ಯುವ ಆರ್ಥಿಕ ತಜ್ಞ, ಸಾಮಾಜಿಕ ಉದ್ಯಮಿ, ಶಂಕರನಾರಾಯಣನ್ ಮಾತುಕೇಳಿ..!

ಟೀಮ್​ ವೈ.ಎಸ್​. ಕನ್ನಡ

1

ರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರಾ ವಾಸಿನಿಯಲ್ಲಿ ನಡೆದಿದೆ. ಈ ಮೇಳದಲ್ಲಿ ಕೃಷಿಕರು, ವರ್ತಕರು, ಹೊಟೇಲ್ ಉದ್ಯಮಿಗಳು, ಗ್ರಾಹಕರು, ರಫ್ತುದಾರರು, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಹಲವರು ಈ ಮೇಳದಲ್ಲಿ ಭಾಗವಾಗಿದ್ದಾರೆ. ಈ ಮೇಳದಲ್ಲಿ ಸಾವಯವ ಕೃಷಿ, ಸಾವಯವ ಉತ್ಪನ್ನಗಳ ಬಳಕೆ ಬಗ್ಗೆ ಮತ್ತು ಅದರ ಉಪಯೋಗಗಗಳ ಬಗ್ಗೆ ತಿಳಿಸಿಕೊಡಲಾಯಿತು. ಈ ಸಾವಯವ ಸಿರಿಧಾನ್ಯ ಮೇಳದಲ್ಲಿ ಹೆಚ್ಚು ಉತ್ಸಾಹಿಯಾಗಿ ಕಂಡುಬಂದಿದ್ದು ವಿಕ್ರಂ ಶಂಕರನಾರಾಯಣನ್. 32 ವರ್ಷ ವಯಸ್ಸಿನ ವಿಕ್ರಂ ಶಂಕರನಾರಾಯಣನ್ ಮೇಳಕ್ಕೆ ಬಂದವರನ್ನು ಉತ್ಸಾಹದಿಂದ ಸ್ವಾಗತಿಸುತ್ತಿದ್ದರು. ಕರ್ನಾಟಕದ ಕೃಷಿ ಸಚಿವ ಕೃಷ್ಣಬೈರೇ ಗೌಡರಿಗೆ ಈ ಮೇಳವನ್ನು ಆಯೋಜಿಸಲು ಸಾಕಷ್ಟು ಐಡಿಯಾಗಳನ್ನು ಕೊಟ್ಟಿದ್ದರು.

ಯಾರು ಈ ಉತ್ಸಾಹಿ ಯುವಕ..?

ವಿಕ್ರಂ, ಆರ್ಥಿಕ ತಜ್ಙ ಕಮ್ ಸಾಮಾಜಿಕ ಉದ್ಯಮಿ. ಸನ್ ಲಾಕ್ ಅಗ್ರೋ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​ನ ಸಂಸ್ಥಾಪಕ. ವಿಕ್ರಂರ ಸನ್​ಲಾಕ್ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಅಷ್ಟೇ ಅಲ್ಲ, ಜೈವಿಕ ಉತ್ಪನ್ನಗಳನ್ನು ಖರೀದಿ ಮಾಡುವ ಗ್ರಾಹಕರನ್ನು ರೈತರ ಜೊತೆ ಸಂಪರ್ಕಿಸುತ್ತದೆ. ವಿಕ್ರಂ Smilyfe ಅನ್ನುವ ಬ್ರಾಂಡ್ ಕೂಡ ಹೊಂದಿದ್ದು, ಚಿಕ್ಕ ಸಿರಿಧಾನ್ಯಗಳಾದ ಬಾರ್ನ್ ಯಾರ್ಡ್ ಕೊಡೊ ಮತ್ತು ಅಮರ್ ನಾಥ್ ಅನ್ನುವ ಧಾನ್ಯಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

ಉದ್ಯಮಿಯಾಗುವ ಮೊದಲು ವಿಕ್ರಂ ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದರು. ರತನ್ ಟಾಟಾರ ಟಾಟಾ ಗ್ರೂಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು.

“ ನಾನು ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದೆ. ಆದ್ರೆ ಸಮಾಧಾನ ಮಾತ್ರ ಇರಲಿಲ್ಲ. ಕಾರ್ಪೋರೇಟ್ ಬದುಕು ನನಗಲ್ಲ ಅಂತ ಅನಿಸಿತ್ತು.”
- ವಿಕ್ರಂಶಂಕರನಾರಾಯಣನ್, ಉದ್ಯಮಿ

ಸಿರಿಧಾನ್ಯಗಳ ಜೊತೆ ಸಂಬಂಧ..!

ವಿಕ್ರಂ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್​ನಲ್ಲಿ ಶಿಕ್ಷಣವನ್ನು ಪೂರೈಸಿದ್ದರು.  ಲೇಬರ್​ ಎಕಾನಮಿಕ್ಸ್, ಇಂಡಸ್ಟ್ರೀಯಲ್ ರಿಲೇಷನ್ಸ್ ಮತ್ತು ಪಬ್ಲಿಕ್ ಪಾಲಿಸಿಯಲ್ಲಿ ವಿಕ್ರಂ ಹೆಚ್ಚು ಆಸಕ್ತಿ ಹೊಂದಿದ್ದರು. ಪದವಿ ಬಳಿಕ ಭಾರತಕ್ಕೆ ಆಗಮಿಸಿದ ವಿಕ್ರಂ ಭಾರತದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಆರಂಭಿಸಿದ್ರು. ವಿಕ್ರಂರ ಮೊದಲ ಪ್ರಾಜೆಕ್ಟ್ ಎತ್ತರ ಪ್ರದೇಶದಲ್ಲಿ ಬೀಳುವ ಹಿಮದಿಂದ ನೀರನ್ನು ಹಿಡಿದು, ಅದನ್ನು ಕುಡಿಯುವ ಬಳಕೆ ಬಳಸಿಕೊಳ್ಳುವ ಕನಸಾಗಿತ್ತು. ಆದ್ರೆ ಇದು ವಿಕ್ರಂರ ಹಣಕಾಸಿನ ವ್ಯವಸ್ಥೆಗೆ ಹೊಂದಿಕೆಯಾಗಲಿಲ್ಲ. ಈ ಪ್ರಾಜೆಕ್ಟ್ ದುಬಾರಿ ಮತ್ತು ಮಹಾತ್ವಾಕಾಂಕ್ಷೆಯಿಂದ ಕೂಡಿತ್ತು.

ಮೊದಲ ಯೋಜನೆಯನ್ನು ಕೈಬಿಟ್ಟ ಮೇಲೆ ವಿಕ್ರಂ ನಂತರ ಹಿಡಿದಿದ್ದೇ ಕೃಷಿ ಕ್ಷೇತ್ರವನ್ನು. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವುದು ಮತ್ತು ಅದರ ಉಪಯೋಗವನ್ನು ತಿಳಿಸುವ ಯೋಜನೆಗೆ ಕೈ ಹಾಕಿದ್ರು. ವಿಕ್ರಂ ತಮಿಳುನಾಡಿನ ಮಾಜಿ ಐಎಎಸ್ ಆಫೀಸರ್ ಶಾಂತಾ ಶೀಲಾ ನಾಯರ್ ರಾಜ್ಯ ಪ್ಲಾನಿಂಗ್ ಕಮಿಷನ್ನ ಮುಖ್ಯಸ್ಥರಾಗಿದ್ದಾಗ ನೀರು ಕಡಿಮೆ ಇರುವ ಪ್ರದೇಶದಲ್ಲಿ ಭತ್ತದ ಬೆಳೆಗೆ ಬದಲು ಕ್ವಿನೊ ಬೆಳೆಯಲು ಐಡಿಯಾ ಕೊಟ್ಟ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಇದನ್ನು ಓದಿ: ನಮ್ಮ ಬೆಂಗಳೂರಿನಲ್ಲಿ ಆರೋಗ್ಯದ ಬಗ್ಗೆ ಯಾಕಿಷ್ಟು ಕಾಳಜಿ ಅನ್ನೋದಿಕೆ ಇಲ್ಲಿದೆ ಕಾರಣಗಳು

ರಾಗಿ, ಜೋಳದಂತಹ ಬೆಳಗಳನ್ನು ಕಡಿಮೆ ಬಂಡವಾಳ ಮತ್ತು ಕಡಿಮೆ ನೀರಿನ ಮೂಲಕ ಬೆಳೆಯಬಹುದು. ಈ ಬೆಳೆಗಳನ್ನು ಬೆಳೆದ್ರೆ ಬೆಳೆಹಾನಿಯ ರಿಸ್ಕ್ ಕೂಡ ಕಡಿಮೆ ಆಗಿತ್ತದೆ. ರಾಸಾಯನಿಕ ಗೊಬ್ಬರಗಳ ಬದಲು ಜೈವಿಕ ಮತ್ತು ಸಾವಯವ ಗೊಬ್ಬರಗಳ ಬಳಕೆಗೆ ಈ ಬೆಳೆಗಳು ಉತ್ತೇಜನ ನೀಡುತ್ತವೆ. ಪರಿಸರದ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ. ವಿಕ್ರಂ ರೈತರನ್ನು ರಾಗಿ, ಜೋಳದಂತಹ ಧಾನ್ಯಗಳನ್ನು ಬೆಳೆಯಲು ಉತ್ತೇಜನ ಬೇಕು ಅನ್ನವುದನ್ನು ಕಂಡುಕೊಂಡ್ರು.

ಕೈ ಕೆಸರಾದರೆ ಬಾಯಿ ಮೊಸರು

ತನ್ನ ಉದ್ದೇಶವನ್ನು ರೈತರಿಗೆ ತಿಳಿಸುವ ಸಲುವಾಗಿ ವಿಕ್ರಂ ಮಹಾರಾಷ್ಟ್ರ, ದಕ್ಷಿಣ ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಗ್ರಾಮೀಣ ಭಾಗಗಳಲ್ಲಿ 4 ತಿಂಗಳ ಪ್ರವಾಸ ಮಾಡಿದ್ರು. ಪ್ರವಾಸದ ವೇಳೆ ವಿಕ್ರಂಗೆ ಸಿಕ್ಕ ಅಂಕಿಅಂಶ ನಿಜಕ್ಕೂ ಶಾಕಿಂಗ್ ಆಗಿತ್ತು. ಭಾರತದ ಜನಸಂಖ್ಯೆಯಲ್ಲಿ ಶೇಕಡಾ 60ರಷ್ಟು ಜನರು ಕೃಷಿಯನ್ನೇ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಆದ್ರೆ ಈ ಪೈಕಿ ಕೇವಲ ಶೇಕಡಾ 2ರಷ್ಟು ಜನರು ಮಾತ್ರ ಕೃಷಿಯಿಂದ ಜೀವನವನ್ನು ಸಮೃದ್ಧವನ್ನಾಗಿ ಮಾಡಿಕೊಂಡಿದ್ದಾರೆ. ದೇಶದ ಜಿಡಿಪಿಗೆ ಕೊಡಗೆ ನೀಡಿದ್ದಾರೆ. ಆದ್ರೆ ಉಳಿದ ಶೇಕಡಾ 58ರಷ್ಟು ಕೃಷಿಕರ ಕಥೆ ಏನು.. ? ದೇಶದ ಜನರ ಹೊಟ್ಟೆ ತುಂಬಿಸುವ ಕೃಷಿಕರ ಸ್ಥಿತಿ ಹೇಗಿದೆ ಅನ್ನುವುದನ್ನು ಯೋಚಿಸಿ ಕಂಗಾಲಾದರು.

ವಿಕ್ರಂ ಯೋಚನೆಗಳು ಬೆಳೆದಂತೆ ಅವರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ನೀರು ಕಡಿಮೆ ಇದ್ರೂ ನೀರನ್ನೇ ಅವಲಂಭಿಸುವ ಬೆಳೆಗಳನ್ನು ಬೆಳೆಯಲು ಅದಕ್ಕಿರುವ ಬೇಡಿಕೆಯೇ ಕಾರಣ ಅನ್ನುವುದನ್ನು ಅರಿತುಕೊಂಡ್ರು. ಅಕ್ಕಿ, ಗೋಧಿ ಬದಲು ಜನರು ಯಾವುದನ್ನೂ ಬಳಸುತ್ತಿಲ್ಲ ಅನ್ನುವುದು ಅರಿವಿಗೆ ಬಂತು. ಕೆಲವು ಸಿರಿಧಾನ್ಯಗಳನ್ನು ಬೆಳೆದ್ರೂ ಅದು ಕೇವಲ ಲೆಕ್ಕ ಭರ್ತಿಗೆ ಮಾತ್ರ ಇತ್ತು ಅನ್ನುವುದನ್ನು ತಿಳಿದುಕೊಂಡ್ರು. ಈ ಮಧ್ಯೆ ರೈತರಿಗೆ ಒದಗಿಸುವ ಭಿತ್ತನೆ ಬೀಜಗಳಲ್ಲಿ ಕೆಲವು ಕಂಪನಿಗಳು ಲಾಭ ಮಾಡುವ ವ್ಯವಹಾರದ ಬಗ್ಗೆ ಅರಿತಾಗ ಅಚ್ಚರಿಗೊಂಡ್ರು.

