಲರ್ ಸಂಸ್ಥೆಯ ಆರಂಭವಾದ ಮೊದಲ ವಾರದಲ್ಲಿ ವೇಗವರ್ಧಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾವು ಇದೇ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಇತರ ಸ್ಟಾರ್ಟ್ ಅಪ್‌ಗಳನ್ನು ಗುರುತಿಸುವಂತೆ ನಮ್ಮ ತಂಡಗಳಿಗೆ ಹೇಳಿದ್ದೆವು.

ಬಹುತೇಕ ಪ್ರಕರಣಗಳಲ್ಲಿ ಪ್ರಗತಿಯ ಸಂಖ್ಯೆಗಳು ಸದಾ ಎರಡಂಕಿಯಲ್ಲಿಯೇ ಮುಂದುವರೆಯುತ್ತಿರುತ್ತವೆ. ಹಾಗಾದರೆ ಸಂಸ್ಥಾಪಕರಿಗೆ ಯಾವುದು ತಾವು ಸರಿ ಎಂದು, ಭದ್ರತಾ ಭಾವನೆ ಮೂಡಿಸುತ್ತವೆ? ಮೊದಲ ಹಂತದ ಕಾರ್ಯಾಚರಣೆಗಳಲ್ಲಿ ಅಂತರಂಗದಲ್ಲಿ ನೀವೇನನ್ನು ನಂಬುತ್ತೀರೋ ಅದರಂತೆ ಯೋಜನೆ ರೂಪಿಸುವುದೇ ನಿಮಗೆ ಭದ್ರತಾ ಭಾವನೆಯನ್ನು ಮೂಡಿಸುತ್ತದೆ. ಇದು ಗ್ರಾಹಕರ ವಿಚಾರದಲ್ಲಾಗಿರಬಹುದು, ಸ್ಪರ್ಧೆಯ ವಿಚಾರದಲ್ಲಾಗಿರಬಹುದು, ಬದಲಿ ವ್ಯವಸ್ಥೆಗಳ ಬಗ್ಗೆಯಾಗಿರಬಹುದು, ಅನುಭವದ ವಿಚಾರದಲ್ಲಾಗಿರಬಹುದು. ನಿಮಗೆ ನೀವು ಸರಿಯಾದ ಹಾದಿಯಲ್ಲೇ ಇದ್ದೀರೆಂಬ ಭಾವನೆ ಬರುವುದು ತುಂಬಾ ಮುಖ್ಯ.

ಉದಾಹರಣೆಗೆ, ಒಂದು ಕಾರು ಕಂಪೆನಿ, 2 ವರ್ಷ ಹಳೆಯದಾದ ಕಾರನ್ನು ಹೊಂದಿರುವ 28 ರಿಂದ 35 ವರ್ಷದ ಜನರು ಮುಂದಿನ 12 ರಿಂದ 18 ತಿಂಗಳಲ್ಲಿ ಹೊಸ ಕಾರನ್ನು ಕೊಳ್ಳಲು ಚಿಂತಿಸುತ್ತಾರೆ ಎಂಬ ಯೋಜನೆಯನ್ನು ಹಾಕಿಕೊಳ್ಳುವುದು ಸರಿಯಾದ ಯೋಜನೆ. ಅದು ಆ ಸಂಸ್ಥೆಯ ಆಂತರಿಕ ಚಿಂತನೆ. ಇದು ತುಂಬಾ ಜನ ನಮ್ಮ ಉತ್ಪನ್ನಗಳನ್ನು ಇಷ್ಟಪಡುತ್ತಾರೆ ಎಂದು ಭಾವಿಸುವುದಕ್ಕಿಂತ ಉತ್ತಮವಾದ ಯೋಜನೆ, ಹಂತ. ಇವೆರಡರಲ್ಲಿರುವ ಪ್ರಮುಖ ವ್ಯತ್ಯಾಸವೆಂದರೆ ಎರಡನೆಯದರಲ್ಲಿ ನೀವೇ ನೀವಾಗಿ ಹೊರಹೊಮ್ಮಬಹುದಾದರೆ ಮೊದಲನೆಯದರಲ್ಲಿ ಈ ಸಾಧ್ಯತೆಗಳು ಕಡಿಮೆ. ಅಂದರೆ ಎರಡನೆಯದರಲ್ಲಿ ನಿಮಗೆ ನಿಮ್ಮದೇ ಆದ ಜವಾಬ್ದಾರಿಗಳಿರುತ್ತವೆ. ಅದನ್ನು ನೀವು ಪೂರ್ಣಗೊಳಿಸಲೇಬೇಕಾಗಿರುತ್ತದೆ. ಮೊದಲನೆಯದರಲ್ಲಿ ಇಡೀ ಸಂಸ್ಥೆಯ ಜವಾಬ್ದಾರಿ ಇರುತ್ತದೆ.

ಸ್ಟಾರ್ಟ್ ಅಪ್‌ನ ಮೊದಲ ಹಂತಗಳು ಪ್ರಯೋಗಾತ್ಮಕವಾಗಿರುತ್ತವೆ ಮತ್ತು ಬಹುತೇಕ ಈ ಪ್ರಯೋಗಗಳು ವಿಫಲವಾಗುವ ಸಾಧ್ಯತೆಗಳಿರುತ್ತವೆ. ನಾವು ನಿರೀಕ್ಷಿಸಿದ ಫಲ ದೊರಕುವಂತೆ ಪ್ರಯೋಗಗಳಾಗುತ್ತಿವೆಯೇ ಎಂಬುದನ್ನು ಗಮನಿಸಿಕೊಳ್ಳುವುದು ಅತೀ ಮುಖ್ಯವಾದ ಅಂಶ. ಪ್ರಯೋಗಗಳಿಂದ ವಿಫಲವಾಗುವುದೂ ಸಹ ಒಳ್ಳೆಯ ಅಂಶವೇ. ಏಕೆಂದರೆ ಅದರಿಂದ ನೀವೇನನ್ನೋ ಕಲಿಯುತ್ತೀರಿ ಎಂಬುದು ತೀರಾ ಸ್ಪಷ್ಟವಾದ ಅಂಶ. ಇದರಿಂದ ನಿಮಗೆ ಹೊಸದೊಂದು ಒಳನೋಟ ಲಭಿಸಬಹುದು. ಯಾವ ಅಂಶ ಕೆಲಸ ಮಾಡುತ್ತಿದೆ ಎಂಬುದಕ್ಕಿಂತ ಯಾವ ಅಂಶ ಕೆಲಸ ಮಾಡುತ್ತಿಲ್ಲ ಎಂಬುದನ್ನು ಗುರುತಿಸಿಕೊಳ್ಳುವುದರಿಂದ ಸಮರ್ಪಕ ಕಾರ್ಯನಿರ್ವಹಣೆ ಸಾಧ್ಯವಾಗುತ್ತದೆ. ಉದ್ಯಮದಲ್ಲಿ ಪ್ರಗತಿಯೂ ಉಂಟಾಗುತ್ತದೆ.


ಅನುವಾದಕರು: ವಿಶ್ವಾಸ್​


Related Stories

Stories by YourStory Kannada