ಡಿಜಿಟಲ್ ಟ್ರಾನ್ಸಾಕ್ಷನ್ ನಿರ್ವಹಣಾ ಉದ್ಯಮದಲ್ಲಿ ಜಾಗತಿಕವಾಗಿ ಲಾಭಗಳಿಸಿದ ಸೈನ್​ಈಸಿಯ ಆದಾಯ 700 ಮಿಲಿಯನ್ ಡಾಲರ್..!

ಟೀಮ್​​ ವೈ.ಎಸ್​​.

ಡಿಜಿಟಲ್ ಟ್ರಾನ್ಸಾಕ್ಷನ್ ನಿರ್ವಹಣಾ ಉದ್ಯಮದಲ್ಲಿ ಜಾಗತಿಕವಾಗಿ ಲಾಭಗಳಿಸಿದ ಸೈನ್​ಈಸಿಯ ಆದಾಯ 700 ಮಿಲಿಯನ್ ಡಾಲರ್..!

Tuesday September 29, 2015,

5 min Read

2009ರ ಹಿಂದಿನ ಘಟನೆ. ಮೆಕ್ಸಿಕೋದ ಕಡಲ ತೀರದಲ್ಲಿ ಸುನಿಲ್ ಪಾತ್ರೋ ಕುಳಿತಿದ್ದರು.. ಪುರ್ಡ್ಯೂ ವಿವಿಯಲ್ಲಿ ಕಲಿತು ಐಕಾನ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ ಪಾತ್ರೋ ತಮ್ಮ ರಜೆಯ ದಿನಗಳನ್ನು ಕಳೆಯಲು ಮೆಕ್ಸಿಕೋ ತೆರಳಿದ್ದರು. ಸೂರ್ಯನ ಬೆಳಕಿನಡಿಯಲ್ಲಿ ಕುಳಿತು ವಿರಾಮ ತೆಗೆದುಕೊಳ್ಳುತ್ತಿದ್ದ ಸುನಿಲ್​ಗೆ ಉತ್ತರಿಸಲೇಬೇಕಾದ ಇ-ಮೇಲ್ ಬಂದಿತು.. ಅಲ್ಲಿ ಸುತ್ತಲೂ ಪ್ರಿಂಟರ್ ಅಥವಾ ಫ್ಯಾಕ್ಸ್ ಮೆಷಿನ್​ಗಳಿರದ ಸಂದರ್ಭದಲ್ಲಿ ಅವರಿಗೆ ಆ ಮೇಲ್ ಬಂದಿತ್ತು.. ಕೆಲವು ಕಾಲ ಅತ್ತಿತ್ತ ಹುಡುಕಾಡಿದ ನಂತರ ಅವರಿಗೆ ಒಂದು ಮೆಷಿನ್​​ ಸಿಕ್ಕಿತು.. ಆದರೆ ಈ ಗೊಂದಲ ಸುನಿಲ್​​ರನ್ನು ಯೋಚಿಸುವಂತೆ ಮಾಡಿತ್ತು..

ಯಾರಾದರೂ ಸುಲಭವಾಗಿ ದಾಖಲಾತಿಗಳಿಗೆ ಸಹಿ ಹಾಕಿ ನೇರವಾಗಿ ಫೋನ್ ಮೂಲಕ ಕಳಿಸುವ ಸೌಲಭ್ಯವಿದ್ದರೆ ಅನುಕೂಲವಾಗುತ್ತಿತ್ತು ಅನ್ನುವ ಆಲೋಚನೆ ಮೊದಲ ಬಾರಿಗೆ ಅವರಿಗೆ ಬಂದಿತು.. ಹೀಗೆ ಸೃಷ್ಟಿಯಾದ ಅಪ್ಲಿಕೇಶನ್ ಸಿಂಪಲ್ ಡಾಕ್ಯಮೆಂಟ್ ಸೈನಿಂಗ್ ಆ್ಯಪ್. ಇದರಿಂದ ಮುಖ್ಯವಾದ ದಾಖಲಾತಿಗಳನ್ನು ಕುಳಿತಲ್ಲಿಂದಲೇ ಸಹಿ ಹಾಕಿ ಕಳಿಸಬಹುದು. ಈ ಆ್ಯಪ್ ಅನ್ನು ಸೈನ್ ಈಸಿ ಅಂತಲೇ ಗುರುತಿಸಲಾಗುತ್ತದೆ. 2010ರಲ್ಲಿ ಲಾಂಚ್ ಆದ ಈ ಸೈನ್ಈಸಿ ಅಪ್ಲಿಕೇಶನ್ ಕೆಲವು ಮಹತ್ತರ ಸವಾಲುಗಳನ್ನು ಎದುರಿಸಿದರೂ ಸದ್ಯ ಅಸಾಧಾರಣ ಸ್ಥಿತಿಯಲ್ಲಿದೆ. ಡಿಜಿಟಲ್ ಟ್ರಾನ್ಸಾಕ್ಷನ್ ಮ್ಯಾನೇಜ್ಮೆಂಟ್ ಉದ್ಯಮದಲ್ಲಿ ಸುಮಾರು 700 ಮಿಲಿಯನ್ ರೂಪಾಯಿಯ ವಹಿವಾಟು ನಡೆಸುವತ್ತ ಈ ಸೈನ್ಈಸಿ ಮುಂದಾಗಿದೆ.. ಹೀಗೆ ಜಾಗತಿಕವಾಗಿ ಬಲಾಢ್ಯವಾಗಿ ಬೆಳೆದು ನಿಂತ ಸೈನ್ಈಸಿಯ ಸುನಿಲ್ ಪಾತ್ರೋ ಜೊತೆ ಯುವರ್​​ ಸ್ಟೋರಿ ನಡೆಸಿದ ಸಂದರ್ಶನ ಇಲ್ಲಿದೆ..

image


ಯುವರ್ ಸ್ಟೋರಿ: ಸೈನ್ ಈಸಿ ಇಲ್ಲಿತನಕ ಕುತೂಹಲಕಾರಿ ಉದ್ಯಮದ ಪ್ರಯಾಣ ನಡೆಸಿದೆ. ನಿಮಗೆ ನೆನಪಿರುವಂತೆ ಈ 5 ವರ್ಷಗಳಲ್ಲಿ ಸೈನ್ ಈಸಿಯ ಮಹತ್ತರ ಘಟ್ಟಗಳಾವುವು?

ಸುನಿಲ್ ಪಾತ್ರೋ: ಸೈನ್ ಈಸಿಯ ಆರಂಭಿಕ ದಿನಗಳಲ್ಲಿ ಭಾರತದಾದ್ಯಂತ ಸೇವೆಯ ಪ್ರಚಾರದ ಕಡೆಗೆ ಗಮನಹರಿಸಬೇಕಾಗಿತ್ತು. ಅಮೆರಿಕಾದ ಮಾರುಕಟ್ಟೆಗೆ ಸೂಕ್ತವಾಗುವಂತೆ ಹೊಸ ಹೊಸ ಆಲೋಚನೆಗಳ ಹಾಗೂ ವಿಭಿನ್ನ ಪ್ರಯತ್ನಗಳ ಮೂಲಕ ನಾವು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದೆವು. ಹಾಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಮತ್ತು ಜಗತ್ತಿನಾದ್ಯಂತ ನಮ್ಮ ಅಪ್ಲಿಕೇಶನ್, ಬಳಕೆದಾರರ ಸ್ನೇಹಿತನಾಗಿ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಯಿತು. ಆದರೆ ಅಪ್ಲಿಕೇಶನ್‌ ದರವನ್ನು ಅಮೆರಿಕಾದ ಮಾರುಕಟ್ಟೆಗೆ ಅನ್ವಯಿಸುವಂತೆ ನಿಗದಿಪಡಿಸಲಾಗಿತ್ತು. ಇದು ನಾವು ಎದುರಿಸಿದ ಮೊದಲ ಹಾಗೂ ಮುಖ್ಯವಾದ ಸವಾಲು.

