ಭಾರತದ ಪ್ರಥಮ ಸೋಲಾರ್​ಪಾರ್ಕ್ ಬಗ್ಗೆ ನಿಮಗೆಷ್ಟು ಗೊತ್ತು..?

ಟೀಮ್​ ವೈ.ಎಸ್​. ಕನ್ನಡ

ಭಾರತದ ಪ್ರಥಮ ಸೋಲಾರ್​ಪಾರ್ಕ್ ಬಗ್ಗೆ ನಿಮಗೆಷ್ಟು ಗೊತ್ತು..?

Thursday August 25, 2016,

2 min Read

ಭಾರತದಲ್ಲಿ ವಿದ್ಯುತ್​​ನ ಅವಶ್ಯಕತೆ, ಅದ್ರ ಉತ್ಪತ್ತಿಗಿಂತ ಹೆಚ್ಚೇ ಇದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕರೆಂಟ್​ನ ಅಭಾವ ಎಲ್ಲಾ ಕಡೆಯೂ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕವಾಗಿ ಸಿಗುವ ವಿದ್ಯತ್​ನ ಲಾಭ ಪಡೆಯುವ ಯೋಚನೆ ನಡೆಯುತ್ತಿದೆ. ಸೋಲಾರ್ ಮೂಲಕ ವಿದ್ಯುತ್ ಉತ್ಪತ್ತಿ ಮಾಡಿ, ಅದನ್ನು ಸಾರ್ವಜನಿಕರ ಬಳಕೆಗೆ ಸಿಗುವಂತೆ ಮಾಡುವ ಕನಸು ನನಸಾಗುವ ಸಮಯ ಹತ್ತಿರ ಬರುತ್ತಿದೆ.

ಭಾರತದ ಅತೀ ದೊಡ್ಡ ಸೋಲಾರ್ ಪಾರ್ಕ್ ತಮಿಳುನಾಡಿನಲ್ಲಿ ಸ್ಥಾಪನೆಯಾಗಿದೆ. ಎಬಿಬಿ ಇಂಡಿಯಾ ತಮಿಳುನಾಡಿನಲ್ಲಿ 648 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್​ನ್ನು ನಿರ್ಮಿಸುವ ಪ್ಲಾನ್ ಮಾಡಿದೆ. ಈ ಸೋಲಾರ್ ಪಾರ್ಕ್​ನ್ನು ಅದಾನಿ ಗ್ರೂಪ್ ಅಭಿವೃದ್ಧಿ ಪಡಿಸುತ್ತಿದೆ. ಕ್ಲೀನ್ ಟೆಕ್ಕೀಸ್ ವರದಿ ಪ್ರಕಾರ 648 ಮೆಗಾವ್ಯಾಟ್ ಕ್ಯಾಪಾಸಿಟಿಯಲ್ಲಿ ಈಗಾಗಲೇ 360 ಮೆಗಾವ್ಯಾಟ್ ಸಾಮರ್ಥ್ಯವನ್ನು ಈಗಾಗಲೇ ಪವರ್ ಗ್ರಿಡ್​ಗೆ ಕನೆಕ್ಟ್ ಮಾಡಲಾಗಿದೆ.

ತಮಿಳುನಾಡಿನ ಈ ಯೋಜನೆ ಭಾರತದಲ್ಲೇ ಅತೀ ದೊಡ್ಡ ಸೋಲಾರ್ ವಿದ್ಯುತ್ ಉತ್ಪನ್ನ ಘಟಕವಾಗಿ ದಾಖಲೆ ಬರೆಯಲಿದೆ. ಈ ಬೃಹತ್ ಸೋಲಾರ್ ವಿದ್ಯುತ್ ಉತ್ಪನ್ನ ಘಟಕ ಅನೇಕ ಚಿಕ್ಕ ರಾಜ್ಯಗಳ ವಿದ್ಯುತ್ ಘಟಕಗಳೊಂದಿಗೆ ನೇರ ಸಂಪರ್ಕವನ್ನು ಪಡೆಯಲಿದೆ. ಗುಜರಾತ್ ರಾಜ್ಯದ ಚರಂಕಾ ಜಿಲ್ಲೆಯ 345 ಮೆಗಾವ್ಯಾಟ್ ವಿದ್ಯುತ್ ಉತ್ಪತ್ತಿ ಕೇಂದ್ರವೂ ತಮಿಳುನಾಡಿನ ಈ ಬೃಹತ್ ಸೋಲಾರ್ ಪಾರ್ಕ್ ಜೊತೆ ಕೆಲಸ ನಿರ್ವಹಿಸಲಿದೆ.

