ಗ್ರೀನರಿ ನೋ ವರಿ - ಭಾರತಕ್ಕೆ ಎಲೆಕ್ಟ್ರಿಕ್ ಕ್ಯಾಬ್ ಬರುತ್ತೆ ರೀ..!

ಟೀಮ್​​ ವೈ.ಎಸ್​​​.

0

ಭಾರತದಲ್ಲಿ ಟ್ಯಾಕ್ಸಿ ಮಾರುಕಟ್ಟೆಯ ಸಧ್ಯದ ಮೌಲ್ಯ ಸುಮಾರು 6ರಿಂದ 9 ಶತಕೋಟಿ ಡಾಲರ್. ಏನಿಲ್ಲವೆಂದರೂ ವರ್ಷಕ್ಕೆ 17ರಿಂದ 20 ಪ್ರತಿಶತ ಬೆಳವಣಿಗೆ ಕಾಣಲಿದೆ ಟ್ಯಾಕ್ಸಿ ಮಾರುಕಟ್ಟೆ. ಇಂತಹ ದೊಡ್ಡ ಮಾರುಕಟ್ಟೆಗೆ ಹೊಸ ಪ್ರಯತ್ನದೊಂದಿಗೆ ಕಾಲಿಡುತ್ತಿದೆ ಲಿಥಿಯಂ ಕ್ಯಾಬ್ಸ್. ಈಗಾಗಲೇ ಸಾವಿರಾರು ಕ್ಯಾಬ್ ಸಂಸ್ಥೆಗಳಿವೆ. ಇವರದ್ದೇನು ವಿಶೇಷ ಅಂತಿದ್ದೀರಾ? ಅಲ್ಲೇ ಇರೋದು ವಿಶೇಷ. ಈ ಲಿಥಿಯಂ ಕ್ಯಾಬ್ಸ್ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರ್​​ಗಳನ್ನು ಟ್ಯಾಕ್ಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಹೈಡ್ರೋಕಾರ್ಬನ್ ಮತ್ತು ವಿದ್ಯುತ್ ದರ ನಿಗದಿ ಮಧ್ಯೆ ಭಾರತದಲ್ಲಿ ಭಾರೀ ವ್ಯತ್ಯಾಸವಿದೆ. ಹೀಗಾಗಿ, ವಿದ್ಯುತ್ ಚಾಲಿತ ಕಾರುಗಳನ್ನು ಟ್ಯಾಕ್ಸಿ ಲೋಕಕ್ಕೆ ಪರಿಚಯಿಸುವ ಚಿಂತನೆಯೇ ನಿಜಕ್ಕೂ ಗಮನಾರ್ಹ, ಎನ್ನುತ್ತಾರೆ ಸಂಜಯ್. ಪ್ರಸಕ್ತ ಕೇಂದ್ರ ಸರ್ಕಾರವು, ಮರುಬಳಸುವ ಇಂಧನ ಕ್ಷೇತ್ರದತ್ತ ಹೆಚ್ಚು ಗಮನಹರಿಸಿದೆ. ಭಾರತದಲ್ಲಿ ನಾಲ್ಕು ರಾಜ್ಯಗಳು ಈಗಾಗಲೇ ಸೌರಶಕ್ತಿಯತ್ತ ವಾಲತೊಡಗಿವೆ. ಕಾರಣವೇನದೆಂದರೆ ಗ್ರಿಡ್ ವಿದ್ಯುತ್ ದರಕ್ಕಿಂತಲೂ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವುದು ಕಡಿಮೆ ವೆಚ್ಚದಾಯಕವಾಗಿದೆ.

ಲಿಥಿಯಂ ಕ್ಯಾಬ್​​
ಲಿಥಿಯಂ ಕ್ಯಾಬ್​​

ಲಿಥಿಯಂ ಕ್ಯಾಬ್ಸ್

ಬಹುತೇಕ ಕ್ಯಾಬ್ ಸೇವಾ ಸಂಸ್ಥೆಗಳು, ಬ್ಯುಸಿನೆಸ್ ಟು ಕಸ್ಟಮರ್ ವಲಯದಲ್ಲಿ ಹೆಚ್ಚಿನ ಶಕ್ತಿ ವಿನಿಯೋಗಿಸುತ್ತಿವೆ. ಆದರೆ ಲಿಥಿಯಂ ಕ್ಯಾಬ್ಸ್ ಬ್ಯುಸಿನೆಸ್ ಟು ಬ್ಯುಸಿನೆಸ್ ಹಾದಿ ಹಿಡಿದಿದೆ. ಇದಕ್ಕೆ ಹಲವು ಕಾರಣಗಳೂ ಇವೆ. ಬ್ಯುಸಿನೆಸ್ ಟು ಕಸ್ಟಮರ್ ಮಾದರಿಯಲ್ಲಿ ಸಾಗಬೇಕಾದರೆ ನಿಮ್ಮ ಬಳಿ ಹೆಚ್ಚಿನ ಕಾರುಗಳ ಅಗತ್ಯವಿದೆ. ಅಂದರೆ ನಮ್ಮ ಬಳಿ ಕನಿಷ್ಟ 200-300 ಚಾರ್ಜಿಂಗ್ ಸ್ಟೇಷನ್​​ಗಳು ಇರಬೇಕು. ಒಂದು ಸಾವಿರ ಕ್ಯಾಬ್​​ಗಳಿರಬೇಕು. ಇವೆಲ್ಲಾ ಕಷ್ಟ ಸಾಧ್ಯ ಎನ್ನುತ್ತಾರೆ ಸಂಜಯ್.

