ಬ್ರಾಂಡ್ ಮಾರಾಟಕ್ಕೂ ಒಂದು ಬ್ರಾಂಡ್ !: 5 ಸಾವಿರ ಸ್ಪರ್ಧಿಗಳ ನೇತಾರನಾಗಲು ಕ್ರಿಯಾ ಸ್ಪರ್ಧೆ

ಟೀಮ್​​ ವೈ.ಎಸ್​​.

0

ಬ್ರಾಂಡ್ ಮಾರಾಟ ಅಥವಾ ಬ್ರಾಂಡ್ ಪ್ರಚಾರ ಎನ್ನುವುದು ಜಾಹೀರಾತಿನ ಬಹು ಪ್ರಮುಖ ಅಂಗ. ಗೆರಿಲಾಪ್ಲ ಮಾರ್ಕೆಟಿಂಗ್ ತಂತ್ರ ಅನುಸರಿಸಿ, ಸಂಸ್ಥೆ, ಅದರ ಕಾರ್ಪೋರೇಟ್ ಇಮೇಜ್, ಬ್ರಾಂಡ್ ಅನ್ನು ವ್ಯಾಪಾರ ಮೇಳ, ಸಮ್ಮೇಳನ ಮೊದಲಾದ ಸ್ಥಳಗಳಲ್ಲಿ ಪ್ರಚಾರ ಮಾಡುವುದು ಇದರ ಮುಖ್ಯ ತಂತ್ರ. ಭಾರತದಲ್ಲಿ ಈ ಉದ್ಯಮದ ಮೌಲ್ಯ ಏನಿಲ್ಲವೆಂದರೂ 3 ಶತಕೋಟಿ ಡಾಲರ್ ಎಂದು ಊಹಿಸಲಾಗಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಬ್ರಾಂಡ್​​​ ಮಾರಾಟದಲ್ಲಿ ತೊಡಗಿಕೊಂಡಿವೆ. ಇಷ್ಟೊಂದು ಮೌಲ್ಯ, ಇಷ್ಟೊಂದು ಸಂಸ್ಥೆಗಳಿದ್ದರೂ ಇಡೀ ಉದ್ಯಮವು ಚದುರಿಹೋಗಿದ್ದು, ಅಸಂಘಟಿತವಾಗಿದೆ.

ಉಪ್ಕಾರ್ ಶರ್ಮಾ ಈ ಮಾರುಕಟ್ಟೆಯನ್ನು ಅರ್ಥೈಸಿಕೊಂಡರು. ಈ ಉದ್ಯಮದಲ್ಲಿ ಭಾರೀ ಪ್ರಮಾಣದಲ್ಲಿ ವಹಿವಾಟಿಗೆ ಅವಕಾಶವಿದೆ ಎಂದು ತಿಳಿದುಕೊಂಡರು. 2008ರಲ್ಲಿ, ಕ್ರಿಯಾ ಎಂಬ ಸಂಸ್ಥೆಯನ್ನು ಬ್ಯುಸಿನೆಸ್ 2 ಬ್ಯುಸಿನೆಸ್ ಮಾದರಿಯಲ್ಲಿ ಆರಂಭಿಸಿದರು. ಉಡುಗೊರೆ, ಪ್ರಶಸ್ತಿಗಳು, ಪ್ರಚಾರಾಂದೋಲನ ಮತ್ತು ಸಮವಸ್ತ್ರಗಳ ಮೂಲಕ ಕಂಪನಿಗಳ ಬ್ರಾಂಡ್ ಪ್ರಚಾರದ ಅಗತ್ಯತೆಗಳನ್ನು ಪೂರೈಸತೊಡಗಿದರು.

"ಡೊಮೈನ್ ಎಕ್ಸ್​​ಪರ್ಟ್ ಆಗಿ ನಾವು ಕೆಲಸ ಆರಂಭಿಸಿದೆವು. ಕಂಪನಿಗಳಿಗೆ ಅವರ ವಹಿವಾಟಿನ ಪ್ರಚಾರಕ್ಕೆ ಬೇರೆ ಬೇರೆ ರೀತಿಯ ಸಹಾಯ ನೀಡಲಾರಂಭಿಸಿದೆವು. ಇಂದು ನಾವು ಪ್ರಸಾಧನ, ಮದ್ಯ, ಹೊಟೇಲ್​​ಗಳು, ಫಿಟ್ನೆಸ್ ಮೊದಲಾದ ಕ್ಷೇತ್ರಗಳ ಕಂಪನಿಗಳ ಬ್ರ್ಯಾಂಡ್ ಮಾರಾಟವನ್ನು ನೋಡಿಕೊಳ್ಳುತ್ತಿದ್ದೇವೆ. ಈ ಕ್ಷೇತ್ರಗಳಲ್ಲಿ ಪ್ರಚಾರ ಹೂಡಿಕೆ ಎನ್ನುವುದು ದುಬಾರಿಯಾಗಿರುವುದಿಲ್ಲ ಬದಲಾಗಿ ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿ, ಈ ಉದ್ಯಮಗಳ ಜನರು ಬ್ರಾಂಡ್ ಪ್ರಚಾರವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇದು ನಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ನೀಡಿದೆ." ಎನ್ನುತ್ತಾರೆ ಉಪ್ಕಾರ್.

