ನಿಮಗೆ ‘ಅದು’ ಖರೀದಿಸಲು ನಾಚಿಕೆಯಾಗುತ್ತಾ? - ದಟ್ಸ್ ಪರ್ಸನಲ್ !

ಟೀಮ್​​ ವೈ.ಎಸ್​​.

0

ಸಮೀರ್ ಸರೈಯ್ಯಾ ಮಾಧ್ಯಮ ಮತ್ತು ಮೊಬೈಲ್ ಕ್ಷೇತ್ರದಲ್ಲಿ 15 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ವ್ಯಕ್ತಿ. ಹಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಸಿಂಗಾಪುರದಲ್ಲೆ ಹೆಚ್ಚು ನೆಲೆಸಿದ್ದ ಸಮೀರ್, 2011ರಲ್ಲಿ ಭಾರತಕ್ಕೆ ಬಂದಿದ್ದರು. ಆಗ ಇಲ್ಲಿ ಇ-ಕಾಮರ್ಸ್​ ಬೆಳೆಯುತ್ತಿರುವುದನ್ನು ನೋಡಿದರು. ತಾವೂ ಕೂಡಾ ಈ ನದಿಯಲ್ಲಿ ಧುಮುಕಬೇಕು ಎಂದು ಆಗಲೇ ನಿರ್ಧರಿಸಿದ್ದರು. ಹಲವು ಜನರಲ್ಲಿ ಮಾತನಾಡಿದಾಗ ಯಾವುದಾದರೂ ಒಂದು ಕ್ಷೇತ್ರ ಆಯ್ದುಕೊಳ್ಳುವಂತೆ ಸಲಹೆ ಬಂತು. ಆಗ ಸಮೀರ್ ತಾವೇ ಮಾರುಕಟ್ಟೆ ಸಮೀಕ್ಷೆಗೆ ಇಳಿದರು. “ನಾನು ಸಮೀಕ್ಷೆ ನಡೆಸಿದೆ. ಎಲ್ಲಾ ವಲಯಗಳಲ್ಲೂ ಆಗಲೇ ಹಲವು ಸಂಸ್ಥೆಗಳು ಇದ್ದವು, ಆದರೆ ಒಂದು ಕ್ಷೇತ್ರ ಮಾತ್ರ ಖಾಲಿ ಇತ್ತು.” ಎನ್ನುತ್ತಾರೆ ಸಮೀರ್. ಅದೇ ಕ್ಷೇತ್ರದಲ್ಲಿ ನವ್ಯೋದ್ಯಮ ಸ್ಥಾಪಿಸಲು ಸಮೀರ್ ನಿರ್ಧರಿಸಿದರು.

ಬಹುತೇಕ ಭಾರತೀಯರದ್ದು ಸಂಪ್ರದಾಯಸ್ಥ ಮನಸ್ಸು. ಭಾರತದಲ್ಲಿ ಲೈಂಗಿಕತೆಗೆ ಸಂಬಂಧಿಸಿದ ವೈಯುಕ್ತಿಕ ವಸ್ತುಗಳನ್ನು ಬಹಿರಂಗವಾಗಿ ಖರೀದಿಸುವಷ್ಟು ಮುಕ್ತ ವ್ಯವಸ್ಥೆ ಇರಲಿಲ್ಲ. “ನಾನು ಕಾಂಡೋಮ್ ಖರೀದಿಸಲು ಹೈವೇಗೆ ಹೋಗಬೇಕಿತ್ತು.” ಎಂದು ಜಬಲ್ಪುರದ ವ್ಯಕ್ತಿಯೊಬ್ಬ ದಟ್ಸ್​​​ ಪರ್ಸನಲ್ ಸರ್ವೇ ವೇಳೆ ಹೇಳಿಕೊಂಡಿದ್ದ. ಕಾರಣವೇನೆಂದರೆ, ನಗರದಲ್ಲಿ ಬಹುತೇಕ ಮಂದಿಗೆ ಆತನ ಪರಿಚಯವಿತ್ತು. ಅವಿವಾಹಿತನಾಗಿದ್ದ ಆತ ಹೋಗಿ ಕಾಂಡೋಮ್ ಖರೀದಿ ಮಾಡುವ ಸ್ಥಿತಿಯಲ್ಲಿರಲಿಲ್ಲ. ಸರ್ವೆ ವೇಳೆ ಇಂತಹದ್ದೇ ಬಹುತೇಕ ಕಥೆಗಳು ಕೇಳಿಬಂದಿದ್ದವು. ಇಂತಹ ಕಥೆಗಳೇ ದಟ್ಸ್​​ ಪರ್ಸನಲ್ ಆರಂಭಕ್ಕೆ ಪ್ರೇರಣೆಯಾಯಿತು.