ಹಾಗಂತ ಲಿಥಿಯಂ ಹಿಡಿದ ದಾರಿಯಲ್ಲೇನೂ ಸವಾಲುಗಳು ಇರಲಿಲ್ಲವೆಂದಲ್ಲ. ನವ್ಯೋದ್ಯಮ ಆರಂಭಿಸುವ ಎಲ್ಲರಿಗೂ ಎದುರಾಗುವ ಸಹಜ ಸವಾಲುಗಳು ಇವರಿಗೂ ಎದುರಾಗಿದ್ದವು. ಸರಿಯಾದ ತಂಡರಚನೆ, ಬಂಡವಾಳ ಮೊದಲಾದ ಸಮಸ್ಯೆಗಳು ಎದುರಾಗಿದ್ದವು. ಸಂಸ್ಥೆ ಎದುರಿಸಿದ ದೊಡ್ಡ ಸವಾಲು ಪಾರದರ್ಶಕತೆಗೆ ಸಂಬಂಧಿಸಿದ್ದರು. ಇದಕ್ಕಾಗಿ ಇಡೀ ಪ್ರಕ್ರಿಯೆಯನ್ನೇ ಆಟೋಮ್ಯಾಟಿಕ್ ಮಾಡಲಾಗಿದೆ. ಸುರಕ್ಷತೆಗೆ ಸಂಬಂಧಿಸಿ ಮುಖ್ಯವಾಗಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿ, ಪ್ರಯಾಣಿಕರಿಗೆ ಅಗತ್ಯವಾಗಿರುವ ಎಲ್ಲಾ ಅಪ್ಲಿಕೇಶನ್ ಮತ್ತು ಗ್ಯಾಡ್ಜೆಟ್ಗಳನ್ನು ಅಳವಡಿಸಲಾಗಿದೆ.

"ಕ್ಯಾಬ್​​ಗಳಲ್ಲಿ ಪೂರ್ವಜೋಡಣೆಯ ಜಿಪಿಎಸ್ ಸಿಸ್ಟಂ ಅಳವಡಿಸಲಾಗಿದೆ. ಯಾವುದೇ ಚಾಲಕನೂ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೆಯೇ, ಕ್ಯಾಬ್ ಚಾಲನೆಯಲ್ಲಿರುವಾಗ ಸಂಪೂರ್ಣವಾಗಿ ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆ ಇದೆ. ಅಷ್ಟೇ ಅಲ್ಲ ಚಾಲಕರಿಗೂ ಕಠಿಣ ಮತ್ತು ಸರಿಯಾದ ತರಬೇತಿ ನೀಡಲಾಗಿದೆ."

ಲಿಥಿಯಂ ಸಂಸ್ಥೆಯು ಸರಿಯಾದ ಹಾದಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದು ಸಂಜಯ್ ನಂಬುತ್ತಾರೆ. ವರ್ಷಾಂತ್ಯದ ವೇಳೆಗೆ ಸಂಸ್ಥೆಯು ಶೇಕಡಾ 500ರಷ್ಟು ಬೆಳವಣಿಗೆ ಸಾಧಿಸುವ ವಿಶ್ವಾಸ ಅವರಲ್ಲಿದೆ.

ಕಂಫರ್ಟ್ ಇಂಡಿಯಾ ಸಂಸ್ಥೆಯ ಮಾಜಿ ಸಿಒಒ ಆಗಿರುವ ಸಂಜಯ್ ಕೃಷ್ಣನ್ ಅವರು ಸಂಪೂರ್ಣ ಪರಿಸರ ಸ್ನೇಹಿ ಟ್ಯಾಕ್ಸಿ ಸೇವೆ ನೀಡಲಿದ್ದಾರೆ. ಇಂಧನ ವೆಚ್ಚ ಕಡಿಮೆ ಮಾಡುವುದರ ಜೊತೆಗೆ ಹೈಡ್ರೋ ಕಾರ್ಬನ್ ಕಾರುಗಳಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮವನ್ನು ಕಡಿಮೆ ಮಾಡಲು ಈ ಸಂಸ್ಥೆ ನಿರ್ಧರಿಸಿದೆ.