ನಾಯಿಗಳಿಗಾಗಿ ಸ್ಪೆಷಲ್​​ ಊಟ..!

ಟೀಮ್​​ ವೈ.ಎಸ್​​​

ನಾಯಿಗಳಿಗಾಗಿ ಸ್ಪೆಷಲ್​​ ಊಟ..!

Friday September 11, 2015,

2 min Read

ವಿಜೇತ ಸಿಂಗ್ ಅವರಿಗೆ ನಾಯಿಗಳೆಂದರೆ ತುಂಬಾ ಪ್ರೀತಿ. ವಿಜೇತ ಆ ಪ್ರೀತಿ ಮತ್ತು ಕಾಳಜಿ ಅವರು ಕೆಲಸವನ್ನು ಬಿಟ್ಟು ತೂಪಿ’ಸ್ ಡಬ್ಬಾಸ್ ನ್ನು ಸ್ಥಾಪಿಸಲು ಕಾರಣವಾಯಿತು. ತೂಪಿ’ಸ್ ಉದ್ದೇಶ ನಾಯಿ ಸಾಕುವ ಮಾಲೀಕರಿಗೆ ಅವ್ರ ನಾಯಿಗಳಿಗೆ ಸರಿಯಾದ ಆಹಾರ ದೊರಕುವಂತೆ ಮಾಡುವುದು.

image


ವಿಜೇತಗೆ 24 ವರ್ಷ. ಸಹೋದರ ಕರಣ್ ಗೆ 23 ವರ್ಷ. ಇವರ ಮನೆಯಲ್ಲಿ 5 ನಾಯಿಗಳನ್ನು ಸಾಕುತ್ತಿದ್ದರು. ವಿಧ್ಯಾಭ್ಯಾಸಕ್ಕಾಗಿ ಪೋಷಕರು, ಪ್ರೀತಿಯ ನಾಯಿಗಳನ್ನು ಮತ್ತು ನಗರವನ್ನು ತೊರೆದು ಪುಣೆ ಗೆ ಹೋಗಬೇಕಾದ ಅನಿವಾರ್ಯಿಯತೆ ಎದುರಾಯಿತು.

ವಿಜೇತಗೆ ನಾಯಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ನಾಯಿಗಳಿಗೆ ಪ್ರತಿದಿನವೂ ಗೂಗಲ್ ನಲ್ಲಿ ರೆಸಿಪೀ ಗಳನ್ನು ಹುಡುಕಿ ಆಹಾರ ತಯಾರಿಸುತ್ತಿದ್ದರು. ವಿಜೇತ ತಾನು ತಯಾರು ಮಾಡಿದ ಆಹಾರವನ್ನು ನಾಯಿಗಳು ತುಂಬಾ ಆನಂದದಿಂದ ತಿನ್ನುವುದನ್ನು ಗಮನಿಸಿದರು. ನಂತ್ರ ವಿಜೇತ ತನ್ನ ಸ್ನೇಹಿತರ ನಾಯಿಗಳಿಗೂ ಆಹಾರ ತಯಾರು ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡರು. ಆದರೆ ಅವರ ಈ ಅಭ್ಯಾಸ ವಿಧ್ಯಾಭ್ಯಾಸಕ್ಕಾಗಿ ಪುಣೆಗೆ ತೆರಳಿದಾಗ ಸ್ವಲ್ಪ ದಿನಗಳ ಕಾಲ ನಿಂತು ಹೋಗಿತ್ತು. ಆದರೆ ಅದೇ ಕೊನೆ ಆಗಿರಲಿಲ್ಲ.

ವಿಜೇತ ಸಾಹಸೋದ್ಯಮವನ್ನು ಆರಂಭಿಸುವ ಮೊದಲು ಅರ್ನ್ಸ್ಟ್ ಅಂಡ್ ಯಂಗ್ ನಲ್ಲಿ ಕೆಲಸ ಮಾಡುತ್ತಿದ್ದರು. ವಿಜೇತಗೆ ವ್ಯಾಪಾರದ ಬಗ್ಗೆ ಏನು ತಿಳಿದಿರಲಿಲ್ಲ. ಆದರೆ ಕೆಲವು ದೇಶಗಳನ್ನು ಸುತ್ತಾಡಿದ ನಂತರ ವ್ಯಾಪಾರದ ಬಗ್ಗೆ ಸ್ವಲ್ಪ ತಿಳಿಯಿತು.

ಸುಮಾರು ಆರು ತಿಂಗಳ ಕಾಲ ಪ್ರವಾಸ ಮಾಡಿದ್ರು. ಸುಮಾರು 45 ದಿನಗಳ ಕಾಲ ಯುಎಸ್ ನಲ್ಲಿದ್ರು. ಭಾರತದ ಧರ್ಮಶಾಲ ಮತ್ತು ಯುರೋಪ್​​ನಲ್ಲೂ ಕಾಲ ಕಳೆದು ಮನೆಗೆ ಮರಳಿ ಬರುವಷ್ಟರಲ್ಲಿ ವಿಜೇತಗೆ ಮುಂದೇನು ಮಾಡಬೇಕು ಅನ್ನೋ ಸ್ಪಷ್ಟತೆ ಸಿಕ್ಕಿತ್ತು. ಕತ್ತರಿಸಿದ ತಾಜಾ ಮಾಂಸ ಡೆಲಿವರಿ ಮಾಡಲು ನಿರ್ಧಾರ ಮಾಡಿದರು.

ವಿಜೇತ ಸಹೋದರ ಕೂಡ ಪದವಿ ಮುಗಿಸಿದ ನಂತರ ಸಹೋದರಿ ಜೊತೆ ಸೇರಿಕೊಂಡರು. ಇಬ್ಬರು ಜೊತೆಗೂಡಿ ಜುಲೈ 2015 ರಂದು "ಸೀ ಮೀಟ್" ನ್ನು ಆರಂಭಿಸಿದರು. ಸುಮಾರು 10 ಜನರ ತಂಡದೊಂದಿಗೆ ಉದ್ಯಮ ಆರಂಭಿಸಿ ತಾಜಾ ಮಾಂಸ ಮತ್ತು ಸಮುದ್ರ ಆಹಾರವನ್ನು ಡೆಲಿವರಿ ಮಾಡುತ್ತಿದ್ದರು. ಪುಣೆಯಲ್ಲಿ ವಾರಕ್ಕೆ ಸುಮಾರು 200 ಗ್ರಾಹಕರನ್ನು ಹೊಂದಿದ್ದರು.

ವಿಜೇತ ತನ್ನ ಮನೆಗೆ ಪ್ರೀತಿಯ ಪಗ್ ತೂಪಿ ಯನ್ನು ತಂದಿದ್ದರು. ಪ್ರೀತಿಯ ಶ್ವಾನಕ್ಕಾಗಿ ವಿಶೇಷ ಆಹಾರವನ್ನು ತಯಾರು ಮಾಡಲು ನಿರ್ಧಾರ ಮಾಡಿದರು. ಇದು ವಿಜೇತಗೆ ಬೇರೆ ನಾಯಿ ಮಾಲೀಕರ ಬಗ್ಗೆ ಯೋಚಿಸುವಂತೆ ಮಾಡಿತು. ಹೀಗೆ ತೂಪಿ’ಸ್ ಡಬ್ಬಾಸ್ ಯೋಜನೆ ಜಾರಿಗೆ ಬಂದಿತು. ಎಲ್ಲ ನಾಯಿಗಳಿಗೂ ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಆಹಾರ ದೊರಕುವಂತೆ ಮಾಡುವುದು ವಿಜೇತ ಕನಸಾಗಿತ್ತು.

ಮಕ್ಕಳಿಗೆ ಪ್ರತೀದಿನವೂ ಲೇಸ್ ಮತ್ತು ಪಿಜ್ಜಾ ತಿನ್ನಿಸಿದರೆ ಅದು ಖುಷಿ ಕೊಡಬಹುದು. ಆದರೆ ಅದು ಆರೋಗ್ಯಕರವಲ್ಲ. ಹಾಗೆಯೇ ನಾಯಿಗಳಿಗೆ ಪ್ರತಿದಿನವೂ ಪೆಡಿಗ್ರಿ ನೀಡಿದರೆ ಅದನ್ನು ತಿನ್ನಬಹುದು. ಆದರೆ ಅದು ಆರೋಗ್ಯಕರವಲ್ಲ ಅನ್ನೋದು ವಿಜೇತ ವಾದ.

ವಿಜೇತರ ಕನಸಿನ ತೂಪಿಸ್​ ಡಬ್ಬಾಸ್​​ ಕಾಂಟ್ರಾಕ್ಟ್​​ ಬೇಸಿಸ್​ ಮೇಲೆ ನಡೆಯುತ್ತಿದೆ. ಗ್ರಾಹಕರು ತಮ್ಮ ನಾಯಿಗಳಿಗೆ ಪ್ರತಿದಿನ ಬೆಳಗ್ಗೆ ಎರಡು ಊಟವನ್ನು ಆರ್ಡರ್ ಮಾಡಬಹುದು. ಊಟವನ್ನು ಪ್ರತಿದಿನ ಬೆಳಗ್ಗೆ ಡೆಲಿವರೀ ಮಾಡಲಾಗುತ್ತದೆ. ಆಹಾರವನ್ನು ಚಿಕನ್ ನಿಂದ ತಯಾರು ಮಾಡಲಾಗಿರುತ್ತದೆ.ಬ್ರೌನ್ ರೈಸ್ ಮತ್ತು ಹಣ್ಣುಗಳನ್ನು ಕೂಡ ಈ ಡಾಗ್​ ಫುಡ್​​ ಹೊಂದಿರುತ್ತದೆ. ಕೆಲವು ನಾಯಿಗಳು ಏಲಾಸ್ಕನ್ ಹುಸ್ಕಿಎಸ್ ನ್ನು ಇಷ್ಟ ಪಡುತ್ತವೆ. ಅದನ್ನು ಫಿಶ್ ಮೂಲಕ ತಯಾರು ಮಾಡಲಾಗಿರುತ್ತದೆ.

ತೂಪಿ’ಸ್ ಡಬ್ಬಾಸ್ ನ ಊಟಕ್ಕೆ ಸುಮಾರು 3000 ದಿಂದ 4000 ರೂಪಾಯಿ ಖರ್ಚಾಗುತ್ತದೆ. ಇದು ನಾಯಿಯ ಆಕಾರಕ್ಕೆ ಅನುಗುಣವಾಗಿರುತ್ತದೆ. ಪ್ರಸ್ತುತ ಪುಣೆಯಲ್ಲಿ ಸುಮಾರು 9 ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತೂಪಿ’ಸ್ ಡಬ್ಬಾಸ್​​ನ್ನು ಬೇರೆ ನಗರಗಳಿಗೂ ವಿಸ್ತಾರವಾದ್ರೂ ಅಚ್ಚರಿ ಇಲ್ಲ.