ಇದನ್ನು ಓದಿ: ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

ತಮಿಳುನಾಡಿನ ಕಮುಥಿ ಸೋಲಾರ್ ಪವರ್ ಪ್ಲಾಂಟ್ 5 ವಿವಿಧ ಸೋಲಾರ್ ಪವರ್ ಪ್ಲಾಂಟ್​​ಗಳೊಂದಿಗೆ ಸಂಪರ್ಕ ಹೊಂದಲಿದೆ. ಇಲ್ಲಿ ಉತ್ಪತ್ತಿಯಾದ ವಿದ್ಯುತ್​ನ್ನು 25 ವರ್ಷಗಳ ವರೆಗೆ ತಮಿಳುನಾಡು ಜನರೇಷನ್ ಮತ್ತು ಡಿಸ್ಟ್ರಿಬ್ಯುಷನ್​ಗೆ ಮಾರಾಟಮಾಡಲಾಗುತ್ತದೆ. ಈ ಬಗ್ಗೆ 2015ರಲ್ಲೇ ಅದಾನಿ ಗ್ರೂಪ್ ತಮಿಳುನಾಡು ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಕಮುಥಿ ಸೋಲಾರ್ ಪವರ್ ಪ್ಲಾಂಟ್​ನಲ್ಲಿ ಉತ್ಪತ್ತಿಯಾಗುವ ವಿದ್ಯುತ್​ನ್ನು ಪ್ರತೀ ಯೂನಿಟ್​​ಗೆ 7.01 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಅದಾನಿ ಗ್ರೂಪ್ ದೇಶದಲ್ಲಿ ಇಂತಹ ಕೆಲವು ಪ್ರಾಜೆಕ್ಟ್​ಗಳನ್ನು ನಿರ್ಮಿಸುವ ಗುರಿ ಹೊಂದಿದೆ. ರಾಜಸ್ಥಾನ ಸರ್ಕಾರದ ಜೊತೆ 10 ಗಿಗಾ ವ್ಯಾಟ್ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣದ ಬಗ್ಗೆಯೂ ಮಾತುಕತೆ ನಡೆಸಿದೆ. ಒಟ್ಟಿನಲ್ಲಿ ಗ್ರಿನ್ ಇಂಡಿಯಾ ಕಾನ್ಸೆಪ್ಟ್ ಭಾರತವನ್ನು ಕೆಲ ವರ್ಷಗಳಲ್ಲೇ ಮೇರುಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಎರಡು ಮಾತಿಲ್ಲ.

ಇದನ್ನು ಓದಿ

1. ಮೆಡಿಕಲ್​ಗೆ ಹೋಗೋ ಚಿಂತೆ ಬಿಟ್ಟುಬಿಡಿ- ಆನ್​ಲೈನ್​ನಲ್ಲೇ ಆರ್ಡರ್​ ಮಾಡಿ

2. ಹಳ್ಳಿಯ ಚಿಪ್ಸ್- ಸಿಟಿ ಜನರಿಗೆ ಸಖತ್ ಟೇಸ್ಟ್

3. ಉದ್ಯೋಗಕ್ಕೆ ರಾಜೀನಾಮೆ : ಗ್ರಾಮೀಣ ಶಾಲೆಗಳ ಅಭ್ಯುದಯಕ್ಕೆ ಬದುಕು ಮೀಸಲು - ''ನನ್ನ ಕಥೆ''