ಈ ಕ್ಷೇತ್ರದಲ್ಲಿ ವ್ಯಾಪಾರದ ಅವಕಾಶ ದೊಡ್ಡದಿತ್ತು. ಆದರೆ, ಅದು ಮನಸ್ಸಿನಲ್ಲಿ ಜೋಕ್ ಆಗಿಯೇ ಇತ್ತು, ಎನ್ನುತ್ತಾರೆ ಸಮೀರ್. ಆದರೂ ಕೆಲ ಕಾಲದ ಬಳಿಕ, ಈ ಐಡಿಯಾವನ್ನು ಗೆಳೆಯ ಲೇಕೇಶ್ ಧೋಲಾಕಿಯಾ ಜೊತೆ ಹಂಚಿಕೊಂಡರು. ಅವರು, ಇಂಟರ್ನೆಟ್ ಮತ್ತು ಟೆಲಿಕಾಂ ಸಂಬಂಧಿತ ಕಾನೂನಿನಲ್ಲಿ ಅಟಾರ್ನಿಯಾಗಿದ್ದರು. ಲೇಕೇಶ್ ಅವರು ಕೆಲವು ಕಾನೂನು ಅಂಶಗಳನ್ನು ಪರಿಶೀಲಿಸಿದರು. ಈ ಐಡಿಯಾದ ಜೊತೆ ಮುಂದುವರಿಯಬಹುದು ಎಂದು ಸಲಹೆ ನೀಡಿದ ಲೇಕೇಶ್ ಅವರು ತಾವೂ ಸ್ವಲ್ಪ ಹೂಡಿಕೆ ಮಾಡುವುದಾಗಿ ತಿಳಿಸಿದರು. ಬಳಿಕ ದಟ್ಸ್ ಪರ್ಸನಲ್​ನಲ್ಲಿ ಕಾನೂನು ಅಟಾರ್ನಿಯಾಗಿ ಸೇರ್ಪಡೆಗೊಂಡರು. ಇದಾದ ಬಳಿಕ ವಿಕ್ರಮ್ ವರ್ಮಾ ಮತ್ತು ಅಭಯ್ ಭಲೋರೋ ಅವರನ್ನೂ ನಿರ್ದೇಶಕ ಮಂಡಳಿಯಲ್ಲಿ ಸಮೀರ್ ಸೇರಿಸಿಕೊಡರು. ಪ್ರಮುಖ ಸಲಹೆಗಾರರು ಮತ್ತು ಹೂಡಿಕೆದಾರರನ್ನು ತಮ್ಮತ್ತ ಸೆಳೆದರು. ಉದ್ಯಮ ಆರಂಭಕ್ಕೆ ವೇದಿಕೆ ಸಿದ್ಧವಾಗಿತ್ತು.

2013ರಲ್ಲಿ ಮುಂಬೈನಿಂದ ಹೊರಗಿರುವ ತಂಡದೊಂದಿಗೆ ಬೃಹತ್ ಪ್ರಚಾರದೊಂದಿಗೆ ಉದ್ಯಮವನ್ನು ಆರಂಭಿಸಲಾಯಿತು. “ನಮ್ಮ ಉದ್ಯಮದ ಬಗ್ಗೆ ಬಹುತೇಕ ಮುದ್ರಣ ಮಾಧ್ಯಮಗಳು, ಆನ್​​ಲೈನ್ ಮಾಧ್ಯಮಗಳು ಭಾರೀ ಪ್ರಮಾಣದಲ್ಲಿ ಪ್ರಚಾರ ನೀಡಿದವು. ನಮ್ಮ ವೆಬ್​​ಸೈಟ್ ಟ್ರಾಫಿಕ್ ಭಾರೀ ಪ್ರಮಾಣದಲ್ಲಿತ್ತು. ಲಾಂಚ್ ಆದ ಹತ್ತೇ ದಿನಕ್ಕೆ ವೆಬ್​ಸೈಟ್ ಕ್ರಾಷ್ ಆಗಿತ್ತು,” ಎನ್ನುತ್ತಾರೆ ಸಮೀರ್. ಕಂಪನಿಯ ಲಾಭದ ಬಗ್ಗೆ ಸರಿಯಾದ ಲೆಕ್ಕಾಚಾರ ಕೊಡದಿದ್ದರೂ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 50-100% ಅಭಿವೃದ್ಧಿ ಕಾಣುತ್ತಿದೆ. “ದೇಶದ ಮೂಲೆ ಮೂಲೆಗಳಿಂದಲೂ ಆರ್ಡರ್​​ಗಳು ಬರುತ್ತಿವೆ,” ಎನ್ನುತ್ತಾರೆ ಸಮೀರ್.