ಕ್ರಿಯಾದಲ್ಲಿ ಹೊಸದೇನಿದೆ?

ಈ ವಲಯದಲ್ಲಿ ಪ್ರವೇಶ ಪಡೆಯುವುದು ತುಂಬಾ ಸುಲಭ. ಹೆಚ್ಚಿನ ಬಂಡವಾಳವೂ ಬೇಕಾಗಿಲ್ಲ ಎನ್ನುವುದು ಉಪ್ಕಾರ್ ಅವರ ಅಭಿಪ್ರಾಯ. ಕಡಿಮೆ ವೆಚ್ಚದಲ್ಲಿ ಉದ್ಯಮ ಸ್ಥಾಪನೆಯಾಗುವುದರಿಂದ ಇಲ್ಲಿ ಉದ್ಯಮಿಗಳ ಸಂಖ್ಯೆ ಜಾಸ್ತಿ. ಕೆಟಲಗ್ ಆಧಾರಿತ ವೆಬ್​​ಸೈಟ್​ಗಳೂ ಇಲ್ಲಿ ಸ್ಪರ್ಧೆಗೆ ಬಿದ್ದಿವೆ. ಈ ವಲಯದಲ್ಲಿರುವ ಬಹುತೇಕ ಉದ್ಯಮಿಗಳು ಇದನ್ನು ಉತ್ಪನ್ನ ಆಧರಿತ ವ್ಯವಹಾರ ಎಂದುಕೊಂಡಿದ್ದಾರೆ. ಆದರೆ, ಕ್ರಿಯಾ ಸೇವೆಯನ್ನು ಒದಗಿಸುತ್ತದೆ. ವ್ಯವಹಾರಕ್ಕೆ ಅನುಭವವುಳ್ಳ ಸ್ಪರ್ಶ ನೀಡುತ್ತದೆ.

"ನಮ್ಮ ಸಂವಹನವು ದರವನ್ನು ಅವಲಂಬಿಸಿಲ್ಲ. ಇದು ಚಿಂತನೆಯನ್ನು ಅವಲಂಬಿಸಿದೆ. ಇದನ್ನು ನಡೆಸಿಕೊಂಡು ಹೋಗುವುದು ತುಂಬಾ ಕಷ್ಟ. ಆದರೆ, ಇದು ನಮ್ಮ ಸುದೀರ್ಘ ಬಾಂಧವ್ಯವನ್ನು ಉಳಿಸುತ್ತದೆ ಮತ್ತು ಉದ್ಯಮವನ್ನು ಲಾಭದಾಯಕವನ್ನಾಗಿ ಮಾಡುತ್ತದೆ," ಎನ್ನುತ್ಥಾರೆ ಉಪ್ಕಾರ್.

ಸಂಸ್ಥೆಯ ಬೆಳವಣಿಗೆ

ಈ ಸಂಸ್ಥೆಯು ಕಳೆದ 5 ವರ್ಷಗಳಿಂದ ಪ್ರತಿವರ್ಷ ಸರಾಸರಿ 60% ದಷ್ಟು ಬೆಳವಣಿಗೆ ಸಾಧಿಸಿದೆ. 2014-15ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯ ಎಲ್ಲಾ ವಹಿವಾಟು 15 ಕೋಟಿಗೂ ಮೀರಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 25ಕೋಟಿ ರೂಪಾಯಿಗಳ ವಹಿವಾಟ ನಡೆಸುವತ್ತ ಸಂಸ್ಥೆ ಕಾರ್ಯನಿರತವಾಗಿದೆ.