ವಿದೇಶದಲ್ಲಿ ಪದವಿ ಪಡೆದು, ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ವಿಕ್ರಂರನ್ನು ರೈತರು ಕೂಡ ಅಷ್ಟು ಸುಲಭವಾಗಿ ನಂಬುವ ಸ್ಥಿತಿಯಲ್ಲಿರಲಿಲ್ಲ. ಅಷ್ಟೇ ಅಲ್ಲನ ವಿಕ್ರಂ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲು ಸಾಕಷ್ಟು ಕಷ್ಟ ಪಟ್ರು. ನಿಧಾನವಾಗಿ ವಿಕ್ರಂ ಅಂದುಕೊಂಡಿದ್ದನ್ನು ಸಾಧಿಸಿದ್ರು. ಸಣ್ಣ ಪ್ರಮಾಣದ ರೈತರನ್ನು ಬೇಟಿಯಾಗಿ ಕಡಿಮೆ ನೀರು ಬಳಕೆಯಿಂದ ಬೆಳೆಯಬಹುದಾದ ಉತ್ಪನ್ನ ಮತ್ತು ಅದರಿಂದ ಬರುವ ಆದಾಯದ ಬಗ್ಗೆ ತಿಳಿಸಿದ್ರು. ವಿಕ್ರಂ ಕೆಲಸಗಳನ್ನು ಒಂದು ಹಂತಕ್ಕೆ ತಲುಪಿ ಬಿಟ್ಟವು.

ಕೃಷಿಕ್ರಾಂತಿಯ ಹರಿಕಾರ

ವಿಕ್ರಂರ ಸನ್​ಲಾಕ್ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಯನ್ನು ಮಾಡಿತ್ತು. ಅಷ್ಟೇ ಅಲ್ಲ SS 304ಗರಿಯನ್ನು ಪಡೆದುಕೊಂಡಿದೆ. SS304 ಸ್ಟೈನ್ ಲೆಸ್ ಸ್ಟೀಲ್​ನಿಂದ ನಿರ್ಮಾಣವಾಗಿರುವ ಪ್ರಾಥಮಿಕ ಧಾನ್ಯ ಸಂಸ್ಕರಣಾ ಯಂತ್ರವಾಗಿದೆ. ವಿಕ್ರಂ ಇದನ್ನು ಬಳಸಿಕೊಳ್ಳುವ ಮುನ್ನ ಈ ಯಂತ್ರದ ಬಗ್ಗೆ ಕೃಷಿಕರು ತಲೆಕೂಡ ಕೆಡಿಸಿಕೊಂಡಿರಲಿಲ್ಲ.

SS304 ಯಂತ್ರದಿಂದ ಸಂಸ್ಕರಣೆಯಾದ ಧಾನ್ಯಗಳು ರಫ್ತಿನ ಕ್ವಾಲಿಟಿಯನ್ನು ಹೊಂದಿದ್ದವು. ಇದು ಕೃಷಿಕರಿಗೆ ಹೆಚ್ಚು ಪ್ರಯೋಜನ ತಂದುಕೊಟ್ಟಿತ್ತು. ಅತ್ಯುತ್ತಮ ದರ್ಜೆಯ ಧಾನ್ಯಗಳನ್ನು ಸಂಸ್ಕರಿಸಲು ಕಡಿಮೆ ವೆಚ್ಚ ಬೀಳುತ್ತಿದ್ದಿದ್ದು ರೈತರಿಗೆ ಸಾಕಷ್ಟು ನೆರವು ನೀಡಿತ್ತು. ಹೀಗೆ ರೈತರ ವಿಶ್ವಾಸಗಳಿಸಿದ ವಿಕ್ರಂ ಧಾನ್ಯಗಳಿಂದಲೂ ಕೃಷಿಕರು ಲಾಭ ಪಡೆಯಬಹುದು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ, ಸಾವಯವ ಕೃಷಿಯ ಕ್ರಮ ರೈತರನ್ನು, ಪರಿಸರವನ್ನು ಮತ್ತು ನೀರಿನ ಬಳಕೆಯ ಮಹತ್ವವನ್ನು ಸಾರಿ ಹೇಳುತ್ತಿದೆ.  

ಇದನ್ನು ಓದಿ:

1. ರೈತರಿಗೆ ಎಲ್ಲವೂ ಗೊತ್ತು..ಆದ್ರೆ..?

2. ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ- ಸಾವಯವ ಪದ್ಧತಿಯಿಂದ ಜೀವನಕ್ಕೆ ಸಿಗುತ್ತದೆ ಖುಷಿ

3. ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ 

Related Stories