ಮಿಸ್​​​ ಇಲ್ದೆ ಸೆರೆಹಿಡಿಯುವ "ಜೋಡಿ ಕ್ಲಿಕ್ಕರ್ಸ್​"..!

ಟೀಮ್​​ ವೈ.ಎಸ್​​.

ಮಿಸ್​​​ ಇಲ್ದೆ ಸೆರೆಹಿಡಿಯುವ "ಜೋಡಿ ಕ್ಲಿಕ್ಕರ್ಸ್​"..!

Tuesday October 20, 2015,

3 min Read

ಫೋಟೋ ಅಂದ್ರೆ ಅದಕ್ಕೊಂದು ನೈಜತೆ ಇರಬೇಕು. ಯಾಂತ್ರಿಕೃತವಾದರೆ ಅದೇನೋ ಕಸಿವಿಸಿ. ಆಧುನಿಕತೆ ಬಂದ ನಂತರವಂತೂ ವೃತ್ತಿಪರ ಫೋಟೋ ಗ್ರಾಫರ್‌ಗಳೇ ಕಡಿಮೆಯಾಗಿ ಬಿಟ್ಟಿದ್ದಾರೆ. ಆದರೆ, ಇದಕ್ಕೆ ಹೊರತಾಗಿದೆ ಜೋಡಿ ಕ್ಲಿಕರ್ಸ್.

ಮೇಕಪ್ ಇರಲಿ, ಇಲ್ಲದೆ ಇರಲಿ. ನೀವು ಇದ್ದ ಹಾಗೆ, ನೈಸರ್ಗಿಕವಾಗಿ ನಿಮ್ಮನ್ನು ಸೆರೆ ಹಿಡಿಯುವವರು ಈ ಜೋಡಿ ಕ್ಲಿಕರ್ಸ್. ಮದುವೆ ಅಂದ್ರೆ ಉಡುಗೆ-ತೊಡುಗೆ, ರಿಂಗ್, ಆಹಾರ, ಸ್ಥಳ, ಎಲ್ಲವೂ ಮುಖ್ಯವಾಗಲಿದೆ. ಇವೆಲ್ಲಾ ಚಿತ್ರಗಳನ್ನು ಕಣ್ಣಿಗೆ ಕಾಣುವ ಹಾಗೆ ಚಿತ್ರಗಳಲ್ಲಿ ಹಾಗೂ ದೃಶ್ಯಗಳಲ್ಲಿ ಅತ್ಯಂತ ನೈಜವಾಗಿ ಚಿತ್ರೀಕರಿಸುವವರೇ ಈ ಜೋಡಿ ಕ್ಲಿಕರ್ಸ್. ಜೋಡಿ ಕ್ಲಿಕರ್ಸ್ ವೃತ್ತಿಪರ ಛಾಯಾಗ್ರಾಹಕರು.

image


ಜೀವನ ಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ರಸಗಳಿಗೆ ಅಂದರೆ ಅದು ಮದುವೆ. ಬದುಕಿನ ಈ ರಸಗಳಿಗೆಯನ್ನು ಮತ್ತೆ ಮತ್ತೆ ಮೆಲುಕು ಹಾಕುವ ಕ್ಷಣಗಳನ್ನು ಕ್ಯಾಮಾರಾ ಕಣ್ಣಿನಲ್ಲಿ ಸೆರೆ ಹಿಡಿಯುವಂತಹುದೇ ಜೋಡಿ ಕ್ಲಿಕರ್ಸ್. 2012ರ ಜುಲೈ ತಿಂಗಳಲ್ಲಿ ಇದನ್ನು ಆರಂಭಿಸಿದವರು ಅಭಿಷೇಕ್ ಬೆಹಾನಿ. ಇದುವರೆಗೆ 60 ಜೋಡಿಗಳನ್ನು ಈ ತಂಡ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದೆ. ಭಾರತದಲ್ಲಿ ಮಾತ್ರವಲ್ಲದೆ, ಆಸ್ಟ್ರೇಲಿಯಾದಲ್ಲೂ ತನ್ನ ಕೈಚಳಕ ತೋರಿದೆ ಈ ಜೋಡಿ ಕ್ಲಿಕರ್ಸ್​..

ಜೋಡಿ ಕ್ಲಿಕರ್ಸ್ ಛಾಯಾಗ್ರಾಹಕರ ವಿಶೇಷತೆ ಏನು?

ಜೋಡಿ ಕ್ಲಿಕರ್ಸ್ ವಿಶೇಷತೆಯೇ ಕೌಶಲ್ಯ ಹಾಗೂ ಅವರ ಪರಿಕಲ್ಪನೆ. ಜೋಡಿ ಕ್ಲಿಕರ್ಸ್​ ವೆಬ್ ಸೈಟ್​​ನ ಚಿತ್ರಗಳನ್ನು ಪರಿಶೀಲಿಸಿದರೆ, ಅದರ ವಿಶೇಷತೆ ಗೊತ್ತಾಗಲಿದೆ. ನ್ಯಾಚುರಲ್ ಆಗಿ ನಿಮ್ಮನ್ನು ಸೆರೆ ಹಿಡಿಯುತ್ತಾರೆ ಈ ವೃತ್ತಿಪರ ಛಾಯಾಗ್ರಾಹಕರು. ವಿವಿಧ ದೃಷ್ಠಿಕೋನಗಳಲ್ಲಿ ನಿಮ್ಮ ಸೌಂದರ್ಯವನ್ನು ಸೆರೆ ಹಿಡಿದು ನಿಮ್ಮ ಅಂದವನ್ನು ಹೆಚ್ಚಿಸುತ್ತಾರೆ. ಅತ್ಯಂತ ಸುಂದರವಾಗಿ ನಿಮ್ಮನ್ನು ತೋರಿಸಲು ಸಾಧ್ಯವಾದಷ್ಟು ಒತ್ತು ನೀಡುತ್ತಾರೆ. ನಿಮ್ಮ ಕಣ್ಣಿನಲ್ಲಿರೋ ಆ ನೋಟ, ಕೆನ್ನೆಯ ಮೇಲಿರುವ ಗುಳಿಯೋ ಅಥವಾ ಮುಂಗುರುಳು ಇಟ್ಟುಕೊಂಡು ದೃಶ್ಯ ಸೆರೆಯಲಿದ್ದಾರೆ.

ಜೋಡಿ ಕ್ಲಿಕರ್ಸ್‌ನ ಸೃಷ್ಠಿಕರ್ತ ಅಭಿಷೇಕ್, ಎಂಬಿಎ ವಿದ್ಯಾರ್ಥಿ. ಒಬ್ಬ ಭಾವಾನಾತ್ಮಕ ಜೀವಿಯಾಗಿದ್ದ ಅಭಿಷೇಕ್ ಬೆಹಾನಿ, ವೃತ್ತಿಪರ ಛಾಯಾಗ್ರಾಹಕರಾಗಲು ಇದೇ ಮೂಲ ಕಾರಣ. ಆರು ವರ್ಷದವರಿದ್ದಾಗಲೇ, ಛಾಯಾಗ್ರಾಹಕರಲ್ಲಿನ ಭಾವನೆಗಳತ್ತ ಆಕರ್ಷಿತರಾಗಿದ್ದ ಅವರು, ಐಟಿ ಕ್ಷೇತ್ರದಲ್ಲಿ ಮುಂದುವರೆಯುವ ಬದಲಿಗೆ, ಛಾಯಾಗ್ರಾಹಕರಾಗುವತ್ತ ಹೆಚ್ಚು ದೃಷ್ಟಿ ಇಟ್ಟಿದ್ದರು. ಅಭಿಷೇಕ್​​​ ಮುಳುಗು ದೋಣೆಯಲ್ಲಿ ಪ್ರಯಾಣಿಸುವ ಬದಲು, ಹೊಸ ಉದ್ಯೋಗದತ್ತ ಸಾಗುವ ಬದಲಿಗೆ ವೃತ್ತಿ ಪರ ಛಾಯಾಗ್ರಾಹಣದತ್ತ ಒಲವು ವ್ಯಕ್ತಪಡಿಸಿದರು.

ಅಭಿಷೇಕ್ ಬೆಹಾನಿ ಅವರಲ್ಲಿರುವ ಪ್ರತಿಭೆಯನ್ನು ಪೋಷಿಸಿ, ಬೆಳೆಸಲು ನೆರವಾಗಿದ್ದು ದೊಡ್ಡ ಸ್ನೇಹಿತರ ಗುಂಪು. ಕೋಲ್ಕತ್ತಾದಲ್ಲಿ ನಡೆದ ಸ್ನೇಹಿತರ ವಿವಾಹ ಮಹೋತ್ಸವ ಮೊದಲ ವೇದಿಕೆಯಾಗಿತ್ತು. ಅಲ್ಲಿಂದೀಚೆಗೆ ಅಭಿಷೇಕ್ ಹಿಂತಿರುಗಿ ನೋಡಿಯೇ ಇಲ್ಲ. ಕೇವಲ ಒಂದೇ ಒಂದು ವರ್ಷದಲ್ಲಿ ಒಂದು ಲಕ್ಷ ಪೋಟೋಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಬಣ್ಣ ಬಣ್ಣದ ಚಿತ್ರಗಳೊಂದಿಗೆ ಮನಮೋಹಕ ವಿಡಿಯೋಗಳನ್ನು ಚಿತ್ರೀಕರಣ ಮಾಡಿದ್ದಾರೆ. ಎಲ್ಲದ್ದಕ್ಕೂ ಆಧುನಿಕ ಹಾಗೂ ಫ್ಯಾಷನ್ ಸ್ಪರ್ಶ ನೀಡಿದ್ದಾರೆ.

ಕೇವಲ 4 ವರ್ಷಗಳ ಹಿಂದೆ ಆರಂಭಗೊಂಡ ಈ ಜೋಡಿ ಕ್ಲಿಕರ್ಸ್ ಇಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಪ್ರಸ್ತುತ, ಅಭಿಷೇಕ್ ಬೆಹಾನಿ ಜೊತೆ 18 ಸದಸ್ಯರ ದೊಡ್ಡ ತಂಡವೇ ಇದೆ. ಒಪ್ಪಂದ ಅಥವಾ ಗುತ್ತಿಗೆ ಆಧಾರದಡಿ ಜೋಡಿ ಕ್ಲಿಕರ್ಸ್ ಕಾರ್ಯ ನಿರ್ವಹಿಸುತ್ತಿದೆ. ಇದರ ಮತ್ತೊಂದು ವಿಶೇಷತೆ ಎಂದರೆ, ಇದೊಂದು ಯುವ ತಂಡ. ಈ ತಂಡದಲ್ಲಿರುವವರ ವಯಸ್ಸಿನ್ನು ಕೇವಲ 25 ವರ್ಷ.

image


ಈ ಯಂಗ್ ಬ್ರಿಗೇಡ್ ವಿಶೇಷತೆ ಎಂದರೆ ಕ್ರಿಯಾಶೀಲ ಹಾಗೂ ವಿಭಿನ್ನ ರೀತಿಯಲ್ಲಿ ಯೋಜನೆ ಮಾಡುವುದು. ಯುವ ತಂಡವಾಗಿರುವುದನ್ನು ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುವುದು ಈ ತಂಡದ ಸಾಮಥ್ಯವೇ ಆಗಿದೆ. ಫೋಟೋ ತೆಗೆಯುವಾಗ ರೀ ಟೆಕ್ ಅದಾಗ ಎಂತಹವರಿಗೂ ಕಿರಿಕಿರಿ ಆಗುವುದು ಸಾಮಾನ್ಯ. ಆದ್ರೆ, ಈ ಜೋಡಿ ಕ್ಲಿಕರ್ಸ್ ಯಾವುದೇ ರೀ ಟೆಕ್ ಗಳಿಲ್ಲದೆ, ಪಾದರಸವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿಯೊಂದು ಫ್ರೇಮ್ ಗಳು ಕಣ್ತಪ್ಪದಂತೆ ಸೆರೆ ಹಿಡಿಯುತ್ತದೆ. ಎಲ್ಲೂ ಕೂಡ ಆ ಕ್ಷಣಗಳು ಮಿಸ್ ಆಗದಂತೆ ನೋಡಿಕೊಳ್ಳುತ್ತಾರೆ. ಫೋಟೋಗ್ರಾಫಿಯಲ್ಲಿ ಇಷ್ಟೊಂದು ನಿಪುಣತೆ ಸಾಧಿಸುವುದು ದೊಡ್ಡ ಸವಾಲೇ ಆಗಿದೆ ಅನ್ನುತ್ತಾರೆ ಜೋಡಿ ಕ್ಲಿಕರ್ಸ್ ನ ಸಂಸ್ಥಾಪಕ ಅಭಿಷೇಕ್ ಬೆಹಾನಿ.

ಜೋಡಿ ಕ್ಲಿಕರ್ಸ್ ಇಂದು ಬಹುದೊಡ್ಡ ಛಾಯಾಗ್ರಾಹಕರ ಪಟ್ಟಿಗೆ ಸೇರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯೂ ವ್ಯಕ್ತವಾಗಿದೆ. ಬಾಯಿಂದ ಬಾಯಿಗೆ ಚರ್ಚೆಯ ಮೂಲಕ ಜನಪ್ರಿಯವಾಗಿದೆ. ಮದುವೆ ಆಯೋಜಕರು ಹಾಗೂ ಇನ್ನಿತರರು ಕೂಡ ಜೋಡಿ ಕ್ಲಿಕರ್ಸ್​ ಬಗ್ಗೆ ವಿಚಾರಣೆಯಲ್ಲಿ ತೊಡಗಿದ್ದಾರೆ. ಆದರೆ, ದಿನಾಂಕದ ಕೊರತೆಯಿಂದ ಎಲ್ಲ ಅಸೈನ್ ಮೆಂಟ್ ಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅನ್ನುತ್ತಾರೆ ಜೋಡಿ ಕ್ಲಿಕರ್ಸ್‌ನ ಸಂಸ್ಥಾಪಕ ಅಭಿಷೇಕ್ ಬೆಹಾನಿ.

ನಾನೊಬ್ಬ ಅದೃಷ್ಠವಂತ. ನಮ್ಮ ಕೆಲಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಜೋಡಿ ಕ್ಲಿಕರ್ಸ್ ಸಾಮಾಜಿಕ ತಿಳುವಳಿಕೆ ಮೂಡಿಸುವ ಕಾರ್ಯದಲ್ಲಿ ತೊಡಗಲಿದೆ. ಜಾಗೃತಿ ಮೂಡಿಸುವ ಸಲುವಾಗಿ ನಗರದ ಆಯ್ದು ಪ್ರದೇಶಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲು ಬಯಸಲಾಗಿದೆ ಅನ್ನುತ್ತಾರೆ ಅಭಿಷೇಕ್ ಬೆಹಾನಿ. ಡಿಗ್ರಿ ಪಡೆದು ಕೆಲಸಕ್ಕಾಗಿ ಅಲೆದು ಭವಿಷ್ಯ ಮಂಕಾಗಿದೆ ಎಂದು ತಿಳಿದುಕೊಂಡಿರುವವರಿಗಂತೂ ಅಭಿಷೇಕ್​​ ಕಹಾನಿ ಮಾದರಿ ಅನ್ನೋದರಲ್ಲಿ ಎರಡು ಮಾತಿಲ್ಲ.