ಒನ್ ಡೇ ರೆಸ್ಟೋರೆಂಟ್‍ನಲ್ಲಿ ವಿಕೆಂಡ್ ಮಸ್ತಿ

ವಿಸ್ಮಯ

0

ಸಾಮಾನ್ಯವಾಗಿ ವಿಕೆಂಡ್‍ಗಳು ಬಂದ್ರೆ ಅಥವಾ ಯಾವುದಾದ್ರೂ ದಿನವನ್ನು ಸೆಲೆಬ್ರೇಟ್ ಮಾಡಬೇಕು ಅಂದ್ರೆ ಜಾಗವನ್ನು ಹುಡುಕಲು ಕಷ್ಟ ಪಡ್ತೀವಿ.. ಅಲ್ಲಿ ಇಲ್ಲಿ ಅಂತ ಒನ್ ಡೇ ಆಗುವ ರೆಸ್ಟೋರೆಂಟ್ ಇದೀಯಾ.. ಇದ್ರೆ ಅಲ್ಲಿ ಆಟವಾಡೋಕ್ಕೆ ವಾಟರ್ ಪ್ಲೇಸ್ ಇದ್ದೀಯಾ ಅಂತ ಹುಡುಕಾಟ ಮಾಡ್ತಿವಿ. ಜೊತೆಗೆ ಸ್ವಲ್ಪ ಡಿಫೆರೆಂಟ್ ಆಗಿರೋ ರೆಸ್ಟೋರೆಂಟ್‍ಗಳು ಇದ್ದರೆ ಎಷ್ಟು ಚೆಂದ ಅಂತ ಹೇಳಿಕೊಳ್ಳುವವರೇ ಹೆಚ್ಚು..

ಅಂದಹಾಗೇ ಅಂತಹವರಿಗಾಗಿಯೇ ಒಂದು ರೆಸ್ಟೋರೆಂಟ್ ಇದೆ. ಅದೇ ಗೃಹಾಂತರ ರೆಸ್ಟೋರೆಂಟ್. ಇಲ್ಲಿಗೆ ಒನ್ ಡೇ ಟೈಮ್ ಪಾಸ್ ಮಾಡೋಕ್ಕೆ, ಪಾರ್ಟಿಗಳನ್ನು ಮಾಡೋಕ್ಕೆ ಜನ್ರು ಆಯ್ಕೆ ಮಾಡಿಕೊಳ್ಳುವುದು ಗೃಹಾಂತರ ರೆಸ್ಟೋರೇಟ್‍ಅನ್ನ.. ಈಗೀನ ಯುವಪೀಳಿಗೆಗೆ ಹೇಳಿ ಮಾಡಿಸಿದ್ದಂತಿದೆ.. ಸಿಟಿ ಜೀವನದ ಈ ಟ್ರಾಫಿಕ್‍ನಲ್ಲಿ ಸಿಕ್ಕಿಕೊಂಡು ಮೈಂಡ್ ಫ್ರೆಶ್ ಬೇಕು ಅನ್ನೋವವರಿಗಾಗಿಯೇ ಈ ರೆಸ್ಟೋರೆಂಟ್. ಫ್ಯಾಮಿಲಿ ಮೆಂಬರ್‍ಗಳು ಕೂಡ ಈ ರೆಸ್ಟೋರೆಂಟ್‍ನ್ನ ಇಷ್ಟ ಪಡ್ತಾರೆ..

ಗೃಹಾಂತರ.. ಹೆಸರೇ ಹೇಳುವಾಗೇ ಇದನ್ನು ಗುಹೆ ರೀತಿಯೇ ನಿರ್ಮಾಣ ಮಾಡಲಾಗಿದೆ.. ಜನ್ರುನ್ನು ಆಕರ್ಷಿಸಲು, ಹೊಸ ಅನುಭವವನ್ನು ನೀಡಲು ಈ ಪ್ರಯತ್ನವನ್ನು ಮಾಡುತ್ತಿದ್ದಾರೆ.. ಗುಹೆಯಲ್ಲಿ ಇರುವ ಅನುಭವ ಆಗುತ್ತೆ. ಹೆಚ್ಚು ಬೆಳಕಿನ ತ್ರಾಸು ಇಲ್ಲದೇ, ಕೆಂಪು ಮತ್ತು ಗಾಢ ಬಣ್ಣದ ಬೆಳಕು ಎಲ್ಲರಿಗೂ ಇಷ್ಟವಾಗುತ್ತೆ. ಜೊತೆಗೆ ಇಲ್ಲಿನ ಸುತ್ತಮುತ್ತ ಚಿತ್ರವಿಚಿತ್ರವಾಗಿರೊ ಚಿತ್ರಗಳು ಭಯವನ್ನು ತರುವಂತೆ ಮಾಡುತ್ತೆ.. ಆದ್ರೂ ಅಲ್ಲಿನ ವಾತಾವರಣಕ್ಕೆ ಹೆಚ್ಚು ಆಕರ್ಷಕವಾಗಿರುತ್ತೆ..