ನಮ್ಮ ಉತ್ಪನ್ನವನ್ನು ನೆಲೆಗೊಳಿಸಲು ನಮಗೆ ಮೊಬೈಲ್ ಪ್ಲಾಟ್‌ಫಾರಂ ನಿರ್ಮಿಸಿಕೊಳ್ಳುವ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಇಂತಹ ಉದ್ಯಮ ಸಂಬಂಧಿ ಕ್ಷೇತ್ರಗಳಾದ ರಿಯಲ್ ಎಸ್ಟೇಟ್, ಫೀಲ್ಡ್ ಆಪರೇಶನ್ಸ್, ವೃತ್ತಿಪರ ಸೇವೆಗಳನ್ನು ಒದಗಿಸುವವರು, ಅಕೌಂಟೆಂಟ್ಸ್ ಹಾಗೂ ಲಾಜಿಸ್ಟಿಕ್ ನಿರ್ವಹಣೆಕಾರರ ಸಹಾಯ ಅಗತ್ಯವಿತ್ತು. ನಮಗೆ ಇಲ್ಲಿ ಕೆಲವರ ಬೆಂಬಲ ಲಭಿಸಿದ್ದರಿಂದ ನಿಧಾನವಾಗಿ ಮಾರುಕಟ್ಟೆಯಲ್ಲಿ ನಮ್ಮ ಸೇವೆ ಜನಪ್ರಿಯವಾಗತೊಡಗಿತು. ಡ್ರಾಪ್ ಬಾಕ್ಸ್​​ ಮತ್ತು ಬಾಕ್ಸ್​​ನಂತಹ ವಿಶೇಷ ಸೌಕರ್ಯಗಳನ್ನು ಹೊಂದಿರುವ ಆ್ಯಪಲ್‌ನಂತಹ ಸಂಸ್ಥೆಯ ಪ್ಲಾಟ್‌ಫಾರಂ ಸಹಯೋಗ ಲಭಿಸಿದ್ದು ಮಹತ್ವದ ಅಂಶ.

ಸಣ್ಣ ಹಾಗೂ ಮಧ್ಯಮ ಬಿಸಿನೆಸ್‌ಗಳಿಗೆ ವೃತ್ತಿಪರ ಸೇವೆ ಒದಗಿಸಿದ್ದು ನಮ್ಮ ಯಶಸ್ಸಿನ ಬಹುಮುಖ್ಯ ಅಂಶ. ನಮ್ಮ ಮೊಬೈಲ್‌ ಆ್ಯಪ್‌ನಲ್ಲಿ ವಿಶೇಷ ಕಾರ್ಯಯೋಜನೆಗಳನ್ನು ಹಾಕಿಕೊಂಡು ಗಮನಹರಿಸಿದ್ದೆವು. ಗ್ರಾಹಕರ ಪ್ರತಿಕ್ರಿಯೆಗಳ ಕುರಿತು ವಿಶೇಷ ಆಸಕ್ತಿವಹಿಸಿ ಗಮನಕೊಡುವ ದೀರ್ಘಕಾಲಿಕ ಆಶಯ ನಮ್ಮದಾಗಿತ್ತು. ಸಾಮೂಹಿಕ ಚಂದಾದಾರಿಕೆಯ, ಬೇಡಿಕೆಯ ಮೂಲಕ ನಮ್ಮ ಆದಾಯಗಳಿಕೆ ಹೆಚ್ಚ ತೊಡಗಿತು. ಹೀಗೆ ನಮ್ಮ ಸಂಸ್ಥೆ ಬೆಳವಣಿಗೆ ಹಾಗೂ ಲಾಭಗಳಿಕೆಯನ್ನು ಸಮಾನವಾಗಿ ನಿರ್ವಹಿಸತೊಡಗಿತು.