ಈಗಾಗಲೇ ಕ್ರಿಯಾ ಸಂಸ್ಥೆಯು ಜಗತ್ತಿನ ಪ್ರಮುಖ ಬ್ರಾಂಡ್​​ಗಳ ಜೊತೆ ಕೆಲಸ ಮಾಡುತ್ತಿದೆ. ಗೂಗಲ್, ಪೆರ್ನಾಡ್, ರಿಕಾರ್ಡ್, ಲೋರಿಯಲ್, ರಿಟ್ಜ್ ಕಾರ್ಲಟನ್ ಹೊಟೇಲ್ಸ್, ಪಿಜ್ಜಾ ಹಟ್, ವೆರೋ ಮೋಡಾ, ಜ್ಯಾಕ್ ಜ್ಯಾನ್ಸ್ ಅಂಡ್ ಕೊಹಿನೂರ್ ಫುಡ್ಸ್ ಮೊದಲಾದ ಸಂಸ್ಥೆಗಳ ಬ್ರ್ಯಾಂಡ್ ಪ್ರಚಾರ ನೋಡಿಕೊಳ್ಳುತ್ತಿದೆ. "ಸುಮಾರು 25 ಕಂಪನಿಗಳ ಜೊತೆ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಒಟ್ಟಾರೆಯಾಗಿ 400ಕ್ಕೂ ಹೆಚ್ಚು ಗ್ರಾಹಕರು ನಮ್ಮ ಸಂಸ್ಥೆಯ ಸೇವೆ ಪಡೆದುಕೊಳ್ಳುತ್ತಿದ್ದಾರೆ." ಎನ್ನುತ್ತಾರೆ ಕ್ರಿಯಾ ಸಂಸ್ಥಾಪಕ ಉಪ್ಕಾರ್.

ತಮ್ಮ ಉದ್ದಿಮೆಯ ಕಾರ್ಯನಿರ್ವಹಣೆ ಕುರಿತೂ ಉಪ್ಕಾರ್ ಅವರು ಮಾಹಿತಿ ನೀಡಿದ್ದಾರೆ. "ನಮ್ಮದು ನೇರ ನಡೆಯ ವ್ಯಾಪಾರ ಮಾದರಿಯಾಗಿದೆ. ನಾವು, ನಮ್ಮ ಗ್ರಾಹಕರಿಗೆ ಯೋಚನೆಯಿಂದ ಯೋಜನೆ ಅನುಷ್ಠಾನದವರೆಗೆ ಎಲ್ಲಾ ರೀತಿಯ ಸೇವೆ ಒದಗಿಸುತ್ತೇವೆ. ಅದರ ಬದಲಿಗೆ ನಾವು ಸಂಭಾವನೆ ಪಡೆಯುತ್ತೇವೆ."

ಮಾರುಕಟ್ಟೆ ವಲಯ ಮತ್ತು ಸವಾಲುಗಳು

ಬ್ರಾಂಡ್ ಪ್ರಚಾರ ಉದ್ದಿಮೆಯು ಸುಮಾರು 3 ಶತಕೋಟಿ ಡಾಲರ್ ಮೌಲ್ಯ ಹೊಂದಿದೆ. ತಜ್ಞರ ಪ್ರಕಾರ, ಸುಮಾರು 5000 ಸಂಸ್ಥೆಗಳು ಈ ಉದ್ದಿಮೆಯಲ್ಲಿ ತೊಡಗಿಕೊಂಡಿವೆ. ಆದಾಗ್ಯೂ ಈ ಬಗ್ಗೆ ನಿಖರವಾದ ಅಧ್ಯಯನ ಇನ್ನೂ ಆಗಿಲ್ಲ. ಈ ವಲಯ ಗಂಭೀರವಾದ ಕೆಲವು ಕೊರತೆಗಳನ್ನು ಎದುರಿಸುತ್ತಿದೆ.

"ಯಾವುದೇ ಬದಲಾವಣೆ ಒಪ್ಪಿಕೊಳ್ಳದ, ಸಮ್ಮಿಲಿತವಾಗದ ಕೆಲವು ಉದ್ದಿಮೆಗಳ ಪೈಕಿ ಇದೂ ಒಂದು. ಕಾರಣವೇನೆಂದರೆ ಈ ನಿಟ್ಟಿನಲ್ಲಿ ಸಾಂಘಿಕವಾದ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಆದರೆ, ನಾವು ಕ್ರಿಯಾದಲ್ಲಿ ಇವೆಲ್ಲವನ್ನೂ ಮೀರಿ ಬೆಳೆಯುವ ಪ್ರಯತ್ನ ನಡೆಸುತ್ತಿದ್ದೇವೆ." ಎನ್ನುತ್ತಾರೆ ಉಪ್ಕಾರ್.