ಇಷ್ಟೆಲ್ಲ ಇರುವಾಗ ಆಟವಾಡೋಕ್ಕೆ ಸ್ವಿಮಿಂಗ್ ಫೂಲ್ ಕೂಡ ಇದೆ.. ಜೊತೆಗೆ ರೈನ್ ಡಿಸ್ಕೋ ವ್ಯವಸ್ಥೆಯನ್ನು ಮಾಡಲಾಗಿದೆ.. ಗುಹೆ ಒಳಗೆ ಕಾಲಿಡುತ್ತಿದ್ದಂತೆ ಕಲಾಕೃತಿಗಳು, ಚಿತ್ರಗಳು ಎಲ್ಲವೂ ಆಕರ್ಷಣಿಯಾವಾಗಿರುತ್ತೆ.. ಜೊತೆಗೆ ನಾರ್ಥ್ ಇಂಡಿಯಾನ್, ಸೌಥ್ ಇಂಡಿಯಾನ್ ಊಟಗಳ ವ್ಯವಸ್ಥೆಗಳು ಇವೆ. ಕಾಡಿನ ಮಧ್ಯೆ ಗುಹೆ ಒಳಗೆ ನೀರಿನ ಮಧ್ಯೆ ಊಟದ ಸವಿಯನ್ನ ಸವಿಬಹುದು.. ಗೃಹಾಂತರ ರೆಸ್ಟೋರೆಂಟ್ ಒಂದು ಆರ್ಟ್ ಮತ್ತು ಸ್ಟೋರ್ಟ್ ರೆಸ್ಟೋರೆಂಟ್ ಆಗಿದೆ..

ಏನ್ ಹೇಳ್ತಾರೆ ಜನ್ರು..?

ವರ್ಕ್ ಟೆನೆಷನ್‍ಗಳ ನಡುವೆ ಸ್ವಲ್ಪ ರಿಲ್ಯಾಕ್ಸ್ ಬೇಕು ಅನ್ನಿಸುತ್ತೆ. ಆಗ ಬರೋದೆ ಗೃಹಾಂತರ ರೆಸ್ಟೋರೆಂಟ್. ಯಾವುದೇ ವಾಹನಗಳ ಶಬ್ಧಗಳು ಇರುವುದಿಲ್ಲ. ಯಾವುದೋ ಕಾಡಿಗೆ ಹೋಗಿದ್ದಂತಾಗುತ್ತೆ. ಖುಷಿಯಾಗಿ ಇರುತ್ತೆ. ಇನ್ನು ಪಾರ್ಟಿಗಳಿಗೆ, ಡಿಫೆರೆಂಟ್ ಅನುಭವಕ್ಕೆ ಗೃಹಾಂತರ ರೆಸ್ಟೋರೆಂಟ್ ನಿಜಕ್ಕೂ ಯೂಸ್‍ಫೂಲ್ ಅಂತಾರೆ ಸೋನಿಯಾ.

ರಂಜಿನಿ ಎಂಬುವವರು ಗೃಹಾಂತರ ರೆಸ್ಟೋರೆಂಟ್ ಬಗ್ಗೆ ಹೇಳೋದು ಹೀಗೆ.. ಇಲ್ಲಿ ಆರ್ಟ್‍ಗಳಿಗೂ ಅವಕಾಶ ಕೊಡಲಾಗಿದೆ. ಜೊತೆಗೆ ಒಂದಿಷ್ಟು ಮಜಾ ಮಾಡೋಕ್ಕೆ ಬೆಸ್ಟ್ ಪ್ಲೇಸ್.. ಕಾಲೇಜಿನಲ್ಲಿ ನಮ್ಮ ಸ್ನೇಹಿತರ ಹುಟ್ಟುಹಬ್ಬವಿದ್ರೆ ಇಲ್ಲಿಗೆ ಬಂದು ಸೆಲೆಬ್ರೇಟ್ ಮಾಡುತ್ತಿವೆ.. ಹೊಸ ಥ್ರೀಲ್ ನೀಡುತ್ತೆ.. ಬೆಳಗ್ಗೆಯಿಂದ ಸಂಜೆಯವರೆಗೂ ಚೆನ್ನಾಗಿ ಕುಣಿದು ಕುಪ್ಪಳಿಸುತ್ತೇವೆ. ನಂತ್ರ ರಾತ್ರಿ ಊಟವನ್ನು ಇಲ್ಲಿನ ಕಲರ್‍ಫೂಲ್ ಲೈಟ್‍ಗಳ ನಡುವೆ ಎಂಜಾಯ್ ಮಾಡ್ತೀವಿ.ಅಂತಾರೆ ರಂಜಿನಿ

ನಿಮ್ಮಗೂ ಕೂಡ ನಿಮ್ಮ ಬೆಸ್ಟ್​ ಜೊತೆ ಒಂದು ಒಳ್ಳೆ ರೆಸ್ಟೋರೆಂಟ್‍ಗಳಿಗೆ ಹೋಗಬೇಕು ಅಂದ್ರೆ ನೀವು ಗೃಹಾಂತರ ರೆಸ್ಟೋರೆಂಟ್‍ಗೆ ಹೋಗಬಹುದು.. ಸಾಮಾನ್ಯ ರೆಸ್ಟೋರೆಂಟ್‍ಗಳಿಗಿಂತ ಸ್ವಲ್ಪ ಭಿನ್ನವಾಗಿರೋದ್ರಿಂದ ಒನ್ ಡೇ ರೆಸ್ಟೋರೆಂಟ್‍ಗೆ ಹೋಗಿ ಬರುವುದು..

Related Stories