ಮಕ್ಕಳನ್ನು ಸಾಕೋದು ಹೇಗೆ ಗೊತ್ತಾ? ಪೇರೆಂಟ್ ಸರ್ಕಲ್ ಓದಿ

ಟೀಮ್ ವೈ.ಎಸ್.

ಮಕ್ಕಳನ್ನು ಸಾಕೋದು ಹೇಗೆ ಗೊತ್ತಾ? ಪೇರೆಂಟ್ ಸರ್ಕಲ್ ಓದಿ

Wednesday October 07, 2015,

3 min Read

ನಳಿನಾ ರಾಮಲಕ್ಷ್ಮೀ, 20 ವರ್ಷಗಳಷ್ಟು ಸುದೀರ್ಘ ಕಾಲ ಅಮೆರಿಕಾದಲ್ಲಿ ನೆಲೆಸಿದ್ದರು. ಎರಡು ಮಕ್ಕಳ ತಾಯಿಯಾಗಿರುವ ಅವರು ಬಳಿಕ, ತಾಯ್ನಾಡಿಗೆ ಮರಳಿದ್ದರು. ಅಲ್ಲಿಯವರೆಗೆ ಲೈಫ್ ಚೆನ್ನಾಗಿಯೇ ಇತ್ತು. ಆದರೆ, ಭಾರತಕ್ಕೆ ಬಂದ ಬಳಿಕ ಒಂದೊಂದೇ ಸಮಸ್ಯೆಗಳು ಶುರುವಾದವು. ಮಕ್ಕಳು ಇಲ್ಲಿನ ವಾತಾವರಣ, ಸಂಸ್ಕೃತಿಗೆ ಹೊಂದಿಕೊಳ್ಳಲು ಸಾಧ್ಯವಾಗದೇ ಹೋಯಿತು. ಇವರ ರೀತಿಯಲ್ಲೇ ಹಲವು ತಾಯಂದಿರು ಸಮಸ್ಯೆ ಎದುರಿಸಿದ್ದಾರೆ. ಪೋಷಕರ ಸಾಂಪ್ರದಾಯಿಕ ಮತ್ತು ಜಾಗತಿಕ ಜಗತ್ತಿನ ನಡುವೆ ಇರುವ ಕಂದಕವನ್ನು ತುಂಬಲು ಅವರು ನಿರ್ಧರಿಸಿದರು.

“ಹಲವು ಪೋಷಕರಿಗೆ ನನ್ನಂತೆಯೇ ಸಮಸ್ಯೆ ಎದುರಾಗಿದ್ದನ್ನು ನಾನು ಕಂಡಿದ್ದೇನೆ. ಮಕ್ಕಳಿಗಾಗಿ ಸ್ಥಳೀಯ ತರಗತಿಗಳು, ಕಾರ್ಯಕ್ರಮಗಳ ಮಾಹಿತಿಗಾಗಿ ಓಡಾಡಿದ್ದನ್ನು ನೋಡಿದ್ದೇನೆ.” ಎನ್ನುತ್ತಾರೆ ನಳಿನಾ. ಹೀಗಾಗಿ, ಪೋಷಕರಿಗೆ ಸ್ಥಳೀಯವಾಗಿ ನಿಯತಕಾಲಿಕೆಯೊಂದನ್ನು (ಪತ್ರಿಕೆ) ಹೊರತರಲು ಅವರು ತೀರ್ಮಾನಿಸಿದರು.

image


ಹೀಗೆ, ಹುಟ್ಟುಕೊಂಡಿದ್ದೇ ಪೇರೆಂಟ್ ಸರ್ಕಲ್. ಮಕ್ಕಳ ಪೋಷಕರು, ಶಿಕ್ಷಕರು, ಮತ್ತು ಜ್ಞಾನವನ್ನು ಹಂಚಿಕೊಳ್ಳುವಂತಹ ತಜ್ಞರ ಮಾಹಿತಿಳನ್ನು, ಮಕ್ಕಳ ಸಮಗ್ರ ಅಭಿವೃದ್ಧಿಗಾಗಿನ ಮಾಹಿತಿಗಳನ್ನು ಈ ಪತ್ರಿಕೆ ಮೂಲಕ ಹಂಚಿಕೊಳ್ಳಲಾಗುತ್ತಿದೆ.