ಯುವರ್​​ ಸ್ಟೋರಿ: ಡಿಜಿಟಲ್ ಟ್ರಾನ್ಸಾಕ್ಷನ್ ಈ ದಿನಗಳಲ್ಲಿ ಅತೀ ಹೆಚ್ಚು ಪ್ರಚಲಿತದಲ್ಲಿದೆ. ಈ ತಂತ್ರಜ್ಞಾನವನ್ನು ಸಂಶೋಧಿಸಿದ್ದು ಹೇಗೆ? ಈ ತಂತ್ರಜ್ಞಾನ ನಮ್ಮನ್ನು ಎಲ್ಲಿಗೆ ತಲುಪಿಸುತ್ತದೆ?

ಸುನೀಲ್​​ ಪಾತ್ರೋ : 2020ರ ಸುಮಾರಿಗೆ 30 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆ ಹೊಂದಿರುವ ಕ್ಷೇತ್ರ ಡಿಜಿಟಲ್ ಟ್ರಾನ್ಸಾಕ್ಷನ್ ನಿರ್ವಹಣಾ ಉದ್ಯಮ. ಇಲ್ಲಿ ಗಣನೀಯವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದಿಂದ ಎಲೆಕ್ಟ್ರಾನಿಕ್ ಸಿಗ್ನೇಚರ್ ಉದ್ಯಮ ಇದರ ಭಾಗವಾಗಿ ಸುಮಾರು 700 ಮಿಲಿಯನ್ ಡಾಲರ್ ಆದಾಯ ಗಳಿಸಿದೆ. ವಾರ್ಷಿಕ ಸುಮಾರು 1.5 ಬಿಲಿಯನ್ ದಾಖಲಾತಿಗಳನ್ನು ಪ್ರೋಸೆಸ್ ಮಾಡುವ ಗುರಿ ಇದರ ಮುಂದಿದೆ. ವಾಸ್ತವವಾಗಿ ಅಮೆರಿಕಾ ಒಂದರಲ್ಲೇ ಸುಮಾರು 28 ಮಿಲಿಯನ್ ಸಣ್ಣ ಬಿಸಿನೆಸ್ ಸಂಸ್ಥೆಗಳಿವೆ. ಅದರಲ್ಲಿ ಸುಮಾರು 22 ಮಿಲಿಯನ್ ಸ್ವಯಂ ಮಾಲಿಕತ್ವದ ಉದ್ಯಮಿಗಳಿದ್ದಾರೆ. ಸ್ವಂತ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಪ್ರತ್ಯೇಕ ವರ್ಗ ಇದರಲ್ಲಿದೆ. ಇಲ್ಲಿ ಉದ್ಯಮಿಗಳು ಕಾರ್ಬನ್ ಹಾಳೆಯನ್ನು ಬಳಸಿ ದಾಖಲಾತಿಗಳನ್ನು ನಿರ್ವಹಿಸುವುದಕ್ಕಿಂತ ಇ-ಸಿಗ್ನೇಚರ್ ಉತ್ತಮ ವಿಧಾನ ಎಂದು ಯೋಚಿಸಲು ಶುರುಮಾಡಿದ್ದರು. ಇದು ಎಲೆಕ್ಟ್ರಾನಿಕ್ ಸಿಗ್ನೇಚರ್ ಆಯಾಮದ ಬೆಳವಣಿಗೆಯ ಮಹತ್ವದ ಅಂಶ.

ಅಮೆರಿಕಾದಲ್ಲಿ ಕ್ಲೌಡ್ ವ್ಯವಸ್ಥೆಯಲ್ಲಿ ದಾಖಲಾತಿಗಳನ್ನು ಶೇಖರಿಸುವ ವ್ಯವಸ್ಥೆ ಈಗಾಗಲೇ ಪ್ರಚಲಿತದಲ್ಲಿದೆ. ಅರ್ಧಕ್ಕಿಂತ ಹೆಚ್ಚು ಅಮೆರಿಕನ್ ಉದ್ಯಮಿಗಳು ಕ್ಲೌಡ್ ಆಧಾರಿತ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ. ಬಹುತೇಕ ಉದ್ಯಮಗಳು ಪೇಪರ್ ಬಳಕೆಯನ್ನು ನಿರಾಕರಿಸಿದ್ದ ವೇಳೆಯೇ ಇ-ಸಿಗ್ನೇಚರ್ ಕಾಲಿಟ್ಟಿತ್ತು. ಹಾಗಾಗಿ ಸೈನ್ ಈಸಿಯಂತಹ ಸೇವೆಯನ್ನು ಒಪ್ಪಿಕೊಳ್ಳುವುದು ಉದ್ಯಮಗಳ ಪಾಲಿಗೆ ಸರಳವಾಗಿತ್ತು.