ಇದರ ಹೊರತಾಗಿಯೂ ಉದ್ಯಮಕ್ಕೆ ತನ್ನದೇ ಆದ ಕೆಲವು ಸವಾಲುಗಳಿವೆ. ಪ್ರಚಾರೋದ್ಯಮದಲ್ಲಿ ತೊಡಗಿಕೊಂಡಿರುವ, ಜನರು, ಸಂಸ್ಥೆಗಳು ಮತ್ತು ಗ್ರಾಹಕರ ಮನಸ್ಥಿಯೇ ದೊಡ್ಡ ಸವಾಲಾಗಿರುತ್ತದೆ.

"ಜಾಹೀರಾತು, ಕಾರ್ಯಕ್ರಮ ಸೇರಿದಂತೆ ಬ್ರಾಂಡ್ ಬೆಳೆಸುವ ಹಲವು ವಿಧಾನಗಳಂತೆ ಬ್ರಾಂಡ್ ಮಾರಾಟವನ್ನು ಯಾರೂ ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ. ಮಾರುಕಟ್ಟೆಯನ್ನು ಹಾಳುಗೆಡವುದರೊಂದಿಗೆ ಬದಲಾವಣೆ ತರುವುದು ಸಾಧ್ಯ," ಎನ್ನುತ್ತಾರೆ ಉಪ್ಕಾರ್.

ಸ್ಪರ್ಧೆ..!

ಈ ಉದ್ಯಮವು ಸಂಪೂರ್ಣವಾಗಿ ಅಸಂಘಟಿತವಾಗಿದೆ. ಹೀಗಾಗಿ ಚಿಕ್ಕಪುಟ್ಟ ಸಂಸ್ಥೆಗಳು, ವರ್ತಕರು ವಹಿವಾಟು ನಡೆಸಿ ದುಡ್ಡು ಬಾಚುತ್ತಿದ್ದಾರೆ.

ಇ ಯಂತ್ರ, ಡಾಲ್ಫಿನ್ ಡಿಸ್​ಪ್ಲೇಸ್ ಮತ್ತು ಬ್ರಾಂಡ್ಸಕ್ಟ್​​​ನಂತಹ ಕೆಲವು ಸಂಸ್ಥೆಗಳು ಬ್ರಾಂಡ್ ಮಾರಾಟ ಕ್ಷೇತ್ರದಲ್ಲಿ ತೊಡಗಿಕೊಂಡಿವೆ.

ಭಾರತದಲ್ಲಿ ಇ ಯಂತ್ರದಂತಹ ಕಂಪನಿಗಳು ವಹಿವಾಟನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಜಾಗತಿಕ ಭೂಪಟದಲ್ಲಿ ಹೆಸರು ಮಾಡಲು ಸಾಧ್ಯವಾಗಲಿಲ್ಲ. ಸಾಕಷ್ಟು ಬಂಡವಾಳದ ಹೊರತಾಗಿಯೂ ವಿಫಲವಾದವರು. ಕ್ರಿಯಾ ಜೊತೆಗೆ ಸ್ಪರ್ಧೆ ನಡೆಸುತ್ತಿರುವವರಲ್ಲಿ ಬಹುತೇಕ ಸಂಸ್ಥೆಗಳು ಕೆಟಲಗ್ ಆಧರಿತ ವೆಬ್​​ಸೈಟ್​​ಗಳನ್ನು ಹೊಂದಿರುವ ವರ್ತಕರಾಗಿದ್ದಾರೆ.

ಅಷ್ಟೇ ಅಲ್ಲದೆ, ಈ ಕ್ಷೇತ್ರವು ಬ್ರಾಂಡ್​ಗಳು, ಅವರ ಸಾಂಸ್ಥಿಕ ಮಾರಾಟ ವಿಭಾಗಗಳು, ಉಡುಗೊರೆ ವೆಬ್​​ಸೈಟ್​ಗಳು ಮತ್ತಿತರ ಸಂಸ್ಥೆಗಳಿಂದಲೂ ತೀವ್ರ ಸ್ಪರ್ಧೆ ಎದುರಿಸುತ್ತಿದೆ. 50 ದಶಲಕ್ಷ ಡಾಲರ್​ಗೂ ಹೆಚ್ಚಿನ ವಹಿವಾಟು ನಡೆಸುತ್ತಿರುವ ವಿದೇಶಿ ಸಂಸ್ಥೆಗಳು ಭಾರತದತ್ತ ಮುಖ ಮಾಡಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನಷ್ಟು ತೀವ್ರಗೊಳ್ಳುವುದು ಖಚಿತ. ಆದರೆ ಈ ಬೆಳವಣಿಗೆಗಳು, ಇಡೀ ಕ್ಷೇತ್ರವನ್ನು ಒಗ್ಗೂಡಿಸುವುದು, ಸಂಘಟಿಸುವುದು ನಿಶ್ಚಿತ.

Related Stories

Stories by YourStory Kannada