“ಪ್ರತಿ ಕುಟುಂಬಕ್ಕೂ ಒಂದು ವಿಭಿನ್ನ ಅನುಭವ ಕೊಡಬೇಕು ಎನ್ನುವುದು ನಮ್ಮ ಉದ್ದೇಶ. ಇದು ಪೋಷಕರಿಗೆ ಕಲಿಕೆಗೆ ಅವಕಾಶ ಕಲ್ಪಿಸುತ್ತದೆ. ಪೋಷಕರನ್ನು ಸಂತೋಷ ಹಾಗೂ ಸಮರ್ಥವಾಗಿ ರೂಪಿಸುವುದೇ ನಮ್ಮ ಅಂತಿಮ ಧ್ಯೇಯ,” ಎನ್ನುತ್ತಾರೆ ನಳಿನಾ.

ಪೋಷಕರಾಗಿ ಜೀವನದ ಪಯಣದಲ್ಲಿ ನಾವು ಸರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದೇವೆಯೋ? ಮಕ್ಕಳ ಸಂಪೂರ್ಣ ಮತ್ತು ಸಮಗ್ರ ಅಭಿವೃದ್ಧಿಗೆ ಗಮನ ಹರಿಸುತ್ತೇವೆಯೋ? ಎಂಬುದನ್ನು ಪ್ರತಿಯೊಬ್ಬರೂ ಪರಿಶೀಲಿಸಿಕೊಳ್ಳುತ್ತಾರೆ. ಮುಖ್ಯವಾಗಿ ಪೋಷಕರು ಮಕ್ಕಳ ಭಾವನಾತ್ಮಕ ಬೇಡಿಕೆಗಳಿಗೆ ತಲೆ ಬಾಗುತ್ತಾರೆ, ಎನ್ನುತ್ತಾರೆ ನಳಿನಾ.

ಈ ಪತ್ರಿಕೆಯು, ಹತ್ತು ಹಲವು ವಿಚಾರಗಳ ಬಗ್ಗೆ ತಿಳುವಳಿಕೆ ನೀಡುತ್ತದೆ. ಮಕ್ಕಳ ನಡವಳಿಕೆ, ಕಲಿಕೆ ಸೇರಿದಂತೆ, ಪೌಷ್ಟಿಕಾಂಶ, ಜೀವನಶೈಲಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ.

“ಮಕ್ಕಳಿಗೆ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ತಂದು ಒಂದು ಒಳ್ಳೆಯ ಪರಿಸರ ಸೃಷ್ಟಿಸುವುದು, ಅವರನ್ನು ಪೋಷಕ ಸಮುದಾಯದ ಜೊತೆಗೆ ಬೆಸೆಯುವುದು, ಚಿಂತನೆ ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದು,” ಸಂಸ್ಥೆಯ ಉದ್ದೇಶ ಎಂದು ನಳಿನಾ ಅವರು ವಿವರಿಸುತ್ತಾರೆ.

ಮಕ್ಕಳೇ ಅವರಿಗೆ ಸ್ಫೂರ್ತಿ

ನಳಿನಾ ಅವರು ಎರಡು ಮಕ್ಕಳ ತಾಯಿ. 21 ವರ್ಷದ ಮಗ, ಅಮೆರಿಕಾದಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾನೆ. ಪುತ್ರಿಗೆ 17 ವರ್ಷ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಳಿನಾ ಅವರಿಗೆ ಈ ಉದ್ಯಮ ಸ್ಥಾಪಿಸಲು ಅವರ ಮಕ್ಕಳೇ ಸ್ಫೂರ್ತಿ.

ನನ್ನ ಜೀವನವನ್ನು ಪ್ರತಿದಿನ ಸ್ಪರ್ಶಿಸೋ ನನ್ನ ಮಕ್ಕಳೇ ನನಗೆ ಸ್ಫೂರ್ತಿ. ನನ್ನ ಅತಿ ದೊಡ್ಡ ಸವಾಲು ಎಂದರೆ, ನಾನು ನನ್ನ ಮಕ್ಕಳಿಗೆ ಏನೆಲ್ಲವನ್ನೂ ಮಾಡಬಹುದಾಗಿದ್ದರೂ, ನಾನು ಸುಮ್ಮನೆ ಕುಳಿತುಕೊಳ್ಳುವಂತಾಗುತ್ತದೆ. ಇಂತಹ ಸಂದರ್ಭದಲ್ಲೇ ನಾನು ಬೇರೆ ಪೋಷಕರನ್ನೂ ತಲುಪಲು ಚಿಂತನೆ ನಡೆಸಿದ್ದು. ಶಿಕ್ಷಕರು, ಆಪ್ತಸಮಾಲೋಚಕರಿಂದ ಸಲಹೆಗಳನ್ನು ಪಡೆಯಲು ಆರಂಭಿಸಿದ್ದು. ಹೀಗೆ ನಾನು ಎಲ್ಲರನ್ನೂ ಸಂಪರ್ಕಿಸಲು ಪ್ರಾರಂಭಿಸಿದೆ,” ಎನ್ನುತ್ತಾರೆ ನಳಿನಾ. ಪೋಷಕರು ಪರಸ್ಪರ ಮಾಹಿತಿಗಳನ್ನು ಹಂಚಿಕೊಂಡರೆ, ಎಲ್ಲರಿಗೂ ಉಪಯೋಗವಾಗುತ್ತದೆ ಎನ್ನುವುದು ಅವರ ನಂಬಿಕೆ.

2010ರಲ್ಲಿ ಪೇರೆಂಟ್ ಸರ್ಕಲ್ ಪತ್ರಿಕೆಯ ಉದ್ಯಮ ಆರಂಭಿಸುವವರೆಗೆ, ನಳಿನಾ ಅಪ್ಪಟ ತಾಯಿಯಾಗಿದ್ದರು. 2011ರಲ್ಲಿ ಪೇರೆಂಟ್ ಸರ್ಕಲ್ ಶುರು ಮಾಡಿದರು. ಖುದ್ದು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಅವರು, ಸ್ಟಾರ್ಟ್ ಅಪ್ ಉದ್ಯಮಗಳಲ್ಲಿ ಅನುಭವ ಪಡೆದಿದ್ದರು. ಮಾರ್ಕೆಟಿಂಗ್ ಜ್ಞಾನವೂ ಇತ್ತು. ಇವೆಲ್ಲವೂ ಪೇರೆಂಟ್ ಸರ್ಕಲ್ ಆರಂಭಿಸುವಾಗ ನೆರವಿಗೆ ಬಂದ್ವು.

ಅವರ ಆದರ್ಶಪ್ರಾಯರು:

ನಳಿನಾ ಅವರಿಗೆ ಒಬ್ಬರೇ ಆದರ್ಶಪ್ರಾಯರಲ್ಲ. “ನಾನು ಅಮ್ಮನಿಂದ ಉದಾರತೆ, ಸಹಾನುಭೂತಿ, ಅಪ್ಪನಿಂದ ಶಿಸ್ತು, ಗುರಿ, ಅಜ್ಜಿಯಿಂದ ಪ್ರೀತಿ ಮತ್ತು ಮಮತೆಯನ್ನು ಕಲಿತೆ. ನಾನು ದೊಡ್ಡ ಕನಸುಗಾತಿ. ಕನಸುಗಳನ್ನು ಬೆನ್ನತ್ತಿ ಹೋಗುವ ಎಲ್ಲರಿಂದಲೂ ನಾನು ಸ್ಫೂರ್ತಿ ಪಡೆಯುತ್ತೇನೆ,” ಎನ್ನುತ್ತಾರೆ ನಳಿನಾ. ಅವರು ಮದ್ವೆಯಾಗಿ, ಮಕ್ಕಳನ್ನು ಹೆತ್ತ ಬಳಿಕ ಅಮೆರಿಕಾದಿಂದ ತಮಿಳುನಾಡಿಗೆ ವಾಪಸ್ಸಾಗಿ ಉದ್ಯಮ ಆರಂಭಿಸಿದರು. ಸಧ್ಯ ಅವರು ಚೆನ್ನೈನಲ್ಲಿ ವಾಸವಾಗಿದ್ದಾರೆ.

ಡಿಜಿಟಲ್ ಪ್ಲಾನಿಂಗ್:

ತಮ್ಮ ಮುದ್ರಣ ಮಾಧ್ಯವಮನ್ನು ಡಿಜಿಟಲ್ ಆಗಿ ಪರಿವರ್ತಿಸುವ ಚಿಂತನೆಯಲ್ಲಿದ್ದಾರೆ ನಳಿನಾ. ಅಂತರ್ಜಾಲದ ಮೂಲಕ ಪತ್ರಿಕೆ ಲಭ್ಯವಾದರೆ, ಸಾಕಷ್ಟು ಪೋಷಕರನ್ನು ಮುಖ್ಯವಾಗಿ 2 ಮತ್ತು 3ನೇ ಹಂತದ ನಗರಗಳ ನಿವಾಸಿಗಳನ್ನು ತಲುಪಬಹುದು.

“ನಾವು ಪರಿವರ್ತನಾ ಯುಗದ ಪೋಷಕರಾಗಿದ್ದೇವೆ. ಈಗಿನ ಕಾಲದ ಪೋಷಕರು, ಪೋಷಕತ್ವ ನಿಭಾಯಿಸಲು ಡಿಜಿಟೈಸ್ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ನಾವು ಪ್ರಾದೇಶಿಕ ಭಾಷೆಗಳಲ್ಲೂ ಜನರನ್ನು ತಲುಪಲು ಚಿಂತನೆ ನಡೆಸುತ್ತಿದ್ದೇವೆ,” ಎನ್ನುತ್ತಾರೆ ನಳಿನಾ. ಸಧ್ಯದ ಟ್ರೆಂಟ್ ತುಂಬಾನೇ ಚೆನ್ನಾಗಿದೆ. ಮಕ್ಕಳು ಪೋಷಕರನ್ನು ಪ್ರಶ್ನಿಸುವ ಮೂಲಕ, ಪೋಷಕರೂ ಜಾಗತೀಕರಣಕ್ಕೆ ಒಗ್ಗಿಕೊಳ್ಳುವಂತೆ ಮಾಡುತ್ತಿದ್ದಾರೆ ಎನ್ನುವುದು ಅವರ ಅನಿಸಿಕೆ.

“ಪೋಷಕರಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸಲು ನಾವು ಸಣ್ಣ ಕೆಲಸ ಮಾಡುತ್ತಿದ್ದೇವೆ. ಈಗ ಅವರು ಮಾಹಿತಿಪೂರ್ಣ ಆಯ್ಕೆಗಳನ್ನು ಮಾಡಿಕೊಳ್ಳಬಹುದು” ಎನ್ನುತ್ತಾರೆ ನಳಿನಾ. ನಳಿನಾ ಅವರಿಗೆ ಚಿತ್ರಕಲೆ, ವರ್ಣಕಲೆ ಮತ್ತು ಪ್ರವಾಸ ಅಂದರೆ ತುಂಬಾ ಇಷ್ಟ.