ಭಾರತ ಸ್ಮಾರ್ಟ್‌ಫೋನ್ ಸಂಸ್ಕೃತಿ ಹಾಗೂ ಅಂತರ್ಜಾಲ ಸಂಪರ್ಕದಲ್ಲಿ ಕ್ರಾಂತಿ ಸಾಧಿಸುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಡಿಜಿಟಲ್ ಇಂಡಿಯಾದಂತಹ ತೆರೆದ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ.ಈ ಮೂಲಕ ಡಿಜಿಟಲ್ ಸಿಗ್ನೇಚರ್ ಹಾಗೂ ಇ-ಸಿಗ್ನೇಚರ್‌ನಂತಹ ನೂತನ ತಂತ್ರಜ್ಞಾನ ಭಾರತೀಯ ಮಾರುಕಟ್ಟೆಗೆ ರಾಜಮಾರ್ಗದಲ್ಲೇ ಪ್ರವೇಶ ಪಡೆದಿದೆ.

ಯುವರ್​​ ಸ್ಟೋರಿ: ಇಲ್ಲಿಯವರೆಗೆ ಸೈನ್ ಈಸಿಯ ಕಾರ್ಯವೈಖರಿ ಏನು?

ಸುನೀಲ್​​ಪಾತ್ರೋ: ಕಳೆದ ಕೆಲವು ತಿಂಗಳು ನಮ್ಮ ಪಾಲಿನ ಸುವರ್ಣ ದಿನಗಳಾಗಿದ್ದವು. ಸೈನ್ ಈಸಿ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿ ವಿಸ್ತರಿಸುವ ಕೆಲಸದಿಂದ ನೂರಾರು ಆ್ಯಪ್‌ಗಳಾದ ಆ್ಯಪಲ್‌ನ ಮೇಲ್ ಆ್ಯಪ್, ಬಾಕ್ಸ್, ಕ್ಯಾಮ್ ಸ್ಕ್ಯಾನರ್, ಕ್ಲೌಡ್ ಮ್ಯಾಜಿಕ್, ಡ್ರಾಪ್ ಬಾಕ್ಸ್, ಜೀನಿಯಸ್ ಸ್ಕ್ಯಾನ್, ಮೇಲ್ ಬಾಕ್ಸ್, ಮೈಕ್ರೋಸಾಫ್ಟ್ ನ ಒನ್ ಡ್ರೈವ್, ಸ್ಕ್ಯಾನಬಲ್, ಸ್ಲ್ಯಾಕ್ ಮುಂತಾದ ಅಪ್ಲಿಕೇಶನ್‌ಗಳು ಈ ಸೇವೆಯನ್ನು ತಮ್ಮ ಗ್ರಾಹಕರಿಗೂ ವಿಸ್ತರಿಸಿವೆ. ಈ ಆಂಡ್ರಾಯ್ಡ್ ಆ್ಯಪ್ ಅಪ್‌ಗ್ರೇಡ್ ಹೊಂದಿ ಮತ್ತಷ್ಟು ಅಭಿವೃದ್ಧಿ ಸಾಧಿಸಿ ನಿಮ್ಮ ಆಂಡ್ರಾಯ್ಡ್ ಉಪಕರಣದೊಳಗೆ ಕಾಲಿಟ್ಟಿದೆ. ಆ್ಯಪಲ್ ನಮ್ಮ ಸೇವೆಯನ್ನು ಅದರ ಐಪ್ಯಾಡ್ ಕ್ಯಾಂಪೇನ್‌ನಲ್ಲಿ ಬಳಸಿಕೊಂಡಿದೆ. ಐಪ್ಯಾಡ್‌ನೊಂದಿಗೆ ಎಲ್ಲವೂ ಬದಲಾಗುತ್ತದೆ. ಸಣ್ಣ ಉದ್ಯಮಗಳ ಒಕ್ಕೂಟಗಳಾದ ಸ್ಕ್ವೇರ್, ಸ್ಕ್ಯಾನಬಲ್, ಕ್ವಿಕ್ ಬುಕ್ಸ್, ಒಮ್ನಿಫೋಕಸ್-2, ನಂಬರ್ಸ್ ಅಪ್ಲಿಕೇಶನ್‌ಗಳು ನಮ್ಮ ಸೈನ್ ಈಸಿಯನ್ನು ಅಳವಡಿಸಿಕೊಂಡಿದೆ.

ಈ ಅಂತರಾಷ್ಟ್ರೀಯ ಕ್ಯಾಂಪೇನ್‌ಗಳಲ್ಲಿ ಸ್ಥಾನ ಪಡೆದ ವಿನೂತನ ಸಂಸ್ಥೆ ಅನ್ನುವ ಶ್ರೇಯ ನಮ್ಮದು. ದೊಡ್ಡ ಉದ್ಯಮಗಳ ವೆಬ್‌ಸೈಟ್‌ ಕೇಂದ್ರಿತ ದಾಖಲಾತಿಗಳನ್ನು ಸಹಿ ಮಾಡಲು ಅನುಕೂಲವಾಗುವಂತೆ ಸೈನ್ ಈಸಿ ತನ್ನ ವೆಬ್ ಅಪ್ಲಿಕೇಶನ್‌ ಅನ್ನು ಸದ್ಯದಲ್ಲೇ ಲಾಂಚ್ ಮಾಡುವ ಸಿದ್ಧತೆಯಲ್ಲಿದೆ. ಇದು ಬಳಕೆಗೆ ಸುಲಭವಾಗಿ ತಮ್ಮ ಕಂಪ್ಯೂಟರ್‌ನಿಂದ ದಾಖಲಾತಿಗಳಿಗೆ ಸಹಿ ಮಾಡುವ ಸೌಲಭ್ಯ ಒದಗಿಸಲಿದೆ. ಬೃಹತ್ ಸಂಸ್ಥೆಗಳ ಉದ್ಯೋಗಿಗಳಿಗೆ ಹಾಗೂ ಗ್ರಾಹಕರಿಗೆ ಇದು ಹೆಚ್ಚು ಅನುಕೂಲ ಒದಗಿಸಲಿದೆ. ಜೊತೆಗೆ ಸೈನ್‌ ಈಸಿ ಸದ್ಯದಲ್ಲೇ ತನ್ನ 5ನೇ ಜನ್ಮದಿನ ಆಚರಿಸಿಕೊಳ್ಳಲಿದೆ.

ಯುವರ್​​ ಸ್ಟೋರಿ: ನಿಮ್ಮ ಆದಾಯದ ಮಾದರಿ ಏನು? ನೀವು ಹೂಡಿಕೆ ಮಾಡಿದ್ದು ಹೇಗೆ?

ಸುನೀಲ್​​ಪಾತ್ರೋ: ಸೈನ್ ಈಸಿಯ ಮೊದಲ 3 ಡಿಜಿಟಲ್ ಸಹಿಗಳು ಉಚಿತ. ಬಳಕೆದಾರರು 3 ಬಗೆಯ ಪಾವತಿ ಪ್ಲಾನ್‌ಗಳನ್ನು ಹೊಂದಬಹುದು. ಅವರಿಗೆ ಅಗತ್ಯವಿರುವ ಪ್ರಮಾಣದ ಪಾವತಿ, ಪೂರ್ವನಿಗದಿ ದರಗಳ ಪಾವತಿ ಹಾಗೂ ವ್ಯಾವಹಾರಿಕ ಚಂದಾದಾರಿಕೆ. ಇಲ್ಲಿ ವ್ಯಾವಹಾರಿಕ ಚಂದಾದಾರಿಕೆ ಅಥವಾ ಬಿಸಿನೆಸ್ ಪ್ಲಾನ್ ಹೊಂದಿದರೆ ಅನ್ ಲಿಮಿಟೆಡ್ ದಾಖಲಾತಿಗಳಿಗೆ ಸಹಿ ಹಾಕುವ ಸೌಲಭ್ಯವಿದೆ. ಜೊತೆಗೆ ಕೆಲವು ವ್ಯವಹಾರ ಸಂಬಂಧಿ ಕಾರ್ಯಯೋಜನೆಗಳು ಈ ಸೌಕರ್ಯದಲ್ಲಿ ಸೇರಿದೆ. 2010ರಲ್ಲಿ ಆರಂಭವಾದ ಸಂಸ್ಥೆ ಕಳೆದ 3 ವರ್ಷಗಳಿಂದ ಲಾಭದಾಯಕವಾಗಿ ಸಾಗಿದೆ.

ಯುವರ್​​ ಸ್ಟೋರಿ: ನಿಮ್ಮ ತಂಡದ ಸದಸ್ಯರ ಪ್ರಮಾಣವೆಷ್ಟು ಹಾಗೂ ಯಾವ ಮಾದರಿಯಲ್ಲಿ ತಂಡವನ್ನು ಕಟ್ಟಿದ್ದೀರಿ?

ಸುನೀಲ್​​ ಪಾತ್ರೋ: ನಮ್ಮ ತಂಡದಲ್ಲಿ 20 ಖಾಯಂ ಸದಸ್ಯರಿದ್ದಾರೆ. ಪ್ರಾಡಕ್ಟ್ ಮ್ಯಾನೇಜರ್, ವಿನ್ಯಾಸಕರು ಹಾಗೂ ಪರಿಣಿತ ಎಂಜಿನಿಯರ್, ಮಾರ್ಕೆಟಿಂಗ್ ಉದ್ಯೋಗಿಗಳು ಜೊತೆಗೆ ಕೆಲವು ಸಹಾಯಕರು ಇದರಲ್ಲಿದ್ದಾರೆ.

ಯುವರ್​​ ಸ್ಟೋರಿ: ದಾಖಲಾತಿಗಳ ಸಹಿ ಕ್ಷೇತ್ರದಲ್ಲಿ ನಿಮ್ಮ ಸಂಸ್ಥೆಯ ಸ್ಪರ್ಧೆ ಹೇಗಿದೆ?

ಸುನೀಲ್​​ ಪಾತ್ರೋ: ಸೈನ್ ಈಸಿ ಮೊದಲ ಮೊಬೈಲ್ ಇ-ಸಿಗ್ನೇಚರ್ ಸೌಲಭ್ಯ. ಇದನ್ನು ಮತ್ತಷ್ಟು ಸರಳ, ಸುಲಭ, ಮಹತ್ತರಗೊಳಿಸಲು ಇ-ಸಿಗ್ನೇಚರ್ ಉದ್ಯಮದಲ್ಲಿ ಹಲವು ರಿಸರ್ಚ್ ನಡೆಸಲಾಗಿದೆ. ಇದರಿಂದ ನಮ್ಮ ಮಾರುಕಟ್ಟೆಯಲ್ಲಿ ಗಣನೀಯ ಅವಕಾಶ ಒದಗಿಬಂದಿದೆ. ಸದ್ಯದಲ್ಲೇ ನಾವು ವೆಬ್ ಆಧಾರಿತ ಅಪ್ಲಿಕೇಶನ್ ಲಾಂಚ್ ಮಾಡುವ ಯೋಜನೆಯಲ್ಲಿದ್ದೇವೆ. ಇದರಿಂದ ಗ್ರಾಹಕರು ವೆಬ್ ಹಾಗೂ ಮೊಬೈಲ್ ಎರಡೂ ಬಗೆಯಲ್ಲಿ ಸೌಲಭ್ಯಗಳನ್ನು ಅನುಭವಿಸಬಹುದಾಗಿದೆ. ಸೈನ್ ಈಸಿ ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಪ್ಲಿಕೇಶನ್‌ ಅನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಅಂದರೆ ಜಗತ್ತಿನಾದ್ಯಂತ 15 ಬೇರೆ ಬೇರೆ ಭಾಷೆಗಳಲ್ಲಿ, ದಿನಾಂಕ ಹಾಗೂ ಪ್ರಾದೇಶಿಕ ಫಾರ್ಮೆಟ್ ಅಳವಡಿಸಿಕೊಂಡು ವಿನೂತನವಾಗಿ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಕೈಗೆಟುಕುವ ದರದಲ್ಲಿ ಹಾಗೂ ಬಳಕೆದಾರ ಸ್ನೇಹಿ ಸೌಲಭ್ಯಗಳ ಮೂಲಕ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ನನಗನ್ನಿಸುವ ಮಟ್ಟಿಗೆ ಮಾರುಕಟ್ಟೆಯಲ್ಲಿರುವ ನಮ್ಮ ಸ್ಪರ್ಧಿಗಳಿಗಿಂತ ನಾವು ಮುಂದಿದ್ದೇವೆ.

ಯುವರ್​​ ಸ್ಟೋರಿ:: ಅಮೆರಿಕಾ ಸದ್ಯದ ಮಟ್ಟಿಗೆ ನಿಮ್ಮ ದೊಡ್ಡ ಮಾರುಕಟ್ಟೆ. ಹಾಗಿದ್ದರೆ ನಿಮ್ಮ ಭವಿಷ್ಯದ ಗುರಿ ಏನು?

ಸುನೀಲ್​​ ಪಾತ್ರೋ: ನಾವು ಅರ್ಧಕ್ಕಿಂತ ಹೆಚ್ಚು ಗ್ರಾಹಕರನ್ನು ಹಾಗೂ ಆದಾಯವನ್ನು ಹೊಂದಿರುವುದು ಅಮೆರಿಕನ್ ಮಾರುಕಟ್ಟೆಯಲ್ಲಿ. ಉಳಿದ ಅಂಶದ ಗ್ರಾಹಕರು ಹಾಗೂ ಆದಾಯ ಯುರೋಪ್, ಏಷ್ಯಾ ಹಾಗೂ ದಕ್ಷಿಣ ಅಮೆರಿಕಾದಲ್ಲಿ ವಿಸ್ತಾರಗೊಂಡಿದೆ. ಅದರಲ್ಲೂ ಮುಖ್ಯವಾಗಿ ಆಗ್ನೇಯ ಏಷ್ಯಾ ಭಾಗದಲ್ಲಿ ಮೊಬೈಲ್‌ನಲ್ಲಿ ಅಂತರ್ಜಾಲ ವ್ಯವಸ್ಥೆಯನ್ನು ಹೊಂದುವ ಟ್ರೆಂಡ್ ಹುಟ್ಟಿಕೊಂಡಿದ್ದು ನಮ್ಮ ಇ-ಸಿಗ್ನೇಚರ್ ವ್ಯವಸ್ಥೆ ಅತ್ಯಂತ ವೇಗವಾಗಿ ದಾಪುಗಾಲಿಡಲು ಕಾರಣ. ಸೂಕ್ತವಾದ ಕಾನೂನು, ಆಡಳಿತ, ಸಹಕಾರ ಮತ್ತು ಮಾರುಕಟ್ಟೆಯಲ್ಲಿ ಬಳಕೆದಾರರ ಜಾಗೃತಿ ಸೈನ್ ಈಸಿ ವೇಗವಾಗಿ ಹೊಂದಲು ಇನ್ನೊಂದು ಮುಖ್ಯವಾದ ಅಂಶ