ಮಹಿಳಾ ನಿರ್ದೇಶಕರು : ಹೆಸರಿಗೆ ಮಾತ್ರ, ಉತ್ಸಾಹ ಸೊನ್ನೆ..!

ಟೀಮ್​​ ವೈ.ಎಸ್​. ಕನ್ನಡ

ಮಹಿಳಾ ನಿರ್ದೇಶಕರು : ಹೆಸರಿಗೆ ಮಾತ್ರ, ಉತ್ಸಾಹ ಸೊನ್ನೆ..!

Friday December 18, 2015,

2 min Read

ಭಾರತದ ಕಾನೂನು ಸಂಸ್ಥೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರಿಣಿ ಸುಬ್ರಮಣಿ ಅವರು ಬರೆದ ಲೇಖನ ಇದು. ನಿಜಕ್ಕೂ ಉದ್ಯಮ ವಲಯದಲ್ಲಿ ಮಹಿಳಾ ಸಬಲೀಕರಣ ಆಗ್ತಾ ಇದ್ಯಾ ಅನ್ನೋ ಬಗ್ಗೆ ಹರಿಣಿ ಬೆಳಕು ಚೆಲ್ಲಿದ್ದಾರೆ. ಕಂಪನಿಗಳಲ್ಲಿ ಮಹಿಳೆಯರಿಗೆ ನೆಪಮಾತ್ರಕ್ಕೆ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆಯೇ? ಅಥವಾ ಲಿಂಗ ಸಮಾನತೆ ವಾಸ್ತವವಾಗಿ ಅನುಷ್ಠಾನಕ್ಕೆ ಬಂದಿದೆಯಾ ಅನ್ನೋದನ್ನು ಕೂಡ ಹರಿಣಿ ಉಲ್ಲೇಖಿಸಿದ್ದಾರೆ. ಅವರ ಅನುಭವ ಮತ್ತು ಅಭಿಪ್ರಾಯಗಳನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ಕಂಪನಿ ಆ್ಯಕ್ಟ್ 2013ರ ಸೆಕ್ಷನ್ 149ರ ಸಬ್ ಸೆಕ್ಷನ್(1)ರಲ್ಲಿ, ಕಂಪನಿಗಳು ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕರನ್ನು ಹೊಂದಿರಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕಾನೂನು ಯಾವ ರೀತಿಯ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಅನ್ನೋದನ್ನು ಕೂಡ ಸ್ಪಷ್ಟಪಡಿಸಲಾಗಿದೆ. ಪಟ್ಟಿ ಮಾಡಿದ ಕಂಪನಿಗಳು ಮತ್ತು ಕನಿಷ್ಠ 100 ಕೋಟಿ ಮೌಲ್ಯದ ಷೇರು ಬಂಡವಾಳ ಪಾವತಿಸಿದ, ಅಥವಾ ಕನಿಷ್ಠ 300 ಕೋಟಿ ವಹಿವಾಟು ನಡೆಸುವ ಸಾರ್ವಜನಿಕ ಸಂಸ್ಥೆಗಳಿಗೆ ಈ ನಿಯಮ ಕಡ್ಡಾಯವಾಗಿ ಅನ್ವಯವಾಗುತ್ತದೆ. ಅಂತಹ ಕಂಪನಿಗಳು ತಮ್ಮ ಆಡಳಿತ ಮಂಡಳಿಯಲ್ಲಿ ಕನಿಷ್ಠ ಒಬ್ಬ ಮಹಿಳೆಯನ್ನಾದ್ರೂ ನಿರ್ದೇಶಕಿಯನ್ನಾಗಿ ನೇಮಿಸಿಕೊಳ್ಳಲೇಬೇಕು. ಪಟ್ಟಿ ಮಾಡಿದ ಕಂಪನಿಗಳು ಆವರ್ತಕ ಆಧಾರದ ಮೇಲೆ, ಷೇರು ವಿನಿಮಯದ ಅವಕಾಶವನ್ನು ಅನುವರ್ತಿಸದಿದ್ದಲ್ಲಿ ದಂಡಿಸುವುದು ಕೂಡ ಕಡ್ಡಾಯ.

image


ಆದ್ರೆ ಕಾನೂನನ್ನು ಕೇವಲ ವ್ಯಾಖ್ಯಾನಿಸಿದಂತೆ ಭಾಸವಾಗುತ್ತದೆ. `ಬಿಎಎಸ್‍ಎಫ್ ಇಂಡಿಯಾ' ಕಳೆದ ಆಗಸ್ಟ್​​ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮಾಡಿದ್ದನ್ನೇ ಗಣನೆಗೆ ತೆಗೆದುಕೊಳ್ಳೋಣ. ಮೊದಲು ಆ್ಯಂಡ್ರಿಯಾ ಫ್ರೆಂಜೆಲ್ ಅವರನ್ನು, ಕಂಪನಿಯ ಆಡಳಿತ ಮಂಡಳಿಯ ಮಹಾನಿರ್ದೇಶಕಿಯನ್ನಾಗಿ `ಬಿಎಎಸ್‍ಎಫ್ ಇಂಡಿಯಾ' ನೇಮಕ ಮಾಡಿತ್ತು. ಆದ್ರೆ ಅದೇ ದಿನ ಫ್ರೆಂಜೆಲ್ ಅವರ ಸ್ಥಾನಕ್ಕೆ, ಪರ್ಯಾಯ ನಿರ್ದೇಶಕರನ್ನಾಗಿ ಎನ್.ಜೆ.ಬಾಳಿಗಾ ಅವರನ್ನು ನೇಮಿಸಿದೆ. ಇನ್ನು ಗೃಹಬಳಕೆಯ ಪ್ರತಿನಿಧಿ ಸಂಸ್ಥೆಯೊಂದು, ಕಂಪನಿಯ ಆಡಳಿತ ಮಂಡಳಿಯಲ್ಲಿ ಮಹಿಳಾ ನಿರ್ದೇಶಕರ ಅವಶ್ಯಕತೆ ಕಡ್ಡಾಯ, ಇಲ್ಲದಿದ್ದರೆ ಕಾನೂನಿಗೆ ಅಗೌರವ ತೋರಿದಂತೆ ಅನ್ನೋದನ್ನು ಅರ್ಥಮಾಡಿಕೊಂಡಿದೆ.

ಪ್ರಖ್ಯಾತ ಕಾನೂನು ಸಂಸ್ಥೆಯೊಂದರ ಯುವ ವಕೀಲರೊಬ್ಬರನ್ನು ನಾನು ಭೇಟಿಯಾಗಿದ್ದೆ. `ಬಿಎಎಸ್‍ಎಫ್ ಇಂಡಿಯಾ'ದಲ್ಲಿ ನಡೆದ ಘಟನೆಯನ್ನು ಆಕೆ ಸಮರ್ಥಿಸಿಕೊಂಡಿದ್ರು. ಅವರ ಪ್ರಕಾರ, ಕಂಪನಿಯ ಆಡಳಿತ ಮಂಡಳಿಯಲ್ಲಿ ಒಬ್ಬ ಮಹಿಳಾ ನಿರ್ದೇಶಕಿಗೆ ಪರ್ಯಾಯವಾಗಿ ಪುರುಷ ನಿರ್ದೇಶಕರನ್ನು ನೇಮಕ ಮಾಡಬಹುದು. ಅದೇ ರೀತಿ ಪರಿಸ್ಥಿತಿಯನ್ನು ನಿಭಾಯಿಸಲು ಒಬ್ಬ ಮಹಿಳಾ ನಿರ್ದೇಶಕಿಯನ್ನು ಕೂಡ ಪರ್ಯಾಯವಾಗಿ ನೇಮಕ ಮಾಡಬಹುದು. ಅವರ ಪ್ರಕಾರ ಇದಕ್ಕೆ ಕಾನೂನಿನಲ್ಲಿ ಮಾನ್ಯತೆ ಇದೆ.

ಈ ಕೆಳಗಿನ ರೀತಿಯಲ್ಲಿ ಯುವ ವಕೀಲೆ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ,

``ಪರ್ಯಾಯ ನಿರ್ದೇಶಕರ ನೇಮಕಕ್ಕೆ 2013ರ ಕಂಪನಿ ಆ್ಯಕ್ಟ್​ನಲ್ಲಿ ಲಿಂಗ ಆಧಾರಿತ ಅರ್ಹತೆಗೆ ಅವಕಾಶವನ್ನು ಕೊಡಲಾಗಿದೆಯೇ? 2013ರ ಕಂಪನಿ ಆ್ಯಕ್ಟ್​ನ ಸೆಕ್ಷನ್ 149(1)ನಲ್ಲಿ, ಒಬ್ಬ ಮಹಿಳಾ ನಿರ್ದೇಶಕಿಯನ್ನು ಆಡಳಿತ ಮಂಡಳಿಯ ಕಾರ್ಯನಿವಾಹಕ/ಕಾರ್ಯನಿವಾಹಕೇತರ ಸಿಬ್ಬಂದಿಯಾಗಿ ನೇಮಕ ಮಾಡಬೇಕೆಂಬುದನ್ನು ಸೂಚಿಸಲಾಗಿದೆಯಾ? ಕಟ್ಟುನಿಟ್ಟಾಗಿ ಹೇಳುವುದಾದ್ರೆ ಇವೆರಡೂ ಪ್ರಶ್ನೆಗಳ ಉತ್ತರ ಋಣಾತ್ಮಕವಾಗಿದೆ. ಹಾಗಾಗಿ ಆಕೆಯ ಅಭಿಪ್ರಾಯ ಕಾಣೆಯಾಗಿರುವ ಈ ನಿಬಂಧನೆಗಳನ್ನು ಆಧರಿಸಿತ್ತು. ಈ ವಿಚಾರಗಳನ್ನಿಟ್ಟುಕೊಂಡು ಅವರು ಗ್ರಾಹಕರಿಗೆ ಸಲಹೆ ಸೂಚನೆಗಳನ್ನು ಕೂಡ ನೀಡಿದ್ದಾರೆ. ಆಡಳಿತ ಮಂಡಳಿಯಲ್ಲಿ ಮಹಿಳಾ ನಿರ್ದೇಶಕಿಯನ್ನು ಹೊಂದಬೇಕೆಂಬ ನಿಯಮದ ಶಾಸನಾತ್ಮಕ ಉದ್ದೇಶವನ್ನು ಯುವ ವಕೀಲೆಯ ಅಭಿಪ್ರಾಯ ಸಮರ್ಥಿಸಿಕೊಳ್ಳುವುದಿಲ್ಲ. ಕಂಪನಿಗಳಲ್ಲಿ ಲಿಂಗ ಸಮಾನತೆ ಅನ್ನೋದು ಮಾತಿನಲ್ಲಿ ಮಾತ್ರ ಪಾಲಿಸಬೇಕಾದ ನಿಯಮ, ಸಾಂವಿಧಾನಿಕ ದೈವಾಜ್ಞೆಯೇನಲ್ಲ ಎಂಬರ್ಥದಲ್ಲಿ ವಾದಿಸುವ ವಕೀಲರು ಕೂಡ ಇದ್ದಾರೆ. ಈ ನಿಯಮದ ಹಿಂದಿರುವ ಉದ್ದೇಶ ಮತ್ತು ಆಶಯ ಸ್ಪಷ್ಟವಾಗಿದೆ. ಕಂಪನಿಗಳ ಬಿಲ್‍ನ ಪರಿಚಯದಲ್ಲೇ ಇದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ, ವಿವಿಧ ಹಂತಗಳ ನಿರ್ಧಾರ ತೆಗೆದುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಮಹಿಳೆಯರು ಹೆಚ್ಚಾಗಿ ಭಾಗಿಯಾಗುವಂತೆ ಮಾಡುವುದೇ ಈ ನಿಯಮದ ಉದ್ದೇಶ.

ಆದ್ರೆ ಈ ನಿಯಮದ ಬಗ್ಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಇನ್ನೂ ಸ್ಪಷ್ಟತೆಯಿಲ್ಲ. ಮತ್ತೊಂದ್ಕಡೆ, ನನ್ನ ಸ್ನೇಹಿತೆ ಹಾಗೂ ಯುವ ವಕೀಲೆ ಇದೇ ದಿಸೆಯಲ್ಲಿ ತಮ್ಮ ಗ್ರಾಹಕರಿಗೆ ಸಲಹೆ ಸೂಚನೆ ನೀಡುವುದನ್ನು ಮುಂದುವರಿಸಿದ್ದಾರೆ. ಶಾಸಕಾಂಗ ಉದ್ದೇಶದ ಬಗ್ಗೆ ಇನ್ನಷ್ಟು ಗೊಂದಲ ಉಂಟಾಗದಂತೆ ತಡೆಯಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಅದಕ್ಕೆ ಇದು ಸೂಕ್ತ ಸಮಯವೂ ಹೌದು.

ಲೇಖಕರು: ಹರಿಣಿ ಸುಬ್ರಮಣಿ

ಅನುವಾದಕರು: ಭಾರತಿ ಭಟ್​​