ವಿವಿಧ ಹಂತಗಳ ಪಾವತಿ ವಿಧಾನಗಳಿಗೆ ಗುಡ್‌ ಬೈ ಹೇಳಿ: ಪೇ ಯು ಬಿಝ್ ಸಂಸ್ಥೆ ಒದಗಿಸುತ್ತಿದೆ ಒನ್ ಟ್ಯಾಪ್ ಪಾವತಿ ಅವಕಾಶ

ಟೀಮ್​​ ವೈ.ಎಸ್​. ಕನ್ನಡ

ವಿವಿಧ ಹಂತಗಳ ಪಾವತಿ ವಿಧಾನಗಳಿಗೆ ಗುಡ್‌ ಬೈ ಹೇಳಿ: ಪೇ ಯು ಬಿಝ್ ಸಂಸ್ಥೆ ಒದಗಿಸುತ್ತಿದೆ ಒನ್ ಟ್ಯಾಪ್ ಪಾವತಿ ಅವಕಾಶ

Friday December 18, 2015,

2 min Read


ವಿವಿಧ ಹಂತಗಳ ದೃಢೀಕರಣ ಪ್ರಕ್ರಿಯೆಗಳು ನಿಯಮಿತವಾಗಿ ಅಂಗಡಿ ಮಾಲೀಕರಿಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಪಾವತಿ ಪರಿಹಾರಗಳನ್ನು ಒದಗಿಸುವ ಸಂಸ್ಥೆ ಪೇಯುಬಿಝ್ ಒಂದು ಹೊಸ ದಾರಿ ಕಂಡುಹಿಡಿದಿದೆ. ಅದೇ ಒನ್ ಟ್ಯಾಪ್. ಎಲ್ಲಾ ರೀತಿಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮೊಬೈಲ್‌ನಲ್ಲಿ ಒಂದೇ ಒಂದು ಟ್ಯಾಪ್ ಮಾಡುವ ಮುಖಾಂತರ ಪಾವತಿ ಮಾಡಬಹುದಾದ ಅವಕಾಶ ಇದಾಗಿದೆ.

image


ಪಿಎಸ್‌ಐ-ಡಿಎಸ್‌ಎಸ್‌ ವಿಚಾರಕ್ಕೆ ಸಂಬಂಧಿಸಿದ ದೂರುಗಳನ್ನಾಧರಿಸಿ ಮತ್ತು ಪೇಟೆಂಟ್ ಪೆಂಡಿಂಗ್ ನಿಂದ ರೂಪುಗೊಂಡಿರುವ ಒನ್‌ ಟ್ಯಾಪ್ ತಂತ್ರಜ್ಞಾನದಿಂದ ಗ್ರಾಹಕರು ಪದೇ ಪದೇ ತಮ್ಮ 16 ಡಿಜಿಟ್‌ನ ಸಂಖ್ಯೆಯನ್ನು ನಮೂದಿಸುವ ಅವಶ್ಯಕತೆ ಇಲ್ಲ ಎಂದು ಹೇಳಲಾಗ್ತಿದೆ. ಆನ್‌ಲೈನ್ ಪಾವತಿ ಮಾಡುವಾಗ ಯಾವುದೇ ಸಿವಿವಿ ವೈಶಿಷ್ಟ್ಯ ಹೊಂದಿರುವ ಈ ವ್ಯವಸ್ಥೆಯಲ್ಲಿ ಕೀಯಿಂಗ್ ಇನ್ ದೃಢೀಕರಣದ ಸಮಸ್ಯೆಗಳನ್ನು ಪರಿಹರಿಸುತ್ತವೆ. ಈ ತಂತ್ರಜ್ಞಾನವನ್ನು ಈಗಾಗಲೇ ಪೇ ಯು ಮನಿ ಮತ್ತು ಆಹಾರ ತಂತ್ರಜ್ಞಾನದ ಸ್ಟಾರ್ಟ್ ಅಪ್ ಟ್ವಿಗ್ಲಿ ಅಳವಡಿಸಿಕೊಂಡಿದೆ.

ಇನ್ನು ಎರಡನೆ ಹಂತದ ದೃಢೀಕರಣ ಪ್ರಕ್ರಿಯೆಯಲ್ಲಿ ಒನ್ ಟೈಮ್ ಪಾಸ್‌ವರ್ಡ್(ಒಂದು ಬಾರಿ ಮಾತ್ರ ಉಪಯೋಗಿಸಬಹುದಾದ ಪಾಸ್‌ವರ್ಡ್) ತನ್ನಿಂದ ತಾನೇ ಆಟೋ ರೀಡ್ ಆಗಿ ಸಬ್ ಮಿಟ್ ಮಾಡಲ್ಪಡುತ್ತದೆ. ಇದು ಒನ್ ಟ್ಯಾಪ್ ಪಾವತಿಯ ಸಂಪೂರ್ಣ ಅನುಭವ ನೀಡುತ್ತದೆ. ಈ ಹಿಂದೆ ಅಲಿಬಾಬಾ ಸಂಸ್ಥೆಯ ಬೆಂಬಲ ಪಡೆದಿದ್ದ ಪೇಟಿಎಂ ಸಂಸ್ಥೆ ಒನ್ ಟ್ಯಾಪ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಹಣ ವರ್ಗಾಯಿಸುವ ಮತ್ತು ರಿಚಾರ್ಜ್ ಮಾಡುವ ಅವಕಾಶ ಒದಗಿಸಿದೆ.

ಈ ತಂತ್ರಜ್ಞಾನದಿಂದ ಇ-ಕಾಮರ್ಸ್ ಕಂಪನಿಗಳು ಈ ಒನ್ ಟ್ಯಾಪ್ ತಂತ್ರಜ್ಞಾನದ ಮೂಲಕ ವೇಗವಾಗಿ ಮತ್ತು ಸಮಸ್ಯೆಗಳಿಲ್ಲದೆ ಪಾವತಿ ಮಾಡುವ ಅನುಭವ ಹೊಂದಬಹುದಾಗಿದೆ.ಇದರಿಂದ ಗ್ರಾಹಕರು ಆನ್‌ಲೈನ್ ಮೂಲಕ ಪಾವತಿ ಮಾಡುವ ವಿಧಾನದಲ್ಲಿ ಬದಲಾವಣೆ ಬರುವುದು ಸಾಧ್ಯ ಎನ್ನುವುದು ಪೇಯುಬಿಝ್‌ನ ಬಿಸಿನೆಸ್ ಹೆಡ್ ರಾಹುಲ್ ಕೊಠಾರಿಯವರ ಅಭಿಪ್ರಾಯ.

ಇತರ ಇ-ಕಾಮರ್ಸ್ ಸಂಸ್ಥೆಗಳೂ ಸಹ ಈ ವೇದಿಕೆಯನ್ನು ಬಳಸಿಕೊಳ್ಳಲು ಅವಕಾಶವಾಗುವಂತೆ ಹಲವು ಸಂಸ್ಥೆಗಳನ್ನು ತನ್ನ ಪಾಲುದಾರರನ್ನಾಗಿಸಿಕೊಂಡಿದೆ ಪೇಯುಬಿಝ್ ಸಂಸ್ಥೆ. ಪೆಪ್ಪರ್ ಟ್ಯಾಪ್, ರೆಡ್‌ಬಸ್, ಗೋ ಇಬಿಬೋ ಮತ್ತು ಗ್ರೋಫರ್ಸ್ ಸೇರಿದಂತೆ ಹಲವು ಸಂಸ್ಥೆಗಳು ಪೇಯುಬಿಝ್‌ನ ಒನ್‌ ಟ್ಯಾಪ್ ಸೌಲಭ್ಯವನ್ನು ಅಳವಡಿಸಿಕೊಂಡಿವೆ.

ಗುರ್‌ಗಾಂವ್‌ ಮೂಲದ ಪೇಯುಬಿಝ್ ಸಂಸ್ಥೆ ಗೋ ಇಬಿಬೋ, ಸ್ನ್ಯಾಪ್‌ಡೀಲ್, ಬುಕ್‌ಮೈಶೋ, ಯಾತ್ರಾ ಮತ್ತು ಝೋಮ್ಯಾಟೋ ಸೇರಿದಂತೆ 80 ರಿಂದ 100 ಇ-ಕಾಮರ್ಸ್ ಸಂಸ್ಥೆಗಳಿಗೆ ತನ್ನ ಸೇವೆ ಒದಗಿಸುತ್ತಿದೆ.

