ಅನುಭವವಿಲ್ಲದಿದ್ರೂ ಅದ್ಭುತ ಹೆಚ್ ಆರ್.. ! : ಇದು ನಿತ್ಯಾ ಡೇವಿಡ್ ಅವರ ವೃತ್ತಿ ಬದುಕಿನ ಯಶೋಗಾಥೆ

ಟೀಮ್​ ವೈ.ಎಸ್​. ಕನ್ನಡ

0

ಡೈನಾಮಿಕ್ ಆಗಿರುವ ಹಾಗೂ ತಾಂತ್ರಿಕವಾಗೇ ಎಲ್ಲವನ್ನೂ ನೋಡುವ ಈಗಿನ ಆಧುನಿಕ ಜಗತ್ತಿನಲ್ಲಿ ನಮಗೆ ಸೂಕ್ತವೆನಿಸುವ ಕೆರಿಯರನ್ನ ಕಂಡುಕೊಳ್ಳುವುದು ಹಾಗೂ ಅದನ್ನ ಸಮರ್ಥವಾಗಿ ಬೆಳೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಅದ್ರಲ್ಲೂ ಸೂಕ್ತ ಸಮಯದಲ್ಲಿ ಎಲ್ಲವನ್ನೂ ಕಂಡುಕೊಳ್ಳುವುದು ಒಂದು ದೊಡ್ಡ ಸವಾಲಿನ ಕೆಲಸವೇ ಸರಿ. ಆದ್ರೆ ನಿತ್ಯಾ ಡೇವಿಡ್ ಪಾಲಿಗೆ ಇದ್ಯಾವುದೂ ಕಷ್ಟವಾಗ್ಲೇ ಇಲ್ಲ. ವೃತ್ತಿಪರ ಬದುಕಿನಲ್ಲಿ ತಾನು ಎದುರಿಸಬೇಕಾದ ಕಷ್ಟಗಳೇನು ಅನ್ನೋದ್ರ ಬಗ್ಗೆ ಸ್ಪಷ್ಟ ಅರಿವು ಹೊಂದಿದ್ದ ನಿತ್ಯಾ, ಅವುಗಳನ್ನ ಚಾಲೆಂಜಿಂಗ್ ಆಗಿ ಸ್ವೀಕರಿಸಿದ್ರು. ಪರಿಣಾಮ ಇವತ್ತು ತನಗೆ ಪರಿಚಯವೇ ಇಲ್ಲದ ಹೆಚ್ ಆರ್ ಫೀಲ್ಡ್ ನಲ್ಲಿ ಅದ್ವಿತೀಯವಾದುದನ್ನ ಸಾಧಿಸಿದ್ದಾರೆ. 9 ವರ್ಷಗಳ ಕಾಲ ಕಾರ್ಪೊರೇಟ್ ದುನಿಯಾದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ನಿತ್ಯಾ ಇದೀಗ ಸಕ್ಸಸ್ ಆಗಿದ್ದಾರೆ. ಅವುಗಳನ್ನೆಲ್ಲಾ ಅವಲೋಕಿಸುವ ನಿತ್ಯಾ ಡೇವಿಡ್ ತಾವು ಸಾಗಿ ಬಂದ ಹಾದಿಯನ್ನ ತೆರೆದಿಡ್ತಾರೆ. ತಾವು ಅನುಭವಿಸಿದ ಕಷ್ಟಗಳು ಹಾಗೂ ಕಠಿಣ ಸನ್ನಿವೇಶಗಳನ್ನ ವಿವರಿಸುತ್ತಾರೆ.

ಅವಕಾಶ ಸಿಕ್ಕ ಅಪೂರ್ವ ಘಳಿಗೆ..

ನಿತ್ಯಾ ಮೊದಲು ತನ್ನ ವೃತ್ತಿ ಬದುಕನ್ನ ಆರಂಭಿಸಿದ್ದು 2000ನೇ ಇಸವಿಯಲ್ಲಿ. ಅದೂ ಜೆ ವಾಲ್ಟರ್ ಥಾಮ್ಸನ್ ( ಜೆಡಬ್ಯೂಟಿ ) ಕಂಪನಿಯಲ್ಲಿ ಕ್ಲೈಂಟ್ ಸರ್ವಿಸಿಂಗ್ ಎಸಿಕ್ಯೂಟಿವ್ ಆಗಿ . ನಂತ್ರ ಎರಡು ವರ್ಷಗಳ ಕೋರ್ಸ್ ಮುಗಿಸಿದ ನಿತ್ಯಾ ಡೇವಿಡ್ ನಂತ್ರ ಅಲ್ಲೇ ಜಾಹೀರಾತು ವಿಭಾಗದಲ್ಲಿ ತಮ್ಮನ್ನ ಗುರುತಿಸಿಕೊಂಡ್ರು. ಲೈಫ್ ಸ್ಟೈಲ್ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ನಿತ್ಯಾ ಬೆಂಗಳೂರಿನಲ್ಲಿದ್ದ ತಮ್ಮ ಕಂಪನಿಯ ರಿಟೇಲ್ ಸ್ಟೋರ್ ಗೆ ತೆರಳಬೇಕಾಯ್ತು. ಅಲ್ಲಿ ತಮ್ಮ ಕೆಲಸದಲ್ಲಿ ಅತೀವ ಶ್ರದ್ಧೆ ಹಾಗೂ ನಿಷ್ಠೆ ತೋರಿದ್ದ ನಿತ್ಯಾ ಅಂದು ತಮ್ಮ ಇತರೆ ಸಹವರ್ತಿಗಳ ನೆರವು ಪಡೆದು ರಾತ್ರಿ 3 ಗಂಟೆವರೆಗೂ ಮಳಿಗೆಯಲ್ಲೇ ಕೆಲಸ ಮಾಡಿದ್ರು. ಅದು ಅವರ ಬದುಕಿನ ದಾರಿಯನ್ನೇ ಬದಲಾಯಿಸಿತು. ಅವರ ಶ್ರಮವನ್ನ ಗುರುತಿಸಿ ಕ್ಲೈಂಟ್ ಹೆಡ್ ಆಫೀಸ್ ತನ್ನ ಕಂಪನಿಯಲ್ಲೇ ಮುಂದುವರಿಯುವಂತೆ ಆಫರ್ ನೀಡಿತು.

ಇದನ್ನು ಓದಿ: ನೌಕಾಪಡೆಗೆ ಶಕ್ತಿ ಹೆಚ್ಚಿಸಿದ ಐಎನ್‍ಎಸ್ ಕದಮತ್

ಹೀಗಾಗಿ ನಿತ್ಯಾ ಅಲ್ಲಿಂದ ಮುಂದೆ ದುಬೈಗೆ ತೆರಳಿ ಲೈಫ್ ಸ್ಟೈಲ್ ಬ್ರಾಂಡ್ ಗಳಲ್ಲಿ ಒಂದಾದ ಲ್ಯಾಂಡ್ ಮಾರ್ಕ್ ಗ್ರೂಪ್ ನಲ್ಲಿ ಕೋ ಆರ್ಡಿನೇಟರ್ ಆಗಿ ಸೇರಿಕೊಂಡ್ರು. ಅಲ್ಲಿ ಮಕ್ಕಳ ವಸ್ತುಗಳ ವಿಭಾಗದಲ್ಲಿ ಕೆಲಸ ನಿರ್ವಹಿಸಲು ಶುರುಮಾಡಿದ ನಿತ್ಯಾ ಡೇವಿಡ್ ಪ್ಲಾನಿಂಗ್, ಬ್ರಾಂಡ್ ಡೆವಲಪ್ ಮೆಂಟ್ ಸ್ಟ್ರಾಟಜಿಗಳನ್ನ ರೂಪಿಸಿದ್ರು. ಇದು ಯುಎಇನಲ್ಲಿ ಭಾರೀ ಯಶಸ್ಸಿಗೆ ಕಾರಣವಾಯ್ತು. ಎರಡು ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಇವರು ವೈವಾಹಿಕ ಬದುಕಿಗೆ ಕಾಲಿಡುವ ಜೊತೆಗೆ ಒಗಿಲ್ವಿ ಅಂಡ್ ಮದರ್ ಕಂಪನಿಗೆ ಸೇರಿಕೊಂಡ್ರು.

ಹೊಸತನ ಕಲಿಸಿದ ಗೌತಮ್ ಕಾಮಿಕ್ಸ್..

ಹೀಗೆ ವೃತ್ತಿಯಲ್ಲಿ ಒಂದು ಕಡೆ ಮುಂದುವರಿಯುತ್ತಿರಬೇಕಾದ್ರೆ ನಿತ್ಯಾಗೆ ಒಮ್ಮೆ ಬಾಲಿವುಡ್ ಡೈರೆಕ್ಟರ್ ಮತ್ತು ನಟ ಶೇಕರ್ ಕಪೂರ್ ಅವರ ಪರಿಚಯವಾಯ್ತು. ಆಗ ಅವರು ಗೌತಮ್ ಕಾಮಿಕ್ಸ್ ಶುರುಮಾಡಿ ಮುಂದಿನ ಯೋಜನೆಗಳ ಬಗ್ಗೆ ಯೋಚಿಸುತ್ತಿದ್ರು. ವಿಶೇಷ ಅಂದ್ರೆ ನಿತ್ಯಾ ಪತಿ ಕಾಮಿಕ್ಸ್ ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಕಾಮಿಕ್ಸ್ ಬುಕ್ ನಲ್ಲಿ ಬರುವ ವಿಭಿನ್ನ ಪಾತ್ರಗಳನ್ನ ಸೃಷ್ಠಿಸುವುದರಲ್ಲಿ ನಿಸ್ಸೀಮರಾಗಿದ್ರು. ಹೇಗಾದ್ರೂ ಇಲ್ಲಿ ಅವಕಾಶಗಿಟ್ಟಿಸಲು ನಿರ್ಧರಿಸಿದ ನಿತ್ಯಾ, ನೇರವಾಗಿ ಶೇಖರ್ ಅವರ ಬಳಿಗೆ ತೆರಳಿ ಕಾಮಿಕ್ಸ್ ಬಗ್ಗೆ ಚರ್ಚಿಸಿದ್ರು. ವಿಶೇಷ ಅಂದ್ರೆ ಗೌತಮ್ ಕಾಮಿಕ್ಸ್ ಬಗ್ಗೆ ಆಕೆ ತಿಳಿದುಕೊಂಡಿರುವುದನ್ನ ಕಂಡು ಶೇಖರ್ ಅಚ್ಚರಿ ವ್ಯಕ್ತಪಡಿಸಿದ್ರು. ಅಲ್ಲದೆ ಕಾಮಿಕ್ಸ್ ಬಗ್ಗೆ ಒಂದು ಇಂಟರ್ವ್ಯೂವನ್ನೂ ಏರ್ಪಡಿಸಿದ್ರು. ಅಲ್ಲಿ ಸಕ್ಸಸ್ ಕಂಡ ನಿತ್ಯಾ ಮಾರ್ಕೆಟಿಂಗ್ ಡಿವಿಜನ್, ಮೀಡಿಯಾ ಸೇಲ್ಸ್ ಹಾಗೂ ಪ್ರಮೋಷನಲ್ ಆಕ್ಟಿವಿಟೀಸ್ ಜವಾಬ್ದಾರಿಯನ್ನ ಹೊತ್ತುಕೊಂಡ್ರು. ಅಲ್ಲಿ ಬ್ರಾಂಡ್ ಪ್ರಮೋಷನ್ ಗಳನ್ನ ಮಾಡುತ್ತಾ ಎಲ್ಲರ ಮೆಚ್ಚುಗೆ ಗಳಿಸುತ್ತಾ ಸಾಗಿದ್ರು.

ಸಮುದ್ರದದಲ್ಲಿ ಈಜುವ ಸಾಹಸ..

2007ರ ವರೆಗೂ ಗೌತಮ್ ಕಾಮಿಕ್ಸ್ ನಲ್ಲಿ ಕೆಲಸ ಮಾಡಿದ ನಿತ್ಯಾ ಅಲ್ಲಿ ಕನ್ಸಲ್ಟೆಂಟ್ ಆಗಿ ಇತರೆ ಹೆಚ್ಚುವರಿ ಪ್ರಾಜೆಕ್ಟ್ ಗಳನ್ನ ತೆಗೆದುಕೊಳ್ಳಲು ಅವಕಾಶವಿತ್ತು. ಹೀಗಿರುವಾಗ ಅವರಿಗೆ ತಮ್ಮ ಹಳೇ ಬಾಸ್ ಗಳ ಸಂಪರ್ಕ ಮತ್ತೆ ಸಿಕ್ಕತು. ಅವರು ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ಯೋಚಿಸುತ್ತಿದ್ರು. ಈ ಸಂದರ್ಭದಲ್ಲಿ ಅವರು ಹಳೇ ಬಾಸ್ ಗಳಿಗೆ ನೆರವು ನೀಡಿ, ಹೆಚ್ ಆರ್ ಗೆ ಸಂಬಂಧಿಸಿದ ಕೆಲಸಗಳನ್ನ ಮಾಡಲು ಶುರುಮಾಡಿದ್ರು. ಇದು ಅವರಿಗೆ ಇನ್ನಷ್ಟು ಅವಕಾಶದ ಬಾಗಿಲು ತೆರೆಯಿತು. ತಮ್ಮ ಹಳೇ ಬಾಸ್ ಕಂಪನಿಯಲ್ಲೇ ಹೆಚ್ ಆರ್ ಆಗಿ ಮತ್ತೊಂದು ಇನ್ನಿಂಗ್ಸ್ ಶುರುಮಾಡಿದ್ರು.. ಹೆಚ್ ಆರ್ ಆಗಿ ಯಾವ ತರಬೇತಿ ಕೋರ್ಸ್ ಗಳನ್ನೂ ಮಾಡದ ನಿತ್ಯಾ, ಅತ್ಯಂತ ಯಶಸ್ವಿಯಾಗಿ ತಮಗೊಪ್ಪಿಸಿದ ಕೆಲಸಗಳನ್ನ ಮಾಡಿದ್ರು. ಅಲ್ಲದೆ ಅವರು ರಿಸ್ಕ್ ಗಳನ್ನ ಎದುರಿಸುವ ಕೆಲವು ಹಂತದಲ್ಲಿ ಸಹಾಯ ಮಾಡಿದ್ದು ಅವರ ತಂದೆ.

ಆರಂಭದಲ್ಲಿ ಹೊಸ ಹೊಣೆಗಾರಿಕೆಯನ್ನ ನಿಭಾಯಿಸುವುದಕ್ಕೆ ನಿತ್ಯಾಗೆ ಕೊಂಚ ಅಂಜಿಕೆ ಕಾಡುತ್ತಿತ್ತು. ಆದ್ರೆ ಕ್ರಮೇಣ ಬೇಕಾದ ಅರ್ಹತೆಗಳನ್ನ ಪಡೆದ ಅವರು ಇದೀಗ 9 ವರ್ಷಗಳನ್ನ ಹೆಚ್ ಆರ್ ಆಗೇ ಪೂರೈಸಿದ್ದಾರೆ. ಅಲ್ಲದೆ ತಾನಿಷ್ಕ್, ಝಿವಾಮಿ, ವಿಪ್ರೋ ಕನ್ಸೂಮರ್ ಕೇರ್, ಕಾರ್ಬಲ್ ಮೊಬೈಲ್ಸ್, ಲೆನೆವೋ ಹೀಗೆ ಪ್ರತಿಷ್ಠಿತ ಹಲವು ಕಂಪನಿಗಳು ನಿತ್ಯಾ ಡೇವಿಡ್ ಅವರ ಕ್ಲೈಂಟ್ ಗಳು ಅನ್ನೋದು ವಿಶೇಷ. ಹೀಗೆ ಸೇಲ್ಸ್ ಡಿಪಾರ್ಟ್ ಮೆಂಟ್ ನಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸಿದ ನಿತ್ಯಾ ಇದೀಗ ತಮಗೆ ಪರಿಚಯವೇ ಇಲ್ಲದ ವೃತ್ತಿ ಹೆಚ್ ಆರ್ ಡಿಪಾರ್ಟ್ ನಲ್ಲಿ ಅದ್ವಿತೀಯ ಯಶಸ್ಸು ಕಂಡಿದ್ದಾರೆ. ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ ಹಾಗೂ ಆ ಕ್ಷಣಕ್ಕೆ ಸ್ಪಂದಿಸಲು ಬೇಕಾದ ಬುದ್ಧಿವಂತಿಕೆ ಇದ್ರೆ ಏನನ್ನು ಬೇಕಾದ್ರೂ ಸಾಧಿಸಬಹುದು ಅನ್ನೋದು ನಿತ್ಯಾ ಡೇವಿಡ್ ಅವರ ಅನುಭದ ಮಾತು.

ಲೇಖನ – ಹರ್ಷಿತ್ ಮಲ್ಯ

ಅನುವಾದ – ಸ್ವಾತಿ, ಉಜಿರೆ

ಇದನ್ನು ಓದಿ

1. ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು, ಜೋಗಪ್ಪ ಸಮುದಾಯದ ಹಕ್ಕುಗಳಿಗಾಗಿ ಹೋರಾಟ: ಸಾಮಾಜಿಕ ಬದಲಾವಣೆಗೆ ಸಾಲಿಡಾರಿಟಿ ಫೌಂಡೇಷನ್ ಸಂಕಲ್ಪ

2. ಸಾರಾಯಿ ನಿಷೇಧ ಹಾಗೂ ಬಾಲ್ಯ ವಿವಾಹದ ವಿರುದ್ಧ ಹೋರಾಟ...

3. ವಕೀಲರಾಗಿ ಕೆಲ್ಸ ಆರಂಭಿಸಿದ್ರು, ಆದಾಯಕ್ಕೆ ದ್ರಾಕ್ಷಿ ಕೃಷಿ ಕೈಹಿಡಿಯಿತು.