“ಫ್ರಾಗ್ ಫೈಂಡ್” ಕಪ್ಪೆಗಳ ಲೋಕ..

ಟೀಮ್​ ವೈ.ಎಸ್​. ಕನ್ನಡ

0

ನಮ್ಮ ಸಿಟಿ ಮಂದಿಗೆ ಯಾವ ವನ್ಯಜೀವಿಗಳ ಪರಿಚಯವೂ ಇರೋದಿಲ್ಲ. ಅದ್ರಲ್ಲೂ ಕಪ್ಪೆಗಳು ಅಂದ್ರೆ ಗೊತ್ತೇ ಇರೋದಿಲ್ಲ.. ಇತಂಹವರಿಗಾಗಿಯೇ ಕಪ್ಪೆಗಳ ಪ್ರಭೇದದ ಬಗ್ಗೆ ತಿಳಿಯಲು ಆ್ಯಪ್‍ವೊಂದು ಬಂದಿದೆ. ನಗರಗಳು ಬೆಳೆದಂತೆಲ್ಲಾ ವನ್ಯ ಜೀವಿಗಳು ಮರೆಯಾಗುತ್ತಿದೆ. ಇಂದು ಅದೆಷ್ಟೋ ಪ್ರಾಣಿ- ಪಕ್ಷಿಗಳು, ಉಭಯವಾಸಿಗಳನ್ನ ಕೇವಲ ಫೋಟೋಗಳಲ್ಲಿ ನೋಡುವಂತದಾಗಿದೆ.. ವಟರ್ ವಟರ್ ಎಂದು ಸದ್ದು ಮಾಡುವ ಕಪ್ಪೆಗಳ ಪರಿಚಯ ಕಡಿಮೆಯೇ.. ಇನ್ನು ಗದ್ದೆ, ತೋಟ ಹೀಗೆ ಎಲ್ಲ ಕಡೆ ಕೃಷಿಕರಿಗೆ ಪ್ರತಿದಿನ ಕಪ್ಪೆಗಳು ಕಾಣಿಸುತ್ತಿರುತ್ತದೆ.. ಹಳ್ಳಿಯಲ್ಲಿ ವಾಸವಾಗಿರುವವರಿಗೆ ಕಪ್ಪೆಗಳ ಪರಿಚಯವಿದ್ದೇ ಇರುತ್ತೆ. ಆದ್ರೆ ಸಿಟಿ ಜನ್ರರಿಗೆ ಕಪ್ಪೆಗಳ ಬಗ್ಗೆ ಪರಿಚಯ ಅಷ್ಟಕಷ್ಟೇ.. ನೀವು ಎಂದಾದರೂ ಯಾವ ಕಪ್ಪೆ ಯಾವ ರೀತಿಯಲ್ಲಿ ಕೂಗುತ್ತೆ ಎಂದು ಗೊತ್ತಿದ್ಯಾ? ಇದಕ್ಕಾಗಿ ಕಪ್ಪೆಗಳ ಬಗ್ಗೆ ಸುಲಭವಾಗಿ ಅರಿಯಲು ಆ್ಯಪ್‍ವೊಂದು ಬಂದಿದೆ..

ಕಪ್ಪೆಗಳ ವಟರ್ ವಟರ್... ಹಾಗೂ ಇತರೆ ಕ್ರಿಮಿಕೀಟಗಳ ಶಬ್ದ ಮಳೆಗಾಲದ ಸಂಜೆಯನ್ನು ಸಂಗೀತಮಯವಾಗಿಸುತ್ತದೆ.. ಎಲ್ಲಿದ್ದವೋ ಇಷ್ಟು ದಿನ ಎನ್ನುವಂತೆ ಥರಾವರಿ ಕಪ್ಪೆಗಳು ಕಾಣಿಸುತ್ತವೆ. ಗದ್ದೆ, ತೋಟ ಹೀಗೆ ಎಲ್ಲ ಕಡೆ ವಾಸವಿರೋ ಈ ಕಪ್ಪೆಗಳು ಕೃಷಿಕರಿಗೆ ಚಿರಪರಿಚಿತ.. ಅಂದಹಾಗೆ ಎಂದಾದರೂ ಯಾವ ಕಪ್ಪೆ ಯಾವ ರೀತಿ ಕೂಗುತ್ತದೆಂದು ಗಮನಿಸಿದ್ದೀರಾ? ಕಪ್ಪೆಗಳ ಬಗ್ಗೆ ನಮಗೆ ದಿವ್ಯ ನಿರ್ಲಕ್ಷಯ ಪಾರಿಸಾರಿಕ ಸಮತೋಲನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಈ ಕಪ್ಪೆಗಳ ಬಗ್ಗೆ ಸುಲಭಚಾಗಿ ಅರಿಯಲು ಈಗ ಲಭ್ಯವಿದೆ.. ಅದೇ ಫ್ರಾಗ್ ಫೈಂಡ್ ಎಂಬ ಆಪ್. ಈ ಆಪ್‍ನ ಪರಿಕಲ್ಪನೆ ಮತ್ತು ವೈಜ್ಞಾನಿಕ ಮಾಹಿತಿ ಡಾ. ಕೆ. ವಿ ಗುರುರಾಜ ಮತ್ತಿತರದು.

ಈ ಫ್ರಾಗ್ ಫೈಂಡ್‍ನಲ್ಲಿ 150ಕ್ಕೂ ಹೆಚ್ಚು ಪ್ರಭೇದದ ಕಪ್ಪೆಗಳ ಛಾಯಾಚಿತ್ರ, ಅವುಗಳ ಹೆಸ್ರು, ವಿಶಿಷ್ಟ ಲಕ್ಷಣಗಳು, ಯಾವ ಪ್ರದೇಶದಲ್ಲಿವೆ, ಸಾಮಾನ್ಯದ್ದೋ, ಅಪರೂಪದ್ದೋ ಎನ್ನುವ ಮಾಹಿತಿ ಈ ಆ್ಯಪ್‍ನಲ್ಲಿದೆ.. ಪಶ್ಚಿಮ ಘಟ್ಟಗಳಲ್ಲಿ ಎಲ್ಲೆಲ್ಲಿ ಹಂಚಿಕೆಯಾಗಿವೆ. ಬೇರೆ ಯಾವ ಪ್ರದೇಶದಲ್ಲಿವೆ. ಗುಂಪಿನಲ್ಲಿರುತ್ತದೋ ಅಥವಾ ಒಂಟಿಯಾಗಿಯೋ ಎನ್ನುವುದನ್ನು ತಿಳಿಯಬಹುದು. ಪ್ರತಿಯೊಂದು ಕಪ್ಪೆ ಪ್ರಭೇದಕ್ಕೂ ವಿಶಿಷ್ಟವಾಗಿರುವ ಗುರುತುಗಳಿವೆ. ಅದ್ರ ಮೇಲೆ ಮುಟ್ಟಿದ್ರೆ ವಿವರ ಬರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಯಾವ ಕಪ್ಪೆ ಯಾವ ರೀತಿ ಕೂಗುತ್ತದೆ ಎಂಬುದನ್ನು ಆಡಿಯೋ ಮುಖಾಂತರ ಕೇಳಬಹುದು.. ಇದನ್ನ ಕೇಳಿದ್ರೆ ಈ ಧ್ವನಿ ಕಪ್ಪೆಯದ್ದ ಎಂದು ಆಶ್ಚರ್ಯವಾಗುತ್ತೆ. ಇದು ಮಕ್ಕಳಿಗೆ ಕಪ್ಪೆಗಳ ಬಗ್ಗೆ ಕುತೂಹಲ ಹುಟ್ಟಿಸಲು ಬಹಳ ಅನುಕೂಲ.. ಜೊತೆಗೆ ಮಕ್ಕಳ ಕಲಿಕೆಗೂ ಸಹಾಯವಾಗಲಿದೆ. ನೀವು ನೋಡಿರಾದ ಕಪ್ಪೆಗಳ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

ಚಿತ್ತಾಕರ್ಷಕವಾಗಿರೋ ಕಪ್ಪೆಗಳ ಚಿತ್ರವನ್ನು ಮೊಬೈಲ್‍ನ ವಾಲ್‍ಪೇಪರ್‍ಗೆ ಹಾಕಿಕೊಳ್ಳಬಹುದು. ಅಪರೂಪದ ಕಪ್ಪೆಗಳ ಶಬ್ಧವನ್ನು ಮೊಬೈಲ್ ರಿಂಗ್‍ಟೋನ್ ಆಗಿಯೂ ಬಳಸಿಕೊಳ್ಳಬಹುದು.. ಈಗಾಗಲೇ ಸಾವಿರಾಕ್ಕೂ ಹೆಚ್ಚು ಜನ್ರು ಈ ಆ್ಯಪ್‍ಅನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್‍ನ್ನು ಕೃಷಿಕರು, ಪರಿಸರಾಸಕ್ತರು ಸೇರಿದಂತೆ ವಿಜ್ಞಾನಿಗಳು, ಶಿಕ್ಷಕರು-ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು. ಒಂದು ಆಪನ್ನು ಎಷ್ಟು ಸೃಜನಶೀಲವಾಗಿ ಮಾಡಬಹುದು ಎಂಬುದಕ್ಕೆ ಈ ಕೆಲಸ ಸಾಕ್ಷಿ.. 

Related Stories