ಈ ವರ್ಷದ ಜೂನ್‌ನಲ್ಲಿ ಪೇ ಯು ಇಂಡಿಯಾ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ದಿನಬಳಕೆಯ ವಸ್ತುಗಳ ಇ-ಕಾಮರ್ಸ್ ಮಾರುಕಟ್ಟೆಯ ಉದ್ಯಮವಲಯಕ್ಕೆ ಒನ್ ಟ್ಯಾಪ್ ಪಾವತಿ ವ್ಯವಸ್ಥೆ ಶೇ. 5ರಷ್ಟು ಕೊಡುಗೆ ನೀಡುತ್ತಿದ್ದು, ಇದು ಮುಂದಿನ ಜೂನ್ ವೇಳೆಗೆ ಶೇ.35ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಹೀಗಾಗಿ ಒನ್‌ ಟ್ಯಾಪ್ ಪಾವತಿ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಘಂಟಾಘೋಷವಾಗಿ ಹೇಳಬಹುದಾಗಿದೆ.

2014ರಲ್ಲಿ ಡಿಜಿಟಲ್ ಪಾವತಿ ವಿಭಾಗ 1.2 ಲಕ್ಷ ಕೋಟಿಯ ಗಡಿ ಮುಟ್ಟಿತ್ತು. ಇದು ಇ-ಕಾಮರ್ಸ್ ವಹಿವಾಟು ವಲಯ, ಯುಟಿಲಿಟಿ ಬಿಲ್‌ಗಳು ಮತ್ತು ಇತರ ಆನ್‌ಲೈನ್ ವಹಿವಾಟು ವಿಭಾಗದಲ್ಲಿ ಶೇ.40ರಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ. ಪ್ರಸ್ತುತ ಶೇ.50ರಷ್ಟು ಆನ್‌ಲೈನ್ ಮಾರುಕಟ್ಟೆ ಕ್ಯಾಶ್ ಆನ್ ಡೆಲಿವರಿ ವ್ಯವಸ್ಥೆಯ ಮೇಲೆಯೇ ಆಧಾರಿತವಾಗಿದೆ.

ಯುವರ್ ಸ್ಟೋರಿ ನಿಲುವು

ನ್ಯಾಸ್ಪೆರ್ಸ್ ಬೆಂಬಲಿತ ಪೇಯುಬಿಝ್ ಸಂಸ್ಥೆ ಈ ಒನ್ ಟ್ಯಾಪ್ ಪಾವತಿ ವ್ಯವಸ್ಥೆಯಿಂದ ಸಾಕಷ್ಟು ಪ್ರಖ್ಯಾತವಾಗುತ್ತಿದೆ. ಇಂತಹ ವ್ಯವಸ್ಥೆ ಪಾವತಿ ವಿಧಾನವನ್ನು ಸುಲಭಗೊಳಿಸಿಕೊಳ್ಳ ಬಯಸುವ ವ್ಯಾಪಾರಿಗಳಿಗೆ ನಿಜಕ್ಕೂ ವರದಾನವಾಗಿದೆ.

ಪೆಪ್ಪರ್ ಟ್ಯಾಪ್ ಮತ್ತು ಗ್ರೋಫರ್ಸ್ ನಂತಹ ಸಂಸ್ಥೆಗಳು ಮೊಬೈಲ್ ಮೂಲಕವೇ ಪಾವತಿ ಮಾಡಬಹುದಾದ ಅವಕಾಶ ಒದಗಿಸಿವೆ. ಇದರಿಂದ ಸ್ಮಾರ್ಟ್ ಫೋನ್‌ ಬಳಕೆದಾರರಿಗೂ ಸಾಕಷ್ಟು ಸಹಾಯವಾಗಿದೆ.

ಜಾಗತಿಕವಾಗಿ ಪೇಪಾಲ್‌ನಂತಹ ಸಂಸ್ಥೆಗಳು ಸಾಕಷ್ಟು ಬೆಳೆದಿದೆ. ಒನ್ ಟಚ್ ಪಾವತಿ ವಿಧಾನಗಳನ್ನು ಹಲವು ವೆಬ್‌ಸೈಟ್‌ಗಳು ಬಳಸಿಕೊಳ್ಳುತ್ತವೆ. ಬಳಕೆದಾರರು ತಮ್ಮ ಪದೇ ಪದೇ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಬಳಸದೇ ವೆಬ್‌ಸೈಟ್‌ಅನ್ನು ಉಪಯೋಗಿಸಿಕೊಳ್ಳಬಹುದಾಗಿದೆ.


ಲೇಖಕರು: ಜೈ ವರ್ಧನ್​​

ಅನುವಾದಕರು: ವಿಶ್ವಾಸ್​​​