ಸೋಫಿಯಾ ಕಥೆಯನ್ನು ಒಮ್ಮೆ ಓದಿ- ನಿಮಗೂ ಸಾಧನೆಯ ಹಸಿವು ಹೆಚ್ಚಾಗುತ್ತದೆ..!

ಟೀಮ್​ ವೈ.ಎಸ್​. ಕನ್ನಡ

ಸೋಫಿಯಾ ಕಥೆಯನ್ನು ಒಮ್ಮೆ ಓದಿ- ನಿಮಗೂ ಸಾಧನೆಯ ಹಸಿವು ಹೆಚ್ಚಾಗುತ್ತದೆ..!

Wednesday December 07, 2016,

2 min Read

24 ವರ್ಷದ ಸೋಫಿಯಾ ಎಂ ಜೋ ಹುಟ್ಟುತ್ತಲೇ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದರು. ಜೊತೆಗೆ ಮಾತನ್ನು ಕೂಡ ದೇವರು ಕೊಟ್ಟಿರಲಿಲ್ಲ. ಆದ್ರೆ ಇವೆರಡು ದೌರ್ಬಲ್ಯಗಳ ಮೆಟ್ಟಿನಿಂತ ಸೋಫಿಯಾ ಇವತ್ತು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ದೇವರು ಶ್ರವಣ ಮತ್ತು ಮಾತಿನ ಶಕ್ತಿಯನ್ನು ಕಿತ್ತುಕೊಂಡ್ರೂ ಸೋಫಿಯಾ ಇವತ್ತು ತನ್ನ ಸಾಧನೆ ಮೂಲಕವೇ ಇತರರಿಗೆ ಮಾದರಿ ಆಗಿದ್ದಾರೆ. ಸೋಫಿಯಾ ಇವತ್ತು ಭಾರಿ ಬೇಡಿಕೆ ಇಟ್ಟುಕೊಂಡಿರುವ ಮಾಡೆಲ್ ಮತ್ತು ಅಥ್ಲೀಟ್. ಅಥ್ಲೆಟಿಕ್ ಲೋಕದಲ್ಲಿ ಹಲವು ಬಾರಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ. 3 ಬಾರಿ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಶಾಟ್​ಪುಟ್ ಮತ್ತು ಡಿಸ್ಕಸ್ ಥ್ರೋನಲ್ಲಿ ಪದಕ ವಿಜೇತರಾಗಿದ್ದಾರೆ. ಪ್ರತಿಭೆಯ ಗಣಿಯಾಗಿರುವ ಸೋಫಿಯಾ ಅದ್ಭುತ ಪೈಂಟರ್ ಮತ್ತು ಜ್ಯುವೆಲ್ಲರಿ ಡಿಸೈನರ್ ಅನ್ನೋದನ್ನ ಕೂಡ ಮರೆಯುವ ಹಾಗಿಲ್ಲ.

image


ಕೊಚ್ಚಿನ ಮೂಲದ ಸೋಫಿಯಾಗೆ ಬಾಲ್ಯ ಸುಲಭದ್ದಾಗಿರಲಿಲ್ಲ. ಶ್ರವಣ ಮತ್ತು ಮಾತಿನ ಶಕ್ತಿ ಇಲ್ಲ ಅನ್ನುವ ಕಾರಣಕ್ಕೆ ಶಾಲೆಯಲ್ಲಿ ಸೇರಿಸಿಕೊಂಡಿರಲಿಲ್ಲ. ಸೋಫಿಯಾ ಸಹೋದರ ರಿಚರ್ಡ್ ಕೂಡ ಇದೇ ಸಮಸ್ಯೆಯನ್ನು ಎದುರಿಸಿದ್ದರು.

“ ಇದು ಮಕ್ಕಳ ತಪ್ಪಲ್ಲ. ಹಾಗಂತ ಪೋಷಕರದ್ದು ಕೂಡ ತಪ್ಪಿಲ್ಲ. ಅವ್ರ ಹುಟ್ಟೇ ಹಾಗಿದೆ. ಅವರು ಕಳೆದುಕೊಂಡಿರುವುದು ಅಪಾರ. ಆದ್ರೆ ಅವರೇನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಆದ್ರೆ ಜನರು ಇವರ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇವರನ್ನು ತಮಾಷೆಯ ವಸ್ತುಗಳನ್ನಾಗಿ ಮಾಡಿಕೊಂಡಿರುವುದು ನಿಜಕ್ಕೂ ಬೇಸರ ತರಿಸಿದೆ.“
- ಜೋಸ್ ಫ್ರಾನ್ಸಿಸ್, ಸೋಫಿಯಾ ತಂದೆ

ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ ಸೋಫಿಯಾ ಮಾತ್ರ ಇವತ್ತು ಎಲ್ಲರೂ ಮೆಚ್ಚುಂತಹ ಸಾಧನೆ ಮಾಡಿದ್ದಾರೆ. ಸೈಂಟ್ ಕ್ಸೇವಿಯರ್ಸ್ ಕಾಲೇಜ್​ನಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಬಿ.ಎ. ಡಿಗ್ರಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಬೇಡಿಕೆ ಇಟ್ಟುಕೊಂಡಿರುವ ಮಾಡೆಲ್ ಮತ್ತು ಕ್ರೀಡಾ ಪ್ರತಿಭೆ.

“ ಸೋಫಿಯಾ ತನ್ನ ದೈಹಿಕ ಹಿನ್ನಡೆಗಳ ನಡುವೆಯೂ ಸಾಮಾನ್ಯ ಮಕ್ಕಳಂತೆ ಬೆಳದವಳು. ಕೆಲವು ವರ್ಷ ಅವಳಿಗೆ ಮನೆಯಲ್ಲೇ ಶಿಕ್ಷಣದ ವ್ಯವಸ್ಥೆ ಮಾಡಿದೆವು. ಅದಾದ ಮೇಲೆ ಕೇರಳದ ಒಂದು ಸಾಮಾನ್ಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಿದೆವು. ಆದ್ರೆ ಪೋಷಕರಾದ ನಾವು ಅವಳ ಪ್ರತಿಯೊಂದು ಹೆಜ್ಜೆಯಲ್ಲೂ ಸಾಥ್ ನೀಡಿದೆವು. ಅವಳ ಎಲ್ಲಾ ಆಸೆಗಳನ್ನು ನೆರವೇರಿಸುವ ಪ್ರಯತ್ನವನ್ನು ಮಾಡಿ ಅವಳ ಆತ್ಮವಿಶ್ವಾಸ ಹೆಚ್ಚಿಸಿದೆವು. ”
- ಗೊರಿಯಟ್ಟಿ, ಸೋಫಿಯಾ ತಾಯಿ

ಸೋಫಿಯಾ 2014ರಲ್ಲಿ ಮಿಸ್ ಇಂಡಿಯಾ ಡೆಫ್ ಅಂಡ್ ಡಂಬ್ ಕಾಂಪಿಟೇಷನ್​ನ 2014ರ ಆವೃತ್ತಿಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದಳು. ಅದಾದ ಮೇಲೆ ಪರಗ್ವೆಯಲ್ಲಿ ನಡೆದ ಮಿಸ್ ವರ್ಲ್ಡ್ ಡೆಫ್ ಅಂಡ್ ಡಂಬ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ಡ್ಯಾನ್ಸ್​ನಲ್ಲೂ ಪಳಗಿರುವ ಸೋಫಿಯಾ “ಬೆಸ್ಟ್ ವಿಷಸ್” ಅನ್ನುವ ಸಿನೆಮಾದಲ್ಲೂ ಅಭಿನಯಿಸಿದ್ದಾಳೆ. ಅಷ್ಟೇ ಅಲ್ಲ ಕೇರಳ ರಾಜ್ಯದಿಂದ ಡ್ರೈವಿಂಗ್ ಲೈಸನ್ಸ್ ಪಡೆದಿರುವ ಮೊದಲ ಡೆಫ್ ಅಂಡ್ ಡಂಬ್ ಅನ್ನೋ ಖ್ಯಾತಿ ಕೂಡ ಪಡೆದುಕೊಂಡಿದ್ದಾರೆ. ಸಾಧನೆಗಳ ಮೇಲೆ ಸಾಧನೆ ಮಾಡಿರುವ ಸೋಫಿಯಾ ಭವಿಷ್ಯದಲ್ಲಿ ಕಾರ್ ರೇಸರ್ ಆಗುವ ಕನಸು ಕೂಡ ಕಾಣುತ್ತಿದ್ದಾರೆ. ಸೋಫಿಯಾಗೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.

ಇದನ್ನು ಓದಿ:

1. Posಗಳಿಗೆ ದಿಢೀರ್​ ಬೇಡಿಕೆ- ಬ್ಯಾಂಕ್​ಗಳಿಗೆ ಹೆಚ್ಚಿದ ತಲೆನೋವು

2. ದೆಹಲಿಯ ಇಬ್ಬರು ಸಹೋದರರ ವಿಭಿನ್ನ ಕಥೆ- ಹೊಸ ಉದ್ಯಮ, ಹೊಸ ಕನಸು..!

3. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು