25 ಮಿಲಿಯನ್ ಡಾಲರ್ ಹೂಡಿಕೆಯ ಬೆಂಬಲದೊಂದಿಗೆ ಜ್ವಿಟ್ಚ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ಸಿಟ್ರಸ್ ಪೇ ಸಂಸ್ಥೆ

ಟೀಮ್​​ ವೈ.ಎಸ್​​.

25 ಮಿಲಿಯನ್ ಡಾಲರ್ ಹೂಡಿಕೆಯ ಬೆಂಬಲದೊಂದಿಗೆ ಜ್ವಿಟ್ಚ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ಸಿಟ್ರಸ್ ಪೇ ಸಂಸ್ಥೆ

Tuesday November 10, 2015,

2 min Read

ಜಿತೇಂದ್ರ ಗುಪ್ತಾ ಮತ್ತು ವಿ.ಕೋಠಾರಿ ಅವರು ಗ್ರಾಹಕರಿಗೆ ಪಾವತಿ ವಿಧಾನ ಸುಲಭಗೊಳಿಸುವ ನಿಟ್ಟಿನಲ್ಲಿ ಆರಂಭಿಸಿದ ಸಂಸ್ಥೆಯೇ ಸಿಟ್ರಸ್ ಪೇ. ಏರ್‌ಲೈನ್ಸ್, ಉಪಯುಕ್ತ ಸಾಮಗ್ರಿಗಳ ಮಳಿಗೆ, ಮಾರುಕಟ್ಟೆ ಮತ್ತು 6000 ಇತರ ವ್ಯಾಪಾರಿಗಳೊಂದಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುವ ಪಾಲುದಾರಿಕೆ ಪಡೆದುಕೊಂಡಿದೆ. 2012ರಲ್ಲಿ ಸಿಕ್ವೋಯಾ ಸಂಸ್ಥೆಯಿಂದ ಮೊದಲ ಹಂತದಲ್ಲಿ 2 ಮಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡಿರುವ ಸಿಟ್ರಸ್ ಪೇ, ಎರಡನೆ ಹಂತದಲ್ಲಿ ಇತರ ಹೂಡಿಕೆದಾರರಿಂದ 5.5ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯನ್ನು ಪಡೆದುಕೊಂಡಿದೆ. ಇತ್ತೀಚೆಗಷ್ಟೇ 3ನೇ ಹಂತದಲ್ಲಿ ಸಿಕ್ವೋಯಾ ಕ್ಯಾಪಿಟಲ್ ಮತ್ತು ಏಸೆಂಟ್ ಕ್ಯಾಪಿಟಲ್ ಸಂಸ್ಥೆಗಳಿಂದ 25 ಮಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡಿದೆ.

ಉದ್ಯಮ ಕ್ಷೇತ್ರದಲ್ಲಿ ಸಿಟ್ರಸ್ ಪೇ ಸಂಸ್ಥೆ ಯಾವುದೇ ಅಡೆತಡೆಯಿಲ್ಲದೇ ಮುನ್ನಡೆಯುತ್ತಿದೆ ಮತ್ತು ಇತ್ತೀಚಿನ ಹೂಡಿಕೆದಾರರು ಸಿಟ್ರಸ್ ಪೇ ಸಂಸ್ಥೆಯ ಮೂಲಕ ತಮ್ಮ ಗ್ರಾಹಕರಿಗಾಗಿ ಸುಲಭ ಪಾವತಿ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಸಿಟ್ರಸ್ ಕ್ಯೂಬ್ ಎಂಬ ಪಾವತಿ ಆ್ಯಪ್ ಮುಖಾಂತರ ಈಗಾಗಲೇ 15ಮಿಲಿಯನ್‌ಗೂ ಹೆಚ್ಚು ಆನ್‌ಲೈನ್ ಬಳಕೆದಾರರನ್ನು ಸಿಟ್ರಸ್ ಪೇ ಸಂಸ್ಥೆ ಹೊಂದಿದೆ. ಇದೊಂದು ವೈಯಕ್ತಿಕ ಬಿಲ್ ನಿರ್ವಹಣಾ ಆ್ಯಪ್ ಆಗಿದ್ದು ಇದರಲ್ಲಿ ಪ್ರತಿ ತಿಂಗಳೂ 10 ಮಿಲಿಯನ್ ಹೆಚ್ಚು ಬಿಲ್‌ಗಳನ್ನು ಪಾವತಿಸಲಾಗುತ್ತಿದೆ. ಅಲ್ಲದೇ ಸಿಟ್ರಸ್ ಪೇ ಸಂಸ್ಥೆ ಇತ್ತೀಚೆಗಷ್ಟೇ ಮತ್ತೊಂದು ಪಾವತಿ ಆ್ಯಪ್ ಜ್ವಿಟ್ಚ್ ಅನ್ನೂ ಸಹ ಸ್ವಾಧೀನ ಪಡಿಸಿಕೊಂಡಿದೆ.

image


ಅನೀಶ್ ಅಚ್ಯುತನ್ ಮತ್ತು ಮಾಬೆಲ್ ಚಾಕ್ಕೋ ಅವರಿಂದ ಸ್ಥಾಪನೆಯಾದ ಸಂಸ್ಥೆ ಜ್ವಿಟ್ಚ್ ಪೇಮೆಂಟ್. ಇದೊಂದು ಅಭಿವೃದ್ಧಿ ಹೊಂದಿದ ಪಾವತಿಯ ವೇದಿಕೆಯನ್ನು ಒದಗಿಸಿಕೊಡುತ್ತಿದೆ. ಜೆಎಸ್ ಮತ್ತು ಎಸ್‌ಡಿಕೆಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಮೂಲಕ ಆನ್ ಲೈನ್ ಮತ್ತು ಮೊಬೈಲ್ ಮೂಲಕವೂ ಪಾವತಿ ಮಾಡಬಹುದಾಗಿದೆ. ಅನೀಶ್ ಮತ್ತು ಮಾಬೆಲ್ ಅವರು ಪಾವತಿ, ಮೊಬೈಲ್ ಮತ್ತು ಅಂತರ್ಜಾಲ ಪಾವತಿ ವಿಭಾಗದಲ್ಲಿ 12 ವರ್ಷಗಳಿಗೂ ಹೆಚ್ಚಿನ ಅನುಭವ ಪಡೆದಿದ್ದಾರೆ. ಅಲ್ಲದೇ ಇವರಿಬ್ಬರೂ ಭಾರತದ ಮೊದಲ ಸಂಪರ್ಕರಹಿತ ಮೊಬೈಲ್ ಪಾವತಿ ವಿಧಾನ ಕ್ಯಾಶ್‌ಎನ್‌ಎಕ್ಸ್‌ ಟಿ ಟೆಕ್ನಾಲಜೀಸ್ ಮತ್ತು ನಿಯರ್‌ಟಿವಿಟಿ ವೈರ್‌ಲೆಸ್ ಎಂಬ ಉದ್ಯಮವನ್ನೂ ಸಂಸ್ಥಾಪಿಸಿದ್ದಾರೆ.

ಅನೀಶ್ ಈ ಮೊದಲು ಭಾರತದಲ್ಲಿ ಪೇಯು ಸಂಸ್ಥೆಯ ಸಂಸ್ಥಾಪಕರ ತಂಡದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದವರು. ಅಲ್ಲದೇ ಏಷ್ಯಾನೆಟ್ ಸ್ಯಾಟೆಲೈಟ್ ಕಮ್ಯುನಿಕೇಶನ್ ಸಂಸ್ಥೆಯ ವೈರ್‌ಲೆಸ್ ಮತ್ತು ಡಾಟಾ ಸರ್ವಿಸ್‌ಗಳ ಮುಖ್ಯಸ್ಥರಾಗಿದ್ದವರು. ಮಾಬೆಲ್ ಅವರಿಗೆ ಮೊಬೈಲ್, ಅಂತರ್ಜಾಲ ಮತ್ತು ಪಾವತಿ ಸಂಬಂಧಿತ ತಂತ್ರಜ್ಞಾನಗಳಲ್ಲಿ ವಿಪರೀತ ಆಸಕ್ತಿ. ಅಲ್ಲದೇ ಮಾಬೆಲ್ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಯಾಗಿದ್ದವರು.

ಅನೀಶ್ ಮತ್ತು ಮಾಬೆಲ್, ಜ್ವಿಟ್ಚ್‌ ನ ತಮ್ಮ ಕೋರ್ ಟೀಂ ಸಹಿತವಾಗಿ(ಅಜೇಶ್ ಅಚ್ಯುತನ್, ವಿಮಲ್ ವಿಜಯಕುಮಾರ್, ಪ್ರೀತಿ ಮೋಹನ್ ಮತ್ತು ನಿಜಿಲ್ ವಿಜಯನ್) ಸಿಟ್ರಸ್ ಸಂಸ್ಥೆಗೆ ಸೇರಿದ್ದಾರೆ. ಆದರೆ ಸಂಸ್ಥೆ ಆರ್ಥಿಕ ವಿವರಗಳನ್ನು ಬಹಿರಂಗಪಡಿಸಿಲ್ಲ. ಸಿಟ್ರಸ್ ಪೇ ಸಂಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಾರೆ ಅನೀಶ್ ಮತ್ತು ಮಾಬೆಲ್. ಜ್ವಿಟ್ಚ್ ಸಂಸ್ಥೆಯ ಜೊತೆ ಸೇರಿ ಕಾರ್ಯನಿರ್ವಹಿಸುವುದು, ಈ ಸಂಸ್ಥೆಯ ಮಂಡಳಿಯಲ್ಲಿ ಜ್ವಿಟ್ಚ್ ಸಂಸ್ಥೆ ಒಂದಾಗಿರುವುದು ನಮಗೆ ಸಂತೋಷವಾಗಿದೆ. ಈ ಕ್ಷೇತ್ರದಲ್ಲಿ ಜ್ವಿಟ್ಚ್ ಅದ್ಭುತವಾಗಿ ಕಾರ್ಯನಿರ್ವಹಿಸಿದೆ. ಭಾರತದಲ್ಲಿ ಪಾವತಿ ವಿಧಾನವನ್ನು ಸುಧಾರಿಸಲು ಹೊಸ ಉತ್ಪನ್ನಗಳನ್ನು ಸೃಷ್ಟಿಸುವ ವಾತಾವರಣವನ್ನು ಸಿಟ್ರಸ್ ಪೇ ಸಂಸ್ಥೆ ಅವರಿಗೆ ಒದಗಿಸಲಿದೆ ಎಂದಿದ್ದಾರೆ ಸಿಟ್ರಸ್ ಪೇ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಅಮ್ರೀಶ್ ರಾವು.

ಈಗಾಗಲೇ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಚೀನಾದ ಆಲಿಬಾಬಾ ಸಂಸ್ಥೆಯನ್ನು ಬೆನ್ನುಲುಬಾಗಿ ಹೊಂದಿರುವ ಪೇಟಿಎಂ ಭಾರತದಲ್ಲಿ ಈಗಾಗಲೇ ತನ್ನ ಸಂಸ್ಥೆಯನ್ನು ಸಂಘಟಿತ ವ್ಯಾಪಾರಿ ವಲಯವಾಗಿ ರೂಪಿಸಿಕೊಂಡಿದೆ. ಸ್ನ್ಯಾಪ್ ಡೀಲ್ ಸಂಸ್ಥೆಯ 400 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಫ್ರೀಚಾರ್ಜ್‌ ಅನ್ನು ಸ್ವಾಧೀನ ಪಡಿಸಿಕೊಂಡಿದೆ. ಇನ್ನು ಇತ್ತೀಚೆಗಷ್ಟೇ 25 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ ಪಡೆದಿರುವ ಮೊಬೈಕ್‌ವಿಕ್‌ನಂತಹ ಸಂಸ್ಥೆಗಳೂ ಸಹ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ.